Kannada

5 ವರ್ಷದ ಮಕ್ಕಳಿಗೇನು ಕಲಿಸಬೇಕು?

ಬದುಕಿನಲ್ಲಿ ಖುಷ್ ಖುಷಿಯಾಗಿರಲು ಜೀವನದಲ್ಲಿ ಕೆಲವು ಕೌಶಲ್ಯ ಕಲಿಯೋದು ಅತ್ಯಗತ್ಯ. ಅದಕ್ಕೆ ಫೋಷಕರು ಏನು ಮಾಡಬೇಕು 

Kannada

ಸಂಸ್ಕಾರ ಮತ್ತು ಶಿಷ್ಟಾಚಾರ

5 ವರ್ಷದೊಳಗಿನ ಮಕ್ಕಳಿಗೆ ಧನ್ಯವಾದಗಳು ಮತ್ತು ದಯವಿಟ್ಟು ಎಂದು ಹೇಳಲು ಕಲಿಸಿ. ಹಿರಿಯರಿಗೆ ಗೌರವ ಮತ್ತು ಇತರರನ್ನು ಪ್ರೀತಿಯಿಂದ ಕಾಣುವುದು ಹೇಗೆಂದು ಹೇಳಿ ಕೊಡಿ. ಎಲ್ಲರ ಜೊತೆ ವಿನಯದಿಂದ ವರ್ತಿಸಲಿ.

Kannada

ಶೇರಿಂಗ್ ನೇಚರ್

ಮಕ್ಕಳಿಗೆ ಆಟಿಕೆ, ಪುಸ್ತಕ ಮತ್ತು ವಸ್ತುಗಳನ್ನು ಹಂಚಿಕೊಳ್ಳಲು ಕಲಿಸಿ. ಸಹಾಯ ಮಾಡುವ ಮತ್ತು ಒಟ್ಟಿಗೆ ಆಟವಾಡುವ ಭಾವನೆ ಬೆಳೆಸಿ. ಸ್ನೇಹಿತರ ಜೊತೆ ಸಂತೋಷದಿಂದ ಇರುವುದನ್ನು ಕಲಿಸಿ.

Kannada

ಸಮಯದ ಮಹತ್ವ

ಮಲಗಲು, ಎದ್ದೇಳಲು, ಊಟ ಮಾಡಲು ಮತ್ತು ಆಟವಾಡಲು ಸಮಯವಿಡಿ. ನಿಯಮಿತ ದಿನಚರಿಯಿಂದ ಮಕ್ಕಳಲ್ಲಿ ಶಿಸ್ತು ಮತ್ತು ಸಮಯ ನಿರ್ವಹಣೆ ಕಲಿಯುತ್ತಾರೆ.

Kannada

ಭಾವನೆಗೆ ಬೆಲೆ

ಮಕ್ಕಳಿಗೆ ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವ್ಯಕ್ತಪಡಿಸುವುದನ್ನು ಕಲಿಸಿ. ಅಳುವುದು ಅಥವಾ ಕೋಪಗೊಳ್ಳುವುದು ಸಹಜ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ತಿಳಿಸಿ.

Kannada

ಕ್ಷಮೆ ಕೇಳುವುದು ಮತ್ತು ತಪ್ಪು ಒಪ್ಪಿಕೊಳ್ಳುವುದು

ತಪ್ಪು ಮಾಡಿದಾಗ ಕ್ಷಮೆ ಕೇಳುವ ಹವ್ಯಾಸ ಬೆಳೆಸಿ. ತಪ್ಪುಗಳಿಗೆ ಹೆದರುವ ಬದಲು ಅವುಗಳಿಂದ ಪಾಠ ಕಲಿಯುವುದು ಮುಖ್ಯ ಎಂದು ಕಲಿಸಿ.

Kannada

ಪ್ರಕೃತಿ ಮತ್ತು ಪ್ರಾಣಿ ದಯೆ

ಗಿಡ, ಪ್ರಾಣಿ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಿ. ಪರಿಸರದ ಬಗ್ಗೆ ಸೂಕ್ಷ್ಮತೆ ಇದ್ದರೆ ಮಕ್ಕಳು ಉತ್ತಮ ನಾಗರಿಕರಾಗುತ್ತಾರೆ.

Kannada

ಸ್ವಾವಲಂಬನೆ

ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ಮಾಡಿ. ಉದಾಹರಣೆಗೆ, ಚಪ್ಪಲಿ ಹಾಕಿಕೊಳ್ಳುವುದು ಅಥವಾ ಆಟಿಕೆಗಳನ್ನು ಜೋಡಿಸುವುದು. ಸ್ವಾವಲಂಬನೆಯಿಂದ ಆತ್ಮವಿಶ್ವಾಸ ಬೆಳೆಯುತ್ತದೆ.

Kannada

ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ

ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಿ. ಅವರ ಆತ್ಮರಕ್ಷಣಾ ಕೌಶಲ್ಯಗಳನ್ನು ಬೆಳೆಸಿ ಮತ್ತು ಯಾವುದೇ ತೊಂದರೆಯಾದಾಗ ತಕ್ಷಣ ಪೋಷಕರು ಅಥವಾ ಶಿಕ್ಷಕರ ಸಹಾಯ ಪಡೆಯಲು ಕಲಿಸಿ.

ಶರದ್ ಪೂರ್ಣಿಮೆಯಲ್ಲಿ ಹುಟ್ಟಿದ ಮಗಳಿಗೆ 'ಮ' ಅಕ್ಷರದ ಹೆಸರುಗಳು

ಗಂಡ ನಿಮಗೆ ಮೋಸ ಮಾಡ್ತಿದ್ರೆ ಪತ್ನಿ ಮಾಡಬೇಕಾದ 8 ಕೆಲಸಗಳು

ಜೀವನದ ಈ 6 ಪರಿಸ್ಥಿತಿಯಲ್ಲಿ 'ನಾನಿದ್ದೇನೆ' ಎನ್ನುವವನೇ ನಿಜವಾದ ಸ್ನೇಹಿತ!

ಈ ಗ್ರಾಮದಲ್ಲಿ ಪೂರ್ತಿ ಡಿವೋರ್ಸ್ ಆದವರೇ ಹೆಚ್ಚು!