6 ಮದ್ವೆಯಾದ ಭೂಪ, ಲೈಂಗಿಕ ಕ್ರಿಯೆಗೆ ಶೆಡ್ಯೂಲ್, ಬಾಡಿಗೆ ತಾಯಿಯಿಂದ ಮಗು!

By Suvarna News  |  First Published Aug 16, 2023, 2:56 PM IST

ಒಂದೇ ಮದುವೆಗೆ ಒದ್ದಾಡೋರು ಒಂದಿಷ್ಟು ಮಂದಿಯಾದ್ರೆ ನಾಲ್ಕೈದು ಮದುವೆಯಾಗೂ ಸುಖವಾಗಿರೋ ಕೆಲವರಿದ್ದಾರೆ. ಲೈಂಗಿಕ ಸುಖ ಪಡೆಯಲು ವೇಳಾಪಟ್ಟಿ ಮಾಡಿಕೊಳ್ಳುವ ಇವರ ಲೈಫ್ ಸ್ಟೈಲ್ ವಿಚಿತ್ರವಾಗಿರುತ್ತೆ. ಬ್ರೆಜಿಲ್ ವ್ಯಕ್ತಿಯೊಬ್ಬ ಗಮನ ಸೆಳೆಯುತ್ತಿದ್ದಾನೆ.
 


ಯಾಕಾದ್ರೂ ಒಂದು ಮದುವೆಯಾದ್ನೋ.. ಈ ಪತ್ನಿ ಕಾಟ ತಡೆಯೋಕೆ ಆಗಲ್ಲ ಅಂತಾ ನೂರರಲ್ಲಿ 50 ಪುರುಷರು ಗೊಣಗುತ್ತಿರುತ್ತಾರೆ. ಇನ್ನು ಎರಡು ಪತ್ನಿ ಕಟ್ಟಿಕೊಂಡವನ ಸ್ಥಿತಿ ಕೇಳೋದೇ ಬೇಡ. ಹಿಂಗೆಲ್ಲ ಇರುವಾಗ ಬ್ರೆಜಿಲ್ ನಲ್ಲಿ ವ್ಯಕ್ತಿಯೊಬ್ಬ ಎರಡಲ್ಲ – ಮೂರಲ್ಲ ಆರು ಪತ್ನಿಯರ ಜೊತೆ ಸಂಸಾರ ಮಾಡ್ತಿದ್ದಾನೆ. ಪತ್ನಿಯಂದಿರು ತಮ್ಮ ಪತಿ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುವ ಆರೂ ಪತ್ನಿಯರು ಸ್ನೇಹಿತರಾಗಿದ್ದಾರಂತೆ. ಆರು ಪತ್ನಿಯರು ಒಂದೇ ಕಡೆ ವಾಸ ಮಾಡ್ತಿದ್ದಾರೆ ಎಂಬುದೇ ಒಂದು ಅಚ್ಚರಿ. ಹಾಗಿರುವಾಗ ಆ ವ್ಯಕ್ತಿಯ ಫ್ಯಾಮಿಲಿ ಪ್ಲಾನಿಂಗ್ ಕೇಳಿ ಜನರು ಮತ್ತಷ್ಟು ದಂಗಾಗಿದ್ದಾರೆ. ಆ ವ್ಯಕ್ತಿ ಕಥೆ ಏನು ಅನ್ನೋದನ್ನು ನಾವು ಹೇಳ್ತೇವೆ.

ಆರು ಪತ್ನಿ (Wife) ಯರ ಪತಿ ಯಾರು ಗೊತ್ತಾ? : ಆರು ಪತ್ನಿಯರನ್ನು ಸಂಭಾಳಿಸ್ತಿರುವ ಮಹಾನ್ ವ್ಯಕ್ತಿ ಹೆಸರು ಆರ್ಥರ್ ವೊ ಉರ್ಸೋ.   2015ರಲ್ಲಿ ಈತ ಮೊದಲ ಮದುವೆ (Marriage) ಯಾಗಿದ್ದಾನೆ. ಲುವಾನಾ ಕಜಾಕಿ  ಜೊತೆ 2015ರಲ್ಲಿ ಮೊದಲ ಮದುವೆ ನಡೆದಿದೆ. ಆರ್ಥರ್ ನಂತ್ರ 21 ವರ್ಷದ ಎಮೇಲಿ ಸೂಜಾಳನ್ನು ಮದುವೆಯಾದ. ನಂತ್ರ 24 ವರ್ಷದ ವಲ್ಲೀರಿಯಾ ಸ್ಯಾಂಟೋಸ್ ಕೈ ಹಿಡಿದ. 21 ವರ್ಷದ ಡೆಮಿಯಾನಾ, 24 ವರ್ಚದ ಅಮಾಂಡಾರನ್ನು ಕೂಡ ಆರ್ಥರ್ ಮದುವೆಯಾಗಿದ್ದಾನೆ. ಇಷ್ಟೇ ಅಲ್ಲ 51 ವರ್ಷದ ಒಲಿಂಡಾ ಮಾರಿಯಾಳನ್ನು ಆರ್ಥರ್ ಮದುವೆಯಾಗಿದ್ದಾನೆ. 

Tap to resize

Latest Videos

ಮಕ್ಕಳ ಜೊತೆ ರೀಲ್ಸ್​ ಮಾಡಿ, ನಟಿ ಮೇಘನಾ ರಾಜ್​ ಮೀಟ್​ ಆಗಿ- 'ದೂರಿ ಲಾಲಿ' ಚಾಲೆಂಜ್​ ಏನಿದು?
    
ಐವರ ಜೊತೆ ಪತಿ ಹಂಚಿಕೊಂಡ ಪತ್ನಿ ಹೇಳೋದೇನು? : ಆರ್ಥರ್ ನನ್ನು ಮೊದಲು ಮದುವೆಯಾದ ಲುವಾನಾ ಕಜಾಕಿ, ಐದು ಮಹಿಳೆಯರ ಜೊತೆ ತನ್ನ ಪತಿಯನ್ನು ಹಂಚಿಕೊಂಡಿದ್ದಾಳೆ. ಇಬ್ಬರೇ ಇರೋದಕ್ಕಿಂತ ಇದು ಒಳ್ಳೆಯದು ಎನ್ನುತ್ತಾಳೆ ಲುವಾನಾ ಕಜಾಕಿ. ಆಕೆಗೆ ಮದುವೆ ಆಗುವ ಮೊದಲು ಯಾವುದೇ ಲವ್ ಅಫೇರ್ ಇರಲಿಲ್ಲವಂತೆ. ಸಾಂಪ್ರದಾಯಿಕ ವಿಧಾನಕ್ಕಿಂತ ಹೊಸ ವಿಧಾನದಲ್ಲಿ ಬದುಕಲು ಲುವಾನಾ ಕಜಾಕಿ ಇಷ್ಟಪಟ್ಟಿದ್ದಳಂತೆ. ನನ್ನ ಐದೂ ಸವತಿಯರು ಸ್ನೇಹಿತರಾಗಿದ್ದಾರೆ. ನಾವೆಲ್ಲ ಕುಟುಂಬದಂತೆ ವಾಸ ಮಾಡ್ತೇವೆ ಎನ್ನುತ್ತಾಳೆ ಲುವಾನಾ ಕಜಾಕಿ.

ಲೈಂಗಿಕ ಕ್ರಿಯೆಗೆ ಶೆಡ್ಯೂಲ್ (Schedule for intercourse) : ಆರು ಪತ್ನಿಯರು ಸೇರಿ ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ. ಆರು ಪತ್ನಿಯರು ಯಾವಾಗ ಆರ್ಥರ್ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು ಎನ್ನುವ ಬಗ್ಗೆ ಇದ್ರಲ್ಲಿ ಸೂಚನೆಯಿದೆ. ಲುವಾನಾ ಕಜಾಕಿ  ಪಾಳಿ ಭಾನುವಾರ ಬರುತ್ತದೆಯಂತೆ. ಎಲ್ಲರಿಗೂ ಆರ್ಥರ್ ಪ್ರೀತಿ ಸಿಗ್ತಿದೆಯಂತೆ. ಹೊಂದಾಣಿಕೆ ಜೀವನವನ್ನು ನಾವು ನಡೆಸುತ್ತಿದ್ದೇವೆ ಎನ್ನುತ್ತಾಳೆ ಲುವಾನಾ ಕಜಾಕಿ. ಈ ವೇಳಾಪಟ್ಟಿ ನಮಗೆ ಸಾಕಷ್ಟು ಸಹಾಯ ಮಾಡಿದೆ ಎನ್ನುವ ಲುವಾನಾ ಕಜಾಕಿ, ಎಲ್ಲ ಬಾರಿ ನಾವಿದನ್ನು ಪಾಲಿಸೋದಿಲ್ಲ ಎನ್ನುತ್ತಾಳೆ. ನಾವು ಪ್ರಯಾಣವನ್ನು ಹೆಚ್ಚು ಇಷ್ಟಪಡ್ತೇವೆ ಎನ್ನುವ ಆಕೆ, ಒಂದೇ ಪತ್ನಿಯಿದ್ರೆ ಮನೆಯನ್ನು ಸಂಭಾಳಿಸೋದು ಕಷ್ಟವಾಗ್ತಿತ್ತು ಎನ್ನುತ್ತಾಳೆ.

ಸೀಮಾ, ಅಂಜು ಆಯ್ತು, ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ಬಿಟ್ಟು ಕುವೈತ್‌ಗೆ ಪರಾರಿಯಾದ ರಾಜಸ್ಥಾನದ ಮಹಿಳೆ!

ವಂಶಾಭಿವೃದ್ಧಿಗೆ ನಡೆದಿದೆ ಈ ಪ್ಲಾನ್ : ಆರಂಭದಲ್ಲಿ ಹೊಂದಿಕೊಳ್ಳೋದು ಎಲ್ಲರಿಗೂ ಕಷ್ಟವಾಗಿತ್ತು ಎನ್ನುವ ಲುವಾನಾ ಕಜಾಕಿ, ಆಗ ವೇಳಾಪಟ್ಟಿ ಸಿದ್ಧವಾಗಿರಲಿಲ್ಲ ಎನ್ನುತ್ತಾಳೆ. ನಾವೆಲ್ಲ ಕಾಮುಕರು ಎಂದೂ ಸೇರಿಸುವ ಲುವಾನಾ ಕಜಾಕಿ, ಆರ್ಥರ್ ನನ್ನು ಹೊಗಳಿದ್ದಾಳೆ. ಆತ ಎಲ್ಲರಿಗೂ ಸಮನಾದ ಪ್ರೀತಿ ತೋರಿಸುತ್ತಾನೆ. ಹಾಗಾಗಿ ನಾನು ಆತನನ್ನು ಪ್ರಶಂಸಿಸುತ್ತೇನೆ ಎನ್ನುತ್ತಾಳೆ ಲುವಾನಾ ಕಜಾಕಿ. ಆರ್ಥರ್ ಈವರೆಗೂ ಮಕ್ಕಳನ್ನು ಪಡೆಯುವಂತೆ ಯಾವುದೇ ಪತ್ನಿಗೆ ತೊಂದರೆ ನೀಡಿಲ್ಲವಂತೆ. ವಂಶಾಭಿವೃದ್ಧಿಗೆ ಇವರೆಲ್ಲರೂ ಬಾಡಿಗೆ ತಾಯಿಯನ್ನು ಹುಡುಕುತ್ತಿದ್ದಾರಂತೆ. ನಾನು ಈ ಸ್ಥಿತಿಯನ್ನು ಇನ್ನೂ ಎದುರಿಸಿಲ್ಲ ಎನ್ನುವ ಲುವಾನಾ ಕಜಾಕಿ, ಮಕ್ಕಳನ್ನು ಪಡೆಯಲು ಉತ್ಸುಕಳಾಗಿದ್ದಾಳೆ. 
 

click me!