ಅನೇಕ ಬಾರಿ ಪತಿ-ಪತ್ನಿ ಮಧ್ಯೆ ಎಲ್ಲವೂ ಸರಿಯಿದ್ದರೂ ಮನಸ್ಸು ಇನ್ನೊಬ್ಬರ ಸೆಳೆತಕ್ಕೊಳಗಾಗುತ್ತದೆ. ಇದ್ರಿಂದ ಸಂಸಾರ ಮಾತ್ರವಲ್ಲ ಇಡೀ ಜೀವನವೇ ಹಾಳಾಗುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಹೋದ್ರೆ ವಿವಾಹೇತರ ಸಂಬಂಧ ತೂಗುಕತ್ತಿಯಾಗೋದ್ರಲ್ಲಿ ಸಂಶಯವಿಲ್ಲ.
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಜಾಸ್ತಿಯಾಗಿವೆ. ಮನೆ (Home)ಯಲ್ಲಿ ಮುದ್ದಿನ ಮಡದಿ (Wife) ಅಥವಾ ಗಂಡ (Husband ) ಇದ್ದರೂ ಮನೆಯಿಂದ ಹೊರಗೆ ಇನ್ನೊಂದು ಸಂಬಂಧ ಇಟ್ಟುಕೊಳ್ಳುವ ಜನರು ಹೆಚ್ಚಾಗಿದ್ದಾರೆ. ಯಾವುದೇ ಕಾರಣಕ್ಕೆ ವಿವಾಹೇತರ ಸಂಬಂಧ (Extramarital Affair )ಶುರುವಾಗಿರಲಿ, ಅದ್ರ ಅಂತ್ಯ ಮಾತ್ರ ಕೆಟ್ಟದ್ದಾಗಿರುತ್ತದೆ. ಆರಂಭದಲ್ಲಿ ಸುಖವೆನಿಸುವ ಸಂಬಂಧ ದಿನ ಕಳೆದಂತೆ ಪಾಶವಾಗಲು ಶುರುವಾಗುತ್ತದೆ. ವಿವಾಹೇತರ ಸಂಬಂಧ ಬೆಳೆಸುವ ಮೊದಲು ಭವಿಷ್ಯದಲ್ಲಿ ಅದ್ರ ಪರಿಣಾಮವೇನು ಎಂಬುದನ್ನು ತಿಳಿಯಬೇಕು. ಹೆಜ್ಜೆ ಮುಂದಿಡುವ ಮೊದಲು ಮನೆಯಲ್ಲಿರುವವರ ಬಗ್ಗೆ ಆಲೋಚನೆ ಮಾಡಬೇಕು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡ ವ್ಯಕ್ತಿ ಉತ್ತಮ ನಿದರ್ಶನ. ಇಷ್ಟವಾಯ್ತು ಎನ್ನುವ ಕಾರಣಕ್ಕೆ ವಿವಾಹೇತರ ಸಂಬಂಧ ಬೆಳೆಸಿದ ವ್ಯಕ್ತಿ ಈಗ ತೊಂದರೆ ಅನುಭವಿಸುತ್ತಿದ್ದಾನೆ. ಪ್ರತಿ ಕ್ಷಣ ಟೆನ್ಷನ್ ನಿಂದ ಬಳಲುತ್ತಿದ್ದಾನೆ. ಅಷ್ಟಕ್ಕೂ ಆತನ ಜೀವನದಲ್ಲಿ ನಡೆದಿದ್ದು ಏನು ಗೊತ್ತಾ?
ಕಗ್ಗಂಟಾಯ್ತು ವಿವಾಹೇತರ ಸಂಬಂಧ : ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡ ವ್ಯಕ್ತಿ ಹೆಸರು ಹೇಳಿಲ್ಲ. ಆತನಿಗೆ 51 ವರ್ಷ ವಯಸ್ಸು. ಆತನ ಪತ್ನಿಗೆ 49 ವರ್ಷ. ಆತನ ಪ್ರೇಮಿಗೆ 38 ವರ್ಷ. ಮಕ್ಕಳಿರುವ ವ್ಯಕ್ತಿ ಜಿಮ್ ಗೆ ಹೋಗ್ತಿದ್ದನಂತೆ. ಅಲ್ಲಿ ಹೊಸ ಸಂಬಂಧ ಶುರುವಾಗಿದೆ. ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದ ಮಹಿಳೆ ಸ್ಪೇನ್ ಬಗ್ಗೆ ಕೇಳಿದ್ದಾಳಂತೆ. ನಂತ್ರ ರೆಸ್ಟೋರೆಂಟ್ ಗೆ ಬರುವಂತೆ ಆಹ್ವಾನಿಸಿದ್ದಾಳೆ. ಅಪರಿಚಿತ ಮಹಿಳೆ ಆಹ್ವಾನಕ್ಕೆ ಖುಷಿಗೊಂಡ ವ್ಯಕ್ತಿ ರೆಸ್ಟೋರೆಂಟ್ ಗೆ ಹೋಗಿದ್ದಾನೆ. ಇಬ್ಬರ ಮಧ್ಯೆ ಕೆಲವೇ ದಿನಗಳಲ್ಲಿ ಪ್ರೀತಿ ಶುರುವಾಗಿದೆ. ಆಕೆ,ಈತನಿಗೆ ಇಷ್ಟವಾಗಲು ಶುರುವಾಗಿದ್ದಾಳೆ. ಇಬ್ಬರು ಸುತ್ತದ ಜಾಗವಿಲ್ಲ. ರೆಸ್ಟೋರೆಂಟ್,ಪ್ರವಾಸಿ ತಾಣಗಳು,ಸಿನಿಮಾ ಹೀಗೆ ಅನೇಕ ಕಡೆ ಸುತ್ತಾಡಿದ್ದಾರೆ. ಅಷ್ಟೇ ಅಲ್ಲ ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಕೂಡ ಬೆಳೆದಿದೆ. ನಂತ್ರ ಬಂದ ಕೊರೊನಾ ಇಬ್ಬರಲ್ಲಿ ಬದಲಾವಣೆ ತಂದಿದೆ.
MARRIAGE CRIME ಡೆಲ್ಲಿ ಮೇಡಂ, ಯುಪಿ ಮೇಡಂ, 18 ಮದ್ವೆಯಾದ ಅಸಾಮಿ ಫೋನ್‌ನಲ್ಲಿ ಪತ್ನಿಯರಿಗಿಟ್ಟಿದ್ದ ಹೆಸರಿದು!
ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಜಾರಿಯಾದ ಕಾರಣ ವ್ಯಕ್ತಿ ಮನೆಯಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ನಿಯ ಜೊತೆ ಅನೇಕ ಸುಂದರ ಕ್ಷಣಗಳನ್ನು ಕಳೆಯುವ ಅವಕಾಶ ಸಿಕ್ಕಿದೆ. ಆತನ ಪತ್ನಿ ಬಹಳ ಮುಗ್ದೆಯಂತೆ. ಪತಿಯನ್ನು ತುಂಬಾ ಪ್ರೀತಿಸುತ್ತಾಳಂತೆ. ಲಾಕ್ ಡೌನ್ ಸಂದರ್ಭದಲ್ಲಿ ಪತ್ನಿ ಸ್ವಭಾವವನ್ನು ಇನ್ನಷ್ಟು ಅರಿತಿದ್ದಾನೆ ವ್ಯಕ್ತಿ. ನಂತ್ರ ಇಬ್ಬರು ವಾಕಿಂಗ್ ಗೆ ಹೋಗಲು ಶುರು ಮಾಡಿದ್ದಾರೆ. ಪತ್ನಿಗೆ ಈತ ಹತ್ತಿರವಾಗ್ತಿರುವುದು ಪ್ರೇಯಸಿಗೆ ಇಷ್ಟವಾಗಿಲ್ಲವಂತೆ. ಆಕೆ ಇಬ್ಬರು ಕೈಕೈ ಹಿಡಿದು ವಾಕಿಂಗ್ ಗೆ ಹೋಗ್ತಿದ್ದ ಫೋಟೋ ಸೆಂಡ್ ಮಾಡಿದ್ದಲ್ಲದೆ ಮೆಸ್ಸೇಜ್ ಮಾಡಿದ್ದಾಳೆ. ಇಷ್ಟೇ ಅಲ್ಲ,ಪತ್ನಿಯ ಫೋಟೋ,ಆಕೆಯ ಡ್ರೆಸ್ ಹೀಗೆ ಪ್ರತಿಯೊಂದರ ಫೋಟೋ ತೆಗೆದು ಅದಕ್ಕೆ ಕಮೆಂಟ್ ಹಾಕ್ತಿದ್ದಳಂತೆ. ಇದಲ್ಲದೆ ಬ್ಲಾಕ್ಮೇಲ್ ಶುರು ಮಾಡಿದ್ದಾಳಂತೆ. 600 ಪೌಂಡ್ ನೀಡದೆ ಹೋದಲ್ಲಿ ನಮ್ಮಿಬ್ಬರ ಸಂಬಂಧದ ಬಗ್ಗೆ ಪತ್ನಿಗೆ ಹೇಳ್ತೇನೆಂದು ಹೆದರಿಸ್ತಿದ್ದಾಳಂತೆ. ಅಷ್ಟೊಂದು ಹಣ ನನ್ನಲ್ಲಿಲ್ಲ ಎಂದು ವ್ಯಕ್ತಿ ಕಂಗಾಲಾಗಿದ್ದಾನೆ. ಹಣ ನೀಡಿದ್ರೂ ಪತ್ನಿಗೆ ವಿಷ್ಯ ಗೊತ್ತಾದ್ರೆ ಏನು ಮಾಡುವುದು ಎಂಬ ಚಿಂತೆ ಆತನನ್ನು ಕಾಡ್ತಿದೆ. ಇದೇ ಚಿಂತೆಯಲ್ಲಿ ಆತನ ತೂಕ ಇಳಿದಿದೆಯಂತೆ. ಮೊದಲಿನಂತೆ ಸಂತೋಷವಾಗಿರಲು ಸಾಧ್ಯವಾಗ್ತಿಲ್ಲವಂತೆ.
Abusive Relationship ನಿಂದ ಹೊರ ಬಂದು ಆತ್ಮಗೌರವ ಹೆಚ್ಚಿಸಿಕೊಳ್ಳಿ..
ವ್ಯಕ್ತಿಯ ಸಮಸ್ಯೆಗೆ ತಜ್ಞರ ಪ್ರತಿಕ್ರಿಯೆ : ವ್ಯಕ್ತಿಯ ಈ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಇನ್ನೊಂದು ಸಂಬಂಧವಿತ್ತು ಎಂಬ ಸಂಗತಿ ಪತ್ನಿಗೆ ಬೇರೆಯವರ ಮೂಲಕ ತಲುಪುವ ಬದಲು ನಿನ್ನಿಂದಲೇ ತಿಳಿದ್ರೆ ಒಳ್ಳೆಯದು ಎಂದಿದ್ದಾರೆ. ಆದಷ್ಟು ಬೇಗ ಪತ್ನಿ ಮುಂದೆ ಸತ್ಯ ಹೇಳುವುದು ಉತ್ತಮ. ಪ್ರೇಯಸಿ ಮನಸ್ಸು ಕೆಟ್ಟಿದ್ದು, ಯಾವುದೇ ಸಮಯದಲ್ಲಿಯೂ ಅದು ಸ್ಫೋಟಗೊಂಡು, ನಿನ್ನ ಪತ್ನಿ ಮುಂದೆ ವಿಷ್ಯ ಹೇಳಬಹುದು. ಹಾಗಾಗಿ ಆದಷ್ಟು ಬೇಗ ಪತ್ನಿಗೆ ಶರಣಾಗು ಎಂದು ತಜ್ಞರು ಹೇಳಿದ್ದಾರೆ.