
ಭಾರತದಲ್ಲಿ ನಿಷೇಧಿತ ವಿಷ್ಯಗಳಲ್ಲಿ ಮುಟ್ಟು ಕೂಡ ಒಂದು. ಈಗ್ಲೂ ಅನೇಕ ಕಡೆ ಮುಟ್ಟಿನ ಬಗ್ಗೆ ಸರಿಯಾಗಿ ಮಾತನಾಡುವುದಿಲ್ಲ. ಬಹುತೇಕ ಪುರುಷರಿಗೆ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಇದೇ ಅಜ್ಞಾನ ಪುರುಷರ ಸ್ಪಂದನೆಗೆ ಅಡ್ಡಿಯಾಗ್ತಿದೆ. ತಿಂಗಳಲ್ಲಿ ಮೂರರಿಂದ ನಾಲ್ಕು ದಿನ ಮಹಿಳೆಯರು ಅನುಭವಿಸುವ ದೈಹಿಕ ಹಾಗೂ ಮಾನಸಿಕ ನೋವಿನ ಬಗ್ಗೆ ತಿಳಿದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಪುರುಷರು ಆಸಕ್ತಿ ತೋರುತ್ತಿದ್ದಾರೆ. ಈ ಸಮಯದಲ್ಲಿ ಮಹಿಳೆ ಜೊತೆ ಹೇಗೆ ಸ್ಪಂದಿಸಬೇಕು, ಆಕೆ ನೋವಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಮುಟ್ಟಿನ ದಿನಗಳಲ್ಲಿ ಮಹಿಳೆಗೆ ಕಾಳಜಿ, ಆರೈಕೆ, ಪ್ರೀತಿಯ ಅಗತ್ಯತೆ ಹೆಚ್ಚಿರುತ್ತದೆ. ನೋವಿನ ಜೊತೆ ಮಾನಸಿಕ ಕಿರಿಕಿರಿಗೆ ಸ್ಪಂದಿಸಬೇಕಾಗುತ್ತದೆ. ಇಂದು ನಾವು ಪತ್ನಿ (Wife) ಅಥವಾ ಗರ್ಲ್ ಫ್ರೆಂಡ್ (Girl Friend) ಮುಟ್ಟಿನ ದಿನದಲ್ಲಿ ಸಂಗಾತಿಯಾದವನು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಮೊದಲನೇಯದಾಗಿ ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಬದಲಾವಣೆಯಿಂದ ಮಹಿಳೆ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಒಂದು ಕಡೆ ಬ್ಲೀಡಿಂಗ್, ಇನ್ನೊಂದು ಕಡೆ ಕಿಬ್ಬೊಟ್ಟೆ, ಕಾಲುಗಳಲ್ಲಿ ವಿಪರೀತ ನೋವು. ಕೆಲವರಿಗೆ ವಾಂತಿ, ತಲೆ ನೋವು ಕಾಡುವುದಿದೆ. ಇದಲ್ಲದೆ ಮೂಡ್ ಸ್ವಿಂಗ್. ಅತಿಯಾದ ಸಂತೋಷ, ಅತಿಯಾದ ದುಃಖ. ಆತಂಕ, ಖಿನ್ನತೆ, ಅತಿಯಾದ ಕೋಪ ಇವೆಲ್ಲವೂ ಮಹಿಳೆಯನ್ನು ಕಾಡುತ್ತದೆ ಎಂಬುದು ಪುರುಷರಿಗೆ ತಿಳಿದಿರಬೇಕು. ಯಾವುದೇ ಕೆಲಸದಲ್ಲಿ ಆಸಕ್ತಿ ತೋರದೆ ಸಂಗಾತಿ ಮಂಕಾಗಿ ಕುಳಿತಾಗ ಅಥವಾ ವಿನಃ ಕಾರಣ ಕೋಪಗೊಂಡಾಗ ಆಕೆಯ ಮನಸ್ಥಿತಿ ಅರಿಯಬೇಕೆಂದ್ರೆ ಮುಟ್ಟಿನ ಲಕ್ಷಣಗಳು ಆತನಿಗೆ ಗೊತ್ತಿರಬೇಕಾಗುತ್ತದೆ.
ಸಂಗಾತಿ ಮುಟ್ಟಿನ ಸಂದರ್ಭದಲ್ಲಿ ಆಕೆಗೆ ಮಸಾಜ್ (Massage) : ಮೂರು ದಿನ ಕಾಡುವ ನೋವು (Pain) ಅನುಭವಿಸಿದವರಿಗೆ ಮಾತ್ರ ಗೊತ್ತು ಅಂದ್ರೆ ಅತಿಶಯೋಕ್ತಿ ಎನ್ನಿಸುವುದಿಲ್ಲ. ಸಂಗಾತಿಗೆ ಬೆನ್ನು ನೋವು ಕಾಡ್ತಿದೆ ಅಂದ್ರೆ ಲಘು ಮಸಾಜ್ ಮಾಡುವ ಕೆಲಸವನ್ನು ಪುರುಷರು ಮಾಡ್ಬಹುದು. ಬಿಸಿ ನೀರಿ (Water)ನ ಶಾಖ ಅಥವಾ ಲಘುವಾದ ಮಸಾಜ್ ನೋವಿನಿಂದ ಸ್ವಲ್ಪ ನೆಮ್ಮದಿ ನೀಡುತ್ತದೆ. ಮಸಾಜ್ ಮಾಡಲು ಬರ್ತಿಲ್ಲ ಎನ್ನುವವರು ಯುಟ್ಯೂಬ್ ಸಹಾಯ ಪಡೆಯಬಹುದು.
ಒಂಟಿ ಜೀವನದ ಸುಖ ತಾತ್ಕಾಲಿಕ, ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ಅಧ್ಯಯನ
ಆಕೆಗಾಗಿ ಒಂದಿಷ್ಟು ಅಡುಗೆ : ಉಳಿದ ಸಮಯದಲ್ಲಿ ನಿಮಗೆ ಅಡುಗೆ ಮಾಡಿ ಬಡಿಸುವ ಪತ್ನಿಗೆ ಈ ಸಂದರ್ಭದಲ್ಲಿ ವಿಶ್ರಾಂತಿ ನೀಡಿ. ಅಡುಗೆ ಮನೆಯನ್ನು ನಿಮ್ಮ ವಶಕ್ಕೆ ಪಡೆದು ಆಕೆಗೆ ಒಂದಿಷ್ಟು ಅಡುಗೆ ತಯಾರಿಸಿ ನೀಡಿ. ಇದ್ರಿಂದ ಆಕೆ ಕೆಲಸ ಸ್ವಲ್ಪ ಕಡಿಮೆ ಆಗುವ ಜೊತೆಗೆ ಆಕೆ ಮುಖದಲ್ಲಿ ನಗು ಮೂಡುತ್ತದೆ.
ಬಿಸಿ ನೀರು (Hot Water) : ಮುಟ್ಟಿನ ಸಂದರ್ಭದಲ್ಲಿ ಬಿಸಿ ನೀರು ಸೇವನೆ ಒಳ್ಳೆಯದು. ಹಾಗಾಗಿ ಸಂಗಾತಿಗಾಗಿ ಅಡುಗೆ ಮನೆಯಲ್ಲಿ ಒಂದಿಷ್ಟು ಬಿಸಿ ನೀರು ಇರುವಂತೆ ನೋಡಿಕೊಳ್ಳಿ. ಆಗಾಗ ಸಂಗಾತಿಗೆ ಈ ನೀರು ಕುಡಿಯಲು ಸಲಹೆ ನೀಡಿ.
ಕೆಲಸದ ಮಧ್ಯೆ ಒಂದಿಷ್ಟು ಪ್ರೀತಿ (Love) : ಮುಟ್ಟಿನ ಸಮಯದಲ್ಲಿ ಸಂಗಾತಿ ನಿಮ್ಮಿಂದ ಪ್ರೀತಿಯನ್ನು ಬಯಸ್ತಾಳೆ. ಆಕೆಯನ್ನು ತಬ್ಬಿಕೊಂಡು, ಚುಂಬಿಸುವಂತಹ ಪ್ರೀತಿ ತೋರಿಸಿ. ಸಂಭೋಗ ನಿರೀಕ್ಷಿಸುವ ಪ್ರೀತಿ ಬೇಡ.
ಸಿನಿಮಾ ವೀಕ್ಷಣೆ (Watching Movie) : ಆಕೆ ಮೂಡ್ ಫ್ರೆಶ್ ಆಗಲು ಆಕೆ ಜೊತೆ ಕುಳಿತು ನೀವು ಸಿನಿಮಾ ಅಥವಾ ಅವರಿಷ್ಟದ ಶೋ ವೀಕ್ಷಣೆ ಮಾಡ್ಬಹುದು. ಇದು ಸಂಗಾತಿಗೆ ವಿಶ್ರಾಂತಿ ಕೂಡ ನೀಡುತ್ತದೆ.
Relationship Tips: ದಾಂಪತ್ಯ ಮುಪ್ಪಾಗ್ಬಾರದೆಂದ್ರೆ ಈ ಟಿಪ್ಸ್ ಫಾಲೋ ಮಾಡಿ
ವಾದ- ಜಗಳ ಬೇಡ : ಮೊದಲೇ ಹೇಳಿದಂತೆ ಈ ಸಂದರ್ಭದಲ್ಲಿ ಆಕೆ ಮೂಡ್ ಬದಲಾಗ್ತಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಕೆ ಜೊತೆ ಜಗಳಕ್ಕೆ ನಿಲ್ಲಬೇಡಿ. ಇದು ಆಕೆಯ ಮನಸ್ಥಿತಿಯನ್ನು ಮತ್ತಷ್ಟು ಹಾಳು ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.