ಗರ್ಲ್‌ಫ್ರೆಂಡೇ ಇಲ್ಲಪ್ಪಾ..ಸಿಂಗಲ್ ಆಗೇ ಸಾಯ್ತೀವೇನೋ ಅಂತ ಹೇಳ್ಕೊಂಡು ಓಡಾಡೋರ ಸಂಖ್ಯೆ ಈಗ ಹೆಚ್ಚಾಗಿದೆ. ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ರೆಂಟೆಡ್ ಗರ್ಲ್‌ಫ್ರೆಂಡ್ ಕಾನ್ಸೆಪ್ಟ್ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ಸದ್ಯ ಭಾರತದಲ್ಲೂ ಈ ಟ್ರೆಂಡ್ ಶುರುವಾಗಿದೆ.
ಮದ್ವೆಯಾಗೋಕೆ ಇಂಟ್ರೆಸ್ಟ್ ಇಲ್ಲ. ಯಾರೂ ಬೀಳ್ತಿಲ್ಲ ಹೀಗೆ ಸಿಂಗಲ್ ಆಗಿದ್ದೇನೆ ಅಂತ ಗೋಳು ಹೇಳ್ಕೊಳ್ಳೋ ಯುವಜನತೆಯ ಸಂಖ್ಯೆ ಹೆಚ್ಚಾಗಿದೆ. ಸುತ್ತಮತ್ತಲು ಅದೆಷ್ಟೇ ಜನರಿದ್ರೂ ಒಂಟಿತನ ಕಾಡೋ ಸಮಸ್ಯೆ. ಆದ್ರೆ ಇನ್ಮುಂದೆ ಅಂಥಾ ಸಮಸ್ಯೆಯೆಲ್ಲಾ ಇರಲ್ಲ ಬಿಡಿ. ಯಾಕಂದ್ರೆ ಜಪಾನಿನಲ್ಲಿ ಇರೋ ಹಾಗೆಯೇ ಭಾರತದಲ್ಲೂ ಗರ್ಲ್‌ಫ್ರೆಂಡ್ ಬಾಡಿಗೆಗೆ ಸಿಗ್ತಾಳೆ. ಹಣ ಪಾವತಿಸಿ ಬಾಡಿಗೆ ಗೆಳತಿಯನ್ನು ಪಡೆಯಬಹುದಾಗಿದೆ. ಭಾರತದ ಮಹಿಳೆಯೊಬ್ಬಳು ತಾನು ಬಾಡಿಗೆಗೆ ಗರ್ಲ್‌ಫ್ರೆಂಡ್ ಆಗಲು ಲಭ್ಯವಿದ್ದೇನೆ ಎಂದು ಪೋಸ್ಟ್ ಹಾಕಿದ್ದು ಎಲ್ಲೆಡೆ ವೈರಲ್ ಆಗಿದೆ.
ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ಈ ಪರಿಕಲ್ಪನೆ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ನಿರ್ಧಿಷ್ಟ ಹಣವನ್ನು ಪಾವತಿಸಿ ಗರ್ಲ್‌ಫ್ರೆಂಡ್‌ನ್ನು ರೆಂಟ್ ಪಡೆದು ಎಲ್ಲಿ ಬೇಕಂದ್ರಲ್ಲಿ ಸುತ್ತಾಡ್ಬೋದು. ಈ ಬಾಡಿಗೆ ಸಂಬಂಧಗಳು ನಿಜವಾದ ಸಂಬಂಧವನ್ನು ಅನುಕರಿಸುವಂತೆಯೇ ಇರುತ್ತದೆ. ಉದಾಹರಣೆಗೆ ಡೇಟ್‌ಗೆ ಹೋಗುವುದು, ಒಟ್ಟಿಗೆ ಊಟ ಮಾಡುವುದು, ಇವೆಂಟ್‌ಗಳಿಗೆ ಹಾಜರಾಗುವುದು ಒಳಗೊಂಡಿರುತ್ತದೆ. ಇದು ಜಪಾನ್‌ನಲ್ಲಿ ಪರಿಚಿತ ಪರಿಕಲ್ಪನೆಯಾಗಿದ್ದರೂ, ಭಾರತದಲ್ಲಿ ಇದು ತುಂಬಾ ಅಪರೂಪ.
ಕಾನೂನು ಕಣ್ಣಿಗೆ ದಂಪತಿ, ಮನೇಲಿ ಸ್ನೇಹಿತರಷ್ಟೇ, ಹೆಚ್ಚಾಗಿದೆ ಫ್ರೆಂಡ್ಶಿಪ್ ಮದುವೆ ಟ್ರೆಂಡ್
ಹಾಗೆಯೇ ಭಾರತದ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಬಾಡಿಗೆ ಗರ್ಲ್‌ಫ್ರೆಂಡ್ ಆಗಲು ಲಭ್ಯವಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ರೇಟ್ ಚಾರ್ಟ್‌ನ್ನು ಪೋಸ್ಟ್ ಮಾಡಲಾಗಿದೆ. ಜಪಾನ್‌ನಲ್ಲಿ ಇರುವಂತೆಯೇ ಹಲವು ಸೇವೆಗಳು ಲಭ್ಯವಿದೆ ಎಂದು ಹೇಳಿದ್ದಾರೆ. ಇದು ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
undefined
ಇನ್‌ಸ್ಟಾಗ್ರಾಂನಲ್ಲಿ divya_giri ಪೇಜ್‌ನ ಮಹಿಳೆಯೊಬ್ಬರು ರೀಲ್‌ನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ 'ಸಿಂಗಲ್ ಡೇಟ್‌ಗೆ ಹೋಗಲು ಸಿದ್ಧರಿದ್ದೀರಾ, ನನ್ನನ್ನು ಬಾಡಿಗೆ ಪಡೆಯಿರಿ' ಎಂದು ಶೀರ್ಷಿಕೆ ನೀಡಲಾಗಿದೆ. ನಂತರ ವಿವಿಧ ರೀತಿಯ ಸೇವೆಗೆ ದರಗಳನ್ನು ವಿವರಿಸಿದ್ದಾರೆ. ಚಿಲ್ ಕಾಫಿ ಡೇಟ್‌ಗೆ 1500 ರೂ., ಡಿನ್ನರ್ ಡೇಟ್ ಮತ್ತು ಮೂವಿ ವೀಕ್ಷಣೆಗೆ 2000 ರೂ., ಬೈಕ್ ರೈಡ್‌ಗೆ 4000 ರೂ. ಸೇರಿದಂತೆ ಹತ್ತು ಸಾವಿರದ ವರೆಗೆ ಹಲವು ಸೇವೆಗಳು ಲಭ್ಯವಿದೆ.
ಬರ್ಗರ್ ನೀಡಿ ಯುವತಿ ಮನಗೆದ್ದ 20 ವರ್ಷದ ಹಿರಿಯ… ಪಾಕಿಸ್ತಾನದಲ್ಲಿ ಇಷ್ಟು ಅಗ್ಗವಾ ಪ್ರೀತಿ?
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, 'ಈ ಜಗತ್ತಿನಲ್ಲಿ ಏನಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಗರ್ಲ್‌ಫ್ರೆಂಡ್ ಬೇಕಾಗಿದ್ದಾಳೆ, ವಸ್ತುವಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಈ ಬಾಡಿಗೆ ಗರ್ಲ್‌ಫ್ರೆಂಡ್ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿರೋದಂತೂ ನಿಜ.