ಬಾತ್ ರೂಮಿನಲ್ಲಿ ಫೋನ್ ನೋಡೋರ ಸಂಖ್ಯೆ ಸಾಕಷ್ಟಿದೆ. ಆದ್ರೆ ಅದಕ್ಕೂ ಇತಿಮಿತಿಯಿದೆ. ಮನೆಯಲ್ಲಿರುವಷ್ಟು ಸಮಯ ಬಾತ್ ರೂಮಿನಲ್ಲಿ ಮೊಬೈಲ್ ಹಿಡಿದು ಕುಳಿತ್ರೆ ಪಾಪ ಪತ್ನಿ ಏನ್ಮಾಡ್ಬೇಕು ಸ್ವಾಮಿ?
ದಂಪತಿ ಮಧ್ಯೆ ಸಾಮರಸ್ಯ ಬಹಳ ಮುಖ್ಯ. ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಂಡು ಜೀವನ ನಡೆಸಬೇಕು. ಮನೆಯ ಹೊರಗೆ ದುಡಿಯುವ ಪುರುಷ, ಮನೆಯೊಳಗಿನ ಜವಾಬ್ದಾರಿಗಳ ಬಗ್ಗೆಯೂ ಗಮನ ನೀಡ್ಬೇಕು. ಪತ್ನಿ ಹಾಗೂ ಮಕ್ಕಳ ಜೊತೆ ಸಮಯ ಕಳೆಯಬೇಕು. ಪತ್ನಿ ಹಾಗೂ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕು. ಪತ್ನಿ ಕೂಡ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವವಳಾಗಿದ್ದರೆ ಆಕೆಗೆ ಮನೆಯ ಕೆಲಸದಲ್ಲಿ ಪತಿ ಸಹಾಯ ಮಾಡುವುದು ಮುಖ್ಯ. ಮನೆಗೆ ಬಂದು ಬಾತ್ ರೂಮ್ ಸೇರುವ ಪತಿ, ಪತ್ನಿ ಹಾಗೂ ಮಕ್ಕಳಿಗೆ ಸಮಯ ನೀಡಿಲ್ಲವೆಂದ್ರೆ ಸಂಬಂಧ ಹಾಳಾಗಲು ಶುರುವಾಗುತ್ತದೆ. ಮಹಿಳೆಯೊಬ್ಬಳಿಗೆ ಇದೇ ಸಮಸ್ಯೆ ಕಾಡಿದೆ.
ಆಕೆಗೆ ಮದುವೆ (Marriage) ಯಾಗಿ ಅನೇಕ ವರ್ಷ ಕಳೆದಿದೆ. ಆಕೆ ಮನೆ ಹಾಗೂ ಕಚೇರಿ ಕೆಲಸವನ್ನು ಸಂಭಾಳಿಸ್ತಾಳೆ. ಪತಿ (Husband) ಯನ್ನು ತುಂಬಾ ಪ್ರೀತಿ (Love) ಮಾಡ್ತಾಳಂತೆ ಆಕೆ. ದಾಂಪತ್ಯದಲ್ಲಿ ಮತ್ತೆ ಯಾವುದೇ ಸಮಸ್ಯೆಯಿಲ್ಲ ಆದ್ರೆ ಪತಿಯ ಒಂದು ಹವ್ಯಾಸ ನನಗೆ ತುಂಬಾ ಬೇಸರ ತರಿಸುತ್ತಿದೆ ಎನ್ನುತ್ತಿದ್ದಾಳೆ ಮಹಿಳೆ.
ಆಕೆ ಪತಿ ಪ್ರತಿ ದಿನ ಕಚೇರಿಯಿಂದ ಮನೆಗೆ ತಡವಾಗಿ ಬರ್ತಾನಂತೆ. ಇದು ಆಕೆ ಬೇಸರಕ್ಕೆ ಕಾರಣವಲ್ಲ. ಆದ್ರೆ ಕಚೇರಿಯಿಂದ ಮನೆಗೆ ಬಂದ ಪತಿ, ಮೊಬೈಲ್, ಇಯರ್ ಫೋನ್ ಹಿಡಿದು ಬಾತ್ ರೂಮ್ ಸೇರಿಕೊಳ್ತಾನಂತೆ. ಪತ್ನಿ ರಾತ್ರಿ ಊಟಕ್ಕೆ ಕರೆಯುವವರೆಗೂ ಆತ ಬಾತ್ ರೂಮಿನಲ್ಲಿ ಇರ್ತಾನಂತೆ. ಬಾತ್ ರೂಮಿನಲ್ಲಿ ಅಷ್ಟೊಂದು ಹೊತ್ತು ಏನು ಮಾಡ್ತಾನೆ ಎಂಬುದೇ ನನಗೆ ಗೊತ್ತಿಲ್ಲ ಎನ್ನುತ್ತಾಳೆ ಮಹಿಳೆ.
ಇಷ್ಟೇ ಅಲ್ಲ, ಪತಿ,ಮನೆ ಮಂದಿ ಜೊತೆ ಮಾತನಾಡುವುದಿಲ್ಲವಂತೆ. ಸದಾ ಮೊಬೈಲ್ ನಲ್ಲಿರುವ ಪತಿಗೆ ಯಾವೂದೇ ಜವಾಬ್ದಾರಿ ಇಲ್ಲವಂತೆ. ನಾನು ಕೂಡ ಕೆಲಸ ಮಾಡಿ ಮನೆಗೆ ಬರ್ತೇನೆ. ಮನೆಗೆ ಬಂದ್ಮೇಲೆ ಮಕ್ಕಳ ಕೆಲಸ ಮಾಡ್ತೇನೆ. ಆದ್ರೆ ಪತಿ ಯಾವುದೇ ಕೆಲಸಕ್ಕೂ ನೆರವಾಗುವುದಿಲ್ಲ. ಮಕ್ಕಳನ್ನು ಮಾತನಾಡಿಸುವುದಿಲ್ಲ. ಇದ್ರಿಂದ ಮಕ್ಕಳಿಗೆ ತಂದೆ ಮೇಲೆ ಪ್ರೀತಿ ಕಡಿಮೆಯಾಗಿದೆ ಎನ್ನುತ್ತಾಳೆ ಪತ್ನಿ. ಇದೇ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಜಗಳ ಹೆಚ್ಚಾಗ್ತಿದೆ ಎಂದಿದ್ದಾಳೆ ಮಹಿಳೆ. ಪತಿಗೆ ನನ್ನ ಜೊತೆ ಮಾತನಾಡಲೂ ಸಮಯವಿಲ್ಲ. ಮುಂದೆ ಏನ್ಮಾಡ್ಬೇಕು ಎಂಬುದು ನನಗೆ ಗೊತ್ತಾಗ್ತಿಲ್ಲವೆಂದು ಮಹಿಳೆ ಹೇಳಿದ್ದಾಳೆ.
ನಾದಿನಿ ಜೊತೆ ಜಗಳವಾಡ್ತೀರಾ? ಸಂಬಂಧವನ್ನು ಸೂಕ್ಷ್ಮವಾಗಿ ನಿಭಾಯಿಸೋದು ಹೇಗೆ?
ತಜ್ಞರ ಸಲಹೆ : ಮದುವೆ ಬಹಳ ಸೂಕ್ಷ್ಮ ಸಂಬಂಧ. ಮದುವೆ ಸಂಬಂಧವನ್ನು ಸಂಭಾಳಿಸುವುದು ಸುಲಭವಲ್ಲ. ಗಂಡ ಹೆಂಡತಿ ಒಬ್ಬರಿಗೊಬ್ಬರು ಆಸರೆಯಾಗಿ ಪ್ರತಿ ಹೆಜ್ಜೆ ಇಡಬೇಕು. ಇಬ್ಬರ ಮಧ್ಯೆ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಒಬ್ಬ ಪಾಲುದಾರ ಸಂಬಂಧವನ್ನು ಲಘುವಾಗಿ ತೆಗೆದುಕೊಂಡಾಗ ಅಥವಾ ಜವಾಬ್ದಾರಿಯಿಂದ ನುಣುಚಿಕೊಂಡಾಗ ಸಮಸ್ಯೆ ಶುರುವಾಗುತ್ತೆ ಎನ್ನುತ್ತಾರೆ ತಜ್ಞರು.
ದಣಿದ, ಒತ್ತಡದ (stress) ಜೀವನದಲ್ಲೂ ನೀವು ಪತಿ ಜೊತೆ ಕೆಲ ಸಮಯ ಕಳೆಯಲು ನೀವು ಇಷ್ಟಪಡ್ತೀರಿ ಎಂದು ಪತಿಗೆ ಹೇಳಿ. ಹಾಗೆ ಮಕ್ಕಳ ಜೊತೆ ಸಮಯ ಕಳೆಯುವುದು ಎಷ್ಟು ಮುಖ್ಯ ಎಂಬುದನ್ನು ಪತಿಗೆ ತಿಳಿಸಿ, ಇದ್ರಿಂದ ತಂದೆ ಬಾಂಧವ್ಯ ಹೆಚ್ಚಾಗುತ್ತದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಎನ್ನುತ್ತಾರೆ ತಜ್ಞರು.
ಪತಿ ಜೊತೆ ಸುಮ್ಮನೆ ಜಗಳವಾಡಿದ್ರೆ, ಕೂಗಾಡಿದ್ರೆ ಇದ್ರಿಂದ ಪ್ರಯೋಜನವಿಲ್ಲ. ಅವರ ಜೊತೆ ಕುಳಿತು ಮಾತನಾಡುವುದು ಬಹಳ ಮುಖ್ಯ. ಸಂಬಂಧದಲ್ಲಿ ನೀವು ಏನು ಬಯಸುತ್ತೀರಿ ಎಂಬುದನ್ನು ಪತಿಗೆ ಹೇಳಿ ಎನ್ನುತ್ತಾರೆ ತಜ್ಞರು. ನಿಮ್ಮ ಜೊತೆ ಸಮಯ ಕಳೆಯಲು ಹೊಸ ಹೊಸ ಪ್ಲಾನ್ ಮಾಡಿ. ಅವರಿಗೆ ಕೆಲ ಸರ್ಪ್ರೈಸ್ ಪ್ಲಾನ್ ಮಾಡಿ. ವೀಕೆಂಡ್ ನಲ್ಲಿ ಮೊಬೈಲ್ ದೂರವಿಟ್ಟು ನಿಮ್ಮ ಜೊತೆ ಬರುವಂತೆ ಅವರಿಗೆ ಹೇಳಿ.
'ಆ' ವಿಷಯದಲ್ಲಿ ಸುಖವೇ ಇಲ್ಲ ಅನ್ನೋರಿಗೆ ಕಿವಿ ಮಾತು!
ಮನಸ್ಸು ಮುರಿದ್ರೆ ದೈಹಿಕ ಸಂಪರ್ಕದಲ್ಲೂ (Physical Relationship) ಆಸಕ್ತಿ ಇರೋದಿಲ್ಲ. ಇದ್ರಿಂದ ಪತಿ ಜೊತೆಗಿನ ಬಾಂಡಿಂಗ್ (Bonding) ಮತ್ತಷ್ಟು ಹಾಳಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ನೀವಿಬ್ಬರು ಒಟ್ಟಾಗಿರುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು.