Online Dating: ಹೀಗೆಲ್ಲಾ ವಂಚನೆ ಮಾಡುತ್ತಾರೆ ತಿಳ್ಕೊಳ್ಳಿ!

By Suvarna NewsFirst Published Dec 19, 2022, 5:35 PM IST
Highlights

ಆನ್ಲೈನ್ ಡೇಟಿಂಗ್ ಈಗ ಟ್ರೆಂಡ್. ಆದ್ರೆ ಇದ್ರಲ್ಲಿ ಲಾಭದಷ್ಟೆ ನಷ್ಟವಿದೆ. ಸಂಗಾತಿಗೆ ದ್ರೋಹ ಬಗೆಯುವವರ ಸಂಖ್ಯೆ ಸಾಕಷ್ಟಿದೆ. ಎಚ್ಚರಿಕೆಯಿಂದ ಹೆಜ್ಜೆಯಿಟ್ರೂ ಯಾಮಾರುವ ಸಾಧ್ಯತೆಗಳಿರುತ್ತವೆ. ಚಿತ್ರವಿಚಿತ್ರ ಕಾರಣಕ್ಕೆ ಜನರು ಮೋಸ ಮಾಡ್ತಾರೆ.

ಕೊರೊನಾ ನಂತ್ರ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಗಳಲ್ಲಿ ಹೆಸರು ನೋಂದಾಯಿಸುವವರ ಸಂಖ್ಯೆ ಹೆಚ್ಚಾಗಿದೆ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದ್ರೆ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಸಂಗಾತಿ ಹುಡುಕುವುದು ಸುಲಭ. ಮನೆಯಲ್ಲಿಯೇ ಕುಳಿತು ಫೋಟೋ ನೋಡುವ ಜೊತೆಗೆ ಅವರ ಪ್ರೊಫೈಲ್ ಚೆಕ್ ಮಾಡಬಹುದು. ಇಷ್ಟೇ ಅಲ್ಲ ಅವರು ಇಷ್ಟವಾದ್ರೆ ಅವರ ಜೊತೆ ಮಾತನಾಡಬಹುದು. ವಿಡಿಯೋ ಕಾಲ್ ಮಾಡಬಹುದು. ನಂತ್ರ ವರ್ಚುವಲ್ ಡೇಟನ್ನು ನೀವು ಸಾಮಾನ್ಯ ಡೇಟಿಂಗ್ ಗೆ ಬದಲಿಸಿಕೊಳ್ಳಬಹುದು.

ಆನ್ಲೈನ್ (Online) ಡೇಟಿಂಗ್ ಎಷ್ಟು ಅನುಕೂಲವೋ ಅಷ್ಟೇ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆನ್ಲೈನ್ ನಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡುವ ಜನರಿಗೆ ವ್ಯಕ್ತಿ ಎದುರಿಗೆ ಬಂದಾಗ ಸತ್ಯ ಗೊತ್ತಾಗುತ್ತದೆ. ಆನ್ಲೈನ್ ನಲ್ಲಿ ನೀವು ಸುಲಭವಾಗಿ ಬೇರೆ ವ್ಯಕ್ತಿಗೆ ಮೋಸ ಮಾಡಬಹುದು. ಅನೇಕರು ಸುಳ್ಳಿನ ಮೇಲೆ ಸುಳ್ಳು ಹೇಳಿ ಡೇಟಿಂಗ್ (Dating) ಮಾಡ್ತಿರುತ್ತಾರೆ. ಇದನ್ನು ನಾವು ಹೇಳ್ತಿಲ್ಲ. ಆನ್ಲೈನ್ ಡೇಟಿಂಗ್ ಮಾಡಿ ಮೋಸಹೋದ ಕೆಲವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ಮುನಿಸು ತರವೇ ಮಡದಿ? ಹೆಂಡ್ತಿ ಕೋಪವನ್ನು ಹೀಗ್ ತಣ್ಣಗೆ ಮಾಡಬಹುದು!

ಆನ್ಲೈನ್ ಡೇಟಿಂಗ್ ಮೂಲಕ ಮೋಸ ಹೋದ ವ್ಯಕ್ತಿಗಳು ಏನು ಹೇಳ್ತಾರೆ ಗೊತ್ತಾ? :
ಈ ಕಾರಣಕ್ಕೆ ಡೇಟಿಂಗ್ ಶುರು ಮಾಡಿದ ಹುಡುಗಿ :
ವ್ಯಕ್ತಿಯೊಬ್ಬ ಆನ್ಲೈನ್ ನಲ್ಲಿ ಹುಡುಗಿಯೊಬ್ಬಳನ್ನು ಭೇಟಿಯಾಗಿದ್ದಾನೆ. ಮೊದಲ ನೋಟದಲ್ಲಿಯೇ ಆತನಿಗೆ ಹುಡುಗಿ ಇಷ್ಟವಾಗಿದ್ದಾಳೆ. ಹಾಗಾಗಿ ಮಾತು ಶುರು ಮಾಡಿದ್ದಾನೆ. ಬೇರೆ ಬೇರೆ ಊರಿನಲ್ಲಿ ವಾಸವಾಗಿದ್ದ ಇಬ್ಬರು ಒಂದೇ ಊರಿಗೆ ಶಿಪ್ಟ್ ಆಗಿದ್ದಾರೆ. ಕೆಲ ದಿನಗಳ ನಂತ್ರ ಲಿವ್ ಇನ್ (Live in) ನಲ್ಲಿ ಇರಲು ಶುರು ಮಾಡಿದ್ದಾರೆ. ಸ್ವಲ್ಪ ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ನಂತ್ರ ಹುಡುಗಿ ಮೋಸ ಮಾಡಿದ್ದಾಳೆ ಎಂಬುದು ಗೊತ್ತಾಯ್ತು. ಮೊದಲೇ ಬಾಯ್ ಫ್ರೆಂಡ್ ಹೊಂದಿದ್ದ ಹುಡುಗಿ ಬಾಯ್ ಫ್ರೆಂಡ್ ಹೊಟ್ಟೆ ಉರಿಸಲು ಈತನ ಜೊತೆ ನಾಟಕವಾಡಿದ್ದಳಂತೆ.

ವಿದೇಶದಲ್ಲಿ ವಾಸಿಸುವ ಆಸೆ : ಈತ ವಿದೇಶದಲ್ಲಿ ಕೆಲಸ ಮಾಡ್ತಿದ್ದನಂತೆ. ಸ್ವಲ್ಪ ದಿನದ ಮಟ್ಟಿಗೆ ಭಾರತಕ್ಕೆ ಬಂದಿದ್ದನಂತೆ. ಈ ವೇಳೆ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಗಿಯೊಬ್ಬಳು ಸಿಕ್ಕಿದ್ದಳಂತೆ. ಮದುವೆಗೆ ಒತ್ತಾಯ ಮಾಡ್ತಿದ್ದ ಹುಡುಗಿ ಬಳಿ ಕಾರಣ ಕೇಳಿದ್ರೆ, ವಿದೇಶದಲ್ಲಿ ಸೆಟಲ್ ಆಗುವ ಆಸೆಯಿದೆ. ಹಾಗಾಗಿ ನಿನ್ನನ್ನು ಮದುವೆಯಾಗ್ತಿದ್ದೆನೆ. ಮದುವೆಯಾದ್ಮೇಲೆ ನಿನ್ನನ್ನು ನಾನು ಪ್ರೀತಿ ಮಾಡಬಹುದೇನೋ ಎಂದಿದ್ದಳಂತೆ. 

ಮಾಜಿ ಮರೆಯಲು ಡೇಟ್ ಮಾಡಿದ ಹುಡುಗ : ಇಲ್ಲಿ ಹುಡುಗಿ ಮೋಸ ಹೋಗಿದ್ದಾಳೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಗನೊಬ್ಬನ ಪರಿಚಯವಾಗಿದೆ. ಇಬ್ಬರೂ ಡೇಟಿಂಗ್ ಶುರು ಮಾಡಿದ್ದಾರೆ. ಹುಡುಗಿ ಆತನನ್ನು ಹುಚ್ಚಿಯಂತೆ ಪ್ರೀತಿ ಮಾಡ್ತಿದ್ದಳಂತೆ. ಆತನೇ ಸರ್ವಸ್ವ ಎಂದುಕೊಂಡಿದ್ದಳಂತೆ. ಆದ್ರೆ ಡೇಟಿಂಗ್ ಶುರುವಾಗಿ ಎರಡು ತಿಂಗಳ ನಂತ್ರ ಹುಡುಗ ಬಾಯಿಬಿಟ್ಟಿದ್ದಾನೆ. ಬ್ರೇಕ್ ಅಪ್ ಆದ ದಿನ ರಾತ್ರಿ ಆನ್ಲೈನ್ ನಲ್ಲಿ ನಿಮ್ಮ ಪರಿಚಯವಾಯ್ತು. ನನ್ನ ಮಾಜಿ ಮರೆಯಲು ನಾನು ನಿಮ್ಮ ಜೊತೆ ಮಾತುಕತೆ ಶುರು ಮಾಡಿದ್ದೆ. ನನಗೆ ನಿನ್ನ ಮೇಲೆ ಯಾವುದೇ ಭಾವನೆಯಿಲ್ಲ. ನಿಮ್ಮ ಮನಸ್ಸು ನೋಯಿಸಿದ್ದಕ್ಕೆ ಕ್ಷಮೆಯಿರಲಿ ಎಂದಿದ್ದನಂತೆ. 

FLIRTING ಮಾಡೋದರಲ್ಲಿ ಈ ZODIAC SIGNನ ಜನರು ನಿಸ್ಸೀಮರು!

ಹಣ ಲೂಟಿ ಮಾಡಿದ್ದ ಹುಡುಗಿ : ಆನ್ಲೈನ್ ನಲ್ಲಿ ಹುಡುಗಿಯನ್ನು ಭೇಟಿಯಾಗಿದ್ದ ಈ ವ್ಯಕ್ತಿ ಆಕೆಯನ್ನು ನಂಬಿದ್ದನಂತೆ. ಪ್ರತಿ ದಿನ ಕರೆ ಮಾಡ್ತಿದ್ದ ಹುಡುಗಿ ವೀಕೆಂಡ್ ನಲ್ಲಿ ಸುತ್ತಾಡಲು ಬರ್ತಿದ್ದಳಂತೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎನ್ನುವ ನಂಬಿಕೆಯಲ್ಲಿದ್ದ ಹುಡುಗನಿಗೆ ಹುಡುಗಿ ಶಾಕ್ ನೀಡಿದ್ದಳಂತೆ. ನಾವಿಬ್ಬರು ಬರೀ ಸ್ನೇಹಿತರಷ್ಟೆ ಎಂದಿದ್ದಳಂತೆ. ಆಕೆಗಾಗಿ ಈವರೆಗೆ 15 ಸಾವಿರಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದೆ. ಅದನ್ನು ವಾಪಸ್ ನೀಡು ಅಂದ್ರೆ ಎಲ್ಲ ಕಡೆ ನನ್ನನ್ನು ಬ್ಲಾಕ್ ಮಾಡಿದ್ಲು ಎನ್ನುತ್ತಾನೆ ವ್ಯಕ್ತಿ.

 

click me!