ಯಪ್ಪಾ..ಮದುವೆಗೆ ಮಗಳು-ಅಳಿಯನಿಗೆ ಬುಲ್ಡೋಜರ್ ಉಡುಗೊರೆ ನೀಡಿದ ಅಪ್ಪ!

Published : Dec 18, 2022, 04:17 PM IST
ಯಪ್ಪಾ..ಮದುವೆಗೆ ಮಗಳು-ಅಳಿಯನಿಗೆ  ಬುಲ್ಡೋಜರ್ ಉಡುಗೊರೆ ನೀಡಿದ ಅಪ್ಪ!

ಸಾರಾಂಶ

ಮದುವೆಯಾಗಿ ಹೋಗುವ ಮಗಳಿಗೆ ಅಪ್ಪ-ಅಮ್ಮ ಮನೆ, ಕಾರು, ಒಡವೆ ಮೊದಲಾದವುಗಳನ್ನು ಗಿಫ್ಟ್ ಕೊಡೋ ಬಗ್ಗೆ ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದ್ರೆ ಉತ್ತರಪ್ರದೇಶದಲ್ಲೊಬ್ಬ ವ್ಯಕ್ತಿ ತನ್ನ ಮಗಳು-ಅಳಿಯನಿಗೆ ಬುಲ್ಡೋಜರ್ ಗಿಫ್ಟ್ ನೀಡಿದ್ದಾರೆ. ಅರೆ ಇದೆಂಥಾ ವಿಚಿತ್ರ ಅಂತೀರಾ ? ಇಲ್ಲಿದೆ ನೋಡಿ ಫುಲ್ ಸ್ಟೋರಿ.

ಉತ್ತರಪ್ರದೇಶ: ಮದುವೆ (Wedding) ಎಂದರೆ ಒಂದು ಶುಭಕಾರ್ಯ. ಹೀಗಾಗಿ ನೂರಾರು ಮಂದಿ ಈ ಶುಭ ಸಮಾರಂಭಕ್ಕೆ ಬಂದು ಅಕ್ಷತೆ ಹಾಕಿ ಹಾರೈಸುತ್ತಾರೆ. ಉಡುಗೊರೆ (Gift)ಗಳನ್ನು ನೋಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಆಶಿಸುತ್ತಾರೆ. ಮದುವೆಯಾಗಿ ಹೋಗುವ ಮಗಳಿಗೆ ಅಪ್ಪ-ಅಮ್ಮ ಮನೆ, ಕಾರು, ಒಡವೆ ಮೊದಲಾದವುಗಳನ್ನು ಗಿಫ್ಟ್ ಕೊಡೋ ಬಗ್ಗೆ ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದ್ರೆ ಉತ್ತರಪ್ರದೇಶದಲ್ಲೊಬ್ಬ ವ್ಯಕ್ತಿ ತನ್ನ ಮಗಳು-ಅಳಿಯನಿಗೆ ಬುಲ್ಡೋಜರ್ ಗಿಫ್ಟ್ ನೀಡಿದ್ದಾರೆ. ಅರೆ ಇದೆಂಥಾ ವಿಚಿತ್ರ ಅಂತೀರಾ ? ಹೆಚ್ಚಿನ ಮಾಹಿತಿ ಇಲ್ಲಿದೆ.

ಮಗಳು, ಅಳಿಯನಿಗೆ ಮದುವೆಯ ಉಡುಗೊರೆಯಾಗಿ ಬುಲ್ಡೋಜರ್ ನೀಡಿದ ತಂದೆ
ಉತ್ತರ ಪ್ರದೇಶದಲ್ಲಿ ವಧುವಿನ ತಂದೆ ಮಗಳಿಗೆ (Daughter) ಮತ್ತು ಅಳಿಯನಿಗೆ (Son-in-law) ಮದುವೆಯ ಉಡುಗೊರೆಯಾಗಿ ಬುಲ್ಡೋಜರ್ ಅನ್ನು  ನೀಡಿದ್ದಾರೆ. ಪರಶುರಾಮ್ ಪ್ರಜಾಪತಿ ಎಂಬ ನಿವೃತ್ತ ಯೋಧ ತನ್ನ ಮಗಳು ನೇಹಾಗೆ ಮದುವೆಯ ದಿನದಂದು ಬುಲ್ಡೋಜರ್ ಅನ್ನು ಉಡುಗೊರೆಯಾಗಿ ನೀಡಿದರು. ಬುಲ್ಡೋಜರ್ ತನ್ನ ಮಗಳಿಗೆ ಹಣ ಸಂಪಾದಿಸಲು ಸಹಾಯ ಮಾಡುತ್ತದೆ ಎಂದು ವಧುವಿನ ತಂದೆ ಹೇಳಿದ್ದಾರೆ.

25 ವರ್ಷದಿಂದ ಒಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿದ ಮಗಳು !

ಬುಲ್ಡೋಜರ್ ಬಳಸಿ ಮಗಳು ಹಣ ಸಂಪಾದಿಸಬಹುದು ಎಂಬ ಸದುದ್ದೇಶ
ಉತ್ತರ ಪ್ರದೇಶದ ಹಮೀರ್‌ಪುರ್ ಮೂಲದ ವ್ಯಕ್ತಿಯಾಗಿರುವ ಪ್ರಜಾಪತಿ ತಮ್ಮ ಅಳಿಯ ಯೋಗೇಂದ್ರ ಅಲಿಯಾಸ್ ಯೋಗಿಗೆ ತಮ್ಮ ಮದುವೆಯ ಸಂದರ್ಭದಲ್ಲಿ ಬುಲ್ಡೋಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು, ಇದು ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ಸೌಂಕರ್ ನಿವಾಸಿ ಯೋಗೇಂದ್ರ ನೌಕಾಪಡೆಯ ಅಧಿಕಾರಿಯಾಗಿದ್ದಾರೆ. ನವದಂಪತಿಗಳಿಗೆ ಐಷಾರಾಮಿ ಕಾರಿನ ಬದಲು ಜೆಸಿಬಿ ನೀಡಿದ ಕಾರಣವನ್ನು ಕೇಳಿದಾಗ, ಪರಶುರಾಮ್ ಅವರು ತಮ್ಮ ಮಗಳು ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದು, ಪರೀಕ್ಷೆಯಲ್ಲಿ ವಿಫಲವಾದರೆ ಬುಲ್ಡೋಜರ್ ಬಳಸಿ ಹಣ ಸಂಪಾದಿಸಬಹುದು ಎಂದು ಹೇಳಿದರು.

'ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಡಿಸೆಂಬರ್ 15 ರಂದು ನಮ್ಮ ಮದುವೆಯ ದಿನದಂದು ನನ್ನ ಮಾವ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ನಮ್ಮ ಜಿಲ್ಲೆಗಳಿಗೆ ಹೊಸ ಉಪಕ್ರಮವಾಗಿದೆ" ಎಂದು ಯೋಗೇಂದ್ರ ಹೇಳಿದರು. ಬುಲ್ಡೋಜರ್‌ನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಸ್ವೀಟ್ ತಿನ್ನೇ ಎಂದು ಒತ್ತಾಯಿಸಿದ ವರ, ಸಿಟ್ಟಿಗೆದ್ದು ಹೊಡ್ದೇಬಿಟ್ಲು ಭಾವಿ ಹೆಂಡ್ತಿ !

'ಯುಪಿ ಮೆ ಬುಲ್ಡೋಜರ್ ಕಿ ಧೂಮ್. ಹಮೀರ್‌ಪುರ್ ಕಿ ಏಕ್ ಶಾದಿ ಮೇ ಉಪರ್ ಸ್ವರೂಪ್ ದುಲ್ಹಾ ಯೋಗೇಂದ್ರ ಕೋ ಬುಲ್ಡೋಜರ್ ಮಿಲಾ ಹೈ," ಎಂದು ಫೋಟೋಗಳಿಗೆ ಶೀರ್ಷಿಕೆ ನೀಡಲಾಗಿದೆ. ಅಂದರೆ ಉತ್ತರಪ್ರದೇಶದಲ್ಲಿ ಬುಲ್ಡೋಜರ್‌ನ ಹವಾ. ಹಮೀರ್‌ಪುರ್‌ದ ವರ ಯೋಗೇಂದ್ರಗೆ ಬುಲ್ಡೋಜರ್ ಗಿಫ್ಟ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬ ಬಳಕೆದಾರ 'ಇದೇನು ವರದಕ್ಷಿಣೆನಾ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, 'ಬಹಳ ಸುಂದರವಾದ ಉಡುಗೊರೆ' ಎಂದು ಪ್ರಶಂಸಿದ್ದಾರೆ. ಮತ್ತೊಬ್ಬರು 'ನಮ್ಮ ಸಮಾಜ ಹೇಗೆ ಸುಂದರವಾಗಿ ಬದಲಾಗುತ್ತಿದೆ. ಎಂಬುದಕ್ಕೆ ಇದು ನಿದರ್ಶನವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಮಾವ ಇದ್ದರೆ ಹೀಗಿರಬೇಕು ಎಂದು ಹೇಳಿದ್ದಾರೆ.

ಕೋಟ್ಯಾಧೀಶನ ಕೈ ಹಿಡೀಬೇಕೆನ್ನುವ ಕನಸು ಕಾಮನ್, ಕೋಟ್ಯಾಧಿಪತಿಗೆ ಪತ್ನಿಯಾಗುವ ಮುನ್ನ...!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಈ 5 ರೀತಿಯ ಪುರುಷರಿಂದ ದೂರವಿರೋದೆ ಒಳ್ಳೇದು
ಗೆಳತಿಯೊಂದಿಗೆ ಹೋಟೆಲ್‌ನಲ್ಲಿದ್ದಾಗ ಬಂದ ಹೆಂಡ್ತಿ, ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯ ಈಗ ಜಗಜ್ಜಾಹೀರು