ವಿದೇಶದಲ್ಲಿ ಸಾಮಾನ್ಯ Friends With Benefits: ಸ್ನೇಹದ ಜತೆ ಸೆಕ್ಸ್‌ ಫ್ರೀ..!

By Suvarna NewsFirst Published Sep 21, 2022, 4:33 PM IST
Highlights

ಸ್ನೇಹಿತರು ಅಂದ್ರೆ ನಮ್ಮ ದೇಶದಲ್ಲಿ ಅವರನ್ನು ನಿರ್ಮಲ ಭಾವದಿಂದ ನೋಡಲಾಗುತ್ತದೆ. ಸ್ನೇಹಿತರ ಮಧ್ಯೆ ಯಾವುದೇ ಕೆಟ್ಟ ಭಾವನೆ ಇರೋದಿಲ್ಲ. ಆದ್ರೆ ವಿದೇಶಗಳಲ್ಲಿ ಸ್ನೇಹವನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ. ಲೈಂಗಿಕ ಬಯಕೆ ತೀರಿಸಿಕೊಳ್ಳಲು ಸ್ನೇಹಿತರನ್ನು ಬಯಸುವ ಪ್ರವೃತ್ತಿ ಹೆಚ್ಚಾಗಿದೆ. 
 

ಪಾಶ್ಚಿಮಾತ್ಯ ದೇಶಗಳಲ್ಲಿ ಫ್ರೆಂಡ್ಸ್ ವಿತ್ ಬೆನಿಫಿಟ್ಸ್  ಪ್ರವೃತ್ತಿ ಹೊಸದೇನಲ್ಲ. ಆದರೆ, ಭಾರತದಲ್ಲಿ ಈ ಪದವನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಹಾಗೆಯೇ ಭಾರತದಲ್ಲಿ ಇದ್ರ ಅರ್ಥ ಕೂಡ ಭಿನ್ನವಾಗಿದೆ. 2011 ರಲ್ಲಿ ಒಂದು ಸಿನಿಮಾ ಬಂದಿತ್ತು. ಆ ಸಿನಿಮಾ ಹೆಸರು ಫ್ರೆಂಡ್ಸ್ ವಿತ್ ಬೆನಿಫಿಟ್ಸ್.  ಇಬ್ಬರು ಸ್ನೇಹಿತರು ತಮ್ಮ ಸಂಬಂಧವನ್ನು ಲೈಂಗಿಕ ಸಂಬಂಧವಾಗಿ ಬದಲಿಸಿದಾಗ ಆ ಸ್ನೇಹವನ್ನು ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಎಂದು ವ್ಯಾಖ್ಯಾನಿಸಲಾಗಿತು. 

ಸಾಮಾನ್ಯವಾಗಿ ಸ್ನೇಹಿತ (Friend) ರಿಂದ ಏನು ಪ್ರಯೋಜನ (Benefit) ಪಡೆಯಲು ಸಾಧ್ಯವೆಂದು ಅನೇಕರು ಆಲೋಚನೆ ಮಾಡ್ತಾರೆ. ನೀವು ವಿವಾಹಿತರಾಗಿದ್ದರೆ ಅಥವಾ ಈಗಾಗಲೇ ಸಂಬಂಧದಲ್ಲಿದ್ದರೂ ಸ್ನೇಹಿತರ ಜೊತೆ ಲೈಂಗಿಕತೆ ಬಯಸಿದ್ರೆ ಅದನ್ನು ಫ್ರೆಂಡ್ಸ್ ವಿತ್ ಬೆನಿಫಿಟ್ಸ್ (Friends With Benefits) ಎಂದು ಹೇಳಲಾಗುತ್ತದೆ. ಸ್ನೇಹಿತರ ಜೊತೆ ಸಂಬಂಧ ಬಳಸುವುದಕ್ಕೂ ಅಪರಿಚಿತರ ಜೊತೆ ಸಂಬಂಧ ಬೆಳೆಸುವುದಕ್ಕೂ ವ್ಯತ್ಯಾಸವಿದೆ. ಸ್ನೇಹಿತರ ಜೊತೆ ಸಂಬಂಧ ಬೆಳೆಸುವ ವೇಳೆ ನಂಬಿಕೆ ದ್ರೋಹದ ಭಯವಿರುವುದಿಲ್ಲ. ಹಾಗೆ ಒಬ್ಬರಿಗೊಬ್ಬರು ತಿಳಿದಿರುವುದ್ರಿಂದ ಇಬ್ಬರು ಒಪ್ಪಿ ಈ ನಿರ್ಧಾರಕ್ಕೆ ಬಂದಿರುತ್ತೀರಿ. ಸ್ನೇಹವನ್ನು, ಲಾಭಕ್ಕಾಗಿ ಬಳಸಿಕೊಳ್ಳಲು ಇಬ್ಬರೂ ಬಯಸಿರುತ್ತೀರಿ.

ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ನಲ್ಲಿ ಯಾರಿಗೆ ಹೆಚ್ಚು ಲಾಭ ? : ಇದ್ರ ಬಗ್ಗೆ ಸಮೀಕ್ಷೆ ನಡೆದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕ್ಯಾಶುಯಲ್ ಸೆಕ್ಸ್ ನಿಂದ ಹಿಡಿದು ಫ್ರೆಂಡ್ಸ್ ವಿತ್ ಬೆನಿಫಿಟ್ಸ್, ಒನ್ ನೈಟ್ ಸ್ಟ್ಯಾಂಡ್‌, ಹುಕ್ ಅಪ್‌ ಎಲ್ಲವೂ ಕೆಲವು ಡಾಲರ್‌ಗಳಿಗೆ ಲಭ್ಯವಿದೆ. ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಪುರುಷರು ಈ ರೀತಿಯ ಸಂಬಂಧದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ.  

ಲಂಡನ್‌ನಲ್ಲಿರುವ ವಿಸ್ಕಾನ್ಸಿನ್ ಯು ಕ್ಲೇರ್ ವಿಶ್ವವಿದ್ಯಾಲಯವು 400 ವಯಸ್ಕರ ಮೇಲೆ ಅಧ್ಯಯನ ನಡೆಸಿದೆ. ಮಹಿಳೆ ಹಾಗೂ ಪುರಷ ಸ್ನೇಹಿತರಿಬ್ಬರಲ್ಲಿ ಆಕರ್ಷಣೆಗೊಳಗಾಗುವುದು ಅಥವಾ ಲೈಂಗಿಕ ಬಯಕೆ ಶುರುವಾಗುವುದು ಹೆಚ್ಚಾಗಿ ಪುರುಷರಿಗೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದು ಸಾಮಾನ್ಯ ಸಂಗತಿ ಎಂದೂ ಅಧ್ಯಯನದ ವರದಿ ಹೇಳಿದೆ.  

ಪುರುಷರು ಕಚೇರಿ, ನೆರೆಹೊರೆ ಮತ್ತು ಆನ್‌ಲೈನ್‌ನಲ್ಲಿ ಸೇರಿದಂತೆ ಎಲ್ಲೆಡೆ ಲೈಂಗಿಕ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇದ್ರಲ್ಲಿ ಯಾವುದೂ ಅವರಿಗೆ ಸಿಕ್ಕಿಲ್ಲ ಎಂದಾಗ ಅವರು ಫ್ರೆಂಡ್ಸ್ ವಿತ್  ಬೆನಿಫಿಟ್ಸ್  ಮೂಲಕ ಸ್ನೇಹಿತರ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಆಸಕ್ತಿ ತೋರುತ್ತಾರೆ. ಈ ವಿಷ್ಯ ಬಂದಾಗ ಕೆಲ ಸ್ನೇಹಿತರು ಕೋಪಗೊಳ್ಳುತ್ತಾರೆ. ಮತ್ತೆ ಕೆಲ ಸ್ನೇಹಿತೆಯರು ಒಪ್ಪಿಕೊಳ್ತಾರೆ. 

ಪುರುಷರು ಮಾತ್ರ ಈ ರೀತಿಯ ಸಂಬಂಧವನ್ನು ಬಯಸುತ್ತಾರೆ ಎಂಬುದು ಇದರ ಅರ್ಥವಲ್ಲ. ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಎಂಬ ನೆಪದಲ್ಲಿ ಮಹಿಳೆಯರು ತಮ್ಮ ಲೈಂಗಿಕ ಸ್ವಾತಂತ್ರ್ಯವನ್ನು ಬಯಸುತ್ತಾರೆ. ದಾಂಪತ್ಯದಲ್ಲಿ ಸಮಸ್ಯೆ ಹೊಂದಿರುವ ಅಥವಾ ವಿಚ್ಛೇದಿತ ಮಹಿಳೆಯರು ಇದ್ರಲ್ಲಿ ಹೆಚ್ಚಾಗಿ ಸೇರಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆಯರು ಕೆಲವೊಮ್ಮೆ ಫ್ರೆಂಡ್ಸ್ ವಿತ್ ಬೆನಿಫಿಟ್ಸ್ಗೆ ಮುಂದಾಗ್ತಾರೆ.  ಅಪರಿಚಿತರೊಂದಿಗೆ ಡೇಟಿಂಗ್‌ಗೆ ಹೋಗುವ ಬದಲು ಸ್ನೇಹಿತರಿಗೆ ಆದ್ಯತೆ ನೀಡುತ್ತಾಳೆ.  

'ನಾನು ಚೆನ್ನಾಗಿಯೇ ಇದ್ದೇನೆ, ಆದರೂ ಗಂಡ ಬೇರೆ ಹೆಣ್ಣನ್ನೇ ಗುರಾಯಿಸುತ್ತಾನೆ!'

ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಸಂಬಂಧದಲ್ಲಿ, ಈಗಾಗಲೇ ಸಂಬಂಧ ಹೊಂದಿದ್ದರೂ ಅದನ್ನು ಲೆಕ್ಕಿಸದೆ ಯಾವುದೇ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಅಥವಾ ದೈಹಿಕ ಸಂಬಂಧಗಳನ್ನು ಹೊಂದಲು ನೀವು ಸ್ವತಂತ್ರರಾಗಿದ್ದೀರಿ. ಆದರೆ ಇದರಲ್ಲಿ ಯಾವುದೇ ರೀತಿಯ ಭರವಸೆ ಅಥವಾ ಬದ್ಧತೆ ಇರುವುದಿಲ್ಲ.

ಫೋನ್ ಹಿಡಿದು ಬಾತ್ ರೂಮಿಗೆ ಹೋಗ್ತಾನೆ ಗಂಡ, ಏನ್ಮಾಡ್ತಾನೋ ಗೊತ್ತಿಲ್ಲ!

ಸಾಮಾನ್ಯವಾಗಿ ಕಾಲೇಜಿಗೆ ಹೋಗುವ ಹುಡುಗರು ಅಥವಾ ಹುಡುಗಿಯರಲ್ಲಿ ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತದೆ. ಓದುವವರೆಗೆ, ಕ್ಯಾಂಪಸ್‌ನಲ್ಲಿ ಇರುವವರೆಗೆ ಸ್ನೇಹಿತನೊಂದಿಗೆ ಲೈಂಗಿಕತೆ ಹೊಂದುತ್ತಾರೆ. ನಂತರ ವೃತ್ತಿಜೀವನಕ್ಕೆ ತೆರಳಿದ ನಂತ್ರ ಇಬ್ಬರೂ ಬೇರೆಯಾಗ್ತಾರೆ. ಯಾರೊಂದಿಗೂ ಅವರು ಗಂಭೀರ ಸಂಬಂಧದಲ್ಲಿ ಇರುವುದಿಲ್ಲ. ಇಂಥ ಸಂಬಂಧ ಬೆಳೆಸುವ ವೇಳೆ ಆಲೋಚನೆ ಮಾಡುವುದು ಬಹಳ ಮುಖ್ಯ. ಅನೇಕ ಬಾರಿ ಆರಂಭದಲ್ಲಿ ಹಿತವೆನಿಸುವ ಇಂಥ ಸಂಬಂಧ ಮುಂದೆ ಸಮಸ್ಯೆತರುವ ಸಾಧ್ಯತೆಯಿರುತ್ತದೆ.  
 

click me!