ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಯುವಕನ ವಿರುದ್ಧ ಕೇಸ್

By Suvarna News  |  First Published Dec 5, 2022, 2:25 PM IST

ಸೋಲಾಪುರದ ಯುವಕನೊಬ್ಬ ಮುಂಬೈನ ಅವಳಿ ಸಹೋದರಿಯರನ್ನು ಮದುವೆಯಾದ್ದ ಫೋಟೋ ನಿನ್ನೆ ಎಲ್ಲೆಡೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸರು ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. 


ಮುಂಬೈ: ಮುಂಬೈನಲ್ಲಿ ಐಟಿ ಎಂಜಿನಿಯರ್ ಆಗಿರುವ ಅವಳಿ ಸಹೋದರಿಯರು (Twin sisters) ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ನಿನ್ನೆ ಒಬ್ಬನೇ ವ್ಯಕ್ತಿಯನ್ನೇ ವಿವಾಹ (Wedding)ವಾಗಿದ್ದರು. ಎಲ್ಲರ ಅಚ್ಚರಿಗೆ ಕಾರಣವಾದ ಈ ವಿವಾಹಕ್ಕೆ ಹುಡುಗಿಯ ಹಾಗೂ ಹುಡುಗನ ಕುಟುಂಬದವರು ಸಹ ಒಪ್ಪಿಗೆ ಸೂಚಿಸಿದ್ದರು. ಸದ್ಯ ಹೀಗೆ ಇಬ್ಬರು ಯುವತಿಯರನ್ನು ಮದುವೆಯಾದ ಯುವಕನ ವಿರುದ್ದ ಕೇಸ್‌ ದಾಖಲಾಗಿದೆ. ಮಲ್ಶಿರಾಸ್ ತಹಸಿಲ್‌ನಲ್ಲಿ ನಡೆದ ಮದುವೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದ್ದ ಹಾಗೆ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಪತಿ ಅಥವಾ ಪತ್ನಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಅಖ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ನಾನ್-ಕಾಗ್ನಿಸಬಲ್ (ಎನ್ಸಿ) ಅಪರಾಧವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರಿನ ಪ್ರಕಾರ, ಆ ವ್ಯಕ್ತಿ ಐಟಿ ವೃತ್ತಿಪರರಾಗಿರುವ 36 ವರ್ಷದ ಅವಳಿ ಸಹೋದರಿಯರನ್ನು ಮದುವೆಯಾಗಿದ್ದಾನೆ ಅಂತ ಉಲ್ಲೇಖ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ತಮ್ಮ ತಂದೆ ನಿಧನರಾದ ನಂತರ ಯುವತಿಯರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

Tap to resize

Latest Videos

Wedding Card: ಮದುವೆ ಆಮಂತ್ರಣ ಪತ್ರಿಕೆಗೆ ಷೇರ್ ಮಾರ್ಕೆಟ್ ಟಚ್‌

ಡಿಸೆಂಬರ್ 2 ರಂದು ಅವಳಿ ಸಹೋದರಿಯರನ್ನು ಒಟ್ಟಿಗೆ ಮದುವೆಯಾಗಿದ್ದಕ್ಕಾಗಿ ಅತುಲ್ ಅವ್ತಾಡೆ ಎಂಬಾತನ ವಿರುದ್ಧ ಐಪಿಸಿ ಸೆಕ್ಷನ್ 494 ರ ಅಡಿಯಲ್ಲಿ ನಾನ್-ಕಾಗ್ನಿಜಬಲ್ ಅಪರಾಧ ಪ್ರಕರಣ ದಾಖಲಿಸಲಾಗಿದೆ ಸೋಲಾಪುರ ಎಸ್ಪಿ ಶಿರೀಶ್ ಸರದೇಶಪಾಂಡೆ ತಿಳಿಸಿದ್ದಾರೆ.

ಇಬ್ಬರು ಯುವತಿಯರು ಒಬ್ಬನನ್ನೇ ಮದುವೆಯಾಗಿದ್ಯಾಕೆ ?
ನೋಡಲು ತದ್ರೂಪಿಗಳಾಗಿರುವ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಮುಂಬಯಿಯಲ್ಲಿ ಟೆಕ್ಕಿಗಳಾಗಿದ್ದಾರೆ. ಒಟ್ಟಿಗೆ ಬೆಳೆದ ಅವರಿಗೆ, ಮದುವೆ ಬಳಿಕ ಬೇರೆ ಇರಲು ಇಷ್ಟವಿರಲಿಲ್ಲ. ಹೀಗಾಗಿ ಒಂದೇ ಕುಟುಂಬಕ್ಕೆ ಮದುವೆಯಾಗಿ ಹೋಗಲು ಬಯಸಿದ್ದರು. ವರ ಅತುಲ್ ಅವ್ತಾಡೆಯನ್ನು ಇಬ್ಬರೂ ಇಷ್ಟಪಟ್ಟಿದ್ದರು. ಒಬ್ಬನೇ ವರನಿಗೆ ಇಬ್ಬರ ಜತೆಗೂ ಮದುವೆ ಮಾಡುವುದಕ್ಕೆ ಕುಟುಂಬದಲ್ಲಿ ಯಾರ ಆಕ್ಷೇಪವೂ ಇರಲಿಲ್ಲ. 

ಸಹೋದರಿಯರ ತಂದೆ ನಿಧನರಾದ ಬಳಿಕ ತಾಯಿ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ನೋಡಿಕೊಳ್ಳಲು ಅವರಿಬ್ಬರೂ ಅತುಲ್ ಕಾರಿನಲ್ಲಿ ಓಡಾಡುತ್ತಿದ್ದರು. ಅತುಲ್ ಮುಂಬಯಿಯಲ್ಲಿ ಟ್ರಾವೆಲ್ ಏಜೆನ್ಸಿ ವ್ಯವಹಾರ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಇಬ್ಬರೂ ಅತುಲ್‌ಗೆ ಆಪ್ತರಾಗಿದ್ದರು ಎಂದು ವರದಿಯಾಗಿದೆ. ಹೀಗಾಗಿ ಇಬ್ಬರೂ ಒಬ್ಬನನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ.

11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !

ಹಿಂದೂ ವಿವಾಹ ಕಾಯ್ದೆಯಲ್ಲೇನಿದೆ ?: ಹಿಂದೂ ವಿವಾಹ ಕಾಯ್ದೆ ಪ್ರಕಾರ, ಪತ್ನಿ ಅಥವಾ ಪತಿ ಜೀವಂತ ಇರುವಾಗ, ಅವರಿಂದ ವಿಚ್ಛೇದನ ಪಡೆದುಕೊಳ್ಳದ ಹೊರತು ಮತ್ತೊಬ್ಬರನ್ನು ಮದುವೆಯಾಗುವಂತಿಲ್ಲ. ಬಹುಪತ್ನಿತ್ವ ಅಥವಾ ಬಹುಪತಿತ್ವಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಅವಳಿ ಸೋದರಿಯರನ್ನು ಮದುವೆಯಾಗಿರುವುದು ಅತುಲ್‌ಗೆ ಸಂಕಷ್ಟ ಉಂಟುಮಾಡಿದೆ.

click me!