
ಬೀಜಿಂಗ್(ಆ.29) ಮದುವೆಯಾಗುವ ನವ ಜೋಡಿಗೆ ಸರ್ಕಾರ 11,321 ರೂಪಾಯಿ ನೀಡುವ ಯೋಜನೆ ಇದು. ವಧುವಿನ ವಯಸ್ಸು 25 ಅಥವಾ ಅದಕ್ಕಿಂತ ಕೆಳಗಿಳಿರಬೇಕು. ನಿಮ್ಮ ವಯಸ್ಸು ನೋಡಿ ಮದುವೆಗೆ ಸಜ್ಜಾಗಿದ್ದೀರಾ? ಆದರೆ ಈ ಯೋಜನೆ ಕರ್ನಾಟಕ, ಭಾರತದಲ್ಲಿ ಅಲ್ಲ. ಇದು ಚೀನಾ ಸರ್ಕಾರದ ಯೋಜನೆ. ಚೀನಾ ಯಾಕೆ ಈ ರೀತಿಯ ಯೋಜನೆ ಜಾರಿ ಮಾಡಿದೆ ಅನ್ನೋ ಪ್ರಶ್ನೆ ಹುಟ್ಟಿದರೆ, ಅದಕ್ಕೂ ಉತ್ತರವಿದೆ. ಚೀನಾ ಸರ್ಕಾರ ಇದೀಗ ಯುವ ಸಮೂಹವನ್ನು ಮದುವೆಯಾಗಲು ಪ್ರೇರೇಪಿಸುತ್ತಿದೆ. ಚೀನಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ಜನನ ಪ್ರಮಾಣ ಸರಿದೂಗಿಸಲು ಚೀನಾ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಸರಿಯಾದ ವಯಸ್ಸಿಗೆ ಮದುವೆಯಾಗಿ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಕೇವಲ 11,321 ರೂಪಾಯಿಗೆ ಮಾತ್ರ ಸೀಮಿತವಾಗಿಲ್ಲ. ಈ ಜೋಡಿ ಸರಿಯಾದ ಸಮಯಕ್ಕೆ ಮಗು ಪಡೆದರೆ ಆ ಮಗುವಿನ ಆರೈಕೆ, ಶಿಕ್ಷಣ ಸೇರಿದಂತೆ ಇತರ ಖರ್ಚು ವೆಚ್ಚಗಳಲ್ಲೂ ಸರ್ಕಾರ ಸಬ್ಸಿಡಿ ನೀಡಲಿದೆ. ಕುಟುಂಬ ಹಾಗೂ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜನನ ಪ್ರಮಾಣ ಉತ್ತೇಜಿಸಲು ಚೀನಾ ಸರ್ಕಾರ ನಿರ್ಧರಿಸಿದೆ.
ಲವ್, ರೋಮ್ಯಾನ್ಸ್ ಮಾಡಲೆಂದೇ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಟ್ಟ ಚೀನಾ!
ಕಳೆದ 6 ದಶಕಗಳಿಗೆ ಹೋಲಿಸಿದರೆ ಚೀನಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಇದರಿಂದ ತೀವ್ರ ಅಸಮತೋಲನ ಎದುರಿಸುವಂತಾಗಿದೆ. ಈ ಅಸಮತೋಲನ ಸರಿದೂಗಿಸಲು ಹೊಸ ಯೋಜನೆ ಜಾರಿಗೆ ತಂದಿದೆ.
ಚೀನಾದಲ್ಲಿ ಮದುವೆಯಾಗಲು ಗಂಡಿನ ವಯಸ್ಸು ಕನಿಷ್ಠ 22 ಹಾಗೂ ಹೆಣ್ಣಿನ ವಯಸ್ಸು ಕನಿಷ್ಠ 20. ಆದರೆ ಕನಿಷ್ಠ 25 ವರ್ಷಕ್ಕೆ ಮದುವೆಯಾಗುವ ಯುವ ಸಮೂಹ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಚೀನಾದಲ್ಲಿ ಸದ್ಯಾ ಯುವ ಸಮೂಹದ ಮದುವೆಯ ಸರಾಸರಿ ವಯಸ್ಸು 30 ತಲುಪಿದೆ. ಇದರಿಂದ ಹಲವು ದಂಪತಿಗಳಿಗೆ ಮಕ್ಕಳ ಸಮಸ್ಯೆ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ಕಾರಣದಿಂದ ಚೀನಾದಲ್ಲಿ ಜನನ ಪ್ರಮಾಣ ಗಂಭೀರವಾಗಿ ಕುಸಿದಿದೆ.
ಚೀನಾದಲ್ಲಿ ಗಗನಕ್ಕೇರುತ್ತಿದೆ ವಧು ದಕ್ಷಿಣೆ, ಬಡ ಹುಡುಗರು ಕಂಗಾಲು!
2022ರಲ್ಲಿ ಚೀನಾದಲ್ಲಿ ಮದುವೆಯಾದವರ ಸಂಖ್ಯೆ 6.8 ಮಿಲಿಯನ್. 1986ರಿಂದ ಇಲ್ಲೀವರೆಗೆ ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. 2021ಕ್ಕೆ ಹೋಲಿಸಿದರೆ ಬರೋಬ್ಬರಿ 800,000 ಕಡಿಮೆಯಾಗಿದೆ. ಮತ್ತೊಂದೆಡೆ ಕೋವಿಡ್ ಬಳಿಕ ಚೀನಾದಲ್ಲಿನ ಆರೋಗ್ಯ ಸಮಸ್ಯೆಗಳು ಗಂಭೀರವಾಗಿದೆ. ಇತ್ತ ಉದ್ಯೋಗ ಭದ್ರತೆಗಳು ಇಲ್ಲದಾಗಿದೆ. ಆರ್ಥಿಕ ಸಮಸ್ಯೆ, ಹಲವು ಕಂಪನಿಗಳು ಚೀನಾದಿಂದ ಕಾಲ್ಕಿತ್ತು ಬೇರೆ ದೇಶಗಳಿಗೆ ಸ್ಥಳಾಂತರ ಸೇರಿದಂತೆ ಹಲವು ಕಾರಣಗಳು ಚೀನಾದಲ್ಲಿನ ಜನನ ಪ್ರಮಾಣದಲ್ಲೂ ಪರಿಣಾಮ ಬೀರಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.