ದಾಂಪತ್ಯ: ಕೋಪ ಮಾಡ್ಕೊಂಡು ಬೇರೆ ಮಲಗಿದರೆ ಸಿಗುತ್ತಾ ಪರಿಹಾರ?

By Suvarna NewsFirst Published Jan 21, 2023, 12:40 PM IST
Highlights

ಪತಿ ಮತ್ತು ಪತ್ನಿ ಬೇರೆ ಬೇರೆ ಮಲಗೋದ್ರಲ್ಲಿ ತಪ್ಪೇನಿಲ್ಲ. ಇದು ದಂಪತಿ ಮನಸ್ಥಿತಿಯನ್ನು ಅವಲಂಭಿಸಿದೆ. ಪ್ರತ್ಯೇಕವಾಗಿ ಮಲಗೋದು ಕೆಲವರ ಸಂಬಂಧ ಬಲಪಡಿಸಿದ್ರೆ ಮತ್ತೆ ಕೆಲವರ ಗಲಾಟೆ ಹೆಚ್ಚಿಸುತ್ತೆ.
 

ದಂಪತಿ ಮಧ್ಯೆ ಗಲಾಟೆ, ಕಿತ್ತಾಟ ಸಾಮಾನ್ಯ. ಜಗಳವಾಡ್ದೆ ಸಂಸಾರ ನಡೆಸ್ತೇವೆ ಅನ್ನೋರು ಬಹಳ ಅಪರೂಪ. ಪ್ರೀತಿ ಇದ್ದಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಕೋಪ ಬರೋದು ಸಹಜ. ಗಂಡ – ಹೆಂಡತಿ ಮಧ್ಯೆ ನಡೆಯುವ ಜಗಳ ಉಂಡು ಮಲಗುವವರೆಗೆ ಎನ್ನುವ ಮಾತಿದೆ. ಆದ್ರೆ ಈ ಜಗಳ ಒಂದು ದಿನದ ಬದಲು ವಾರಗಟ್ಟಲೆ ಮುಂದುವರಿದಾಗ ಸ್ವಲ್ಪ ಗಂಭೀರವಾಗಿ ಆಲೋಚನೆ ಮಾಡ್ಬೇಕಾಗುತ್ತದೆ. ಯಾಕೆಂದ್ರೆ ಈ ದೀರ್ಘ ಜಗಳ ಸಂಬಂಧ ಹಾಳು ಮಾಡುವ ಸಾಧ್ಯತೆಯಿರುತ್ತದೆ. 

ಗಂಡ – ಹೆಂಡತಿ ಜಗಳ (Fight) ವಾಡಿದ ದಿನ ಬೇರೆ ಬೇರೆ ರೂಮಿ (Room) ನಲ್ಲಿ ಮಲಗಿದ್ರೆ ಇದು ಅಪಾಯಕಾರಿ ಎನ್ನುವವರು ಕೆಲವರಿದ್ದಾರೆ. ಆದ್ರೆ ಮತ್ತೆ ಕೆಲವರು ಜಗಳವಾಡಿದ್ಮೇಲೆ ಪ್ರತ್ಯೇಕವಾಗಿ ಮಲಗೋದ್ರಿಂದ ಲಾಭವಿದೆ ಎನ್ನುತ್ತಾರೆ. ದೀರ್ಘ ಕಾಲ ಒಟ್ಟಿಗೆ ಇರುವ ದಂಪತಿ ನಾಲ್ಕೈದು ದಿನ ದೂರವಿದ್ದು ಮತ್ತೆ ಹತ್ತಿರವಾದ್ರೆ ಅವರಲ್ಲಿ ಪ್ರೀತಿ (Love) ದುಪ್ಪಟ್ಟಾಗಿರುತ್ತದೆ. ಇದೇ ರೀತಿ ಜಗಳವಾಡಿದ ದಿನ ಪ್ರತ್ಯೇಕವಾಗಿ ಮಲಗಿದ್ರೆ ಸಂಬಂಧ ಬಲಪಡೆಯುತ್ತದೆಯಂತೆ. ನಾವೇನು ಕಳೆದುಕೊಂಡಿದ್ದೇವೆ ಎಂಬುದು ಪರಸ್ಪರ ಅರಿವಿಗೆ ಬರುತ್ತದೆಯಂತೆ. ಜಗಳವಾಡಿ ಪ್ರತ್ಯೇಕವಾಗಿ ಮಲಗಿದ ಕೆಲವರು ಪರ ಮತ್ತು ವಿರೋಧ  ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

ಒಂಟಿಯಾಗಿದ್ರೆ ಮನಸ್ಸು ಶಾಂತಗೊಳ್ಳುತ್ತೆ : ಈ ಮಹಿಳೆ ಪತಿ ಜೊತೆ ಜಗಳವಾಡಿದ ನಂತ್ರ ಪ್ರತೇಕವಾಗಿರಲು ಬಯಸ್ತಾಳಂತೆ. ಸ್ವಲ್ಪ ಸಮಯ ಅಥವಾ ಒಂದು ಇಡೀ ರಾತ್ರಿ ಪತಿಯಿಂದ ದೂರವಿದ್ರೆ ಮನಸ್ಸು ಶಾಂತವಾಗುತ್ತದೆ. ಜಗಳದ ನಂತ್ರ ನನಗೆ ವೈಯಕ್ತಿಕ ಸಮಯದ ಅಗತ್ಯವಿರುತ್ತದೆ. ಆದ್ರೆ ನನ್ನ ಪತಿಗೆ ಇದು ಅರ್ಥವಾಗೋದಿಲ್ಲ. ನಾನು ಪ್ರತ್ಯೇಕವಾಗಿ ಮಲಗಿದ್ರೆ ಆತ ಮತ್ತಷ್ಟು ಗಲಾಟೆ ಮಾಡ್ತಾನೆ. ಇದ್ರಿಂದ ಜಗಳ ಹೆಚ್ಚಾಗುತ್ತದೆ ಎನ್ನುತ್ತಾಳೆ ಮಹಿಳೆ.    

ಈ ಬುಡಕಟ್ಟು ಮಹಿಳೆಯರನ್ನು ಮದ್ವೆಯಾಗಲು ತುದಿಗಾಲಲ್ಲಿ ನಿಂತಿರ್ತಾರಂತೆ ಜನ!

ಪ್ರತ್ಯೇಕವಾಗಿ ಮಲಗೋದು ಪ್ರೀತಿ ಹೆಚ್ಚಿಸುತ್ತದೆ : ಪತ್ನಿ ಜೊತೆ ಜಗಳವಾದ್ರೆ ನಾನು ರೂಮ್ ಬದಲಿಸುತ್ತೇನೆ ಎನ್ನುತ್ತಾನೆ ಈ ವ್ಯಕ್ತಿ. ಸ್ವಲ್ಪ ಸಮಯ ದೂರ ಹೋದರೆ ಮನದಲ್ಲಿ ಪ್ರೀತಿ ಹೆಚ್ಚುತ್ತದೆ.  ಸಂಗಾತಿ ಜೊತೆ ಸ್ವಲ್ಪ ಸಮಯ ಮಾತನಾಡದೆ ಇರುವ ಕಾರಣ ಮಾತನಾಡುವ ಬಯಕೆಯಾಗುತ್ತದೆ. ಅಲ್ಲದೆ ಕೋಪದಲ್ಲಿ ಪ್ರತ್ಯೇಕವಾಗಿ ಮಲಗುವುದು ಹೆಚ್ಚು ಜಗಳವಾಡುವವರಿಗೆ ಉತ್ತಮ ಪಾಠವಾಗಿದೆ ಎನ್ನುತ್ತಾನೆ ಆತ.  

ಪ್ರತ್ಯೇಕವಾಗಿ ಮಲಗೋದು ಅಂತರ ಹೆಚ್ಚಿಸುತ್ತೆ ಎನ್ನುತ್ತಾಳೆ ಈಕೆ : ಜಗಳವಾದ್ಮೇಲೆ ಸಮಸ್ಯೆ ಏನಾಗಿದೆ ಎಂಬುದನ್ನು ಆ ಕ್ಷಣದಲ್ಲಿ ಬಗೆಹರಿಸಿಕೊಳ್ಳಬೇಕು. ಜಗಳವಾದ ತಕ್ಷಣ ಇಬ್ಬರು ವಿರುದ್ಧ ದಿಕ್ಕಿಗೆ ನಡೆದ್ರೆ ಆ ಕ್ಷಣಕ್ಕೆ ಗಲಾಟೆ ಕಡಿಮೆಯಾಗಿರುತ್ತದೆ. ಆದ್ರೆ ಮನಸ್ಸಿನಲ್ಲಿ ಜ್ವಾಲೆ ಹಾಗೇ ಇರುತ್ತದೆ. ನನ್ನ ಪ್ರಕಾರ, ಸಮಸ್ಯೆಯನ್ನು ತಕ್ಷಣ ಬಗೆಹರಿಸಿಕೊಳ್ಳುವುದು ಉತ್ತಮ ಎನ್ನುತ್ತಾಳೆ.   

ಕೋಪ ಬಂದಾಗ ನಡೆಯುವ ಚರ್ಚೆ ಗಲಾಟೆ ಹೆಚ್ಚಿಸುತ್ತದೆ : ಈ ಮಹಿಳೆ ಕೋಪ ಬಂದ್ರೆ ತಕ್ಷಣ ಬೇರೆ ರೂಮಿಗೆ ಹೋಗಿ ಮಲಗ್ತಾಳಂತೆ. ರಾತ್ರಿಯಿಡಿ ಒಂಟಿಯಾಗಿ ಮಲಗಿದ ನಂತ್ರ ಮನಸ್ಸು ತಿಳಿಯಾಗುತ್ತದೆ. ಬೆಳಿಗ್ಗೆ ಇಬ್ಬರೂ ಫ್ರೆಶ್ ಆಗಿರ್ತೇವೆ. ಯಾಕೆ ಗಲಾಟೆಯಾಗಿದೆ ಎಂಬುದನ್ನು ತಿಳಿದು, ಅದನ್ನು ಬಗೆಹರಿಸಿಕೊಳ್ತೆವೆ ಎನ್ನುತ್ತಾಳೆ.   

ಮಕ್ಕಳ ಮನಸ್ಸಲ್ಲಿ ಧನಾತ್ಮಕ ಚಿಂತನೆ ಬೆಳೆಸುವುದು ಹೀಗೆ

ಸಂಬಂಧದಲ್ಲಿ ಆಸಕ್ತಿ ಕಡಿಮೆಯಾದಂತೆ : ಜಗಳವಾದ ನಂತ್ರ ಪ್ರತ್ಯೇಕವಾಗಿ ಮಲಗುವ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ಅಭಿಪ್ರಾಯವಿದೆ. ಈ ಮಹಿಳೆ ಬೇರೆ ರೂಮ್ ಸೇರೋದನ್ನು ನಿರಾಕರಿಸ್ತಾಳೆ. ಸಂಗಾತಿ ಸಮಸ್ಯೆ ಬಗೆಹರಿಸದೆ ಮಲಗಿದ್ರೆ ಕೋಪ ನೆತ್ತಿಗೇರುತ್ತದೆ. ಎಷ್ಟು ಕೋಪ ಮಾಡಿಕೊಂಡರೂ ಪರವಾಗಿಲ್ಲ. ಮಲಗುವ ಮುನ್ನ ಸಮಸ್ಯೆಯನ್ನು ಪರಿಹರಿಸುವುದು ಬಹಳ ಮುಖ್ಯ ಎನ್ನುತ್ತಾಳೆ ಆಕೆ. ಮರುದಿನದವರೆಗೆ ಇದನ್ನು ಎಳೆಯಲು ಸಾಧ್ಯವಿಲ್ಲ. ಹಾಗೆಯೇ ಇದನ್ನು ಮುಂದೂಡೋದು ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂಬುದನ್ನು ತೋರಿಸುತ್ತದೆ ಎನ್ನುತ್ತಾಳೆ ಈ ಮಹಿಳೆ. 
 

click me!