ಆಕ್ಸಿಡೆಂಟ್‌ನಲ್ಲಿ ಸತ್ತರೆ ಸರಕಾರ ಲಕ್ಷಾಂತರ ರೂಪಾಯಿ ಪರಿಹಾರ ಕೊಡುತ್ತೆ ಎಂದು ಕಿವಿಯೂದಿಬಿಟ್ಟರು. ಮಗಳ ಮದುವೆ ಕನಸು, ಮಗನನ್ನು ಓದಿಸುವ ಆಸೆಗೆ ಬಿದ್ದ ಪಾಪಾತಿ, ಕೊನೆಗೂ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟಳು. ತಾನು ಸತ್ತರೇ ಮಕ್ಕಳ ಓದಿನ ಸಮಸ್ಯೆ ಬಗೆಹರಿದುಬಿಡುತ್ತದೆ ಎಂದುಕೊಂಡಿದ್ದ ತಾಯಿ.
ತಮಿಳುನಾಡು(ಜು.19): ಹೆತ್ತ ಮಕ್ಕಳ ಸುಖಕ್ಕಾಗಿ ತಂದೆ- ತಾಯಿ ಮಾಡೋ ಒಂದೆರಡಲ್ಲ. ತಮ್ಮ ಸಂತೋಷವನ್ನೇ ತ್ಯಾಗ ಮಾಡಿ, ಆಸೆಗಳನ್ನು ಅದುಮಿಟ್ಟುಕೊಂಡು ಮಕ್ಕಳಿಗಾಗಿ ಹಗಲಿರುಳು ದುಡಿಯುವ ಸಾವಿರಾರು ತಂದೆ- ತಾಯಿಯರಿದ್ದಾರೆ. ಆದರೆ, ಇಲ್ಲೊಬ್ಬಳು ಮಹಾತ್ಯಾಗಮಯಿ ತ್ಯಾಗ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟುಕೊಂಡಿದ್ದಾಳೆ.
ಆಕೆ ಹೆಸರು ಪಾಪಾತಿ. ತಮಿಳುನಾಡಿನ ಸೇಲಂ ಜಿಲ್ಲೆಯವಳು. ವಯಸ್ಸು 46. ಒಬ್ಬ ಮಗ, ಒಬ್ಬಳು ಮಗಳು. ವೃದ್ಧ ತಾಯಿ. ಗಂಡನನ್ನು ಕಳೆದುಕೊಂಡು ದಿಕ್ಕು ತೋಚದೆ ನಿಂತಿದ್ದ ಪಾಪಾತಿ, ಯಾರ್ ಯಾರದ್ದೋ ಕೈ ಕಾಲು ಹಿಡಿದು ಸೇಲಂ ಕಲೆಕ್ಟರ್ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಫಾಯಿ ಕರ್ಮಚಾರಿ ಕೆಲಸ ಗಿಟ್ಟಿಸಿದ್ದಳು. ಕೈಗೆ ಬರುತ್ತಿದ್ದ ಪುಡಿಗಾಸು ಸಂಬಳದಿಂದ ನಾಲ್ವರ ಹೊಟ್ಟೆ ತುಂಬುತ್ತಿರಲಿಲ್ಲ. ಇಬ್ಬರು ಮಕ್ಕಳನ್ನು ಓದಿಸಬೇಕೆಂಬ ಆಸೆ. ಮಗಳು ಫೈನಲ್ ಹಿಯರ್ ಡಿಗ್ರಿ ಓದುತ್ತಿದ್ರೆ, ಮಗ ಡಿಪ್ಲೋಮಾಕ್ಕೆ ಸೇರಿದ್ದ. ಕುಟುಂಬ ನಿರ್ವಹಣೆ ಜತೆಗೆ ಮಕ್ಕಳ ಫೀಸ್, ಬಟ್ಟೆ, ಬಸ್ ಚಾರ್ಜ್‌ಗೆ ಹಣ ಹೊಂದಿಸಲಾಗದೇ ಪಾಪಾತಿ ಕುಸಿದಿದ್ದಳು. ಹೀಗೆ ಕಚೇರಿಯ ಸಹೋದ್ಯೋಗಿಗಳ ಜತೆ ತನ್ನ ಕಷ್ಟದ ಜೀವನ ಹೇಳಿಕೊಂಡು ಪಾಪಾತಿ ಕಣ್ಣೀರಿಟ್ಟ ದಿನಗಳಿಗೆ ಲೆಕ್ಕವಿಲ್ಲ. ಇಂಥದ್ದೇ ಒಂದು ದಿನ ಅಕ್ಕಪಕ್ಕದವರು ಪಾಪಾತಿಯ ಕಷ್ಟ ಕೇಳಲಾರದೆ ಮಹಾನ್ ಐಡಿಯಾ ಕೊಟ್ಟಿದ್ರು. ಆಕ್ಸಿಡೆಂಟ್‌ನಲ್ಲಿ ಸತ್ತರೆ ಸರಕಾರ ಲಕ್ಷಾಂತರ ರೂಪಾಯಿ ಪರಿಹಾರ ಕೊಡುತ್ತೆ ಎಂದು ಕಿವಿಯೂದಿಬಿಟ್ಟರು. ಮಗಳ ಮದುವೆ ಕನಸು, ಮಗನನ್ನು ಓದಿಸುವ ಆಸೆಗೆ ಬಿದ್ದ ಪಾಪಾತಿ, ಕೊನೆಗೂ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟಳು. ತಾನು ಸತ್ತರೇ ಮಕ್ಕಳ ಓದಿನ ಸಮಸ್ಯೆ ಬಗೆಹರಿದುಬಿಡುತ್ತದೆ ಎಂದುಕೊಂಡಳು.
undefined
ಮೆಷಿನ್‌ಗೆ ಸಿಲುಕಿ ಕೈ ಕಟ್: ಕೈ ಕಳೆದುಕೊಂಡ ತನ್ನ ನೋಡಿ ಬಿಕ್ಕಳಿಸುತ್ತಿದ್ದ ಅಮ್ಮನ ಸಂತೈಸಿದ ಕಂದ
ಪಾಪಾತಿ, ಜೂನ್ 28ರಂದು ಸೇಲಂ ಡಿಸಿ ಕಚೇರಿ ಎದುರು ಮಟಮಟ ಮಧ್ಯಾಹ್ನ ಜನಸಂದಣಿಯ ಮಧ್ಯೆಯೇ ರಸ್ತೆಯಲ್ಲಿ ನಡೆದು ಬಿಟ್ಟಳು. ಎದುರು ಸ್ಪೀಡಾಗಿ ಬರ್ತಿದ್ದ ಬಸ್‌ಗೆ ಮುಖಾಮುಖಿಯಾದವಳು, ನೇರ ಸಾವಿನ ಬಾಗಿಲು ತಟ್ಟಿ ಬಿಟ್ಟಳು. ಆಕ್ಸಿಡೆಂಟ್ ವಿಡಿಯೋ ವೈರಲ್ ಆಗಿಬಿಟ್ಟಿತು. ಆದ್ರೆ ಇವತ್ತು, ಪಾಪಾತಿ ಆಕ್ಸಿಡೆಂಟ್ ಹಿಂದಿನ ನಿಜವಾದ ಕಾರಣ ಬಹಿರಂಗವಾಗಿದೆ. ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ತನ್ನ ಜೀವ ಕೊಟ್ಟಿದ್ದಾಳೆ. ಮಕ್ಕಳ ಭವಿಷ್ಯ ರೂಪಿಸಲು ಏನು ಬೇಕಾದರೂ ಮಾಡುತ್ತಾಳೆ. ಯಾಕಂದ್ರೆ ಅವಳು ಹೆತ್ತ ತಾಯಿ..!!