ನೀತಾ ಅಂಬಾನಿ, ಮಗ ಆಕಾಶ ಅಂಬಾನಿ ಸಂಬಂಧ ಚೆನ್ನಾಗಿಲ್ವಾ? ಯಾಕೆ ಮಗ ಅಮ್ಮನ ತಳ್ಳಿದ್ದು?

By Roopa Hegde  |  First Published Jul 6, 2024, 1:14 PM IST

ಮುಖೇಶ್ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಂದಾದ್ಮೇಲೆ ಒಂದು ಕಾರ್ಯಕ್ರಮಗಳು ನಡೆಯುತ್ತಿದೆ. ಇದ್ರ ಜೊತೆಯಲ್ಲೇ ಕೆಲವೊಂದು ಹುಳುಕುಗಳು ಹೊರಗೆ ಬೀಳ್ತಿವೆ. ನೀತಾ ಜೊತೆ ಆಕಾಶ್ ಹಾಗೂ ಶ್ಲೋಕ ಸಂಬಂಧ ಸರಿಯಿಲ್ವಾ ಎನ್ನುವ ಪ್ರಶ್ನೆ ಶುರುವಾಗಿದೆ. 
 


ಶ್ರೀಮಂತರ ಮನೆಯಲ್ಲಿ ನೆಮ್ಮದಿ ಕಡಿಮೆ ಎನ್ನುವ ಮಾತೊಂದಿದೆ. ಅದ್ಯಾಕೋ ಮುಖೇಶ್ ಅಂಬಾನಿ ಮನೆಯಲ್ಲಿ ಸತ್ಯವಾಗ್ತಿದೆ. ಮುಖೇಶ್ ಅಂಬಾನಿ ಮಗ ಅನಂತ್ ಹಾಗೂ ರಾಧಿಕಾ ಮದುವೆ ಪೂರ್ವ ಕಾರ್ಯಗಳು ಒಂದ್ಕಡೆ ನಡೀತಾ ಇದ್ರೆ ಇನ್ನೊಂದು ಕಡೆ ನೀತಾ ಅಂಬಾನಿ ಜೊತೆ ದೊಡ್ಮಗ ಆಕಾಶ್ ಅಂಬಾನಿ ಮುನಿಸಿಕೊಂಡಂತಿದೆ. ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಹಿರಿಯ ಸೊಸೆ ಶ್ಲೋಕಾ ಮೆಹ್ತಾರನ್ನು ನೀತಾ ಅಂಬಾನಿ ದೂರವಿಟ್ಟಿದ್ದು ಸ್ಪಷ್ಟವಾಗಿತ್ತು. ಈಗ ಸೊಸೆ ಮಾತ್ರವಲ್ಲ ಅಮ್ಮ - ಮಗನ ಮಧ್ಯೆಯೂ ಎಲ್ಲವೂ ಸರಿ ಇಲ್ಲ ಎನ್ನುವ ಸೂಚನೆ ಸಿಗ್ತಿದೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ನಲ್ಲಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಇರುವ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಅಲ್ಲಿ ಅವರ ವರ್ತನೆ ಟ್ರೋಲ್ ಆಗಿದೆ. nitaambani.ril ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಇದ್ರಲ್ಲಿ ಹಣ, ಖುಷಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವೈರಲ್ (viral) ವಿಡಿಯೋದಲ್ಲಿ ಆಕಾಶ್ ಹಾಗೂ ಶ್ಲೋಕಾ ಫೋಟೋಕ್ಕೆ ಫೋಸ್ ನೀಡುವ ಮುನ್ನವೇ ಅವರಿಗೆ ಅಡ್ಡ ಬರುವ ನೀತಾ ಅಂಬಾನಿ (Nita Ambani) ಏನೋ ಹೇಳ್ತಿದ್ದಾರೆ. ಆದ್ರೆ ಆಕಾಶ್ ಅವರ ಕೈ ತೆಗೆದು ಅವರನ್ನು ಹಿಂದೆ ಸರಿಸ್ತಾರೆ. ಸ್ವಲ್ಪ ಹಿಂದೆ ಹೋದ ನೀತಾ ಮತ್ತೆ ಮುಂದೆ ಬಂದು ಆಕಾಶ್ ಕೈ ಹಿಡಿದು ಫೋಟೋಕ್ಕೆ ಫೋಸ್ ನೀಡ್ತಾರೆ. ಇದು ಆಕಾಶ್ ಹಾಗೂ ಶ್ಲೋಕಾಕ್ಕೆ ಖುಷಿ ಕೊಟ್ಟಂತೆ ಕಾಣ್ತಿಲ್ಲ. ಇಬ್ಬರ ಅತೃಪ್ತಿ ಮುಖದಲ್ಲಿ ಸ್ಪಷ್ಟವಾಗಿ ಕಾಣ್ತಿದೆ. ಇದಾದ್ಮೇಲೂ ದಂಪತಿಗೆ ಫೋಟೋಕ್ಕೆ ಫೋಸ್ ನೀಡಲು ನೀತಾ ಅಡ್ಡಿ ಮಾಡ್ತಾರೆ. ಆಗ ಆಕಾಶ್ ಅಮ್ಮನ ಕೈ ಬಿಡಿಸಿಕೊಳ್ಳೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. 

Tap to resize

Latest Videos

ಈ ವಿಡಿಯೋ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಗನನ್ನು ತನ್ನತ್ತ ಸೆಳೆಯುವ ಪ್ರಯತ್ನ ಇದು. ಎಲ್ಲ ಅತ್ತೆಯಂದಿರು ಹೀಗೆ ಮಧ್ಯಪ್ರವೇಶ ಮಾಡಲು ಬಯಸ್ತಾರೆ. ಸಂಬಂಧದ ಮಧ್ಯೆ ರೇಖೆ ಎಳೆಯೋದು ಬಹಳ ಮುಖ್ಯ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬಹುತೇಕರು ನೀತಾ ವರ್ತನೆಯನ್ನು ಖಂಡಿಸಿದ್ದಾರೆ. ಎಲ್ಲಿ ಹೋದ್ರೂ ನೀತಾ ಎಲ್ಲರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅವರು ಯಾವಾಗಲೂ ಸಾರ್ವಜನಿಕವಾಗಿ ಕೆಲವು ರೀತಿಯ ವಾದವನ್ನು ಮಾಡ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ರೆ, ಪತ್ನಿ ಬಂದ್ಮೇಲೆ ತಾಯಿ ಮರೆತಿದ್ದಾರೆ. ತಾಯಿಗೆ ರಿಸ್ಪೆಕ್ಟ್ ನೀಡಿದ್ರೆ ಹಣ, ಯಶಸ್ಸು ತಾನಾಗಿಯೇ ಬರುತ್ತೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಮಗನ ಪತ್ನಿ ಕಂಡ್ರೆ ನೀತಾಗೆ ಅಸೂಯೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಮುಕೇಶ್ ಅಂಬಾನಿ ಹೊಟ್ಟೆಗೇನ್ ತಿಂತಾರೆ? ಪಾಂಕಿ ಎಂಬ ಡಿಶ್ ಹೀಗಿರುತ್ತೆ ನೋಡಿ

ನೀತಾ ತನ್ನ ಗಂಡನಿಗೆ ಅದೇ ರೀತಿ ಮಾಡಿದರು ಮತ್ತು ಈಗ ಅವರ ಮಕ್ಕಳು ಅವರಿಗೆ ಮಾಡುತ್ತಿದ್ದಾರೆ, ಅವರ ಕರ್ಮ ಅವರನ್ನು ಹಿಂಬಾಲಿಸುತ್ತದೆ ಅಂತ ಕಮೆಂಟ್ ಮಾಡಿದವರ ಸಂಖ್ಯೆ ಸಾಕಷ್ಟಿದೆ. ರೇಖಾರನ್ನು ನೀತಾ ಇಗ್ನೋರ್ ಮಾಡಿದ್ರು ಈಗ ಮಗ ಮಾಡ್ತಿದ್ದಾನೆ ಎಂಬ ಕಮೆಂಟ್ ಕೂಡ ಬಂದಿದೆ. 

ಈ ಹಿಂದೆ ಮುಖೇಶ್ ಅಂಬಾನಿಯನ್ನು ಪತ್ನಿ ನೀತಾ ಅಂಬಾನಿ ಇಗ್ನೋರ್ ಮಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಫೋಟೋಕ್ಕೆ ಫೋಸ್ ನೀಡುವ ವೇಳೆ ನೀತಾ ಅಂಬಾನಿ, ಮುಖೇಶ್ ಅಂಬಾನಿ ಕೈ ತಳ್ಳಿ ತಮ್ಮ ಮಗಳು ಇಶಾ ಅಂಬಾನಿಯನ್ನು ಮಧ್ಯೆ ನಿಲ್ಲಿಸಿಕೊಂಡಿದ್ದರು. ಇದನ್ನು ನೆನೆಪಿಸಿಕೊಂಡ ನೆಟ್ಟಿಗರು, ಈಗ ಮಗ ಅದೇ ಕೆಲಸ ಮಾಡ್ತಿದ್ದಾನೆ ಎಂದಿದ್ದಾರೆ. 

ಅನಂತ್ ಮದ್ವೆ ಫಂಕ್ಷನಲ್ಲಿ ಅನಿಲ್, ಟೀನಾ: ಅಂಬಾನಿ ಮೊದಲ ಸೊಸೆ ನೀತಾಗಿಂತಲೂ ಟೀನಾ ದೊಡ್ಡೋರಾ?

click me!