Asianet Suvarna News Asianet Suvarna News

11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !

ಭಾರತದಲ್ಲಿ ವರದಕ್ಷಿಣೆ ಪಿಡುಗು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಹೆಣ್ಣು ಕೊಡುವ ಮನೆಯವರು ಕಾರು, ಬಂಗಲೆ, ಹಣ ಎಷ್ಟು ಕೊಟ್ಟರೂ ಸಾಕಾಗುವುದಿಲ್ಲ. ಇವೆಲ್ಲದರ ಮಧ್ಯೆ ಉತ್ತರಪ್ರದೇಶದಲ್ಲೊಬ್ಬ ಯುವಕ ವರದಕ್ಷಿಣೆಯಾಗಿ ಸ್ವೀಕರಿಸಿದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು, ವಧುವಿನ ಪೋಷಕರಿಗೇ ಹಿಂತಿರುಗಿಸಿದ್ದಾನೆ. 

UP Bridegroom Returns Rs 11 Lakh Cash Dowry To Parents-in-law Vin
Author
First Published Dec 4, 2022, 11:53 AM IST

ಭಾರತದಲ್ಲಿ ವರದಕ್ಷಿಣೆ (Dowry) ಪಿಡುಗು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಇದ್ರ ನಿಯಂತ್ರಣಕ್ಕೆ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ವರದಕ್ಷಿಣೆ ಪಡೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗ್ತಿದೆ. ಇಷ್ಟಾದ್ರೂ ವರದಕ್ಷಿಣೆ ಪಿಡುಗು ಮಾಯವಾಗಿಲ್ಲ. ಭಾರತದ ಮೂಲೆ ಮೂಲೆಯಲ್ಲಿ ಈಗ್ಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಹೆಣ್ಣು (Woman) ಹೆತ್ತವರು ವರದಕ್ಷಿಣೆ ನೀಡಲು ಪರದಾಡ್ತಿದ್ದಾರೆ. ವರದಕ್ಷಿಣೆ ನೀಡುವಂತೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ, ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ (Sucide) ಮಾಡಿಕೊಳ್ಳುವ ಘಟನೆಗಳು ಈಗ್ಲೂ ವರದಿಯಾಗ್ತಿವೆ. ಆದ್ರೆ ಇಲ್ಲೊಬ್ಬ ಯುವಕ ಮದುವೆ ಮನೆಯಲ್ಲಿ ವಧುವಿನ ಕುಟುಂಬದವರು ನೀಡಿದ 11 ಲಕ್ಷ ರೂಪಾಯಿ ನಗದು ವರದಕ್ಷಿಣೆಯನ್ನು ಅವರಿಗೇ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾನೆ.

11 ಲಕ್ಷ ರೂಪಾಯಿ ಹಿಂತಿರುಗಿಸಿ, 1 ರೂ. ತೆಗೆದುಕೊಂಡ ವರ
ಮದುವೆಯಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು (Ornaments) ವಧುವಿನ ಪೋಷಕರಿಗೆ ಹಿಂತಿರುಗಿಸುವ ಮೂಲಕ ಉತ್ತರಪ್ರದೇಶದ ಯುವಕ (Youth)ನೊಬ್ಬ ಮಾದರಿಯಾಗಿದ್ದಾನೆ. 1 ರೂಪಾಯಿಯನ್ನು ಶಗುನ್ ರೂಪದಲ್ಲಿ ಮಾತ್ರ ತೆಗೆದುಕೊಂಡನು. ಮುಜಾಫರ್‌ನಗರದ ತಿಟಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಲಖನ್ ಗ್ರಾಮದಲ್ಲಿ ಕಂದಾಯ ಅಧಿಕಾರಿ ಆಗಿರುವ ವರ ಸೌರಭ್ ಚೌಹಾಣ್ ಮತ್ತು ನಿವೃತ್ತ ಸೇನಾ ಜವಾನನ ಮಗಳಾದ ವಧು (Bride) ಪ್ರಿನ್ಸ್‌ ವಿವಾಹ ನಡೆದಿತ್ತು. ಈ ವೇಳೆ ಸ್ಥಳೀಯ ಸಂಪ್ರದಾಯದಂತೆ ವರನಿಗೆ, ವಧುವಿನ ಪೋಷಕರು 11 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು. ಇದನ್ನು ವರ ಹಿಂತಿರುಗಿಸಿದ್ದಾನೆ. ನಗದು ವರದಕ್ಷಿಣೆಯನ್ನು ಅತ್ತೆ-ಮಾವಂದಿರಿಗೆ ಹಿಂದಿರುಗಿಸಿದ ವರನ (Bridegroom) ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Weird News: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ

ಕಿಸಾನ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಠಾಕೂರ್ ಪುರಾನ್ ಸಿಂಗ್ ಇದು ಸಕಾರಾತ್ಮಕ ಬದಲಾವಣೆಯ ಮೊದಲ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ವರನ ಹಾವಭಾವ ಇತರರಿಗೆ ಮಾದರಿಯಾಗಲಿದೆ ಎನ್ನುತ್ತಾರೆ ಗ್ರಾಮಸ್ಥ ಅಮರ್‌ಪಾಲ್.

ವರದಕ್ಷಿಣೆ ಕಾಯ್ದೆಯ ಬಗ್ಗೆ ಮಾಹಿತಿ
ಭಾರತ (India) ದಲ್ಲಿ ವರದಕ್ಷಿಣೆ (Dowry) ನಿಷೇಧ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆ ಜಾರಿಯಲ್ಲಿದೆ. ಆದ್ರೆ ಇದ್ರ ಬಗ್ಗೆ ಅನೇಕರಿಗೆ ತಿಳುವಳಿಕೆಯಿಲ್ಲ. ಮಾಹಿತಿ ಕೊರತೆಯಿಂದಾಗಿ ಜನರು ವರದಕ್ಷಿಣೆ ವಿರುದ್ಧ ಹೋರಾಡಲು ಸಾಧ್ಯವಾಗ್ತಿಲ್ಲ. ನಾವಿಂದು ಈ ಕಾನೂನಿ (Law) ನ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.  

ವರದಕ್ಷಿಣೆ ಎಂದ್ರೇನು ? : ಮದುವೆಯ ಸಮಯದಲ್ಲಿ ತಂದೆ ತನ್ನ ಮಗಳಿಗೆ ನೀಡಿದ ವಸ್ತುವನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಭಾರತದಿಂದಲೂ ವರದಕ್ಷಿಣೆ ಪದ್ಧತಿ ನಡೆದುಕೊಂಡು ಬಂದಿದೆ. ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಹಲವು ಭಾಗಗಳಲ್ಲಿ ವರದಕ್ಷಿಣೆಯಂತಹ ವ್ಯವಸ್ಥೆ ಜಾರಿಯಲ್ಲಿದೆ. ಇದರ ಹೆಸರು ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿ ವರದಕ್ಷಿಣೆಯ ಅರ್ಥ ಇಷ್ಟು  ಕ್ರೂರವಾಗಿರಲಿಲ್ಲ. ವರದಕ್ಷಿಣೆ ಎಂದರೆ ಮಗಳಿಗೆ ತಂದೆ ನೀಡಿದ ಆಸ್ತಿಯಾಗಿತ್ತು. ಈ ಆಸ್ತಿ ಮೇಲೆ ಮಗಳಿಗೆ ಹಕ್ಕಿರುತ್ತಿತ್ತು. ತಂದೆ ತನ್ನ ಸ್ವಂತ ಇಚ್ಛೆಯ ಮೇಲೆ ಆಸ್ತಿ ನೀಡುತ್ತಿದ್ದ. ಕಾಲಕ್ಕೆ ತಕ್ಕಂತೆ ವರದಕ್ಷಿಣೆಯ ಅರ್ಥ ಬದಲಾಯಿತು. ವರದಕ್ಷಿಣೆ ಒಂದು ಕೆಟ್ಟ ಮತ್ತು ಕ್ರೂರ ವ್ಯವಸ್ಥೆಯಾಗಿ ಉಳಿಯಿತು. 

Belagavi: ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್ ಪಡೆದ ವರ‌: ಏಕೆ ಗೊತ್ತಾ?

ವರದಕ್ಷಿಣೆ ಕಾಯ್ದೆ (Dowry Act) :  ಭಾರತದ ಕಾನೂನುಗಳಲ್ಲಿ ವರದಕ್ಷಿಣೆಯ ಕಾನೂನು ಅರ್ಥವನ್ನು ಮೊದಲು ವರದಕ್ಷಿಣೆ ನಿಷೇಧ ಕಾಯಿದೆ 1961 ರ ಅಡಿಯಲ್ಲಿ ಪರಿಚಯಿಸಲಾಯಿತು. ಕಾಯ್ದೆಯಲ್ಲಿ ವರದಕ್ಷಿಣೆ ಎಂದರೇನು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾಯಿದೆಯ ವ್ಯಾಖ್ಯಾನದ ವಿಭಾಗ 2 ರ ಪ್ರಕಾರ, ವರದಕ್ಷಿಣೆಯು ಯಾವುದೇ ಬೆಲೆಬಾಳುವ ಆಸ್ತಿ ಅಥವಾ ಭದ್ರತೆ ಎಂದು ಪರಿಗಣಿಸಲಾಗುತ್ತದೆ, ಅದು ಮದುವೆಯ ಸಮಯದಲ್ಲಿ ಪರಸ್ಪರರಿಗೆ ನೀಡಲಾಗುತ್ತದೆ. ಇದನ್ನು ಮದುವೆಯ ನಂತರವೂ ನೀಡಬಹುದು. ವರದಕ್ಷಿಣೆಯ ವ್ಯಾಖ್ಯಾನವು ಬಹಳ ವಿಶಾಲವಾದ ವ್ಯಾಖ್ಯಾನವಾಗಿದೆ. ಈ ವ್ಯಾಖ್ಯಾನದ ಅಡಿಯಲ್ಲಿ, ಮನೆ, ಭೂಮಿ, ಕಾರು, ಆಭರಣಗಳು, ರೂಪಾಯಿ ಸೇರಿದಂತೆ ಸ್ಥಿರಾಸ್ತಿಯನ್ನು ಒಳಗೊಂಡಿರುತ್ತದೆ.  

ವರದಕ್ಷಿಣೆ ಪದ್ಧತಿಯನ್ನು ನಿಲ್ಲಿಸುವ ಮತ್ತು ಕೊನೆಗೊಳಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯಡಿ 2 ಸೆಕ್ಷನ್‌ಗಳಿವೆ. ಸೆಕ್ಷನ್ 3 ಮತ್ತು 4. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ನೀಡುವುದು ಸೆಕ್ಷನ್ 3 ರ ಅಡಿಯಲ್ಲಿ ಅಪರಾಧವಾಗಿದೆ. ಇದಕ್ಕೆ 15,000 ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ವರದಕ್ಷಿಣೆ ಬೇಡಿಕೆಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಸೆಕ್ಷನ್ 4 ಹೇಳಲಾಗಿದೆ.

Follow Us:
Download App:
  • android
  • ios