ಮದುವೆಯಾಗೋಕೆ ಹುಡುಗ ಸಿಗ್ತಿಲ್ಲ ಅನ್ನೋದು ಇತ್ತೀಚಿನ ಹುಡುಗರ ಗೋಳು. ಆದ್ರೆ ರಾಜಸ್ಥಾನದಲ್ಲೊಬ್ಬ ವ್ಯಕ್ತಿ ಮಾತ್ರ ಒಬ್ಬಳನ್ನಲ್ಲ, ಇಬ್ಬರನ್ನು ಮದ್ವೆಯಾಗಿದ್ದಾನೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯ್ ಪಟ್ಟಣದ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಸಮಾರಂಭದಲ್ಲಿ ಯುವ ವರನೊಬ್ಬ ಒಬ್ಬರಲ್ಲ, ಇಬ್ಬರು ವಧುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ರೈತ ಕುಟುಂಬದ 23 ವರ್ಷದ ವರನು ಯುನಿಯಾರಾ ಪಟ್ಟಣದ ಮೋರ್ಜಾಲಾ-ಕಿ-ಜೋನ್‌ಪಾರಿಯಾದ ಇಬ್ಬರು ಸಹೋದರಿಯನ್ನು ಮದುವೆಯಾಗಿದ್ದಾನೆ. ಮಂಟಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮದುವೆ ನಡೀತು. ಅಪರೂಪದ ಮದುವೆಯನ್ನು ವೀಕ್ಷಿಸಲು ಆಪ್ತ ಬಂಧುಗಳು ಮಾತ್ರವಲ್ಲದೆ ಎರಡೂ ಕಡೆಯ ಗ್ರಾಮಗಳ ಆಹ್ವಾನಿತ ಅತಿಥಿಗಳೂ ನೆರೆದಿದ್ದರು. ಪುರೋಹಿತರ ವೇದ ಮಂತ್ರಗಳ ಪಠಣದ ನಡುವೆ ವರ ಇಬ್ಬರು ವಧುಗಳೊಂದಿಗೆ ಸಪ್ತಪದಿ ತುಳಿದರು.
ಈ ಕುಟುಂಬ ಮಗ, ಇಬ್ಬರು ಹುಡುಗಿಯರನ್ನು ಮದುವೆಯಾಗುವ ವಿಷಯವನ್ನು ಗುಟ್ಟಾಗಿ ಇಟ್ಟಿಲ್ಲ. ಈ ಕುರಿತಾದ ಮದುವೆಯ ಕಾರ್ಡ್‌ನ್ನು ಸಿದ್ಧಪಡಿಸಿದ್ದಾರೆ. ಹರಿ ಓಂ ಎಂಬ ವರ ಕಾಂತ ಹಾಗೂ ಸುಮನ್‌ರನ್ನ ಮದುವೆಯಾಗುತ್ತಿರುವುದಾಗಿ ವೆಡ್ಡಿಂಗ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ವರ, ಇಬ್ಬರು ವಧುಗಳ ಹೆಸರಿರೋ ಮದುವೆ ಕಾರ್ಡ್ ಎಲ್ಲೆಡೆ ವೈರಲ್ ಆಗಿದೆ. 'ಮೂವರೂ ಸಂತೋಷವಾಗಿದ್ದಾರೆ ಮತ್ತು ವೈವಾಹಿಕ ಆನಂದವನ್ನು ಅನುಭವಿಸುತ್ತಿದ್ದಾರೆ' ಎಂದು ಹರಿ ಓಂ ಅವರ ಹಿರಿಯ ಸಹೋದರ ಹರಿರಾಮ್ ಅವರು ತಿಳಿಸಿದ್ದಾರೆ.
1,000 ಬಾಯ್‌ಫ್ರೆಂಡ್ಸ್ ಹೊಂದಿರೋ ಯುವತಿ, ಒಂದು ಗಂಟೆ ಡೇಟ್ ಮಾಡೋಕೆ ಭರ್ತಿ 5,000!
ವ್ಯಕ್ತಿ ಇಬ್ಬರು ನಿಜವಾದ ಸಹೋದರಿಯರನ್ನು ಮದುವೆಯಾಗಲು ಕಾರಣ ಏನೆಂಬುದು ಹೆಚ್ಚಿನವರಿಗೆ ಆಶ್ಚರ್ಯವಾಗಬಹುದು. ಹರಿ ಓಂ, ಅಕ್ಕ ಕಾಂತಾಗೆ ಪ್ರಪೋಸ್ ಮಾಡಿದ್ದ. ಈ ಸಂದರ್ಭದಲ್ಲಿ ಕಾಂತಾ, ತನ್ನ ತಂಗಿ ಸುಮನ್‌ಳನ್ನೂ ಮದುವೆಯಾಗಬೇಕೆಂದು ಷರತ್ತು ಹಾಕಿದ್ದಳು. ಹರಿ ಓಂ, ಮೊದಲಿಗೆ ಇದನ್ನು ಸೀರಿಯೆಸ್ ಆಗಿ ತಗೊಂಡಿರಲ್ಲಿಲ್ಲ. ಆದರೆ ಈ ಬಗ್ಗೆ ಕಾಂತಾ ನಿರಂತರವಾಗಿ ಒತ್ತಾಯ ಮಾಡಿದ ಕಾರಣ ಇಬ್ಬರನ್ನೂ ಮದುವೆಯಾಗಲು ನಿರ್ಧರಿಸಿದನು. ವರನು ಒಂದೇ ಮನೆಯಲ್ಲಿ ಇಬ್ಬರು ವಧುಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಸ್ವಾಗತವಿದೆ ಎಂದು ಹರಿರಾಮ್ ಹೇಳಿದರು.
'ಕಿರಿಯ ತಂಗಿ ಮಾನಸಿಕವಾಗಿ ದುರ್ಬಲಳಾಗಿರುವುದರಿಂದ ತನ್ನ ಅಕ್ಕನ ಮೇಲೆ ಅವಲಂಬಿತಳಾಗಿದ್ದಾಳೆ. ಅಕ್ಕ ಕೂಡ ಮದುವೆಯಾದ ನಂತರ ತನ್ನ ತಂಗಿಯೊಂದಿಗೆ ವಾಸಿಸಲು ಬಯಸಿದ್ದಳು' ಎಂದು ಹರಿರಾಮ್ ಹೇಳಿದರು. 'ಮದುವೆಯಾದ ನಂತರ ಕಾಂತಾ, ಸುಮನ್ ಅವರನ್ನು ವರನ ಅವಿಭಕ್ತ ಕುಟುಂಬದಲ್ಲಿ ನೋಡಿಕೊಳ್ಳುತ್ತಿದ್ದಾರೆ. ಹರಿ ಈ ಮಧ್ಯೆ, ತನ್ನ ಎರಡನೇ ಪತ್ನಿಯನ್ನು ತಜ್ಞ ವೈದ್ಯರ ಬಳಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ' ಎಂದು ತಿಳಿದುಬಂದಿದೆ.
ವರದಕ್ಷಿಣೆಯಾಗಿ ಬೈಕ್ ಕೇಳಿದ ಮಗನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ!