Parenting Tips: ಮಕ್ಕಳೊಂದಿಗೆ ಮೋಜಿನಿಂದ ಇರಲು ಇಲ್ಲಿದೆ ಸರಳ ವಿಧಾನ!

By Suvarna NewsFirst Published Sep 21, 2022, 5:03 PM IST
Highlights

ದಿನದಲ್ಲಿ ಪೋಷಕರು ಎಷ್ಟೇ Busy ಇದ್ದರೂ ಮಕ್ಕಳ ವಿಷಯ ಎಂದಾಗ ಸ್ವಲ್ಪ Time ಕೊಡುವುದು ಬಹಳ ಮುಖ್ಯ. ಇದರಿಂದ ಮಕ್ಕಳ ಜೊತೆ ಕಾಲ ಕಳೆಯುವುದರ ಜೊತೆಗೆ ಪೋಷಕರಿಗೂ ಸ್ವಲ್ಪ Realx ಹಾಗೂ ಒತ್ತಡದಿಂದ ಪಾರಾಗಲು ಸಮಯ ಸಿಗುತ್ತದೆ. ಕೆಲ ಚಟುವಟಿಗಳನ್ನು ಮಕ್ಕಳೊಂದಿಗೆ ಖುಷಿಯಿಂದ ಮಾಡುವುದರಿಂದ ಮಕ್ಕಳ ಕೌಶಲ್ಯದ ಬಗ್ಗೆ ಅವರ Talent, ಆಸಕ್ತಿಗಳ ಬಗ್ಗೆ ತಿಳಿಯಬಹುದು. ಅದನ್ನು  ಕಂಡುಕೊAಡು ಅವರನ್ನು ಪ್ರೋತ್ಸಾಹಿಸಲೂ ಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
 

ಪೋಷಕರಿಗೆ ಮಕ್ಕಳನ್ನು ಬೆಳೆಸುವುದು ಒಂದು ಸವಾಲಿನ ಸಂಗತಿ. ಆಯಾ ವಯಸ್ಸಿನ ಮಕ್ಕಳಿಗೆ ಅವರಂತೆ ಹೋಗಿ ಬೆಳೆಸಬೇಕು. ಅದಕ್ಕೆ ತಾಳ್ಮೆ, ಸಂಯಮ ಪೋಷಕರಿಗೆ ಇರಲೇಬೇಕು. ಹಾಗೆ ಮಕ್ಕಳು ಆಟವಾಡಲು ಕರೆದಾಗ ಪೋಷಕರೂ ಅವರೊಂದಿಗೆ ಆಡಬೇಕು. ಇದರಿಂದ ಅವರಲ್ಲಿನ ಚಟುವಟಿಕೆ ಮತ್ತು ಕೌಶಲ್ಯವೂ ತಿಳಿಯುತ್ತದೆ.

ಪೋಷಕರಿಗೆ ಮಕ್ಕಳು ಒಂದು ಅದ್ಭುತದಂತೆ. ಹಾಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಅವರನ್ನು ಬೆಳೆಸುವುದು ಒಂದು ಸವಾಲಿನ ಕೆಲಸವೂ ಹೌದು. ಎಷ್ಟೋ ಸಮಯದಲ್ಲಿ ಮಕ್ಕಳ ಕಿತಾಪತಿಯು ಸಿಟ್ಟು, ಸೆಡವಿನಂತೆ ಹಲವು ಸವಾಲಿನ ಭಾವನೆಯನ್ನು ಉಂಟುಮಾಡಬಹುದು. ಇದರಿಂದ ಪೋಷಕರು ಮುಂದಿನ ದಿನಗಳಲ್ಲಿ ಖಿನ್ನತೆಯನ್ನೂ ಹೊಂದಬಹುದು. ಮಕ್ಕಳೆದುರು ಸ್ಟಿçಕ್ಟ್ ಅಥವಾ ಕಠಿಣ ಮತ್ತು ಗಂಭೀರ ಪೋಷಕರಾಗುವ ಬದಲು ಮಕ್ಕಳ Friendly Parents ಆಗಬೇಕು. ಮಗುವನ್ನು ನೋಡಿಕೊಳ್ಳುವ ಮತ್ತು ಬೆಳೆಸುವ ರೀತಿ, ನೀತಿಯಲ್ಲಿ ಒಂದು ಮೋಜಿನ ಅಂಶ ಇದ್ದಾಗ ಪಾಲನೆಯು ಹರ್ಷ ಚಿತ್ತದಿಂದ ಕೂಡಿರುತ್ತದೆ. ಹಾಗಾಗಿ ಮಕ್ಕಳಿಗೆ ಯಾವಾಗಲು ಬೈಯ್ಯುವ ಮತ್ತು ಉಪನ್ಯಾಸ ನೀಡುವ ಬದಲು ಮೋಜಿನ ಸಂಗತಿಗಳಿAದ ಕಾಲ ಕಳೆಯಿರಿ. ಅದಕ್ಕೆ ಸರಳ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ.

ಪೋಷಕರನ್ನು ಹೆಚ್ಚು ಮೋಜು ಮಾಡಲು ಐದು ಪರಿಣಾಮಕಾರಿ ಮಾರ್ಗಗಳು  ಇಲ್ಲಿವೆ.

ಇದನ್ನೂ ಓದಿ: ಮಕ್ಕಳ ಹಲ್ಲು ಬಿದ್ದಾಗ ನೋಡಿಕೊಳ್ಳೋದು ಹೇಗೆ?

1. ಆಟಕ್ಕೆ ಹೆಚ್ಚು ಗಮನಕೊಡಿ
ಈಗಿನ ದಿನಗಳಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುವುದು ಬಹಳ ವಿರಳ. ಹಿಂದೆಲ್ಲಾ ಮಕ್ಕಳಿಗೆ ಐದು ವರ್ಷವಾದ ಮೇಲೆಯೇ ಶಾಲೆಗೆ ಕಳುಹಿಸುತ್ತಿದ್ದರು. ಆದರೀಗ Play Home ಮೂರು ವರ್ಷ ವಿರುವಾಗಲೇ ಕಳುಹಿಸಲಾಗುತ್ತದೆ. Play Kidಗಳು ದಿನಕ್ಕೆ ಏಳು ಗಂಟೆಗಳವರೆಗೆ ಶಾಲೆಯಲ್ಲಿ ಕುಳಿತಿರುತ್ತವೆ. ಹಾಗಾಗಿ ಪೋಷಕರು ಮಕ್ಕಳ ಜೊತೆಗೆ ಮಾತಿನ, ಸ್ಥಿರವಾದ ರೀತಿಯಲ್ಲಿ ಕಾಣುವುದಕ್ಕಿಂತ ಅವರನ್ನು ಶಾಲಾ ಕೆಲಸದ ಮೇಲೆ ಆಟಕ್ಕೆ ಒತ್ತು ನೀಡುವುದರಿಂದ ಮಕ್ಕಳಿಗೆ ಉತ್ತಮ. ಅವರು ಇತರರೊಂದಿಗೆ ಹೆಚ್ಚು ಸುಲಭವಾಗಿ ಬೆರೆಯಲು ಸಹಾಯ ಮಾಡುತ್ತದೆ. 

2. ಜಾಗರೂಕರಾಗಿ
ಮಕ್ಕಳು ಯಾವುದೇ ಉತ್ತಮ ಕೆಲಸ ಮಾಡಿದರೂ, ಅವರನ್ನು ಶ್ಲಾಘಿಸುವುದು ಒಂದು ಒಳ್ಳೆಯ ಅಭ್ಯಾಸ. ಏಕೆಂದರೆ ಅವರಿಗೆ ಪ್ರಚೋಧೀಸುವ, ಶ್ಲಾಘಿಸುವಂತಹ ಸಂಗತಿಗಳು ಬಹಳ ಇಷ್ಟವಾಗುತ್ತದೆ. ಒಂದು ಲೋಟ ಎತ್ತಿಟ್ಟರು ಅವರಿಗೆ Good ಹೇಳಿ ಖುಷಿ ಪಡಿಸುವುದು ಈ ರೀತಿಯ ಸಣ್ಣ ವಿಷಯಗಳಿಗೆ ಅವರನ್ನು ಶ್ಲಾಘಿಸಿ. ಐದು ವರ್ಷದ ಮಗು ನಾಳೆಯ ಬಗ್ಗೆ ಚಿಂತಿಸುತ್ತಿಲ್ಲ ಅಥವಾ ನಿನ್ನೆಯ ನಿರ್ಧಾರಕ್ಕೆ ವಿಷಾಧಿಸುತ್ತಿಲ್ಲ. ಪೋಷಕರಾದ ನಾವು ಮಕ್ಕಳಿಂದ ಈ ಸಾವಧಾನವನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ಇದು ಹೆಚ್ಚಿನ ಹೆಚ್ಚಿನ ಉತ್ಪಾದಕತೆ ಮತ್ತು ಕಡಿಮೆ ಆತಂಕಕ್ಕೆ ಕಾರಣವಾಗುತ್ತದೆ. ಅಷ್ಟೇ ಮಕ್ಕಳೊಂದಿಗೆ ಇನ್ನಷ್ಟು ಹತ್ತಿರವಾಗಲು, ಇಬ್ಬರ ಸಂಬAಧ ಗಟ್ಟಿಗೊಳಿಸಲು ಕಾರಣವಾಗುತ್ತದೆ. 

3. ಸ್ವಯಂ ಆರೈಕೆ
ತಮ್ಮ ಜೀವನವು ಒತ್ತಡದಿಂದ ಕೂಡಿದೆ, ನಿಯಂತ್ರಣದಿAದ ಹೊರಗಿದೆ ಎಂದು ಭಾವಿಸುವ ಪೋಷಕರು, ತಮ್ಮ ಮಕ್ಕಳಿಗೆ ಉದಾಹರಣೆಯೊಂದಿಗೆ ತಿಳಿಸಿ. ಪೋಷಕರು ಮಕ್ಕಳಿಗೆ ಸರಳ ಜೀವನವನ್ನು ಒದಗಿಸುವುದಕ್ಕಿಂತ ಹೆಚ್ಚೇನು ಬಯಸುವುದಿಲ್ಲ. ನಮ್ಮಲ್ಲಿನ ಒತ್ತಡವನ್ನು ಮಕ್ಕಳಿಗೆ ತೋರಿಸಿದರೆ ಅವರಿಗೂ ಅದು ಮಾದರಿಯಾಗಬಹುದು. ತಿಳಿದೋ ತಿಳಿಯದೆಯೋ ಅವರೂ ಅದನ್ನು ಅನುಸರಿಸುತ್ತಾರೆ. ಮಕ್ಕಳಿಗೆ ಶಾಂತತೆಯನ್ನು ಕಲಿಸಲು, ಮೊದಲು ಪೋಷಕರು ಅದನ್ನು ಅನುಭವಿಸಬೇಕು. ಅಂದರೆ ಕಡಿಮೆ ರಚನಾತ್ಮಕ ಚಟುವಟಿಕೆಗಳು ಮತ್ತು ಹೆಚ್ಚು ಅಲಭ್ಯತೆ ಹೊಂದುವುದು.

ಇದನ್ನೂ ಓದಿ: Kids Health: ಮಕ್ಕಳಿಗೆ ಬಲವಂತವಾಗಿ ಆಹಾರ ತಿನ್ನಿಸಿದ್ರೆ ಏನಾಗುತ್ತೆ ಗೊತ್ತಾ?

4. ಇಷ್ಟದ ಚಟುವಟಿಕೆಯನ್ನು ಆರಿಸಿಕೊಳ್ಳಿ
ನೀವು ಇಷ್ಟಪಡುವ ಚಟುವಟಿಕೆಗಳನ್ನು ಆರಿಸಿ. ಅಡುಗೆ, Basket ball ಅಥವಾ Drawing ಮೂಲಕ ಕ್ರಿಯಾಶೀಲರಾಗಿದ್ದರೆ ಸ್ವಂತ ಆಸಕ್ತಿಗಳಲ್ಲಿ ಮಕ್ಕಳೊಂದಿಗೆ ತೊಡಗಿಸಿಕೊಳ್ಳಿ. ನಿಮ್ಮಲ್ಲಿನ ಉತ್ಸಾಹ ಮತ್ತು ನೀಡುವ ಸಮಯವು ಮಕ್ಕಳಿಗೆ ಆಕರ್ಷಿಸುವುದರ ಜೊತೆಗೆ ಪ್ರೇರೇಪಿಸುತ್ತದೆ. 

5. ಸಂತೋಷ ಹೆಚ್ಚಿಸಿ
ಮಕ್ಕಳು ಇನ್ನೂ ಸಣ್ಣವರು ಅವರಿಗೇನು ಕೆಲಸ ಹೇಳುವುದು ಅಥವಾ ಕಲಿಸುವುದು ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಮಕ್ಕಳಿಗೆ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಬಹಳ ಇಷ್ಟ. ಅದು ಒಂದು ಸಣ್ಣ ಲೋಟ ಎತ್ತಿಡುವುದರಿಂದ ಹಿಡಿದು, ತರಕಾರಿ ತೊಳೆಯುವುದು, ತೊಳೆದ ಬಟ್ಟೆಯನ್ನು ಒಣಗಿಸುವುದು, ಒಣಗಿದ ಬಟ್ಟೆಯನ್ನು ಮಡಚಿಡುವುದರಲ್ಲಿ ಬಹಳ ಖುಷಿ ಅಲ್ಲದೆ ಪೋಷಕರ ಜೊತೆ ಈ ರೀತಿಯ ಕೆಲಸ ಮಾಡುವುದರಿಂದ ಅವರ ಕಲಿಕೆಗೂ ಅನುಕೂಲವಾಗುತ್ತದೆ. ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮನೆ ಕ್ಲೀನ್ ಮಾಡುವುದು ಈ ರೀತಿಯ ಚಟುವಟಿಕೆಗಳನ್ನು ಮಕ್ಕಳ ಜೊತೆ ಒಂದು ಸ್ಪರ್ಧೆಯಂತೆ ಮಾಡಿ. 

click me!