ಏಳಡಿ ಎತ್ತರದ ಗರ್ಲ್‌ಫ್ರೆಂಡ್ ಜೊತೆ ಮೂರಡಿ ರಾಜನ ಮಸ್ತಿ, ಜೋಡಿ ವಿಡಿಯೋಗೆ ಚಿಂದಿ ಕಮೆಂಟ್!

Published : Jul 19, 2024, 03:55 PM IST
ಏಳಡಿ ಎತ್ತರದ ಗರ್ಲ್‌ಫ್ರೆಂಡ್ ಜೊತೆ ಮೂರಡಿ ರಾಜನ ಮಸ್ತಿ, ಜೋಡಿ ವಿಡಿಯೋಗೆ ಚಿಂದಿ ಕಮೆಂಟ್!

ಸಾರಾಂಶ

ಆತನ ಎತ್ತರ ಮೂರಡಿ, ಆಕೆ ಏಳಡಿ. ಇವರಿಬ್ಬರ ಲವ್ ಸ್ಟೋರಿಗೆ ಜನ ಮರುಳಾಗಿದ್ದಾರೆ. ಆಕೆ ಕುಳಿತರೂ ಹೈಟ್ ಮ್ಯಾಚ್ ಆಗುತ್ತಿಲ್ಲ. ಆದರೆ ಇವರಿಬ್ಬರ ಡ್ಯಾನ್ಸ್ ವಿಡಿಯೋ ಮಾತ್ರ ಭಾರಿ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಕೂಡ ವೈರಲ್ ಆಗಿದೆ.  

ಪ್ರೀತಿ ಮುಂದೆ ರೂಪ, ಎತ್ತರ, ಕಟ್ಟು ಮಸ್ತಾದ ದೇಹ ಎಲ್ಲವೂ ನಗಣ್ಯ. ಇದಕ್ಕೆ ಪ್ರೀತಿ ಕುರುಡು ಅಂತಾರೆ. ಇಲ್ಲಿ ಮೂರಡಿ ಕಿಂಗ್‌ಗೆ 7 ಅಡಿ ಎತ್ತರದ ಗೆಳತಿ ಜೊತೆ ಲವ್ ಶುರುವಾಗಿದೆ. ಇವರಿಬ್ಬರು ಇದೀಗ ಪ್ರಣಯ ಹಕ್ಕಿಗಳಾಗಿ ಹಾರಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಇಬ್ಬರು ಡ್ಯಾನ್ಸ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಹೌದು, ಗೇಬ್ರಿಯಲ್ ಪಿಮೆಂಟಲ್ ಎತ್ತರ ಕೇವಲ 3 ಅಡಿ ಮಾತ್ರ. ಆತನ ಗರ್ಲ್‌ಫ್ರೆಂಡ್ ಮರಿಯಾ ಟೆಮಾರ ಎತ್ತರ ಬರೋಬ್ಬರಿ 7 ಅಡಿ. ಆಕೆ ಕುಳಿತರೂ ಹೈಟ್ ಮ್ಯಾಚ್ ಆಗುತ್ತಿಲ್ಲ. ಆದರೂ ಇವರ ಪ್ರೀತಿ ಬಾನೆತ್ತರಕ್ಕೂ ಮಿಗಿಲಾಗಿದೆ.

ಗೇಬ್ರಿಯಲ್ ಸಾಮಾಜಿಕ ಮಾಧ್ಯಮದ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ಈತನ ಫಾಲೋವರ್ಸ್ ಕಿಂಗ್ ಎಂದು ಕರೆಯುತ್ತಾರೆ. ಇತ್ತ ಮರಿಯಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರೀಯವಾಗಿದ್ದಾಳೆ.  ಪ್ರಣಯ ಹಕ್ಕಿಗಳಾದ ಖುಷಿಯಲ್ಲಿ ಇಬ್ಬರು ಕುಣಿದಾಡಿದ್ದಾರೆ. ತಬ್ಬಿಕೊಂಡು ಡ್ಯಾನ್ಸ್ ಮಾಡಿದ ಈ ಜೋಡಿಗೆ ಫಾಲೋವರ್ಸ್ ಶುಭ ಹಾರೈಸಿದ್ದಾರೆ. ಇವರ ಸಂಭ್ರಮದ ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ.

ಡೇಟಿಂಗ್ ಮಾಡ್ತಾ ಇದೀರಾ? 3 ತಿಂಗಳ ನಿಯಮ ಫಾಲೋ ಮಾಡಿ!

ಗೇಬ್ರಿಯಲ್‌ಗೆ ಇನ್‌ಸ್ಟಾಗ್ರಾಂನಲ್ಲಿ 23,000 ಫಾಲೋವರ್ಸ್ ಇದ್ದರೆ, ಮರಿಯಾಗೆ 2 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇವರಿಬ್ಬರ ವಿಡಿಯೋ ಎರಡು ದಿನದಲ್ಲಿ 2.5 ಮಿಲಿಯನ್ ವೀಕ್ಷಣೆ ಪಡೆದಿದೆ. ಹಲವರು ಇವರ ಖುಷಿ ಹಾಗೂ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ದೇಹ, ಸೌಂದರ್ಯ ಕಾರಣದಿಂದಲೇ ಹಲವು ಸಂಬಂಧಗಳು ಮುರಿದು ಬಿದಿದ್ದಿದೆ. ಪ್ರೀತಿಯಲ್ಲಿ ಇವೆಲ್ಲ ಪರಿಗಣನೆಗೆ ಬರುವುದಿಲ್ಲ. ಈ ನಿರ್ಮಲ ಪ್ರೀತಿ ಇವರಲ್ಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

 

 

ಸೋಶಿಯಲ್ ಮೀಡಿಯಾದಲ್ಲಿ ಇವರ ಡ್ಯಾನ್ಸ್ ವಿಡಿಯೋ ಹರಿದಾಡುತ್ತಿದ್ದಂತೆ ಬಗೆ ಬಗೆಯ ಕಮೆಂಟ್‌ಗಳು ವ್ಯಕ್ತವಾಗಿದೆ. ದೇವರೆ ಇದೇನಿದು, ನಾವೇನು ತಪ್ಪು ಮಾಡಿದ್ದೇವೆ, ನಮಗೂ ಒಂದು ಗರ್ಲ್‌ಫ್ರೆಂಡ್ ಹುಡುಕಿಕೊಡಿ ಎಂದು ದೇವರ ಮೊರೆ ಹೋಗಿದ್ದಾರೆ. ಪ್ರೀತಿ ಹೀಗೂ ಶುರುವಾಗುತ್ತೆ ಎಂದರೆ ನನಗೆ ಬದುಕಿನಲ್ಲಿ ಸಣ್ಣ ಆಶಾದಾಯಕ ಕ್ಷಣ ಸಿಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ರೀಲ್ಸ್‌ಗಾಗಿ ಮಾಡಿದ ವಿಡಿಯೋ, ಇವರ ಪ್ರೀತಿಯಲ್ಲಿ ಸತ್ಯವಿಲ್ಲ. ಹಣಕ್ಕಾಗಿ ಈ ನಾಟಕ ಮಾಡಲಾಗಿದೆ ಎಂದು ನೆಗಟೀವ್ ಕಮೆಂಟ್ ಮಾಡಿದ್ದಾರೆ.  ಆತನ ಶ್ರೀಮಂತಿಕೆಯೇ ಪ್ರೀತಿಗೆ ಆಧಾರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಈ ನಾಲ್ಕು ಅಕ್ಷರದ ಹುಡುಗೀರು ಗಂಡನ ಪಾಲಿನ ಅದೃಷ್ಟ ದೇವತೆಯರು!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!