ಮುಂಬೈ ಲೋಕಲ್‌ ಟ್ರೈನ್ ಸೀಟಿನಲ್ಲಿತ್ತು ಬಳಸಿದ ಕಾಂಡೋಮ್‌, ಬೆಚ್ಚಿಬಿದ್ದ ಪ್ರಯಾಣಿಕರು

By Vinutha PerlaFirst Published Jan 25, 2023, 10:54 AM IST
Highlights

ರೈಲಿನಲ್ಲಿ ಪ್ರಯಾಣ ಮಾಡುವುದನ್ನು ಸಾಮಾನ್ಯವಾಗಿ ಹೆಚ್ಚಿನವರು ಇಷ್ಟಪಡುತ್ತಾರೆ. ಪ್ರಕೃತಿಯ ಸೌಂದರ್ಯ ಸವಿಯುತ್ತಾ, ಆರಾಮವಾಗಿ ಕುಳಿತುಕೊಂಡು ಅಥವಾ ಮಲಗಿ ಸಂಚರಿಸಬಹುದು. ಆದ್ರೆ ಎಲ್ಲಾ ಸಂದರ್ಭಗಳಲ್ಲಿ ಟ್ರೈನ್‌ನಲ್ಲಿ ಟ್ರಾವೆಲ್ ಮಾಡುವುದು ಖುಷಿ ನೀಡುವುದಿಲ್ಲ. ಅಂಥಹದ್ದೇ ಘಟನೆಯೊಂದು ಇಲ್ಲಿ ನಡೆದಿದೆ.

ಟ್ರಾವೆಲಿಂಗ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕಾರು, ಬಸ್‌, ಟ್ರೈನ್‌, ಫ್ಲೈಟ್ ಹೀಗೆ ಯಾವುದಲ್ಲಾದರೂ ಸರಿ ಪ್ರಯಾಣ ಮಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ. ಅದರಲ್ಲೂ ರೈಲು ಪ್ರಯಾಣ ಹಲವರಿಗೆ ಪ್ರಿಯ. ಹಗಲಾದರೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ, ರಾತ್ರಿಯಾದರೆ ಹಾಯಾಗಿ ನಿದ್ದೆ (Sleep) ಮಾಡುತ್ತಾ ಪ್ರಯಾಣಿಸಬಹುದು. ಹೀಗಾಗಿಯೇ ಹೆಚ್ಚಿನವರು ಟ್ರೈನ್‌ನಲ್ಲಿ ಪ್ರಯಾಣಿಸುವುದನ್ನು ಇಷ್ಟಪಡುತ್ತಾರೆ. ಆದರೆ ರೈಲು ಪ್ರಯಾಣಗಳು ಯಾವಾಗಲೂ ಆಹ್ಲಾದಕರವಾಗಿರುವುದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಅವುಗಳನ್ನು ಉತ್ತಮ (Best) ಎಂದು ವರ್ಗೀಕರಿಸಬಹುದು. ಆದರೂ ಇತ್ತೀಚಿಗೆ ನಡೆದ ಘಟನೆಯೊಂದು ಇದಕ್ಕೆ ಅಪವಾದ ಎಂಬಂತಿದೆ. 

ರೈಲಿನ ಸೀಟಿನಲ್ಲಿ ಬಳಸಿದ ಕಾಂಡೋಮ್ ಪತ್ತೆ
ರೈಲಿನೊಳಗೆ ಚಾಕೋಲೇಟ್‌ ರ್ಯಾಪರ್, ಖಾಲಿ ಲೇಸ್ ಪ್ಯಾಕೆಟ್‌, ನೀರಿನ ಬಾಟಲಿಗಳು ಸಿಗುವುದು ಸಾಮಾನ್ಯ. ಕೆಲವೊಮ್ಮೆ ಪೇಪರ್, ಪೆನ್ನುಗಳೂ ಬಿದ್ದು ಸಿಗುತ್ತವೆ. ಆದ್ರೆ ಇದೆಲ್ಲಕ್ಕಿಂತಲೂ ವಿಚಿತ್ರವಾಗಿ ಅಂಬರನಾಥ್ ಸ್ಲೋ ಲೋಕಲ್ ರೈಲಿನ ಸೀಟಿನಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ. ಸೋಮವಾರ ರಾತ್ರಿ 9.40ಕ್ಕೆ ಈ ವಿಲಕ್ಷಣ ಘಟನೆ ಗಮನಕ್ಕೆ ಬಂದಿದೆ. ಅದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಕಾಂಡೋಮ್‌ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

ಕರ್ರಿ ರಸ್ತೆಯಲ್ಲಿ ಪ್ರಯಾಣಿಕರೊಬ್ಬರು ಸೀಟಿನಲ್ಲಿ ಕಾಂಡೋಮ್ ಇರುವುದನ್ನು ಗುರುತಿಸಿದ್ದಾರೆ. ರೈಲು ಡೊಂಬಿವಲಿ ತಲುಪುವವರೆಗೂ ಅದು ಸೀಟಿನಲ್ಲಿಯೇ ಇತ್ತು. ಘಟನೆಯ ಬಗ್ಗೆ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಲು ಪ್ರಯಾಣಿಕರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಎಂಥಾ ಅದ್ಭುತ ದೃಶ್ಯ, ರೈಲಿನ ಸೀಟಿನಲ್ಲಿ ಬಳಸಿದ ಕಾಂಡೋಮ್‌. ಈಗ 9.40.ಕಾಂಡೋಮ್ ಈಗ ಅಮರ್‌ನಾಥ್ ತಲುಪಿದೆ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್‌, ಅಸಹ್ಯ ಎಂದು ಟೀಕೆ
ಟ್ವಿಟರ್‌ನಲ್ಲಿ ಮಾಡಿರೋ ಪೋಸ್ಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಇದೆಂಥಾ ಅಸಹ್ಯ ಎಂದು ಕಾಮೆಂಟಿಸಿದ್ದಾರೆ. ಇನ್ನು ಹಲವರು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೆಲವರು ಸೀಟಿನ ಮೇಲೆ ಬಳಸಿದ ಕಾಂಡೋಮ್ ಅನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. ಸಾರ್ವಜನಿಕ ಸಾರಿಗೆಯಲ್ಲಿ (Public transport) ಯಾರಾದರೂ ಅದನ್ನು ಹೇಗೆ ಬಳಸಬಹುದೆಂದು ಅವರು ಆಶ್ಚರ್ಯಪಟ್ಟರು.

Sexual Health: ಸಂಗಾತಿ ಕಾಂಡೋಮ್ ಬೇಡ ಅಂತಾರ ? ಹೀಗೆ ಮಾಡಿ ಮನವೊಲಿಸಿ

ಇನ್ನೊಬ್ಬರು, 'ಏನಪ್ಪಾ, ರೈಲಿನಲ್ಲಿ ರಾತ್ರಿ ಮಜಾ ಮಾಡ್ತಿದ್ದಾರೆ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಮೆತ್ತನೆಯ ಆಸನಗಳು ಆರಾಮವನ್ನು ಹೆಚ್ಚಿಸುತ್ತವೆ.ಅಲ್ಲದೆ, ರೈಲಿನ ವೇಗ ಮನಸ್ಸು ಮತ್ತು ದೇಹಕ್ಕೆ ಒತ್ತಡ ಮತ್ತು ಶ್ರಮವನ್ನು ಉಳಿಸುತ್ತದೆ' ಎಂದು ಕಾಮೆಂಟಿಸಿದ್ದಾರೆ. ಮುಂಬೈನ ಸ್ಥಳೀಯ ರೈಲುಗಳು ತಮ್ಮ ಅನೈರ್ಮಲ್ಯ ಪರಿಸ್ಥಿತಿಗಳಿಗಾಗಿ ಹಲವಾರು ಬಾರಿ ಬೆಂಕಿಗೆ ಒಳಗಾಗಿವೆ. ಆದರೆ, ಇಂತಹ ಘಟನೆ ನಡೆದಿರೋದು ಇದೇ ಮೊದಲು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಂಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಅದೇನೆ ಇರ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳಬೇಕಾದ ಪ್ರಯಾಣಿಕರೇ ಹೀಗೆಲ್ಲಾ ಮಾಡಿ ಹಾಳು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಇಂಥವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಬೇಕಿದೆ.

Well, what a sight. A used condom. Hello , , .This is 9.40 slow local. Trainhas crossed . . pic.twitter.com/C9tzNVB0Qf

— mazdur (@cinemaausher)
click me!