ಪಾಲಕರಿಗೆ ಯಾವಾಗ್ಲೂ ತಮ್ಮ ಮಕ್ಕಳು ಮುದ್ದು. ಅವರನ್ನು ಸದಾ ಸಣ್ಣವರಂತೆ ನೋಡ್ತಾರೆ. ಮಕ್ಕಳಿಗೆ ಸಲಹೆ ನೀಡ್ತಾ ಅವರನ್ನು ಇನ್ನಷ್ಟು ಪರ್ಫೆಕ್ಟ್ ಮಾಡಲು ನೋಡ್ತಾರೆ. ಇದಕ್ಕೆ ಈಗ ವೈರಲ್ ಆದ ಚಾಟ್ ಉತ್ತಮ ನಿದರ್ಶನ.
ಮಕ್ಕಳು ಎಷ್ಟೇ ದೊಡ್ಡವರಾದ್ರೂ, ಮಕ್ಕಳಿಗೆ ಮಕ್ಕಳು ಹುಟ್ಟಿ ಅವರು ದೊಡ್ಡವರಾದ್ರೂ ಪಾಲಕರಿಗೆ ಮಕ್ಕಳು ಮಕ್ಕಳೇ. ಅವರು ಎಷ್ಟೇ ಜವಾಬ್ದಾರಿಯುತ ಕೆಲಸದಲ್ಲಿದ್ದರೂ ಪಾಲಕರು ಮಕ್ಕಳಿಗೆ ಸಲಹೆ ನೀಡ್ತಾರೆ. ತಮ್ಮ ಅನುಭವನ್ನು ಹಂಚಿಕೊಂಡು, ಮಕ್ಕಳು ಸುರಕ್ಷಿತವಾಗಿ ಜೀವನ ನಡೆಸಲಿ ಎಂದು ಬಯಸ್ತಾರೆ. ಮನೆಯಿಂದ ಹೊರಗೆ ಹೋಗುವ ಮಕ್ಕಳಿಗೆ ಪಾಲಕರು ಸದಾ ಬೆಂಬಲವಾಗಿ ನಿಂತಿರುತ್ತಾರೆ. ಎಲ್ಲಿ ಹೋದಾಗ ಏನು ಮಾಡ್ಬೇಕು, ಏನು ಮಾಡ್ಬಾರದು ಎನ್ನುವ ಸಲಹೆ ನೀಡ್ತಿರುತ್ತಾರೆ. ಆದ್ರೆ ಪಾಲಕರು ನೀಡುವ ಕೆಲವೊಂದು ಸಲಹೆಗಳು ದೊಡ್ಡವರಾದ ಮಕ್ಕಳಿಗೆ ವಿಚಿತ್ರವೆನ್ನಿಸುತ್ತದೆ. ಅನೇಕ ಮಕ್ಕಳು, ನಾನೇನು ಚಿಕ್ಕವನಾ, ನನಗೆ ತಿಳಿಯೋದಿಲ್ವಾ ಅಂತಾ ಪಾಲಕರಿಗೆ ತಿರುಗಿ ಉತ್ತರ ನೀಡ್ತಾರೆ ಕೂಡ. ಮಕ್ಕಳಿಂದ ಎಷ್ಟೇ ಬೈಸಿಕೊಂಡ್ರೂ ಪಾಲಕರು ತಮ್ಮ ಕೆಲಸ ಮಾತ್ರ ಬಿಡೋದಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಪಾಲಕರ ಮುಗ್ದ ಮನಸ್ಸು ವೈರಲ್ ಆಗಿದೆ.
`ಅಪರಿಚಿತ (Stranger) ರು ಚಾಕೋಲೇಟ್ (Chocolate) ನೀಡಿದ್ರೆ ಸ್ವೀಕರಿಸಬೇಡ, ಅವರು ತಿಂಡಿ ಕೊಡ್ತೇನೆ, ಗಿಫ್ಟ್ (Gift) ಕೊಡ್ತೇನೆ ಅಂತ ಕರೆದ್ರೆ ಅವರ ಜೊತೆ ಹೋಗ್ಬೇಡ ‘ ಈ ಮಾತನ್ನು ಚಿಕ್ಕ ಮಕ್ಕಳಿಗೆ, ಶಾಲೆಗೆ ಹೋಗುವ ಮಕ್ಕಳಿಗೆ ಪಾಲಕರು ಹೇಳ್ತಿರುತ್ತಾರೆ. ಆದ್ರೆ ಈ ಪಾಲಕರು 22 ವರ್ಷದ ಮಗನಿಗೆ ಇಂಥ ಸಲಹೆ ನೀಡಿದ್ದಾರೆ. ಹೌದು, 22 ವರ್ಷದ ಮಗನಿಗೆ ಅಪರಿಚಿತರು ಆಹಾರ ನೀಡಿದ್ರೆ ತಿನ್ಬೇಡ ಎಂದು ಪಾಲಕರು ವಾಟ್ಸ್ ಅಪ್ ಮಾಡಿದ್ದಾರೆ. ಈ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ. ಹೆಡ್‌ಕ್ವಾರ್ಟರ್ಸ್ ಹೆಸರಿನ ವಾಟ್ಸಾಪ್ ಚಾಟ್ನ್ನು ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ. 22 ವರ್ಷದ ವ್ಯಕ್ತಿ, ರೈಲು ಹತ್ತಿದ ತಕ್ಷಣ ತನ್ನ ಪಾಲಕರ ಜೊತೆ ನಡೆದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.
ಹೆಣ್ಣು ನಂಬಬಹುದಾದ ಗಂಡಸರು ನೀವಾದರೆ ಈ ಸ್ವಭಾವಗಳು ಇರಲೇಬೇಕು!
ವಾಟ್ಸ್ ಅಪ್ ಚಾಟ್ ನಲ್ಲಿ ಏನಿದೆ? : ರೈಲು ಹತ್ತಿದ ಯುವಕ, ಪಾಲಕರಿಗೆ ವಾಟ್ಸ್ ಅಪ್ ಮಾಡಿದ್ದಾನೆ. ನಾನು ರೈಲು ಹತ್ತಿ ನನ್ನ ಸೀಟ್ ನಲ್ಲಿ ಕುಳಿತುಕೊಂಡಿದ್ದೇನೆ. ಸ್ವಲ್ಪ ಸಮಯದ ನಂತ್ರ ರೈಲು ಹೊರಡಲಿದೆ ಎಂದು ಮೆಸ್ಸೇಜ್ ಮಾಡಿದ್ದಾನೆ. ಇದಕ್ಕೆ ಉತ್ತರವಾಗಿ, ಕುಳಿತುಕೊಂಡ್ಯಾ? ಓಕೆ, ರೈಲಿನಲ್ಲಿ ಯಾರಿಂದಲೂ ಯಾವುದೇ ಆಹಾರವನ್ನು ಸ್ವೀಕರಿಸಬೇಡ ಎಂದು ಪೋಷಕರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಆಟೋದವನು 100 ರೂಪಾಯಿ ಚಾರ್ಜ್ ಮಾಡ್ತಾನೆ ಎಂದು ಬರೆದಿದ್ದಾರೆ. ಅದಕ್ಕೆ ಓಕೆ ಎಂದು ಮಗ ಪ್ರತಿಕ್ರಿಯೆ ನೀಡಿದ್ದಾನೆ.
ನನ್ನ ಪಾಲಕರು, ಯಾರಿಂದಲೂ ಆಹಾರ ಸ್ವೀಕರಿಸಬೇಡ ಎಂದು ಸಲಹೆ ನೀಡಬಹುದೆಂದು ನಾನು ನಿರೀಕ್ಷೆ ಮಾಡಿರಲಿಲ್ಲವೆಂದು ಮಗ ಬರೆದುಕೊಂಡಿದ್ದಾನೆ. ಮಗ ಹಾಗೂ ಪಾಲಕರ ಚಾಟ್ ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಇಷ್ಟವಾಗಿದೆ. ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪೋಷಕರು ಯಾವಾಗ್ಲೂ ಮುದ್ದು. ನಾನು ಮತ್ತು ನನ್ನ ಸಹೋದರ ದೊಡ್ಡವರಾಗಿದ್ದೇವೆ. ಆದ್ರೆ ಈಗ್ಲೂ ಮನೆಯಿಂದ ಹೊರಗೆ ಹೋಗುವ ಮೊದಲು ಅಮ್ಮ, ಇಬ್ಬರು ಜಗಳ ಆಡ್ಬೇಡಿ ಎಂದು ಸಲಹೆ ನೀಡಿ ಹೋಗ್ತಾಳೆ ಎಂದು ಕಮೆಂಟ್ ಮಾಡಿದ್ದಾನೆ.
26 ಬಾರಿ ಮದ್ವೆಯಾಗಿದ್ದಾನೆ ಈ 60 ವರ್ಷದ ವ್ಯಕ್ತಿ, 100 ಬಾರಿ ಆಗೋದು ಗುರಿಯಂತೆ!
ನಿಮ್ಮ ಈ ಸಂಭಾಷಣೆ ಇಷ್ಟವಾಯ್ತು. ನನಗೆ 33 ವರ್ಷ. ಈಗ್ಲೂ ನನ್ನ ಅಜ್ಜ, ರೈಲಿನಲ್ಲಿ ಅಪರಿಚಿತರು ನೀಡಿದ ತಿಂಡಿ ತಿನ್ನಬೇಡ ಎಂದು ಸಲಹೆ ನೀಡ್ತಾರೆಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ.
ಆಟೋದವರಿಗೆ 100ಕ್ಕಿಂತ ಹೆಚ್ಚು ಹಣ ನೀಡ್ಬೇಡ ಸಹೋದರ ಎಂದು ಇನ್ನೊಬ್ಬ ಕಮೆಂಟ್ ಮಾಡಿದ್ರೆ, ಹೆಚ್ಚು ತೆಗೆದುಕೊಂಡ್ರೆ ಅಪ್ಪಂಗೆ ಫೋನ್ ಮಾಡ್ತೇನೆ ಎಂದು ಪೋಸ್ಟರ್ ರಿಪ್ಲೇ ಮಾಡಿದ್ದಾನೆ. ಅಲ್ಲದೆ ನಂತ್ರ ಅಪ್ಡೇಟ್ ಮಾಡಿದ್ದು, 80 ರೂಪಾಯಿ ಪಡೆಯಲು ಆಟೋದವನು ಒಪ್ಪಿದ ಎಂದು ಬರೆದಿದ್ದಾನೆ.