Bad Habits : 2022ರಲ್ಲಿ ಬದಲಾವಣೆ ಬೇಕಂದ್ರೆ ಇಂದೇ ಬಿಟ್ಬಿಡಿ ಈ ಹಠ, ಚಟ

By Suvarna News  |  First Published Dec 30, 2021, 12:09 PM IST

ಸದ್ಯ ಎಲ್ಲರ ಬಾಯಲ್ಲಿ ಓಡಾಡ್ತಿರುವ ವಿಷ್ಯ ನ್ಯೂ ಇಯರ್. ಹೊಸ ವರ್ಷದಲ್ಲಿ ಹಾಗೆ ಮಾಡ್ಬೇಕು,ಹೀಗೆ ಮಾಡ್ಬೇಕು ಎಂಬ ದೊಡ್ಡ ಪಟ್ಟಿಯಿರುತ್ತದೆ. ನಿಜ ಹೇಳ್ಬೇಕಂದ್ರೆ 2021ರಲ್ಲೂ ಈ ಪಟ್ಟಿ ಸಿದ್ಧವಾಗಿತ್ತು. ಆದ್ರೆ ಪಟ್ಟಿಯಲ್ಲಿದ್ದ ಒಂದೂ ಜಾರಿಗೆ ಬರಲಿಲ್ಲ. ಹಾಗಂತ 2022ರಲ್ಲೂ ಅದನ್ನೇ ಮಾಡ್ಬೇಡಿ. ಕೆಲವೊಂದು ಬದಲಾವಣೆ ಅನಿವಾರ್ಯ ಎಂಬುದು ತಿಳಿದಿರಿ.
 


ಹೊಸ ವರ್ಷ (New Year) ಹೊಸ ಭರವಸೆ. 2022 ಮಂಗಳಕರವಾಗಲಿದೆ ಎಂಬ ನಂಬಿಕೆ (Faith)ಯೊಂದಿಗೆ ಜನರು ಹೊಸ ವರ್ಷಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ. ಹೊಸ ವರ್ಷವು ಅದೃಷ್ಟ (Good Luck )ತರಲಿದೆ ಎಂಬ ವಿಶ್ವಾಸ (Confidence) ಜನರಲ್ಲಿದೆ. ಹೊಸ ಹೊಸ ನಿರೀಕ್ಷೆಗಳ ಜೊತೆ ಆಡಂಬರಕ್ಕೆ ಅವಕಾಶವಿಲ್ಲದ ಕಾರಣ ಆನಂದದಿಂದ ನ್ಯೂ ಇಯರ್ ವೆಲ್ ಕಂ ಮಾಡಲು ಸಿದ್ಧತೆ ನಡೆದಿದೆ. ಕೇವಲ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ರೆ ಅಥವಾ ಕ್ಯಾಲೆಂಡರ್ ಬದಲಾದ್ರೆ ಅಥವಾ ನಿಮ್ಮ ಡೈರಿಯಲ್ಲಿಯ ವರ್ಷ ಬದಲಾದ್ರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯವಾಗಿ ಜೀವನಶೈಲಿ (Lifestyle)ಯಲ್ಲಿ ಬದಲಾವಣೆಯಾಗಬೇಕು. ಕೆಟ್ಟ ಅಭ್ಯಾಸ (Bad habit )ಗಳಿಗೆ ಗುಡ್ ಬೈ ಹೇಳಿ ಮುನ್ನಡೆಯಬೇಕು. ಹಳೆ ಚಟಗಳ ಜೊತೆ ಹೊಸ ವರ್ಷ ಸ್ವಾಗತಿಸಿದ್ರೆ ಹೊಸದಕ್ಕೂ,ಹಳೆಯದಕ್ಕೂ ವ್ಯತ್ಯಾಸವಿರುವುದಿಲ್ಲ. ಹೊಸ ವರ್ಷ ನಿರ್ಣಯಗಳನ್ನು ಮಾತ್ರ ತೆಗೆದುಕೊಳ್ಳುವುದಲ್ಲ, ಕೆಲವು ಅಭ್ಯಾಸಗಳನ್ನು ಸಹ ಬಿಡಬೇಕು. ಭವಿಷ್ಯ ಹಾಳು ಮಾಡಬಲ್ಲ ಹವ್ಯಾಸಗಳನ್ನು ತೊರೆಯಲು ಸಂಕಲ್ಪ ಮಾಡಬೇಕು. ನಾನು ಯಾವುದೇ ಕೆಟ್ಟ ಚಟ ಅಂಟಿಸಿಕೊಂಡಿಲ್ಲ ಎಂಬ ಭಾವನೆ ನಿಮ್ಮಲ್ಲಿರಬಹುದು. ಆದರೆ ನಿಮಗೆ ಗೊತ್ತಿಲ್ಲದೆ ನಿಮ್ಮಲ್ಲಿ ಒಂದಾಗಿರುವ ಚಟ, ನಿಮ್ಮ ಜೀವನವನ್ನು ಹಾಳುಮಾಡುತ್ತದೆ. 2022 ರ ಮೊದಲು ನೀವು ಬಿಡಲೇಬೇಕಾದ ಕೆಲ ಚಟಗಳ ಪಟ್ಟಿ ಇಲ್ಲಿದೆ.  

ಆರೋಗ್ಯದ ಬಗ್ಗೆ ಅಸಡ್ಡೆ :  ಹೆಚ್ಚಿನ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ತಡವಾಗಿ ಏಳುವುದು, ತಡವಾಗಿ ಮಲಗುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ವ್ಯಾಯಾಮ ಮಾಡದಿರುವುದು, ಪೌಷ್ಟಿಕಾಂಶವಿರುವ ಪದಾರ್ಥಗಳನ್ನು ಸೇವಿಸದಿರುವುದು ಇತ್ಯಾದಿ. ಇದರಿಂದ ಆರೋಗ್ಯ ಹಾಳಾಗುತ್ತದೆ.   ಹೊಸ ವರ್ಷದಲ್ಲಿ ಇದನ್ನೇ ಮುಂದುವರಿಸಬೇಡಿ. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡುವುದು ಅತಿ ಮುಖ್ಯವಾಗಿದೆ.

Tap to resize

Latest Videos

ಅನಗತ್ಯ ಖರ್ಚು : ಸಾಮಾನ್ಯವಾಗಿ ಜನರು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಅಗತ್ಯವಿರುವ ವಸ್ತುಗಳು ಮೇಲೆ ಹಣವನ್ನು ಖರ್ಚು ಮಾಡುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ದುಂದುವೆಚ್ಚ  ಭವಿಷ್ಯಕ್ಕೆ ಹಾನಿಕಾರಕವಾಗಿದೆ. ಹೊಸ ವರ್ಷದಿಂದ ಉಳಿತಾಯದ ಅಭ್ಯಾಸವನ್ನು ರೂಢಿಸಿಕೊಳ್ಳಿ. ಉಳಿತಾಯಕ್ಕೆ ವಯಸ್ಸಿನ ಮಿತಿಯಿಲ್ಲ. ನಿಮ್ಮ ಈಗಿನ ಉಳಿತಾಯ ತುರ್ತು ಸಂದರ್ಭದಲ್ಲಿ ನೆರವಿಗೆ ಬರುತ್ತದೆ. ಉದ್ಯೋಗಿಗಳು ಸಂಬಳದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿದರೂ ಮುಂದೆ ಅದು ಉಪಯೋಗಕ್ಕೆ ಬರಲಿದೆ.

ಕೋಪ : ಕೋಪ ಮನುಷ್ಯನ ಶತ್ರು. ಕೋಪದಿಂದ ಆಪ್ತರು ದೂರವಾಗುವ ಸಾಧ್ಯತೆಯಿರುತ್ತದೆ. ಕೋಪಿಷ್ಟರಾಗಿದ್ದರೆ ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವ ಸಂಕಲ್ಪ ಮಾಡಿ. ಮನಸ್ಸು ಮಗುವಿನಂತೆ ಇರಬಹುದು. ಆದರೆ ನಿಮ್ಮ ಕೋಪ ನಿಮ್ಮ ಒಳ್ಳೆ ಸ್ವಭಾವಕ್ಕೆ ಧಕ್ಕೆಯುಂಟು ಮಾಡುತ್ತದೆ. ಮಾತುಮಾತಿಗೆ ಕೋಪಗೊಂಡು ಜನರ ಜೊತೆ ಜಗಳವಾಡುವುದನ್ನು ಹೊಸ ವರ್ಷ ಮಾಡಬೇಡಿ.  

ಬೇಜವಾಬ್ದಾರಿ : ಜವಾಬ್ದಾರಿ ಅರಿತು ನಡೆಯುವುದು ಜೀವನದಲ್ಲಿ ಬಹಳ ಮುಖ್ಯ.ಈವರೆಗೆ ನಿಮ್ಮ ಜವಾಬ್ದಾರಿ ನಿಮಗೆ ಅರ್ಥವಾಗದೆ ಹೋದಲ್ಲಿ ಈಗ ಅರ್ಥ ಮಾಡಿಕೊಳ್ಳಿ. ಬೇಜವಾಬ್ದಾರಿ ಮರೆತು, ನಿಮ್ಮ ಹೆಗಲ ಮೇಲಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಪ್ರಯತ್ನ ಮಾಡಿ. ಅದು ಉದ್ಯೋಗವಾಗಿರಲಿ ಇಲ್ಲ ಶಿಕ್ಷಣವಾಗಿರಲಿ. ಪ್ರತಿಯೊಬ್ಬರಿಗೂ ಅವರದೇ ಆದ ಜವಾಬ್ದಾರಿಗಳಿವೆ. 

ಚಳಿಗಾಲದ ಕಫ, ಶೀತಕ್ಕೆ ಈ ಮನೆ ಮದ್ದು ಟ್ರೈ ಮಾಡಿ

ಸುಳ್ಳಿನ ಕಂತೆ :ಒಂದು ಸುಳ್ಳು ನೂರು ಸುಳ್ಳಿಗೆ ದಾರಿ ಮಾಡಿಕೊಡುತ್ತದೆ. ಸತ್ಯ ಕಹಿಯಾಗಿದ್ದರೂ ಒಳ್ಳೆಯ ಫಲಿತಾಂಶ ನೀಡುತ್ತದೆ. ಚಿಕ್ಕಪುಟ್ಟ ವಿಚಾರಕ್ಕೆ ಸುಳ್ಳು ಹೇಳುವವರು ನೀವಾಗಿದ್ದರೂ ಹೊಸ ವರ್ಷ ಅದನ್ನು ಬಿಟ್ಟು ನಡೆಯಿರಿ. ಸತ್ಯ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಜೀವನ ಸಾಗಿಸಿ. 
 

click me!