ನಾಲ್ವರು ಪುಟ್ಟ ಮೊಮ್ಮಕ್ಕಳನ್ನು ಕೂರಿಸಿಕೊಂಡು ಅಂಬಾನಿ ದಂಪತಿ ಸವಾರಿ ಹೊರಟಿದ್ದೆಲ್ಲಿಗೆ?

By Reshma Rao  |  First Published Jul 6, 2024, 10:52 AM IST

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಇತ್ತೀಚೆಗೆ ತಮ್ಮ ಮೊಮ್ಮಕ್ಕಳಾದ ಪೃಥ್ವಿ, ಆದಿಯಾ, ಕೃಷ್ಣ ಮತ್ತು ವೇದಾ ಅವರೊಂದಿಗೆ ಸಮಯವನ್ನು ಆನಂದಿಸುತ್ತಿರುವ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.
 


ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅಂಬಾನಿಗಳು ಸ್ಟಾರ್-ಸ್ಟಡ್ ಸಂಗೀತ ಸಮಾರಂಭವನ್ನು ಆಯೋಜಿಸಿದ್ದರು, ಇದರಲ್ಲಿ ಸಿನಿಮಾ, ಕ್ರಿಕೆಟ್ ಮತ್ತು ಇತರೆ ಕ್ಷೇತ್ರಗಳ ಹೆಚ್ಚಿನ  ಗಣ್ಯರು ಭಾಗವಹಿಸಿದ್ದರು. ಈವೆಂಟ್‌ನ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಆದರೆ ಅವುಗಳ ನಡುವೆ, ಒಂದು ವಿಶೇಷ ವೀಡಿಯೊ ಜನರನ್ನು ಗೆದ್ದಿದೆ. ಇದು ಅಜ್ಜ ಅಜ್ಜಿಯರಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊಮ್ಮಕ್ಕಳೊಂದಿಗೆ ಸಮಯ ಕಳೆವ ಸಂಗೀತ ವೀಡಿಯೊವನ್ನು ಒಳಗೊಂಡಿದೆ. ಅವರು ತಮ್ಮ ನಾಲ್ಕು ಮೊಮ್ಮಕ್ಕಳಾದ ಪೃಥ್ವಿ, ಆದಿಯಾ, ಕೃಷ್ಣ ಮತ್ತು ವೇದಾ ಅವರೊಂದಿಗೆ ಸುಂದರವಾದ ಹಿನ್ನೆಲೆಯಲ್ಲಿ ಕಾರ್‌ನಲ್ಲಿ ಹಾಡುತ್ತಾ, ತಲೆದೂಗಿಸುತ್ತಾ ಹೋಗುವಂತೆ ದೃಶ್ಯವನ್ನು ಹೊಂದಿಸಲಾಗಿದೆ. 

ಮುಖೇಶ್ ಅಂಬಾನಿ ಅವರ ಪತ್ನಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುತ್ತಾರೆ. ಕೊಂಚ ಆನಿಮೇಟೆಡ್ ಕ್ಲಿಪ್‌ನಲ್ಲಿ ನಾಲ್ಕು ಚಿಕ್ಕ ಮಕ್ಕಳು ತಮ್ಮ ಅಜ್ಜಅಜ್ಜಿಯೊಂದಿಗೆ ಸವಾರಿ ಮಾಡುವುದನ್ನು ಕಾಣಬಹುದು.

ಪಾಕಿಸ್ತಾನದಲ್ಲಿ 6 ದಿನಗಳ ಕಾಲ ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಬ್ಯಾನ್?! ಕಾರಣವೇನು?
 

Tap to resize

Latest Videos

ವೀಡಿಯೊದಲ್ಲಿನ ರೋಮಾಂಚಕ ಬಣ್ಣಗಳು ಮತ್ತು ಪೆಪ್ಪಿ-ಹ್ಯೂಡ್ ಬಲೂನ್‌ಗಳು ಅದನ್ನು ಚೆಂದವಾಗಿಸಿವೆ. ಇದಲ್ಲದೆ, ವಿಡಿಯೋವನ್ನು 1968ರ ಬ್ರಹ್ಮಚಾರಿ ಚಲನಚಿತ್ರದ ಹಿನ್ನೆಲೆ ಹಾಡು ಚಕ್ಕೆ ಮೆ ಚಕ್ಕ ಚಕ್ಕೆ ಪೆಗೆ ಹೊಂದಿಸಲಾಗಿದೆ. ಅಂಬಾನಿ ದಂಪತಿ ಕೂಡ ಈ ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವುದು ಹಲವರನ್ನು ಅಚ್ಚರಿಗೆ ಈಡು ಮಾಡಿದೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನು ಹೀಗೆ ಕಲ್ಪಿಸಿಕೊಳ್ಳುವುದೇ ಕಷ್ಟವಾಗುತ್ತಿದೆ ಎಂದೊಬ್ಬರು ಹೇಳಿದ್ದರೆ, ಇವರು ಕುಟುಂಬವನ್ನು ಇಷ್ಟು ಪ್ರೀತಿಸುವುದರಿಂದಲೇ ನೆಮ್ಮದಿಯಾಗಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿದ್ರಾಹೀನತೆಯಿಂದ ವಿವಾಹೇತರ ಸಂಬಂಧದವರೆಗೆ.. ಲೈಂಗಿಕ ಅನ್ಯೋನ್ಯತೆ ಇಲ್ಲದ ವೈವಾಹಿಕ ಜೀವನ ಸಮಸ್ಯೆಗಳ ಕಾನನ
 

ಮುಖೇಶ್ ಅಂಬಾನಿಗೆ ಕುಟುಂಬ, ಮೊಮ್ಮಕ್ಕಳಿಗೆ ಕೊಡಲು ಸಮಯ ಸಿಗುತ್ತದೆಯೇ ಎಂದೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದರೆ, ಮತ್ತೊಬ್ಬರು, ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದಿದ್ದಾರೆ. 

 

click me!