ಫೆಬ್ರವರಿ 14ರಂದು. ಪ್ರೀತಿಸುವ ಜೋಡಿಗಳಿಗೆ ಹಬ್ಬ. ಹೀಗಿರುವಾಗ ಟ್ವಿಟರ್‌ನಲ್ಲೊಂದು ಜೋಡಿ ತಮ್ಮ ಸುಂದರ ಪ್ರೇಮಕಥೆಯನ್ನು ಹಂಚಿಕೊಂಡಿದೆ. ಟ್ವಿಟರ್‌ನಲ್ಲಿ ಶುರುವಾಗಿರುವ ಜರ್ನಲಿಸ್ಟ್‌ಗಳ ಈ ಲವ್‌ಸ್ಟೋರಿ ಈಗ ಎಲ್ಲೆಡೆ ವೈರಲ್ ಆಗ್ತಿದೆ.
ಹೈದರಾಬಾದ್: ಫೆಬ್ರವರಿ 14, ವಾಲೆಂಟೈನ್ಸ್ ಡೇ. ಪ್ರೇಮಿಗಳಿಗಾಗಿಯೇ ಮೀಸಲಾಗಿರುವ ದಿನ. ಈ ದಿನ ಹುಡುಗ-ಹುಡುಗಿಯರು ಪರಸ್ಪರ ಪ್ರಪೋಸ್ ಮಾಡುತ್ತಾರೆ. ಈಗಾಗಲೇ ಪ್ರೀತಿಯಲ್ಲಿದ್ವರು ತಮ್ಮ ಪ್ರೀತಿಯನ್ನು ಸೆಲಬ್ರೇಟ್ ಮಾಡುತ್ತಾರೆ. ಖುಷಿಯಿಂದ ಜೊತೆಯಾಗಿ ಸಮಯ ಕಳೆಯುತ್ತಾರೆ. ರೋಸ್ ನೀಡಿ, ಗಿಫ್ಟ್, ಡೇಟ್, ಡಿನ್ನರ್ ಎಂದು ಸ್ಪೆಷಲ್ ಆಗಿ ದಿನವನ್ನು ಎಂಜಾಯ್ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಜೋಡಿ ಪ್ರೇಮಿಗಳ ದಿನವೇ, ತಮ್ಮ ಸುಂದರ ಪ್ರೇಮಕಥೆಯನ್ನು ಹಂಚಿಕೊಂಡಿದೆ. ಟ್ವಿಟರ್‌ನಲ್ಲಿ ಶುರುವಾಗಿರೋ ಪ್ರೀತಿ ಬಗ್ಗೆ ಟ್ವಿಟರ್‌ನಲ್ಲೇ ಮಾಡಿರೋ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
ಇಂಟರ್ನೆಟ್ ಯುಗದಲ್ಲಿ, ಪ್ರತಿಯೊಂದು ಸಾಮಾಜಿಕ ಮಾಧ್ಯಮ (Social media) ಅಪ್ಲಿಕೇಶನ್ ಡೇಟಿಂಗ್ ಫ್ಲಾಟ್‌ಫಾರ್ಮ್‌ನಂತೆ ಆಗಿದೆ. ಫೇಸ್‌ಬುಕ್, ಮೆಸೇಂಜರ್, ವಾಟ್ಸಾಪ್, ಇನ್‌ಸ್ಟಾಗ್ರಾಂ ಮೊದಲಾದವು ಎರಡು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಿವೆ. ಲಿಂಕ್ಡ್‌ಇನ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯು ಲವ್‌ಬರ್ಡ್‌ಗಳಿಗೆ ಉತ್ತಮ ವೇದಿಕೆಯಾಗಿದೆ. ಈ ಮೂಲಕ ಅನೇಕ ಜನರು ತಮ್ಮ ಪ್ರೀತಿಯ (Love) ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದಾರೆ. ಅದೇ ರೀತಿ ಹೈದರಾಬಾದ್‌ನ ಪತ್ರಕರ್ತೆಯೊಬ್ಬರು ಪ್ರೇಮಿಗಳ ದಿನದಂದು ಟ್ವಿಟರ್‌ನಲ್ಲಿ ತಮ್ಮ ಪ್ರೀತಿ ಹುಟ್ಟಿಕೊಂಡಿರುವುದರ ಬಗ್ಗೆ ಹೇಳಿದ್ದಾರೆ.
Valentine's Day 2023: ಪ್ರೇಮಿಗೆ ಈ ದಿನವನ್ನು ವಿಶೇಷವಾಗಿಸಲು ನೀವೇನು ಮಾಡಬಹುದು?
ಟ್ವಿಟರ್‌ನಲ್ಲಿ ಹುಟ್ಟಿಕೊಂಡ ಸುಂದರವಾದ ಲವ್ ಸ್ಟೋರಿ
ಹೈದರಾಬಾದ್‌ನ ಪತ್ರಕರ್ತೆ,ಡೊನಿಟಾ ಜೋಸ್ ಟ್ವಿಟರ್‌ನಲ್ಲಿ ರತ್ನಮ್ ಎಂಬವರನ್ನು ಭೇಟಿಯಾಗಿ, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಟ್ವಿಟರ್‌ನಲ್ಲಿ ತನ್ನ ಪತಿಯನ್ನು ಹೇಗೆ ಭೇಟಿಯಾದೆ ಎಂಬುದನ್ನು ಡೊನಿಟಾ ವಿವರಿಸಿದ್ದಾರೆ. ಸದ್ಯ ಖುಷಿಯಿಂದ ವೈವಾಹಿಕ ಜೀವನ (Married life) ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇಬ್ಬರೂ ಟ್ವಿಟ್ಟರ್‌ನಲ್ಲಿ ಪರಸ್ಪರ ಭೇಟಿ (Meet)ಯಾದರು ಮತ್ತು ಪ್ರೀತಿಸುತ್ತಿದ್ದರು. ನಂತರ ಮದುವೆಯಾದರು ಎಂದು ತಿಳಿದುಬಂದಿದೆ.
ಪತ್ರಕರ್ತೆ ಡೊನಿಟಾ ಜೋಸ್ ಅವರು ಟ್ವಿಟರ್‌ನಲ್ಲಿ ತಮ್ಮ ಪ್ರೀತಿ ಹೇಗೆ ಪ್ರಾರಂಭವಾಯಿತು ಮತ್ತು ಅದು ಹೇಗೆ ನಡೆಯುತ್ತಿದೆ ಎಂದು ಬರೆದಿದ್ದಾರೆ. #WeMetOnTwitter @CityOrdinary ಟ್ಯಾಗ್ ಮಾಡಿ ಡೊನಿಟಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಾವಿಬ್ಬರೂ ಹೇಗೆ ಪರಸ್ಪರ ಮಾತನಾಡಿದೆವು ಮತ್ತು ಆಪ್ತತೆಯನ್ನು ಬೆಳೆಸಿಕೊಂಡೆವು ಎಂಬುದನ್ನು ವಿವರಿಸಿದ್ದಾರೆ. TSRTC ಸಂಬಂಧಿತ ಸುದ್ದಿಯನ್ನು ಕವರ್ ಮಾಡಲು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಡೊನಿಟಾ ಜೋಸ್, ರತ್ನಮ್‌ನ್ನು ಸಂಪರ್ಕಿಸುತ್ತಾರೆ. ಇದು ಒಂದು ಅಫಿಶಿಯಲ್ ಮೆಸೇಜ್ ಆಗಿರುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ ರತ್ಮಮ್, ಸ್ಟೋರಿಯ ಬಗ್ಗೆ ಮಾತನಾಡಲು ಸಂಜೆ 6 ಗಂಟೆಯ ನಂತರ ಕರೆ ಮಾಡಿ, ಇಲ್ಲವೇ ದಿನದಲ್ಲಿ ಯಾವಾಗ ಬೇಕಾದರೂ ಈ ಫೋನ್ ನಂಬರ್ ಗೆ ಮೆಸೇಜ್ ಮಾಡಿ ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಸಾಮಾನ್ಯ ಸಂದೇಶ ವಿನಿಮಯದ ಮೂಲಕ ಪ್ರೀತಿ ಹುಟ್ಟಿತು ಎಂದು ಡೊನಿಟಾ ಹೇಳಿದ್ದಾರೆ.
ವೇದಮಂತ್ರಘೋಷಗಳ ನಡುವೆ ಭಾರತೀಯ ಯುವಕನನ್ನು ವರಿಸಿದ ರಷ್ಯನ್ ಬೆಡಗಿ
ಡೊನಿಟಾ ಜೋಸ್ ತಮ್ಮ ನಿಶ್ಚಿತಾರ್ಥ (Engagement) ಹಾಗೂ ಮದುವೆಯ ಫೋಟೋ (Wedding photos)ಗಳನ್ನೂ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಟ್ವಿಟರ್‌ನಲ್ಲಿ 4800 ಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ಹಲವಾರು ಮಂದಿ ಈ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ತುಂಬಾ ಸರಳ ಸಂಭಾಷಣೆಯಿಂದ ಶುರುವಾದ ಪ್ರೇಮಕಥೆ ಮತ್ತು ಮದುವೆಗೆ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
How it started vs How it is going pic.twitter.com/851lW7huFp
— Donita Jose (@DonitaJose)