Latest Videos

ಬೆಳ್ಳಿಯ ದೇಗುಲದಲ್ಲಿ ಚಿನ್ನದ ವಿಗ್ರಹಗಳು; ಅನಂತ್ ರಾಧಿಕಾ ವೆಡ್ಡಿಂಗ್ ಕಾರ್ಡ್ ವಿಡಿಯೋ ವೈರಲ್

By Reshma RaoFirst Published Jun 27, 2024, 1:37 PM IST
Highlights

ದೇವಾಲಯದಂತಹ ಪೆಟ್ಟಿಗೆ, ಒಳಗೆ ನಾಲ್ಕೂ ದಿಕ್ಕಿನಲ್ಲಿ ಒಂದೊಂದು ಚಿನ್ನದ ದೇವರು.. ಹಿನ್ನೆಲೆಯಲ್ಲಿ ಮೊಳಗುವ ಮಂತ್ರಗಳು, ಮತ್ತೊಂದು ಚಿನ್ನ ಬೆಳ್ಳಿಯಿಂದ ಮಾಡಿದ್ದೆನ್ನಲಾದ ಕಾರ್ಡ್‌ನಲ್ಲಿ ವಿವಾಹ ವಿವರಗಳು..

ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹವು ಇತ್ತೀಚಿನ ದಿನಗಳಲ್ಲಿ ಪಟ್ಟಣದ ಚರ್ಚೆಯಾಗಿದೆ. ಜುಲೈ 12, 2024 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇವರಿಬ್ಬರು ವಿವಾಹವಾಗಲಿದ್ದಾರೆ. ದೇಶ ಮತ್ತು ವಿದೇಶದ ಗಣ್ಯರು ಇಬ್ಬರ ಮದುವೆಗೆ ಸಾಕ್ಷಿಯಾಗಲಿದ್ದಾರೆ. 
ವಿವಾಹ ಪೂರ್ವ ಕಾರ್ಯಕ್ರಮಗಳಂತೆ ಮದುವೆಯ ವಿಧಿವಿಧಾನಗಳೂ ಅದ್ಧೂರಿಯಾಗಿ ನಡೆಯಲಿವೆ. ಇತ್ತೀಚೆಗಷ್ಟೇ ಸಿಎಂ ಏಕನಾಥ್ ಶಿಂಧೆ ಅವರಿಗೆ ಮದುವೆ ಕಾರ್ಡ್ ನೀಡಲು ಮುಖೇಶ್ ಅಂಬಾನಿ ತೆರಳಿದ್ದರೆ, ನೀತಾ ಅಂಬಾನಿ ವಾರಣಾಸಿಗೆ ತೆರಳಿ ಕಾಶಿ ವಿಶ್ವನಾಥನಿಗೆ ಕಾರ್ಡ್ ನೀಡಿದ್ದರು.
ಮದುವೆಗೂ ಮುನ್ನ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಮದುವೆ ದಿನಾಂಕ ಸನ್ನಿಹಿತವಾಗಿದ್ದು ಮದುವೆ ಸಿದ್ಧತೆಗಳ ನಡುವೆಯೇ ಅಂಬಾನಿ ಕುಟುಂಬ ಮದುವೆ ಕಾರ್ಡ್‌ಗಳನ್ನು ವಿತರಿಸುತ್ತಿದೆ. ವಿವಿಐಪಿ ಅತಿಥಿಗಳಿಗೆ ಕುಟುಂಬ ಸದಸ್ಯರೇ ಕಾರ್ಡ್ ನೀಡುತ್ತಿದ್ದಾರೆ. ಇದರೊಂದಿಗೆ ಕಾರ್ಡ್‌ನ ಮೊದಲ ನೋಟವೂ ಹೊರಬಿದ್ದಿದ್ದು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಆಮಂತ್ರಣವು ತುಂಬಾ ವಿಶೇಷವಾಗಿದೆ.

ಅಂಗಾಲಿಗೆ ಬೆಳ್ಳುಳ್ಳಿ ತಿಕ್ಕೋ ವಿಡಿಯೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರ ...
 

ಮದುವೆಯ ಆಮಂತ್ರಣವು ದೀಪಗಳಿಂದ ಅಲಂಕರಿಸಲ್ಪಟ್ಟ ವಿಶೇಷ ಬಾಕ್ಸ್ ಮತ್ತು ಕೆಂಪು ಬಣ್ಣದ ಅಲಂಕಾರಿಕ ದೇವಾಲಯದಂಥ ರಚನೆ ಹೊಂದಿದೆ. ಇದನ್ನು ತೆರೆದಾಗ ಹಿನ್ನೆಲೆಯಲ್ಲಿ ಶ್ಲೋಕ ಮೊಳಗುತ್ತದೆ. ಒಳಗೆ ಬೆಳ್ಳಿಯ ದೇಗುಲವಿದೆ. ಅದರ ನಾಲ್ಕೂ ದಿಕ್ಕಿನಲ್ಲಿ ಚಿನ್ನದ ವಿಗ್ರಹಗಳನ್ನು ಕಾಣಬಹುದು. ಭಗವಾನ್ ಗಣಪತಿ, ರಾಧಾ-ಕೃಷ್ಣ ಮತ್ತು ದುರ್ಗಾದೇವಿಯನ್ನು ಕಾಣಬಹುದು. ಇದು ನಿಜವಾಗಿಯೂ ಶ್ರೇಷ್ಠತೆ ಮತ್ತು ಸಂಪ್ರದಾಯದ ಮೇರುಕೃತಿಯಾಗಿದೆ.

ಮತ್ತೊಂದು ಆಮಂತ್ರಣ ಪತ್ರಿಕೆಯಾಗಿದ್ದು, ದೇಗುಲದ ಬೆಳ್ಳಿಯ ಬಾಗಿಲನ್ನು ತೆರೆದಂತೆ ಕಾರ್ಡನ್ನು ಓಪನ್ ಮಾಡಿದ ಕೂಡಲೇ ಗಣೇಶ, ವಿಷ್ಣು, ಲಕ್ಷ್ಮಿ, ರಾಧಾ-ಕೃಷ್ಣ ಮತ್ತು ದುರ್ಗಾ ದೇವತೆ ಸೇರಿದಂತೆ ಹಲವಾರು ಹಿಂದೂ ದೇವತೆಗಳ ವಿವರಗಳು ಮತ್ತು ಚಿತ್ರಗಳನ್ನು ಕಾಣಬಹುದು. ಇದರಲ್ಲಿ ಅನಂತ್ ರಾಧಿಕಾ ವಿವಾಹ ಸಮಾರಂಭದ ವಿವರಗಳಿವೆ. ಅನಂತ್ ಮತ್ತು ರಾಧಿಕಾ ಅವರ ಮೊದಲಕ್ಷರಗಳನ್ನು ಹೊಂದಿರುವ ಈ ಕಾರ್ಡ್‌ಗೆ ಇನ್ನೂ ಅನೇಕ ಸಣ್ಣ ಕಾರ್ಡ್‌ಗಳನ್ನು ಲಗತ್ತಿಸಲಾಗಿದೆ ಮತ್ತು ಅದರೊಂದಿಗೆ ಅನೇಕ ಉಡುಗೊರೆಗಳನ್ನು ಸಹ ಇರಿಸಲಾಗಿದೆ.

ಬಿಕಿನಿಯಲ್ಲಿ ಶರ್ಮಿಳಾ ಟ್ಯಾಗೋರ್ ಶೂಟಿಂಗ್; ಪತಿ ಮನ್ಸೂರ್ ಅಲಿ ಖಾನ್ ಪ ...
 

ಶುಕ್ರವಾರ, ಜುಲೈ 12ರಂದು ವಿವಾಹ ಸಮಾರಂಭದೊಂದಿಗೆ ಪ್ರಮುಖ ಸಮಾರಂಭಗಳು ಪ್ರಾರಂಭವಾಗುತ್ತವೆ. ಇದರ ನಂತರ ಜುಲೈ 13ರಂದು ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಸಮಾರಂಭ ನಡೆಯಲಿದೆ ಮತ್ತು ಜುಲೈ 14ರಂದು ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ವೀಡಿಯೊವನ್ನು ಇಲ್ಲಿ ಪರಿಶೀಲಿಸಿ:

 

 
 
 
 
 
 
 
 
 
 
 
 
 
 
 

A post shared by Zoom TV (@zoomtv)

ಈ ವರ್ಷದ ಜೂನ್‌ನಲ್ಲಿ, ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಯುರೋಪ್‌ನಲ್ಲಿ ಐಷಾರಾಮಿ ವಿಹಾರದಲ್ಲಿ ಎರಡನೇ ಪೂರ್ವ ವಿವಾಹ ಸಮಾರಂಭವನ್ನು ನಡೆಸಿದರು. ಇದಕ್ಕಾಗಿ ಅಂಬಾನಿ ಕುಟುಂಬ ಸುಮಾರು 1200 ಅತಿಥಿಗಳನ್ನು ಆಯೋಜಿಸಿತ್ತು. ಇದಕ್ಕೂ ಮೊದಲು, ಅಂಬಾನಿ ಕುಟುಂಬವು ಈ ವರ್ಷದ ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ವಿವಾಹಪೂರ್ವ ಕಾರ್ಯಕ್ರಮವನ್ನು ಆಯೋಜಿಸಿತ್ತು

click me!