ಮೊಮ್ಮಗ ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮುಕೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಭಾವುಕ ಮಾತು

Published : Jan 21, 2023, 02:40 PM ISTUpdated : Jan 21, 2023, 02:42 PM IST
ಮೊಮ್ಮಗ ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮುಕೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಭಾವುಕ ಮಾತು

ಸಾರಾಂಶ

ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಇಂದು ನೆರವೇರಿದೆ. ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್‌ಮೆಂಟ್ ನಡೆದಿದೆ. ಗುಜರಾತಿ ಸಂಪ್ರದಾಯ ಪ್ರಕಾರ ನಡೆದ ಈ ನಿಶ್ಚಿತಾರ್ಥ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant and Anant Ambani) ಅವರ ಬಹುನಿರೀಕ್ಷಿತ ನಿಶ್ಚಿತಾರ್ಥ ಸಮಾರಂಭವು ಅಂಬಾನಿ ನಿವಾಸ 'ಆಂಟಿಲಿಯಾ'ದಲ್ಲಿ ಅದ್ಧೂರಿಯಾಗಿ ನಡೆದಿದೆ. ಗ್ಲಾಮರ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳು ದಂಪತಿಯನ್ನು ಅಭಿನಂದಿಸಲು ಸಮಾರಂಭಕ್ಕೆ ಆಗಮಿಸಿದ್ದರು. 

ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮುಕೇಶ್ ಅಂಬಾನಿ ಮನೆಯಲ್ಲಿ ಸಂಭ್ರಮದ ವಾತಾವರಣ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ (Engagement) ನೆರವೇರಿದೆ. ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಎಂಗೇಜ್‌ಮೆಂಟ್ ನಡೆದಿದೆ. ಮುಕೇಶ್ ಅಂಬಾನಿ ಆ್ಯಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತರ ಸಮ್ಮುಖದಲ್ಲಿ ಗುಜರಾತಿ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಂಡಿದ್ದಾರೆ. ಗ್ಲಾಮರ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳು ದಂಪತಿಯನ್ನು ಅಭಿನಂದಿಸಲು ಸಮಾರಂಭಕ್ಕೆ ಆಗಮಿಸಿದ್ದರು.

ದೀಪಿಕಾ-ರಣ್ವೀರ್, ಐಶ್ವರ್ಯಾ, ಸಲ್ಮಾನ್, ಕತ್ರಿನಾ; ಅನಂತ್ ಅಂಬಾನಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

ಗುಜರಾತಿ ಹಿಂದೂ ಕುಟುಂಬದ ಸಂಪ್ರದಾಯದ ಪ್ರಕಾರ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯ (Tradition)ಗಳನ್ನು ಅನುಸರಿಸಿ,  ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಗೋಲ್ ಧನ ಎಂಬುದರ ಅಕ್ಷರಶಃ ಅರ್ಥ ಬೆಲ್ಲ ಮತ್ತು ಕೊತ್ತಂಬರಿ ಬೀಜಗಳು. ಅಂದ ಹಾಗೆ ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ (Marriage) ಮುಂಚಿನ ಸಮಾರಂಭವಾಗಿದೆ. ವರನ ಸ್ಥಳದಲ್ಲಿ ಈ ವಸ್ತುಗಳನ್ನು ವಿತರಿಸಲಾಗುತ್ತದೆ. ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಆಗಮಿಸುತ್ತಾರೆ. ಬಳಿಕ ಅನಂತ್ ಅಂಬಾನಿ ಹಾಗೂ ರಾಧಿಕಾ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡರು.

ಶ್ರೀಮಂತ ಉದ್ಯಮಿಯ ಮಗನ ನಿಶ್ಚಿತಾರ್ಥವಾಗಿರುವ ಕಾರಣ ಕಾರ್ಯಕ್ರಮದಲ್ಲಿ ಎಲ್ಲವೂ ವಿಶೇವಾಗಿತ್ತು. ಹಾಗೆಯೇ ಎಲ್ಲರ ಗಮನ ಸೆಳೆದಿದ್ದು ಮೊಮ್ಮಗ ಅನಂತ್ ಅವರ ನಿಶ್ಚಿತಾರ್ಥದಲ್ಲಿ ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಭಾವನಾತ್ಮಕ ಭಾಷಣ ಮಾತುಗಳು.

ಸಮಾರಂಭದಲ್ಲಿ, ಅನಂತ್ ಅವರ ಅಕ್ಕ ಇಶಾ ಅಂಬಾನಿ ಅವರು ರಾಧಿಕಾ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಕೋಕಿಲಾಬೆನ್ ಅವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್‌, 'ಶ್ಲೋಕಾ ಮೆಹ್ತಾ (ಆಕಾಶ್ ಅಂಬಾನಿ ಅವರ ಪತ್ನಿ), ರಾಧಿಕಾ ಮರ್ಚೆಂಟ್ ಮತ್ತು ಇಶಾ ಅಂಬಾನಿ ಅವರನ್ನು ಹೊಂದಲು ನಾನು ಅದೃಷ್ಟಶಾಲಿ' ಎಂದು ಹೇಳಿದ್ದಾರೆ. 'ನಾನು ತುಂಬಾ ಅದೃಷ್ಟಶಾಲಿ, ನನ್ನ ಬಳಿ ಶ್ಲೋಕವಿದೆ, ನನ್ನ ಬಳಿ ರಾಧಿಕಾ ಇದ್ದಾಳೆ, ನನಗೆ ಇಶಾ ಇದ್ದಾಳೆ. ನಾನು ಅದೃಷ್ಟಶಾಲಿ' ಎಂದು ಕೋಕಿಲಾಬೆನ್ ಭಾವುಕರಾಗಿ ನುಡಿದರು.

Anant Ambani Engagement; ದೀಪಿಕಾ ಧರಿಸಿದ ಸೀರೆಯ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರ, ಲಕ್ಷಕ್ಕೂ ಅಧಿಕ

ಅನಂತ್ ಮತ್ತು ರಾಧಿಕಾ ಕೆಲ ವರ್ಷಗಳಿಂದ ಪರಿಚಿತರು. ಕುಟುಂಬಗಳು 2019ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದವು.
ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಇಶಾ ಅಂಬಾನಿ ಮುಂಭಾಗದ ಸ್ಲಿಟ್ ಅನಾರ್ಕಲಿ ಧರಿಸಿದ್ದರು. ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಹೂವಿನ ಕಸೂತಿ ಲೆಹೆಂಗಾವನ್ನು ಧರಿಸಿದ್ದರು. ಅದ್ಧೂರಿ ಸಮಾರಂಭದಲ್ಲಿ ನಟ ಶಾರುಖ್ ಖಾನ್ ಮತ್ತು ಅವರ ಮಗ ಆರ್ಯನ್ ಖಾನ್ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರೆ, ಗೌರಿ ಖಾನ್ ಬೆಳ್ಳಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಹ ಎಲ್ಲರ ಗಮನ ಸೆಳೆದರು. ದೀಪಿಕಾ ಕೆಂಪು ಸೀರೆಯಲ್ಲಿ ಮತ್ತು ರಣವೀರ್ ಕಡು ನೀಲಿ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನಿಶ್ಚಿತಾರ್ಥದ ಕೆಲವು ದಿನಗಳ ಮೊದಲು, ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ, ರಾಧಿಕಾ ಮರ್ಚೆಂಟ್ ಮೆಹೆಂದಿ ಸಮಾರಂಭದಲ್ಲಿ ತಮ್ಮ ಪ್ರದರ್ಶನದ ಮೂಲಕ ಅತಿಥಿಗಳನ್ನು ಆಕರ್ಷಿಸಿದರು. ಅವರು 2019 ರ ಕಲಾಂಕ್ ಚಿತ್ರದ 'ಘರ್ ಮೋರ್ ಪರ್ದೇಸಿಯಾ' ಹಾಡಿನಲ್ಲಿ ನೃತ್ಯ ಮಾಡಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?