ಗಂಡನನ್ನೇ ಎರಡು ಪಾಲು ಮಾಡಿದ ಪಂಚಾಯಿತಿ: ಇಬ್ಬರು ಹೆಂಡ್ತಿಯರಿಗೆ 50:50- ದೇಶದ ಗಮನ ಸೆಳೆದ ಕೇಸ್​

Published : Jul 22, 2026, 08:00 PM IST
Panchayat

ಸಾರಾಂಶ

ಜಾರ್ಖಂಡ್‌ನ ರಾಂಪುರದಲ್ಲಿ ಪಂಚಾಯಿತಿಯೊಂದು ವಿಚಿತ್ರ ತೀರ್ಪು ನೀಡಿದೆ. ಇಬ್ಬರು ಹೆಂಡತಿಯರನ್ನು ಹೊಂದಿದ್ದ ಪತಿಯನ್ನು ವಾರದಲ್ಲಿ ಮೂರು ದಿನ ಒಬ್ಬರ ಬಳಿ, ಇನ್ನು ಮೂರು ದಿನ ಮತ್ತೊಬ್ಬರ ಬಳಿ ಇರುವಂತೆ ಹಂಚಿಕೆ ಮಾಡಿದ್ದು, ಈ ತೀರ್ಪಿಗೆ ಇಬ್ಬರೂ ಪತ್ನಿಯರು ಒಪ್ಪಿಕೊಂಡಿದ್ದಾರೆ.

ಕೋರ್ಟ್​ಗಳು ಇದ್ದರೂ ಇಂದಿಗೂ ಹಲವು ಕಡೆಗಳಲ್ಲಿ ಇಂದಿಗೂ ಪಂಚಾಯಿತಿಗಳದ್ದೇ ಕಾರುಬಾರು. ಪಂಚಾಯಿತಿಗಳಲ್ಲಿ ನೀಡುವ ತೀರ್ಮಾನವೇ ಅಂತ್ಯ. ಗ್ರಾಮದ ಮರ್ಯಾದೆಯನ್ನು ಕಾಪಾಡುವ ಸಲುವಾಗಿ, ಗ್ರಾಮದಲ್ಲಿ ಪೊಲೀಸರು ಎಂಟ್ರಿ ಕೊಡಬಾರದು ಎನ್ನುವ ಕಾರಣಕ್ಕೆ ಹೀಗೆ ಯಾವ್ಯಾವುದೋ ಕಾರಣಕ್ಕೆ ಪಂಚಾಯಿತಿಗಳಲ್ಲಿ ತೀರ್ಮಾನ ಆಗುವುದು ಇದೆ. ಅಂಥದ್ದೇ ಒಂದು ತೀರ್ಪು ಈಗ ದೇಶದ ಗಮನ ಸೆಳೆದಿದೆ. ವಿಚಿತ್ರ ಆದರೂ ಸತ್ಯ ಎನ್ನುವ ತೀರ್ಪು ಇದಾಗಿದ್ದು, ಜನರು ಕಣ್​ಕಣ್​ ಬಿಡುವಂತಾಗಿದೆ.

ಅಸಲಿಗೆ ಇದು ನಡೆದಿರುವುದು ಜಾರ್ಖಂಡ್​ನ ರಾಂಪುರದ ಪಂಚಾಯಿತಿಯಲ್ಲಿ. ಒಬ್ಬ ಗಂಡನನ್ನು ಇಬ್ಬರು ಹೆಂಡತಿಯರಿಗೆ ಪಂಚಾಯಿತಿ ಹಂಚಿಕೊಟ್ಟಿದೆ. ಇಬ್ಬರ ಜೊತೆ ಯಾವಾಗ ಇರಬೇಕು ಎನ್ನುವ ಬಗ್ಗೆ ತೀರ್ಪು ನೀಡಲಾಗಿದೆ. ವಾರದಲ್ಲಿಇರುವ ಏಳು ದಿನದಲ್ಲಿ 3 ದಿನ ಒಬ್ಬಳ ಜೊತೆ, ಇನ್ನು 3 ದಿನ ಮತ್ತೊಬ್ಬಳ ಜೊತೆ ಇರುವಂತೆ ಸೂಚಿಸಲಾಗಿದೆ. ವೀಕೆಂಡ್​ನಲ್ಲಿ ಅರ್ಥಾತ್​ ಏಳನೇ ದಿನ ಯಾರ ಜೊತೆ ಇರಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ಗಂಡನಿಗೆ ಬಿಟ್ಟುಕೊಟ್ಟಿದೆ ಪಂಚಾಯಿತಿ!

ಏನಿದು ಕೇಸ್​?

ದಧಿಯಾಲ್ ನಗರ ಪಂಚಾಯತ್ ನಿವಾಸಿ ನಜಕತ್, 14 ವರ್ಷಗಳ ಹಿಂದೆ ಉತ್ತರಾಖಂಡದ ಆಶ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಮಾರು 4 ವರ್ಷಗಳ ಹಿಂದೆ, ಆತ ನೇಹಾ ಎಂಬಾಕೆಯನ್ನು ಮದುವೆಯಾದ, ಇದಕ್ಕೆ ಕಾರಣ ಆಶ್ರಾಗೆ ಗಂಡು ಮಗು ಇಲ್ಲ ಎನ್ನುವುದು ಅವನ ಹೇಳಿಕೆ! ಇದರ ಹೊರತಾಗಿಯೂ ನೇಹಾಗೆ ಆಗಿದ್ದು, ಮತ್ತಿಬ್ಬರು ಹೆಣ್ಣುಮಕ್ಕಳೇ! ಸದ್ಯ ಈ ಪತಿ ಮಹಾಶಯ ಎರಡನೆಯ ಪತ್ನಿಯ ಜೊತೆ ವಾಸವಾಗಿದ್ದಾನೆ.

ಪತಿಯ ವರ್ತನೆಯಿಂದ ವಿಚಲಿತರಾದ ಮೊದಲ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಎರಡನೇ ಮದುವೆಯ ನಂತರ, ತನ್ನ ಪತಿ ನಜಕತ್ ನಡವಳಿಕೆ ಬದಲಾಗಿದೆ ಎಂದು ಆಶ್ರಾ ಹೇಳಿದ್ದಳು. ಅವರು ನೇಹಾ ಜೊತೆ ವಾಸಿಸುತ್ತಿದ್ದಾರೆ ಮತ್ತು ಜೀವನಾಂಶಕ್ಕಾಗಿ ಹಣವನ್ನು ನೀಡುವುದಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸುವುದು ಕಷ್ಟಕರವಾಗುತ್ತಿದೆ ಎಂದಿದ್ದಳು. ನಂತರ ಈ ಕೇಸ್​ ಅಲ್ಲಿಯ ಪಂಚಾಯಿತಿ ಮೆಟ್ಟಿಲೇರಿತು.

ಗಂಡನ ಪಾಲು

ಗ್ರಾಮದಲ್ಲಿ ಪಂಚಾಯತ್ (ಗ್ರಾಮ ಸಭೆ) ಕರೆಯಲಾಗಿತ್ತು. ನಾಲ್ಕು ಗಂಟೆಗಳ ಕಾಲ ನಡೆದ ಪಂಚಾಯತ್ ನಂತರ, ಮಧ್ಯಸ್ಥಗಾರರು ತಮ್ಮ ನಿರ್ಧಾರವನ್ನು ಘೋಷಿಸಿದರು. ಇಬ್ಬರು ಮಹಿಳೆಯರಿಗೂ ಅನ್ಯಾಯ ಆಗಬಾರದು ಎನ್ನುವುದು ಪಂಚಾಯಿತಿಯ ತೀರ್ಪು. ಈ ಹಿನ್ನೆಲೆಯಲ್ಲಿ, ಪತಿ ಮಹಾಶಯ, ಪ್ರತಿ ವಾರ ಮೂರು ದಿನಗಳ ಕಾಲ ಎರಡೂ ಹೆಂಡತಿಯರೊಂದಿಗೆ ವಾಸಿಸಬೇಕಾಗುತ್ತದೆ ಎಂದು ಪಂಚಾಯತ್ ಹೇಳಿದೆ. ವಾರದ ಒಂದು ದಿನ ಗಂಡನ ಇಚ್ಛೆಯನ್ನು ಅವಲಂಬಿಸಿರುತ್ತದೆ. ಇದಲ್ಲದೆ, ಅವನು ತನ್ನ ಮೊದಲ ಹೆಂಡತಿಯ ಮನೆಗೆ ಒಂದು ತಿಂಗಳ ಪಡಿತರ ಮತ್ತು 2,000 ವೆಚ್ಚವನ್ನು ಒದಗಿಸಬೇಕಾಗುತ್ತದೆ ಎಂದೂ ಹೇಳಿದ್ದು, ಪತ್ನಿಯರು ಒಪ್ಪಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chanakya Niti for Husbands: ನಿಮ್ಮ ಹೆಂಡತಿಯನ್ನು ಈ ನಾಲ್ಕು ಜನರಿಂದ ದೂರವಿಡಿ
ಈ 3 ರಾಶಿಯ ಹೆಣ್ಣುಮಕ್ಕಳಿಗೆ ಕೋಪವೇ ಬರಲ್ವಂತೆ, ಗಂಡ ಹಾಕಿದ ಗೆರೆ ದಾಟಲ್ವಂತೆ