Office Etiquette: ಕಚೇರಿ ಪಾರ್ಟಿಯಲ್ಲಿ ಇಮೇಜ್ ಹಾಳ್ಮಾಡ್ಕೊಳ್ಳಬೇಡಿ !

By Suvarna News  |  First Published Aug 26, 2022, 3:39 PM IST

ಸ್ನೇಹಿತರ ಜೊತೆ ಪಾರ್ಟಿಗೆ ಹೋದಾಗ ತೋರಿಸುವ ಸ್ವಭಾವವನ್ನು ಕಚೇರಿ ಪಾರ್ಟಿಯಲ್ಲಿ ತೋರಿಸಲು ಸಾಧ್ಯವಿಲ್ಲ. ಕಚೇರಿ ಪಾರ್ಟಿಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಗಡಿ ದಾಟಿದ್ರೆ ನಿಮ್ಮ ಗೌರವಕ್ಕೆ ನೀವೇ ಧಕ್ಕೆ ತಂದುಕೊಂಡಂತಾಗುತ್ತದೆ. 


ಕೆಲವೊಂದು ಆಫೀಸ್ ನಲ್ಲಿ ವಾರಕ್ಕೊಂದು ಪಾರ್ಟಿ ನಡೆಯುತ್ತಿರುತ್ತದೆ. ಮತ್ತೆ ಕೆಲ ಕಚೇರಿಗಳಲ್ಲಿ ವರ್ಷಕ್ಕೆ ಒಂದು ಪಾರ್ಟಿ ನಡೆದ್ರೆ ಹೆಚ್ಚು. ಪಾರ್ಟಿ ಯಾವಾಗ್ಲೇ ನಡೀಲಿ, ಪಾರ್ಟಿ ಇದ್ದಾಗ ಅದನ್ನು ನೀವು ಮಿಸ್ ಮಾಡಿಕೊಳ್ಬೇಡಿ. ಕಚೇರಿ ಪಾರ್ಟಿ ಭಿನ್ನವಾಗಿರುತ್ತದೆ. ಇದು ನಿಮಗೆ ಕೆಲವೊಂದು ಅವಕಾಶ ನೀಡಬಹುದು. ಕಚೇರಿಯಲ್ಲಿ ಕೆಲಸ ಮಾಡುವಾಗಿದ್ದ ಸಿಬ್ಬಂದಿಯ ಇನ್ನೊಂದು ಮುಖವನ್ನು ನೀವು ನೋಡಬಹುದು. ಸಹೋದ್ಯೋಗಿ ಹಾಗೂ ಬಾಸ್ ಜೊತೆ ಫ್ರೀ ಆಗಿ ಸಮಯ ಕಳೆಯಬಹುದು. ಕಚೇರಿಯಲ್ಲಿದ್ದಾಗ ಕೆಲವರು ಗಂಭೀರವಾಗಿರ್ತಾರೆ, ಕೆಲಸದ ಬಗ್ಗೆ ಸದಾ ಚಿಂತನೆ ಮಾಡ್ತಿದ್ದಾರೆ. ಆದ್ರೆ ಪಾರ್ಟಿಯಲ್ಲಿ ಎಲ್ಲರೂ ಚಿಲ್ ಆಗಿರುವ ಕಾರಣ ಅವರ ಸ್ವಭಾವವನ್ನು ನೀವು ಸುಲಭವಾಗಿ ತಿಳಿಯಬಹುದು. ಹಾಗೆ ಕಚೇರಿಯಲ್ಲಿ ಕೆಲಸ ಹಾಗೂ ಮೌನ ನಿಮ್ಮ ಸ್ವಭಾವವಾಗಿದ್ದರೆ ಸಹೋದ್ಯೋಗಿಗಳು ನಿಮ್ಮನ್ನು ಹಾಗೆ ಗುರುತಿಸುತ್ತಿರುತ್ತಾರೆ. ಆದ್ರೆ ಪಾರ್ಟಿಯಲ್ಲಿ ಪಾಲ್ಗೊಂಡಾಗ ನೀವು ನಿಮ್ಮ ಇಮೇಜ್ ಬದಲಿಸಬಹುದು. ಪಾರ್ಟಿಯಲ್ಲಿ ನಿಮ್ಮ ಇಮೇಜ್ ಕೆಟ್ಟದಾಗಲೂಬಹುದು. ಇದು ನಿಮ್ಮ ಕೆಲಸಕ್ಕೆ ಕುತ್ತು ತರಬಹುದು. ಹಾಗಾಗಿ ಕಚೇರಿ ಪಾರ್ಟಿಯಲ್ಲಿ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ ಪಾರ್ಟಿಯಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಿರುವುದು ಕೂಡ ಮುಖ್ಯ.

ಕಚೇರಿ (Office) ಪಾರ್ಟಿ (Party) ಯಲ್ಲಿ ಹೀಗಿರಲಿ ನಿಮ್ಮ ವರ್ತನೆ :
ಮದ್ಯಪಾನ (Alcohol) ಕ್ಕೆ ಮಿತಿ :
ಪಾರ್ಟಿ ಅಂದ್ಮೇಲೆ ಒಂದೆರಡು ಪೆಗ್ ಏರ್ಲೇಬೇಕು. ಕಚೇರಿ ಪಾರ್ಟಿಯಲ್ಲೂ ಆಲ್ಕೋಹಾಲ್ ಮಾಮೂಲಿ. ಅನೇಕರು ಪುಕ್ಕಟ್ಟೆ ಸಿಕ್ಕಿದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಕುಡಿಯುತ್ತಾರೆ. ಮದ್ಯಪಾನ ಮಾಡುವ ಅಭ್ಯಾಸ ನಿಮಗಿದ್ದರೆ ಮಿತಿಯಾಗಿ ಸೇವನೆ ಮಾಡಿ. ಮದ್ಯದ ನಶೆಯಲ್ಲಿ ನೀವಾಡುವ ಮಾತು, ನಿಮ್ಮ ವರ್ತನೆ ಹಾಗೂ ನಿಮ್ಮ ನೃತ್ಯ ಸಹೋದ್ಯೋಗಿಗಳ ತಮಾಷೆ ವಿಷ್ಯವಾಗಬಾರದು. 

Tap to resize

Latest Videos

ಕರೆದಿದ್ದು ನಿಮ್ಮನ್ನು ಕೊಂಡೊಯ್ದಿದ್ದು ಮನೆಯವರನ್ನ ಎಂಬುದು ಬೇಡ : ಪಾರ್ಟಿಗೆ ಯಾರನ್ನು ಆಹ್ವಾನ ಮಾಡಿದ್ದಾರೋ ಅಷ್ಟೇ ಮಂದಿ ಹೋಗುವುದು ಸೂಕ್ತ. ಅನೇಕರು ತಮ್ಮ ಜೊತೆ ಕುಟುಂಬಸ್ಥರನ್ನೆಲ್ಲ ಕರೆದುಕೊಂಡು ಹೋಗಿರ್ತಾರೆ. ಆಹ್ವಾನ ನೀಡದ ವ್ಯಕ್ತಿಗಳನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ಮುಜುಗರಕ್ಕೀಡಾಗ್ಬೇಡಿ.

ಪಾರ್ಟಿ ಬಟ್ಟೆ (Clothes) ಹೀಗಿರಲಿ : ಪಾರ್ಟಿ, ಪಾರ್ಟಿಯೇ ಆದ್ರೂ ಅದು ಕಚೇರಿ ಪಾರ್ಟಿ ಎಂಬುದು ನೆನಪಿರಲಿ. ಅಲ್ಲಿ ಸಭ್ಯತೆ ಮುಖ್ಯವಾಗುತ್ತದೆ. ಹಾಗಾಗಿ ಅಸಹ್ಯವೆನ್ನಿಸುವ ಡ್ರೆಸ್ ಧರಿಸ್ಬೇಡಿ. ಕೆಲವೊಮ್ಮೆ ಸಹೋದ್ಯೋಗಿ (colleague) ಗಳ ಮುಂದೆ ನಿಮ್ಮ ಬಟ್ಟೆ ಭಿನ್ನವೆನ್ನಿಸಬಾರದು. ಬಟ್ಟೆ ವಿಚಾರಕ್ಕೆ ನಿಮ್ಮನ್ನು ಆಡಿಕೊಳ್ಳುವಂತಾಗ್ಬಾರದು. ಹಾಗೆ ನಿಮಗೂ ಮುಜುಗರವನ್ನುಂಟು ಮಾಡ್ಬಾರದು. 

Parenting Tips: ಸಮಯಕ್ಕೆ ಮೊದಲೇ ಯೌವನಕ್ಕೆ ಮಗ ಕಾಲಿಟ್ಟಿದ್ದಾನೆ ಎಂಬುದನ್ನು ಹೀಗೆ ಪತ್ತೆ ಹಚ್ಚಿ

ಕಚೇರಿ, ಕೆಲಸದ ಮಾತು ಬೇಡ : ಕಚೇರಿಯಲ್ಲಿ ಪಾರ್ಟಿ ಏರ್ಪಡಿಸಿರುವುದು ನಿಮ್ಮ ವಿಶ್ರಾಂತಿ (Rest) ಗಾಗಿ. ಈ ಸಂದರ್ಭದಲ್ಲೂ ನೀವು ಕಚೇರಿ ಕೆಲಸದ ಬಗ್ಗೆ ಮಾತನಾಡಿದ್ರೆ ಸೂಕ್ತವೆನ್ನಿಸುವುದಿಲ್ಲ. ಕಿರಿಯ ಸಹೋದ್ಯೋಗಿ ಪಾರ್ಟಿ ಮೂಡ್ ನಲ್ಲಿರುವಾಗ ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ ಎನ್ನುವುದು ಸರಿಯಲ್ಲ. ಹಾಗೆ ಯಾವುದೋ ಕೆಲಸದ ಬಗ್ಗೆ ಬಾಸ್ (Boss) ಜೊತೆ ಮಾತನಾಡ್ತಾ ಉಳಿದ ಸಹೋದ್ಯೋಗಿಗಳ ಕೆಟ್ಟ ದೃಷ್ಟಿಗೆ ಗುರಿಯಾಗುವುದು ಒಳ್ಳೆಯದಲ್ಲ.

Parenting Tips : ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಲು ಹೀಗ್ಮಾಡಿ..

ಗಾಸಿಪ್ (Gossip) : ಪಾರ್ಟಿ ಅಂದಾಗ ಸಹೋದ್ಯೋಗಿಗಳ ಜೊತೆ ಮಾತುಕತೆ ಇದ್ದಿದ್ದೆ. ಆದ್ರೆ ಮಾತಿರಲಿ, ಗಾಸಿಪ್ ಬೇಡ. ಬೇರೆ ಸಹೋದ್ಯೋಗಿ ಅಥವಾ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡ್ಬೇಡಿ. ಯಾರ ಬಗ್ಗೆಯೂ ದೂರಬೇಡಿ. ಪದಗಳ ಬಳಕೆ ವೇಳೆ ಎಚ್ಚರಿಕೆವಹಿಸಿ. ಹಾಗೆಯೇ ಸಹೋದ್ಯೋಗಿಗಳ ಖಾಸಗಿ ವಿಷ್ಯ ತೆಗೆದು ತಮಾಷೆ ಮಾಡ್ಬೇಡಿ. ನಿಮ್ಮ ತಮಾಷೆ ಅವರಿಗೆ ಅವಮಾನವುಂಟು ಮಾಡಬಹುದು. ನೀವು ಪಾರ್ಟಿಯಲ್ಲಿ ಮಾತನಾಡಿದ ಸಂಗತಿ ಮುಂದೆ ನಿಮ್ಮ ಕೆಲಸಕ್ಕೆ ತೊಂದರೆಯುಂಟು ಮಾಡ್ಬಹುದು.   

click me!