ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !

Published : Sep 16, 2022, 02:44 PM ISTUpdated : Sep 16, 2022, 02:45 PM IST
 ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !

ಸಾರಾಂಶ

ಮದುವೆಯ ಆಚಾರ-ವಿಚಾರಗಳು ಆಯಾ ಪ್ರದೇಶದಲ್ಲಿ ಭಿನ್ನವಾಗಿರುತ್ತವೆ. ಒಂದೊಂದು ದೇಶದಲ್ಲಿ, ರಾಜ್ಯದಲ್ಲಿ, ಗ್ರಾಮದಲ್ಲಿ ಚಿತ್ರ-ವಿಚಿತ್ರ ಆಚರಣೆಗಳಿರುತ್ತವೆ. ಆದ್ರೆ ಇಲ್ಲೊಂದು ಎಷ್ಟು ವಿಚಿತ್ರವಾದ ಆಚರಣೆಯಿದೆ ನೋಡಿ. ಇಲ್ಲಿ ಫಸ್ಟ್​ನೈಟ್​ ದಿನ ಬೆಡ್​ರೂಮ್​ನಲ್ಲಿ ನವ ದಂಪತಿಯೊಂದಿಗೆ ವಧುವಿನ ತಾಯಿಯೂ ಇರಬೇಕಂತೆ. 

ಮದುವೆಯ ಮೊದಲ ದಿನ ಅನ್ನೋದು ನವಜೋಡಿಗೆ ಸ್ಪೆಷಲ್ ದಿನ. ಈ ಸುಂದರ ಕ್ಷಣವನ್ನು ಖುಷಿಯಾಗಿ ಕಳೆಯಬೇಕೆಂದು ಪ್ರತಿ ಹುಡುಗ-ಹುಡುಗಿಯೂ ಬಯಸುತ್ತಾರೆ. ಆದರೆ ಮದುವೆಯ ಮೊದಲ ರಾತ್ರಿಗೆ ಹಲವು ಶಾಸ್ತ್ರಗಳು ಇರುತ್ತವೆ. ಕೆಲವೆಡೆ ಮದುವೆಯಾಗಿ ಕೆಲ ದಿನಗಳ ಜೋಡಿಗೆ ಫಸ್ಟ್‌ ನೈಟ್ ಮಾಡಿಕೊಳ್ಳಲು ಬಿಡುವುದೇ ಇಲ್ಲ. ಇನ್ನು ಕೆಲವು ಆಚಾರದ ಪ್ರಕಾರ ಗಂಡು-ಹೆಣ್ಣು ಸೇರುವ ಘಳಿಗೆ ಸರಿಯಾಗಿದೆಯಾ ಎಂದು ಚೆಕ್‌ ಮಾಡಿ ಶಾಂತಿ ಮಹೂರ್ತ ಎಂಬ ಹೆಸರಿನಲ್ಲಿ ಫಸ್ಟ್‌ನೈಟ್ ಮಾಡುತ್ತಾರೆ. ಫಸ್ಟ್‌ನೈಟ್‌ನಲ್ಲಿ ಸಾಮಾನ್ಯವಾಗಿ ಗಂಡು-ಹೆಣ್ಣು ಇರ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಆಫ್ರಿಕಾದಲ್ಲಿ ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುವ ಸಂಪ್ರದಾಯವೊಂದು ಇದೆ. 

ಫಸ್ಟ್‌ನೈಟ್‌ ದಿನ ವಧುವಿನ ತಾಯಿಯೂ ಬೆಡ್ ರೂಮಿನಲ್ಲಿರಬೇಕಂತೆ
ಪ್ರಪಂಚದ ಅನೇಕ ದೇಶಗಳಲ್ಲಿ ಅನೇಕ ರೀತಿಯ ಮದುವೆ (Marriage) ಸಂಪ್ರದಾಯಗಳು ಚಾಲ್ತಿಯಲ್ಲಿದೆ. ಕೆಲವೊಂದು ಸಂಪ್ರದಾಯಗಳು (Rituals) ವಿಭಿನ್ನವಾಗಿದ್ದರೆ ಕೆಲವೊಂದು ಅಸಂಬದ್ಧವಾಗಿರುತ್ತದೆ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಇಂತಹ ಅಸಂಬದ್ಧತೆಯ ವಿವಾಹ ಆಚರಣೆಯನ್ನು ಅನುಸರಿಸಲಾಗುತ್ತದೆ. ಈ ಆಚರಣೆಯ ಪ್ರಕಾರ, ಮದುವೆಯ ನಂತರದ ಮೊದಲ ರಾತ್ರಿಯಲ್ಲಿ (First night) ವಧುವಿನ ತಾಯಿ ನವ ದಂಪತಿ (Couple)ಯೊಂದಿಗೆ ಇರುತ್ತಾರೆ. ವಧುವಿನ ತಾಯಿ ಇಲ್ಲದಿದ್ದರೆ ಅವರ ಕುಟುಂಬದ ವಯಸ್ಸಾದ ಮಹಿಳೆ ಅವರೊಂದಿಗೆ ಇರಲೇಬೇಕು. ಈ ಪದ್ಧತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು. ಇದು ಅಚ್ಚರಿಯಾದರೂ ಸತ್ಯ.

ಬಯಸಿ ಮದ್ವೆಯಾಗಿದ್ದಲ್ಲ, ಪ್ರೀತಿಯೂ ಇಲ್ಲ, ಆದರೂ ಖುಷಿ ಇದೆಯಂತೆ!

ಮೊದಲ ರಾತ್ರಿ ಕಳೆಯುವ ರೀತಿಯನ್ನು ವಧುವಿನ ತಾಯಿ ಹೇಳಿಕೊಡ್ಬೇಕಂತೆ
ಹೀಗೆ ವಧುವಿನ ತಾಯಿ ನವದಂಪತಿಯ ಜೊತೆಗಿರಲು ಪ್ರತ್ಯೇಕ ಉದ್ದೇಶವೂ ಇದೆ. ವಧುವಿನ ತಾಯಿ ಅಥವಾ ವಯಸ್ಸಾದ ಮಹಿಳೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಅವರು ತಮ್ಮ ಜೀವನ (Life)ವನ್ನು ಹೇಗೆ ಸಂತೋಷದಿಂದ ಕಳೆಯಲಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಅಲ್ಲದೆ ಮೊದಲ ರಾತ್ರಿಯನ್ನು ಕಳೆಯುವ ವಿಧಾನವನ್ನು ಕೂಡ ವಧುವಿಗೆ ವಿವರಿಸಲಾಗುತ್ತದೆ. ಹೀಗೆ ಎಲ್ಲಾ ವಿಚಾರವನ್ನು ವಧುವಿನ ತಾಯಿ ಮಗಳಿಗೆ ಹೇಳಿಕೊಡುತ್ತಾಳೆ. ಮೊದಲ ರಾತ್ರಿ ಕಳೆದ ನಂತರ ವಧುವಿನ ತಾಯಿ ಅಥವಾ ಹಿರಿಯ ಮಹಿಳೆ ದಂಪತಿ ಸಂತೋಷದ ವೈವಾಹಿಕ ಜೀವನ (Married life)ವನ್ನು ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸುತ್ತಾರೆ.

ಇನ್ನು, ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯವಿದೆ. ನವ ದಂಪತಿಗಳು ವಾಶ್‌ರೂಮ್‌ಗೆ ಹೋಗದೆ ಮೂರು ದಿನಗಳವರೆಗೆ ಇರಬೇಕು ಎನ್ನುವುದು ಈ ಸಂಪ್ರದಾಯ ಹೇಳುತ್ತದೆ. ವರದಿಯ ಪ್ರಕಾರ, ವಿವಾಹಿತ ದಂಪತಿಗಳು ಸಂತೋಷ ಮತ್ತು ದೀರ್ಘಾವಧಿಯ ದಾಂಪತ್ಯವನ್ನು ಆನಂದಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ದಂಪತಿಗಳು ಪರೀಕ್ಷೆಯಲ್ಲಿ ವಿಫಲರಾದರೆ ದಂಪತಿಗಳು ಬೇರೆ ಬೇರೆಯಾಗುತ್ತಾರೆ. ದಂಪತಿಗೆ ವಾಶ್ ರೂಂ ಬಳಸುವ ಬಯಕೆ ಬರದಂತೆ ಅವರು ಸ್ವಲ್ಪ ಪ್ರಮಾಣದ ಆಹಾರ ಮತ್ತು ನೀರನ್ನು ನೀಡುತ್ತಾರೆ. ಟಿಡಾಂಗ್ ಬುಡಕಟ್ಟು ಜನಾಂಗದವರು ಈ ಆಚರಣೆಯನ್ನು ಹಲವಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ.

ಮದ್ವೆಗೆ ಇಷ್ಟವಿಲ್ಲದೇ ಓಡಿ ಹೋದ ವರನ ಹಿಡಿದು ತಂದು ಮದ್ವೆಯಾದ ವಧು: ವೈರಲ್ ವಿಡಿಯೋ

ವಧು, ವರನ ಸಹೋದರಿ ಜೊತೆ ಸಪ್ತಪದಿ ತುಳಿಯುತ್ತಾಳೆ 
ಭಾರತದಲ್ಲಿ, ಮದುವೆಯ ಬಗ್ಗೆ ವಿವಿಧ ಸ್ಥಳಗಳ ಸಂಪ್ರದಾಯವು ವಿಭಿನ್ನವಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ, ಮದುವೆಗೆ ಸಂಬಂಧಿಸಿದ ಅಂತಹ ಆಚರಣೆಗಳನ್ನು ನಡೆಸಲಾಗುತ್ತದೆ, ಇದರ ಬಗ್ಗೆ ತಿಳಿದುಕೊಂಡರೆ ಆಶ್ಚರ್ಯ ಆಗೋದು ಖಂಡಿತಾ. ಇಲ್ಲಿ ಬುಡಕಟ್ಟು ಸಮಾಜದಲ್ಲಿ, ವರನ ಬದಲು ಬೇರೆ ಯಾರೋ ವಧುವನ್ನು ಮದುವೆಯಾಗುತ್ತಾರೆ. ಹೌದು, ಮದುವೆಯಾಗೋದು ವರನ ತಂಗಿ. ವರನ ತಂಗಿ ವಧುವಿನ ಜೊತೆ ಏಳು ಸುತ್ತುಗಳನ್ನು ಸುತ್ತುತ್ತಾಳೆ. ಇದು ಓದಲು ವಿಚಿತ್ರವಾಗಿ ತೋರುತ್ತದೆ, ಆದರೆ ಅದು ವಾಸ್ತವವಾಗಿದೆ. ಇಂದಿಗೂ, ಈ ಸಂಪ್ರದಾಯವನ್ನು ಅಲ್ಲಿ ಆಚರಣೆಯಲ್ಲಿದೆ.

ಈ ವಿಚಿತ್ರ ಸಂಪ್ರದಾಯವನ್ನು ಗುಜರಾತ್, ಮಧ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಮೂರು ಹಳ್ಳಿಗಳಲ್ಲಿ ಆಚರಣೆಯಲ್ಲಿದೆ. ಹಳ್ಳಿಗಳ ಹೆಸರು ಸುರ್ಖೇಡ, ಸನದಾ ಮತ್ತು ಅಂಬಾಲ. ಇಲ್ಲಿ ವರನ ಸಣ್ಣ ತಂಗಿ ಅಣ್ಣನ ಬದಲಾಗಿ ತಾನು ಭಾರಾತ್ ತೆಗೆದುಕೊಂಡು ಹೋಗಿ ವಧುವನ್ನು ಕರೆತರುತ್ತಾಳೆ. ಮದುವೆಯ ಸಿದ್ಧತೆಗಳು ಇತರ ಸ್ಥಳಗಳಲ್ಲಿರುವಂತೆಯೇ ನಡೆಯುತ್ತವೆ. ಎಲ್ಲಾ ಮದುವೆ ಆಚರಣೆಗಳನ್ನು (marriage tradition) ಸಹ ಎಲ್ಲೆಡೆಯಂತೆ ನಡೆಸಲಾಗುತ್ತದೆ. ಆದರೆ ಇಲ್ಲಿ ಸ್ವಲ್ಪ ಚೇಂಜಸ್ ಏನಂದ್ರೆ ವರನ ಬದಲು ಆತನ ತಂಗಿ ಮದುವೆಯಾಗುತ್ತಾಳೆ. ಇದೇ ಇಲ್ಲಿನ ವಿಚಿತ್ರ ಪದ್ಧತಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ