ಲಿಂಗ ಪರಿವರ್ತನೆ ಹೊಸದೇನಲ್ಲ. ಇತ್ತೀಚಿಗಂತೂ ಒಂದೇ ಜಂಡರ್‌ನವ್ರು ಪ್ರೀತಿಸಿ ಮದ್ವೆಯಾಗ್ತಿರೋ ಕಾರಣ ಲಿಂಗ ಪರಿವರ್ತನೆ ಅನ್ನೋದು ಸಾಮಾನ್ಯವಾಗ್ತಿದೆ. ಆದ್ರೆ ಝಾನ್ಸಿಯಲ್ಲೊಂದು ವಿಚಿತ್ರ ಪ್ರೇಮಕಥೆ ನಡ್ದಿದೆ. ಹುಡುಗಿ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಗೆಳತಿ ಕೈಕೊಟ್ಟಿದ್ದಾಳೆ.
ಕೋಲ್ಕತಾ: ಸ್ನೇಹಿತೆಯಾಗಿ ಪರಿಚಯಯಾದವಳನ್ನು ಪ್ರೀತಿಸಿದ್ದ ಯುವತಿಯೊಬ್ಬಳು ಆಕೆಯನ್ನು ಮದುವೆಯಾಗಲೆಂದೇ ಪುರುಷನಾಗಿ ಬದಲಾದ ಬಳಿಕ, ಪ್ರಿಯತಮೆಯಿಂದ ವಂಚನೆಗೆ ಒಳಗಾದ ವಿಚಿತ್ರ ಪ್ರೇಮ ಕಥೆ ಝಾನ್ಸಿಯಲ್ಲಿ ನಡೆದಿದೆ. ಈ ವಿಚಿತ್ರ ಪ್ರೇಮ ಕಥೆ ಆರಂಭವಾಗಿರುವುದು 2016ರಲ್ಲಿ ಝಾನ್ಸಿಯಲ್ಲಿ. ಇಲ್ಲಿನ ಸೋನಲ್ ಎಂಬ ಯುವತಿಯ ಮನೆಯ ಮೇಲಿನ ಕೊಠಡಿಗೆ ಸನಾ ಎಂಬ ಯುವತಿ ಪೇಯಿಂಗ್ ಗೆಸ್ಟ್ ಆಗಿ ಬಂದಿರುತ್ತಾಳೆ. ಹೆಚ್ಚು ಕಡಿಮೆ ಒಂದೇ ವಯಸ್ಸಿನ ಸೋನಲ್ ಮತ್ತು ಸನಾ ನಡುವೆ ಸ್ನೇಹ (Friendship) ಆರಂಭವಾಗಿ ಅದು ಕೆಲವೇ ತಿಂಗಳಲ್ಲಿ ಪ್ರೇಮಕ್ಕೆ (Love) ತಿರುಗುತ್ತದೆ.
ಈ ನಡುವೆ ಇಬ್ಬರ ಲವ್ ನೋಡಿ ಆಕ್ರೋಶಗೊಂಡ ಸೋನಲ್ ಕುಟುಂಬ, ಸನಾಳನ್ನು ಮನೆಯಿಂದ ಹೊರಹಾಕುತ್ತದೆ. ಆದರೆ ಈ ವೇಳೆಗಾಗಲೇ ಸನಾಗೆ ಸರ್ಕಾರಿ ನೌಕರಿ ಸಿಕ್ಕ ಕಾರಣ ಆಕೆ ಬೇರೊಂದು ಮನೆಗೆ ತೆರಳುತ್ತಾಳೆ. ಆಕೆ ತೆರಳಿದ ಕೆಲವೇ ದಿನಗಳಲ್ಲಿ ಸೋನಲ್ ಕೂಡಾ ಮನೆ ಬಿಟ್ಟು ತೆರಳಿ ಸನಾ ಜೊತೆಗೆ ವಾಸಿಸಲು ರಂಭಿಸುತ್ತಾಳೆ. ಕೆಲ ದಿನಗಳ ನಂತರ ಜೋಡಿ ಪರಸ್ಪರ ವಿವಾಹ (Marriage)ವಾಗುವ ನಿರ್ಧಾರಕ್ಕೆ ಬರುತ್ತದೆ. ಅದರಂತೆ ಲಿಂಗ ಪರಿವರ್ತನೆ (Gender change) ಮಾಡಿಕೊಂಡು ಪುರುಷನಾಗುವಂತೆ ಸನಾಳನ್ನು ಒಪ್ಪಿಸುವಲ್ಲಿ ಸೋನಲ್ ಯಶಸ್ವಿಯಾಗುತ್ತಾಳೆ.
ಇಬ್ಬರು ಹೆಂಡ್ತೀರ ಮುದ್ದಿನ ಗಂಡ, ಮೂರು ದಿನ ಅವಳ ಜೊತೆ, ಮೂರು ದಿನ ಇವಳ ಜೊತೆ!
ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಪುರುಷನಾಗಿ ಬದಲಾದ ಯುವತಿ
2020ರಲ್ಲಿ ಸನಾ ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಪುರುಷನಾಗಿ ಬದಲಾಗಿ ತನ್ನ ಹೆಸರನ್ನು ಸೋಹೇಲ್ ಖಾನ್ ಎಂದು ಬದಲಾಯಿಸಿಕೊಳ್ಳುತ್ತಾಳೆ. ಮುಂದೆ 2 ವರ್ಷ ಇಬ್ಬರು ಅನ್ಯೋನ್ಯವಾಗಿಯೇ ಇರುತ್ತಾರೆ. ಇದರ ನಡುವೆ 2022ರಲ್ಲಿ ಸೋನಲ್ ಕೂಡಾ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ.
ಆದರೆ ಕೆಲಸಕ್ಕೆ ಸೇರಿದ ಕೆಲ ದಿನಗಳ ಬಳಿಕ ಆಕೆಯಲ್ಲಿ ಕೆಲ ಬದಲಾವಣೆ ಕಂಡುಬರುತ್ತದೆ. ಮನೆಗೆ ಬರುವುದಕ್ಕಿಂತ ಹೆಚ್ಚಿನ ಸಮಯ ಆಕೆ ಆಸ್ಪತ್ರೆಯಲ್ಲೇ ಕಾಲ ಕಳೆಯಲು ಆರಂಭಿಸುತ್ತಾಳೆ. ಮನೆಯಲ್ಲೂ ಸೋಹೇಲ್‌ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸುತ್ತಾಳೆ. ಇದು ಇಬ್ಬರ ನಡುವೆ ಗಲಾಟೆ, ಹೊಡೆದಾಟಕ್ಕೆ ಕಾರಣವಾದ ಬಳಿಕ ತನಗೆ ಆಸ್ಪತ್ರೆಯ ಗ್ಯಾನ್ ಎಂಬಾತನ ಮೇಲೆ ಪ್ರೇಮಾಂಕುರವಾಗಿದ್ದು, ಆತನ ಜೊತೆಗೆ ಇರಲು ಬಯಸುತ್ತೇನೆ ಎಂದು ಸೋನಲ್ ಕ್ಯಾತೆ ತೆಗೆದಿದ್ದಾಳೆ.
ಸಹೋದರನನ್ನೇ ಮದ್ವೆಯಾದ ಮಹಿಳೆ, ಗರ್ಭಿಣಿಯಾದ ಮೇಲೆ ಬಯಲಾಯ್ತು ಸತ್ಯ!
ಸೋಹೇಲ್ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದ ಕೇಸು ದಾಖಲು
ಜೊತೆಗೆ ಸೋಹೇಲ್ ಮನೆ ಬಿಟ್ಟು ಪೋಷಕರ ಮನೆ ಸೇರಿಕೊಂಡಿದ್ದಾಳೆ. ಅಷ್ಟುಸಾಲದೆಂಬಂತೆ ಸೋನಲ್‌ನ ಪೋಷಕರು, ಇದೀಗ ಸೋಹೇಲ್ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದ ಕೇಸು ದಾಖಲಿಸಿದ್ದಾರೆ. ಇದಾದ ಬಳಿಕ ಸೋಹೇಲ್ ಕೂಡಾ ಕೇಸು ದಾಖಲಿಸಿದ್ದಾಳೆ. ಆದರೆ ಸೋನಲ್ ವಿಚಾರಣೆ ಬಂದಿಲ್ಲ. ಬಳಿಕ ಆಕೆಯನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.