ಕೂಲರ್‌ನಿಂದ ಮದುವೆ ಮಂಟಪ ಕೂಲ್ ಕೂಲ್ ಆದರೆ ಮದುವೆ ಕ್ಯಾನ್ಸಲ್!

By Chethan Kumar  |  First Published Jul 18, 2024, 6:23 PM IST

ಒಂದು ಕೂಲರ್‌ಗೆ ವಾತಾವರಣ ತಂಪಾಗಿಸುವ ಶಕ್ತಿ ಮಾತ್ರವಲ್ಲ, ಮದುವೆ ಮುರಿದು ಹಾಕುವ ಸಾಮರ್ಥ್ಯವಿದೆ ಅನ್ನೋದು ಬಯಲಾಗಿದೆ. ಮದುವೆ ಮಂಟಪದಲ್ಲಿನ ಕೂಲರ್ ವಿಚಾರದಿಂದ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ. ಈ ಸ್ವಾರಸ್ಯಕರ ಘಟನೆ ನಿಮ್ಮನ್ನೂ ಒಂದು ಕ್ಷಣ ತಬ್ಬಿಬ್ಬು ಮಾಡುವುದು ಖಚಿತ.
 


ಲಖನೌ(ಜು.18) ತಾಳಿ ಕಟ್ಟುವ ಶುಭ ವೇಳೆ, ಕೈಯಲ್ಲಿ ಹೂವಿನ ಮಾಲೆ, ಯಾರಿಗೆ ಯಾರೆಂದು.. ಜನಪ್ರಿಯ ಈ ಹಾಡಿನ ಪ್ರತಿ ಸಾಲುಗಳು ಅರ್ಥಪೂರ್ಣ. ಇಲ್ಲಿ ಯಾರಿಗೆ ಯಾರೆಂದು ವಿಧಿ ಬರೆದಿರುವ ಸಾಲುಗಳು ಮಾತ್ರ ಈ ಮುರಿದ ಬಿದ್ದ ಮದುವೆಗೆ ಹಿಡಿದ ಕನ್ನಡಿಯಾಗಿದೆ. ಕಾರಣ ಒಂದು ಕೂಲರ್‌ನಿಂದ ಮದುವೆ ಮುರಿದು ಬಿದ್ದಿದೆ ಎಂದರೆ ಹುಡಿಗುಯ ತಲೆಯಲ್ಲಿ ಬರೆದಿದ್ದು ಬೇರೆ ಹುಡುಗ ಅನ್ನೋದು ಸ್ಪಷ್ಟ. ಹೌದು, ಉತ್ತರ ಪ್ರದೇಶದಲ್ಲಿ ಕೂಲರ್ ಕಾರಣದಿಂದ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮಾರಾಮಾರಿ ತಪ್ಪಿಸಿದ್ದಾರೆ.

ಮುಸ್ತಾಫಾಬಾದ್‌ನ ಹುಕುಮ್‌ಚಂದ್ರ ಜೈಸ್ವಾಲ್ ಮದುವೆ ಫಿಕ್ಸ್ ಆಗಿದೆ. ಹುಡುಗಿಯ ಗುಣ ನಡತೆ, ರೂಪ, ಅರ್ಹತೆಗಳ ಕಾರಣ ಯಾವುದೇ ವರದಕ್ಷಿಣೆ ಇಲ್ಲದೆ ಮದುವೆಗೆ ಹುಡುಗ ಹಾಗೂ ಆತನ ಕುಟುಂಬಸ್ಥರು ಒಪ್ಪಿಕೊಂಡಿದ್ದರು. ಆದರೆ ವರದಕ್ಷಿಣೆ ಇಲ್ಲ ಅನ್ನೋದು ವರನ ಕುಟುಂಬಸ್ಥರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೂ ವರ ಒಪ್ಪಿಕೊಂಡಿರುವ ಕಾರಣ ಎಲ್ಲಾ ತಯಾರಿಗಳು ನಡೆದಿತ್ತು. 

Latest Videos

undefined

ತಾಳಿ ಕಟ್ಟುವ ಶುಭ ವೇಳೆ ಬಯಲಾಯ್ತು ವಧುವಿನ ಲೀಲೆ: ಮಂಟಪದಿಂದ ಹೊರ ನಡೆದ ವರ

ಮದುವೆದಿನ ಭಾರಿ ಮೆರವಣಿಯೊಂದಿಗೆ ಮಂಟಪಕ್ಕೆ ಆಗಮಿಸಿದ ವಧು ವರರು ಮದುವೆ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಒಂದೆಡೆ ಪೂಜೆ, ಮಂತ್ರಗಳು ಮೊಳಗುತ್ತಿದೆ. ಆದರೆ ಮಂಟಪದಲ್ಲಿ ವರನ ಕುಟುಂಬಸ್ಥರಿಂದ ಜೋರು ಜಗಳ. ಕಾರಣ ಇಷ್ಟೇ ಮದುವೆ ಮಂಟಪದ ಮುಂದಿನ ಆಸನಗಳ ಪಕ್ಕದಲ್ಲಿ ಕೂಲರ್ ಅಳವಡಿಸಲಾಗಿದೆ. ಹೆಣ್ಣಿನ ಕುಟುಂಬಸ್ಥರು ನಮ್ಮ ಹೆಣ್ಣುಮಗಳ ಮದುವೆ, ಹತ್ತಿರದಿಂದ ನೋಡಬೇಕು ಎಂದು ಹಿರಿಯರು ಕುಳಿತಿದ್ದಾರೆ.

ಗಂಡಿನ ಕುಟುಂಬಸ್ಥರು ಆಗಮಿಸಿ, ನಾವು ಗಂಡಿನ ಕಡೆಯವರು, ಇಲ್ಲಿಂದ ಎದ್ದೇಳಿ ಎಂದಿದ್ದಾರೆ. ಈ ಕೂಲರ್ ಪಕ್ಕ ನಾವು ಕುಳಿತಕೊಳ್ಳಬೇಕು ಎಂದು ಖ್ಯಾತೆ ತಗೆದಿದ್ದಾರೆ. ನಿಮಗೆ ಕುಳಿತುಕೊಳ್ಳಬೇಕು ಎಂದರೆ ಕುಳಿತುಕೊಳ್ಳಿ, ಆದರೆ ಎದ್ದೇಳಿ, ನಾವು ಗಂಡಿನ ಕಡೆಯವರು ಎಂದು ದರ್ಪ ತೋರಬೇಡಿ ಎಂದು ಹೆಣ್ಣಿನ ಕುಟುಂಬಸ್ಥರು ತಿರುಗೇಟು ನೀಡಿದ್ದಾರೆ. ಇಷ್ಟೇ ನೋಡಿ ಶುರುವಾಯ್ತು ಜಗಳ. 

ಈ ಜಗಳ ಒಳಗಿದ್ದ ವಧುವಿನ ಕಿವಿಗೂ ಮುಟ್ಟಿದೆ. ತಕ್ಷಣವೇ ವೇದಿಕೆ ಬಳಿ ಬಂದ ವಧುವಿನ ಪಿತ್ತ ನೆತ್ತಿಗೇರಿದೆ. ಗಂಡಿನ ಬಹುತೇಕ ಕುಟುಂಬಸ್ಥರು ಕೂಲರ್ ಪಕ್ಕ ನಾವು ಕುಳಿತುಕೊಳ್ಳಬೇಕು. ನಾವು ಗಂಡಿನ ಕಡೆಯವರು ಅನ್ನೋ ವಾದವೇ ಕೇಳತೊಡಗಿದೆ. ಈ ರೀತಿಯ ಜನರ ಜೊತೆ ಬದುಕಲು ಸಾಧ್ಯವಿಲ್ಲ ಎಂದು ವಧು ಮದುವೆ ರದ್ದು ಮಾಡಿದ್ದಾಳೆ.

ವಧುವಿನ ನಿರ್ಧಾರ ವರ ಹಾಗೂ ಆತನ ಪೋಷಕರಿಗೆ ಆಘಾತ ತಂದಿದೆ. ಆದರೆ ಹೆಣ್ಣಿನ ಪೋಷಕರು ಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಾಳೆ ಬಾಳಿ ಬದುಬೇಕಾದ ನಮ್ಮ ಮಗಳು ಈ ಅನಾಗರೀಕತೆಯನ್ನು ಅರ್ಥಮಾಡಿಕೊಂಡು ನಿರ್ಧಾರ ತೆಗೆದುಕೊಂಡಿದ್ದಾಳೆ. ಹೀಗಾಗಿ ಮಗಳ ನಿರ್ಧಾರವೇ ನಮ್ಮದು ಎಂದಿದ್ದಾರೆ. ಇತ್ತ ವರ ಹಾಗೂ ಆತನ ಪೋಷಕರು ಪರಿಪರಿಯಾಗಿ ಬೇಡಿದರೂ ಮದುವೆಗೆ ವಧು ಒಪ್ಪಿಲ್ಲ. ಹೀಗಾಗಿ ಮದುವೆ ಮಂಟಪ ರಣಾಂಗಣವಾಗಿ ಮಾರ್ಪಟ್ಟಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ.

ಮದುವೆಗೆ 1 ದಿನ ಮೊದಲು ವಧುವಿನ ಮೇಲೆ ಅತ್ಯಾಚಾರ, ವಿವಾಹ ರದ್ದುಗೊಳಿಸಿದ ವರನ ಕುಟುಂಬ!

ಪೊಲೀಸರು ಎರಡು ಕುಟುಂಬಗಳನ್ನು ಕೂರಿಸಿಕೊಂಡು ಸಂಧಾನ ಮಾಡಲು ಯತ್ನಿಸಿದ್ದಾರೆ. ಆದರೆ ಹುಡುಗಿ ಮಾತ್ರ ತನ್ನ ನಿರ್ಧಾರ ಬದಲಿಸಲಿಲ್ಲ. ಹೀಗಾಗಿ ಪೊಲೀಸರು ಸೆಕ್ಷನ್ 151ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮಾಡಿದ ಆರೋಪದಡಿ ಎರಡೂ ಕುಟುಂಬಕ್ಕೆ ನೋಟಿಸ್ ನೀಡಿದೆ.
 

click me!