ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಳ್ಳೋದು ಇತ್ತೀಚಿಗೆ ಟ್ರೆಂಡ್ ಆಗಿದೆ. ಫೋಟೋಶೂಟ್ ಎಲ್ಲರಿಗಿಂತ ಡಿಫರೆಂಟ್ ಆಗಿರಬೇಕೆಂದು ಚಿತ್ರ-ವಿಚಿತ್ರವಾಗಿ ಫೋಟೋಸ್ ತೆಗೆಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಜೋಡಿ ಮಾಡ್ಕೊಂಡಿರೋ ಟ್ರೆಂಡೀ ಫೋಟೋಶೂಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಮದ್ವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಪ್ರಮುಖವಾದ ದಿನ. ಹೀಗಾಗಿಯೇ ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಏನೇನೋ ಹೊಸ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಿಂದ, ಮದ್ವೆ ಫೋಟೋ ಶೂಟ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಅನ್ನೋದು ಹೆಚ್ಚು ಟ್ರೆಂಡ್ ಆಗ್ತಿದೆ. ಜನರು ಗ್ರ್ಯಾಂಡ್ ಲೊಕೇಷನ್‌ನಲ್ಲಿ ತುಂಬಾ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸಿಂಪಲ್ ಆಗಿ, ಮತ್ತೆ ಕೆಲವರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದರಲ್ಲಿ ಕೆಲವು ತುಂಬಾ ವಿಚಿತ್ರವಾದವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಅರೆ ಬೆತ್ತಲಾಗಿ ಫೋಟೋ ಶೂಟ್, ಕೆಸರಿನಲ್ಲಿ ಫೋಟೋ ಶೂಟ್, ನೀರಿನಲ್ಲಿ ಫೋಟೋ ಶೂಟ್, ಗದ್ದೆಯಲ್ಲಿ, ಗ್ರಾಮೀಣ ಗೆಟಪ್, ಸಂತೆಯಲ್ಲಿ, ಮರ್ಡರ್ ನಡೆದಂತೆ ಹೀಗೆ ವಿಚಿತ್ರ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳೋ ಜೋಡಿಯ ಫೋಟೋ ವೈರಲ್ ಆಗುತ್ತಿರುತ್ತದೆ. ಹಾಗೆಯೇ ಇಲ್ಲೊಂದು ಜೋಡಿ ಸ್ಮೋಕಿಂಗ್ ಥೀಮ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೋಡಿಯ ವರ್ತನೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಫೋಟೋಶೂಟ್ ಮಾಡಿಸುವವರಿಗೆ ಸಂತಸದ ಸುದ್ದಿ, ಮಂಗಳೂರು ರೈಲು ನಿಲ್ದಾಣಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ
ದಂಪತಿಗಳ ಧೂಮಪಾನ ಫೋಟೋಶೂಟ್
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ-ಹುಡುಗಿ ವಧು-ವರರ ದಿರಿಸಿನಲ್ಲಿ ಸಿದ್ಧವಾಗಿದ್ದಾರೆ. ಈ ಸಂದರ್ಭದಲ್ಲಿ ಹುಡುಗ ಸ್ಮೋಕ್ ಮಾಡಿ ಹುಡುಗಿಗೆ ಕಿಸ್ ಮಾಡುವ ಮೂಲಕ ಆಕೆಯ ಬಾಯಿಗೆ ಹೊಗೆ ತುಂಬಿಸುತ್ತಾನೆ. ನಂತರ ಹುಡುಗಿ ಸಹ ನಗುತ್ತಾ ಸ್ಟೈಲಾಗಿ ಹೊಗೆ ಬಿಡುತ್ತಾಳೆ. ಇಬ್ಬರೂ ಹೊಗೆ ಬಿಡುತ್ತಾ ಫೋಟೋಗೆ ಫೋಸ್ ಕೊಡುತ್ತಾರೆ. ಇದೇ ಥೀಮ್‌ನಲ್ಲಿ ಪೋಟೋಶೂಟ್ ಸಹ ಮಾಡಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಡಿಯೋವನ್ನು ರಾಜೇಶ್ವರಿ ಅಯ್ಯರ್ (@RajeswariAiyer) ಎಂಬುವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಕಲಿಗಾಲ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಲಿ? ಇಂತಹದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು? ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟವಾಗುತ್ತದೆ' ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಕೇರಳದಲ್ಲಿ ಶೂಟ್ ಮಾಡಿದಂತೆ ತೋರುತ್ತಿದೆ.
ವಧುವಿನಂತೆ ಡ್ರೆಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿದ ಮದುವೆ ಗಂಡು! ಹಿಂಗ್ಯಾಕೆ ಮಾಡಿದ?
ಒಬ್ಬ ಬಳಕೆದಾರರು, 'ಇವತ್ತಿನ ಯೂತ್ಸ್ ಸ್ಪಲ್ಪ ಲೈಕ್ಸ್ ಮತ್ತು ಸಬ್‌ಸ್ಕ್ರೈಬರ್ಸ್ ಗಳಿಸಲು ಏನು ಮಾಡಲು ಸಹ ಹಿಂಜರಿಯುವುದಿಲ್ಲ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು, 'ಜನರು ಯಾಕೆ ಸಭ್ಯತೆಯನ್ನು ಮರೆಯುತ್ತಿದ್ದಾರೆ. ನಮ್ಮ ಸಂಸ್ಕೃತಿ ಇದಲ್ಲ, ನೆನಪಿಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಬಾರದು' ಎಂದು ನವಜೋಡಿಯನ್ನು ನೆಟ್ಟಿಗರ ತರಾಟೆಗೆ ತೆಗೆದುಕೊಂಡಿದ್ದಾರೆ.
Kali-kalam...
What to say about this cultural disintegration !!
Who all wants such an encouraging wife ...who is ok to see her husband's health deteriorating ?!? pic.twitter.com/U5gqZMovbq