ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದಿರುವುದು, ಸಾಧ್ಯವಾದಷ್ಟು ವರ್ತಮಾನದಲ್ಲಿ ಬದುಕುವುದು, ಇತರರ ಅನಿಸಿಕೆ ಆಧರಿಸಿ ನಮ್ಮ ನಿರ್ಧಾರ ರೂಪುಗೊಳ್ಳದಿರುವುದು ಇವೆಲ್ಲವೂ ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ತೋರಿಸುತ್ತವೆ. ಜತೆಗೇ, ಇನ್ನೂ ಹಲವು ಅಂಶಗಳು ಹೆಚ್ಚುತ್ತಿದ್ದರೆ ಆತ್ಮವಿಶ್ವಾಸವೂ ಹೆಚ್ಚುತ್ತಿದೆ ಎನ್ನುವುದನ್ನು ಗುರುತಿಸಬಹುದು.
ಆತ್ಮವಿಶ್ವಾಸ ಹೊಂದಿರುವುದು ಇಂದಿನ ಕಾಲದಲ್ಲಿ ಅತ್ಯಗತ್ಯ. ಮಹಿಳೆಯರಾಗಲೀ, ಪುರುಷರಾಗಲಿ ಆತ್ಮವಿಶ್ವಾಸ ಹೊಂದಿರುವುದರಿಂದ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ಜೀವನದಲ್ಲಿ ಸಾಕಷ್ಟು ಅವಕಾಶ ಲಭ್ಯವಾಗುವುದು ನಮ್ಮ ಈ ಗುಣವನ್ನೇ ಆಧರಿಸಿದೆ ಎಂದರೆ ತಪ್ಪಲ್ಲ. ಆತ್ಮವಿಶ್ವಾಸ ಗಳಿಸಿಕೊಳ್ಳಲು ಹಲವರು ಹಲವು ರೀತಿಯ ಪ್ರಯತ್ನವನ್ನೂ ನಡೆಸುತ್ತಾರೆ. ಕೆಲವರಿಗೆ ಈ ಗುಣ ಜನ್ಮಜಾತವಾಗಿಯೇ ಬಂದಿರುತ್ತದೆ. ಬೆಳೆದ ಪರಿಸರ, ಪಾಲಕರ ಧೋರಣೆ, ಸ್ವಭಾವ ಎಲ್ಲವನ್ನೂ ಅವಲಂಬಿಸಿ ಈ ಗುಣ ಬೆಳೆಯುತ್ತದೆ. ಶಾಲೆ-ಕಾಲೇಜುಗಳ ಭಾಷಣಗಳಲ್ಲಿ “ಆತ್ಮವಿಶ್ವಾಸ ಬೆಳೆಸಿಕೊಳ್ಳಿʼ ಎಂದು ಕರೆ ನೀಡುವುದು ಅತಿ ಸಾಮಾನ್ಯ. ಆದರೆ, ಬೆಳೆಸಿಕೊಳ್ಳುವುದು ಹೇಗೆ ಎನ್ನುವದಕ್ಕೆ ಸಿಂಪಲ್ಲಾಗಿ ಉತ್ತರವಿದೆ. ಸಮಾನ ವಯಸ್ಕರ ಜತೆ ಆಟ-ಪಾಠಗಳ ಮೂಲಕ, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಚೆನ್ನಾಗಿ ಮಾಡುವ ಮೂಲಕ, ಜೀವನದ ಆ ಸಮಯಕ್ಕೆ ಏನು ಅಗತ್ಯವೋ ಆ ಕೌಶಲವನ್ನು ಪಡೆಯುವ ಮೂಲಕ ಆತ್ಮವಿಶ್ವಾಸ ಗಳಿಸಬಹುದು. ನಿಮಗೆ ನೀವು ಆತ್ಮವಿಶ್ವಾಸಿಗಳು ಹೌದೋ ಅಲ್ಲವೋ ಎನ್ನುವ ಕುರಿತು ಗೊಂದಲವಿದೆಯೇ? ಕೆಲವೊಮ್ಮೆ ಈ ಪ್ರಶ್ನೆಗೆ ಸರಿಯಾದ ಉತ್ತರ ಹೇಳಲು ಗೊತ್ತಾಗುವುದಿಲ್ಲವೇ? ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ ಎನ್ನುವುದನ್ನು ಕೆಲವು ಅಂಶಗಳ ಮೂಲಕ ಗುರುತಿಸಿಕೊಳ್ಳಬಹುದು.
• ಮೆಚ್ಚುಗೆಯನ್ನು (Compliments) ಸಂತೋಷದಿಂದ ಸ್ವೀಕಾರ (Accept) ಮಾಡುತ್ತೀರಾ?
ಕೆಲವೊಮ್ಮೆ ಸ್ನೇಹಿತರು (Friends), ಕುಟುಂಬಸ್ಥರು ತೋರುವ ಮೆಚ್ಚುಗೆಯನ್ನು ಖುಷಿಯಾಗಿ (Happy) ಸ್ವೀಕರಿಸುತ್ತೀರಾ? ನಿಮ್ಮ ಬಗ್ಗೆ ಯಾವುದೇ ವಿಚಾರದ ಬಗ್ಗೆ ಅವರು ಕಾಂಪ್ಲಿಮೆಂಟ್ ಮಾಡಿರಬಹುದು, ಅದನ್ನು ಮುಕ್ತಮನದಿಂದ ಸ್ವೀಕಾರ ಮಾಡುತ್ತೀರಿ ಎಂದಾದರೆ ನಿಮ್ಮಲ್ಲಿ ಆತ್ಮವಿಶ್ವಾಸವಿದೆ (Self Confidence) ಎನ್ನಬಹುದು. ಆತ್ಮವಿಶ್ವಾಸ ಇಲ್ಲವಾದರೆ ಉತ್ತಮ ಮೆಚ್ಚುಗೆ ಸ್ವೀಕರಿಸಲು ಸಹ ಕಂಫರ್ಟ್ (Comfort) ಎನಿಸುವುದಿಲ್ಲ.
undefined
Relationship Tips: ನಿಮ್ಮ& ಅವರ ಕೆಮಿಸ್ಟ್ರಿ ಚೆನ್ನಾಗಿದ್ಯಾ? ತಿಳ್ಕೊಳೋದು ಹೇಗೆ?
• ನಿಮ್ಮ ಬಗ್ಗೆ ನಿಮಗೆ ಖುಷಿ
ನಿಮ್ಮ ಖುಷಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಗಳಿಗೆ ಬರುವ ಕಮೆಂಟ್ ಗಳನ್ನು ಆಧರಿಸಿದೆಯೇ? ಅಥವಾ ಯಾರೂ ಮೆಚ್ಚುಗೆ ವ್ಯಕ್ತಪಡಿಸದೇ ಇದ್ದಾಗಲೂ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇದೆಯೇ? ಒಂದೊಮ್ಮೆ, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದಾದರೆ, ನೀವು ಇತರರ ಅನುಮತಿಗಾಗಿ (Approval) ಕಾಯುತ್ತಿಲ್ಲ, ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇಲ್ಲ ಎಂದರ್ಥ.
• ಸಂಬಂಧಗಳು ಉತ್ತಮ (Relationship is Good)
ಆತ್ಮವಿಶ್ವಾಸ ಇಲ್ಲದೆ ಸೊರಗುವವರ ಸಂಬಂಧಗಳು ಚೆನ್ನಾಗಿರುವುದು ಕಷ್ಟ. ಉತ್ತಮ ಸಂಬಂಧಗಳು ನಮ್ಮ ಮಾನಸಿಕ ಸ್ಥಿತಿಗೆ (Mental Status) ಸಂಬಂಧಿಸಿವೆ. ಅಧ್ಯಯನಗಳ (Study) ಪ್ರಕಾರ, ಆತ್ಮವಿಶ್ವಾಸವುಳ್ಳವರ ಸಾಮಾಜಿಕ ಸಂಬಂಧ (Social Relation) ಉತ್ತಮವಾಗಿರುತ್ತದೆ. ಕೀಳರಿಮೆ ಹೊಂದಿರುವವರು ಮತ್ತು ಮಾನಸಿಕವಾಗಿ ಭಾರ ಹೊತ್ತಂತೆ ಮಾಡುವವರು ಸಂಬಂಧಗಳನ್ನು ಕೆಟ್ಟದಾಗಿ ನಿಭಾಯಿಸುತ್ತಾರೆ.
• ನಿಮ್ಮ ಪರಿಸ್ಥಿತಿಗೆ (Situation) ಜವಾಬ್ದಾರಿ (Responsibility) ಹೊರುತ್ತೀರಾ?
ಎಲ್ಲ ಬಾರಿಯೂ ನಾವು ಅಂದುಕೊಂಡಿರುವುದು ಸಾಧ್ಯವಾಗುವುದಿಲ್ಲ. ಸಾಕಷ್ಟು ಬಾರಿ ಹಿನ್ನಡೆ, ಸೋಲುಗಳು ಎದುರಾಗಬಹುದು. ಅಂತಹ ಸಮಯದಲ್ಲಿ ನಿಮ್ಮ ಪರಿಸ್ಥಿತಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿಕೊಳ್ಳುತ್ತೀರಾ ಅಥವಾ ಮತ್ತೊಬ್ಬರನ್ನು ದೂಷಣೆ (Blame) ಮಾಡುತ್ತೀರಾ? ನೀವು ಈಗ ಯಾವುದೇ ಪರಿಸ್ಥಿತಿಯಲ್ಲಿರಲಿ, ಅದಕ್ಕೆ ನೀವೇ ಜವಾಬ್ದಾರಿ ಎಂದು ಭಾವಿಸುತ್ತೀರಿ ಎಂದಾದರೆ ನಿಮ್ಮಲ್ಲಿ ಆತ್ಮವಿಶ್ವಾಸವಿದೆ ಎಂದರ್ಥ. ತಮ್ಮ ಬಗ್ಗೆ ನಂಬಿಕೆ ಇಲ್ಲದವರು ಇತರರನ್ನು ದೂಷಿಸುತ್ತ ಸಮಯ ಕಳೆಯುತ್ತಾರೆ. ನಿಮಗೆ ಗೊತ್ತೇ? ಆತ್ಮವಿಶ್ವಾಸ ಹಾಗೂ ನಿಯಂತ್ರಣ (Control) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜವಾಬ್ದಾರಿ ಸ್ವೀಕರಿಸುತ್ತೀರಿ ಎಂದಾದರೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಲ್ಲಿರಿ ಎಂದರ್ಥ.
Relationship Tips : ನಶೆಯಲ್ಲಿ ಸೆಕ್ಸ್ ಇಷ್ಟವಾದ್ರೂ, ಭವಿಷ್ಯದಲ್ಲಿದೆ ಹಬ್ಬ!
• ಕಲಿಯುತ್ತ (Learn) ಸಾಗುವ ಬುದ್ಧಿ
ಜೀವನದಲ್ಲಿ ಕಲಿಕೆ ಎನ್ನುವುದು ಮುಗಿಯುವುದಿಲ್ಲ. ಎಲ್ಲರೂ ಎಲ್ಲ ಜ್ಞಾನವನ್ನೂ ಹೊಂದಿರುವುದು ಸಾಧ್ಯವಿಲ್ಲ. ಈ ಸರಳ ಸತ್ಯವನ್ನು ಒಪ್ಪಿಕೊಂಡು ಪ್ರತಿ ಹಂತದಲ್ಲೂ ಕಲಿಯುತ್ತ, ಹೊಸ ವಿಷಯಗಳನ್ನು ಅರಿಯುತ್ತ ಸಾಗುವ ಗುಣ ನಿಮ್ಮಲ್ಲಿದೆ ಎಂದಾದರೆ ನೀವು ಸರಿಯಾದ ಮಟ್ಟದ ಆತ್ಮವಿಶ್ವಾಸ ಹೊಂದಿದ್ದೀರಿ ಎಂದರ್ಥ. ಇಲ್ಲಿ ಸರಿಯಾದ ಮಟ್ಟ ಎಂದರೆ, ನೀವು ಹಠಮಾರಿಗಳೂ (Arrogant) ಅಲ್ಲ, ಬರೀ ಆತ್ಮಶ್ಲಾಘನೆಯ (Narcissistic) ಬುದ್ಧಿಯನ್ನೂ ಹೊಂದಿಲ್ಲದಿರುವುದು.