ತಾಳಿ ಕಟ್ಟುವ ಶುಭವೇಳೆ ಹಸೆಮಣೆಯಿಂದ ಎದ್ದು ಹೋದವಳನ್ನು ಕೊನೆಗೆ ಪೋಷಕರೇ ಸಿನಿಮೀಯ ಶೈಲಿಯಲ್ಲಿ ಪ್ರೀತಿ ಮಾಡುತ್ತಿದ್ದ ಯವಕನೊಂದಿಗೆ ಸೇರಿಸಿದ್ದಾರೆ.
ತುಮಕೂರು (ಆ.27): ತಾಳಿ ಕಟ್ಟುವ ಶುಭವೇಳೆ ಹಸೆಮಣೆಯಿಂದ ಮದುವೆ ಬೇಡವೆಂದು ಎದ್ದು ಹೋದವಳನ್ನು ಕೊನೆಗೆ ಪೊಲೀಸರ ವಿಚಾರಣೆಗೆ ಕರೆಸಿ ಪ್ರೀತಿ ಮಾಡುತ್ತಿದ್ದ ಯವಕನೊಂದಿಗೆ ಸೇರಿಸಿದ ಸಿನಿಮೀಯ ಘಟನೆ ನಡೆದಿದೆ.
ಹೌದು, ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರೀತಿ ಮಾಡುತ್ತಿದ್ದರೂ ಅದನ್ನು ಮುಚ್ಚಿಟ್ಟು ಬೇರೊಬ್ಬನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಇಲ್ಲಿಯೂ ಹುಡುಗಿ ಪೋಷಕರ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಇನ್ನೇನು ತಾಳಿ ಕಟ್ಟುವ ವೇಳೆ, ಪ್ರೀತಿಸಿದ ಹುಡುಗನಿಗೆ ಮೋಸ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಮತ್ತೊಂದೆದಡೆ ಪ್ರೀತಿಯೊಬ್ಬನ ಜೊತೆಗೆ ಮದುವೆ ಇನ್ನೊಬ್ಬನ ಜೊತೆಗೆ ಮಾಡಿಕೊಂಡು ತನಗೆ ತಾನೂ ಮೋಸ ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಎದ್ದುನಿಂತು ತನಗೆ ಈ ಮದುವೆ ಬೇಡ. ನಾನು ಒಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಅವನನ್ನೇ ಮದುವೆ ಆಗುತ್ತೇನೆಂದು ಮದುವೆಯನ್ನು ಮುರಿದಿದ್ದಾಳೆ.
undefined
ತ್ರೀ ಈಡಿಯಟ್ಸ್ ಸಿನಿಮಾ ಶೈಲಿಯಲ್ಲಿ, ಲವರ್‌ಗಾಗಿ ಹಸೆಮಣೆಯಿಂದ ಎದ್ದುಹೋದ ಧೈರ್ಯಗಿತ್ತಿ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಸಿದ್ಧತೆ ಮಾಡಿಕೊಂಡಿದ್ದ ವರನ ಮನೆಯವರು ಹಾಗೂ ವರ ಹುಡುಗಿಯ ಮನೆಯವರೊಂದಿಗೆ ಜಗಳ ಆರಂಭಿಸಿದ್ದಾರೆ. ಇತ್ತ ಹುಡುಗಿಯನ್ನು ಸಮಾಧಾನ ಮಾಡಿ ಮದುವೆಗೆ ಒಪ್ಪಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಹುಡುಗಿ ಪೋಷಕರು ಪೇಚಿಗೆ ಸಿಲುಕಿದ್ದಾರೆ. ನಂತರ, ಹುಡುಗಿಯನ್ನು ಒಪ್ಪಿಸಿ ಹಸೆಮಣೆಗೆ ಕರೆತರುವಂತೆ ಹುಡುಗನ ಮನೆಯವರು ಹೇಳುತ್ತಿದ್ದರೂ, ಮಗಳ ಜೀವನವೇ ಮುಖ್ಯವೆಂದು ಮದುವೆ ಮಾಡಿಕೊಡುವುದಿಲ್ಲವೆಂದು ರದ್ದುಗೊಳಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಮದುವೆ ಮಂಟಪ: ಇನ್ನು ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಮುರಿದ ಬಿದ್ದ ಬೆನ್ನಲ್ಲಿಯೇ ಹುಡುಗನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಗ ಪೊಲೀಸರು ಎರಡೂ ಮನೆಯವರನ್ನು ಪೊಲೀಸ್ ಠಾಣೆಗೆ ಕರೆದು ಮಾತುಕತೆ ಮಾಡಿದ್ದಾರೆ. ಈ ವೇಳೆ ಪೊಲೀಸರು, ಹುಡುಗನ ಮನೆಯವರು ಹಾಗೂ ಹುಡುಗಿ ಪೋಷಕರು ಪ್ರೀತಿಸಿದ ಹುಡುಗನನ್ನು ಮರೆತು ಮದುವೆ ಆಗುವಂತೆ ಎಷ್ಟೇ ಬುದ್ಧಿವಾದ ಹೇಳಿದರೂ ಮಾತು ಕೇಳಲಿಲ್ಲ. ಕೊನೆಗೆ, ನೀನು ಪ್ರೀತಿ ಮಾಡುತ್ತಿದ್ದ ಹುಡುಗನನ್ನು ಕರೆಸು ಮಾತನಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಕೊಳಾಲ ಪೊಲೀಸ್ ಠಾಣೆಗೆ ಬಂದ ವಧುವನ್ನು ಪ್ರೀತಿಸುತ್ತಿದ್ದ ಹುಡುಗ, ಪೊಲೀಸರ ಮುಂದೆಯೇ ತಮ್ಮಿಬ್ಬರ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಜೊತೆಗೆ, ತಾನು ಪ್ರೀತಿ ಮಾಡುವ ಹುಡುಗಿಯನ್ನು ಸುಖವಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿ ಮಾಡುವುದನ್ನು ಹಾಗೂ ಇಬ್ಬರೂ ಮೇಜರ್ ಆಗಿರುವುದನ್ನು ಕಂಡು ಪೊಲೀಸರು ಬಲವಂತವಾಗಿ ಮದುವೆ ಮಾಡಲು ಹೊರಟಿದ್ದೀರಿ ಎಂದು ಎರಡೂ ಮನೆಯವರಿಗೆ ಬೈದು ಬುದ್ಧಿ ಹೇಳಿದ್ದಾರೆ. ಇದಾದ ನಂತರ ಮದುವೆಗೆ ಸಿದ್ಧವಾಗಿ ನಿಂತಿದ್ದ ವರ ಹಾಗೂ ಯುವತಿಯ ಪೋಷಕರು ಪ್ರೀತಿ ಮಾಡಿದ ಹುಡುಗನೊಂದಿಗೆ ವಧುವನ್ನು ಕಳುಹಿಸಿಕೊಡಲು ನಿರ್ಧಾರ ಮಾಡಿದ್ದಾರೆ.
ಕೋಲಾರ ಮತ್ತೊಂದು ಮರ್ಯಾದಾ ಹತ್ಯೆ: ಅನ್ಯ ಜಾತಿ ಯುವಕನ ಪ್ರೀತಿಸಿದ ಮಗಳನ್ನೇ ಕೊಲೆಗೈದ ವೆಂಕಟೇಶ್‌ಗೌಡ
ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ: ಮದುವೆಯ ಸಿದ್ಧತೆಗಾಗಿ ಹುಡುಗನ ಮನೆಯಿಂದ ವಧುವಿಗೆ ಸುಮಾರು 4 ಲಕ್ಷ ರೂ. ಮೌಲ್ಯದ ಒಡವೆ ಹಾಕಿದ್ದರು. ಇನ್ನು ಮದುವೆ ಸಿದ್ಧತೆಯನ್ನೂ ಅವರೇ ಮಾಡಿಕೊಂಡಿದ್ದರು. ಆದರೆ, ಮದುವೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಖಾಲಿ ಖಾಲಿ ಹೊಡೆಯುತ್ತಿತ್ತು. ಹಸೆಮಣೆ ಮೇಲೆ ಮದುವೆ ಮುರಿದು ಬಿದ್ದ ಹಿನ್ನಲೆ, ಮದುವೆಗೆ ತಯಾರಿಸಿದ್ದ ಅಡುಗೆ ವ್ಯರ್ಥವಾಗಿದೆ. ಇನ್ನು ಪೊಲೀಸ್ ಠಾಣೆಯಲ್ಲಿ ವಧು ವರ ಎರಡೂ ಕುಟುಂಬದವರ ಮಾತುಕತೆ ಮಾಡಲಾಗಿದೆ. ಈ ವೇಳೆ ರಾಜಿ ಸಂಧಾನ ಮಾಡಿದ ಪೊಲೀಸರು 1 ಲಕ್ಷ ರೂ. ಮದುವೆ ಖರ್ಚು ಹಾಗೂ ಮದುವೆಗೆ ಕೊಡಿಸಿದ್ದ ಒಡವೆಗಳನ್ನು ವಾಪಸ್ ಕೊಡುವಂತೆ ಯುವತಿ ಮನೆಯವರಿಗೆ ತಿಳಿಸಿದ್ದಾರೆ. ಈ ರಾಜಿ ಸಂಧಾನದ ಬಳಿಕ ಯುವತಿಯನ್ನು ತನ್ನ ಪ್ರಿಯಕರನೊಂದಿಗೆ ಸೇರಿಸಲಾಗಿದೆ.