ಮಗಳ ಮೇಲೆ ಆಸೆ, ಅತ್ತೆ ಮೇಲೆ ಪ್ರೀತಿ; ರಾತ್ರಿ ಚಕ್ಕಂದವಾಡ್ತಿದ್ದಾಗ ಗ್ರಾಮಸ್ಥರ ಕೈಗೇ ಸಿಕ್ಕಿಬಿದ್ದ ಅತ್ತೆ-ಅಳಿಯ!

By Vinutha Perla  |  First Published Dec 16, 2023, 3:46 PM IST

ಕಾಲ ಬದಲಾಗುತ್ತಾ ಹೋದಂತೆ ಸಂಬಂಧಗಳ ಬಗ್ಗೆಯಿರೋ ಮೌಲ್ಯ ಸಹ ಕಡಿಮೆಯಾಗುತ್ತಾ ಹೋಗುತ್ತಿದೆ. ಪ್ರೀತಿ, ಆದರ, ಗೌರವದಿಮದ ಕಾಣಬೇಕಾದ ಸಂಬಂಧಗಳು ಅರ್ಥಹೀನವಾಗುತ್ತಿವೆ. ಅದಕ್ಕೆ ಸ್ಪಷ್ಟ ಉದಾಹರಣೆ, ಬಿಹಾರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ ಅತ್ತೆ-ಅಳಿಯನ ಸಂಬಂಧ. 


ಬಿಹಾರ: ಅತ್ತೆಯಂದಿರ ಪಾಲಿಗೆ ಅಳಿಯ ಅಂದ್ರೆ ಮಗನ ಸಮಾನ ಅಂತಾರೆ. ಆದ್ರೆ ಇಲ್ಲಿ ಮಾತ್ರ ಅತ್ತೆ, ತನ್ನ ಅಳಿಯನನ್ನು ನೋಡಿ ನೀನೇ ನನ್ನ ನಲ್ಲ ಅಂತಿದ್ದಾಳೆ. ಅಳಿಯನೂ ಅಷ್ಟೆ. ಅತ್ತೇನೆ ನನ್ನ ಜೀವ, ಜೀವನ ಎಂದು ಹಿಂದೆ ಬಿದ್ದಿದ್ದಾನೆ. ತನ್ನ ಸ್ವಂತ ಅತ್ತೆಯನ್ನೇ ಗೆಳತಿಯಾಗಿ ಮಾಡಿಕೊಂಡಿದ್ದಾನೆ. ಬಿಹಾರದಲ್ಲಿ ಅತ್ತೆ-ಅಳಿಯನ ಪ್ರೀತಿಯ ಸುದ್ದಿ ಪೊಲೀಸ್ ಠಾಣೆಯ ವರೆಗೂ ತಲುಪಿದೆ.

ಮದುವೆಗೂ (Marriage) ಮುನ್ನ ವ್ಯಕ್ತಿ ತನ್ನ ಅತ್ತೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಅಲ್ಲಿ ಅವನು ತನ್ನ ಸೋದರ ಸಂಬಂಧಿಯ ವಿಧವೆ ಅತ್ತೆಯೊಂದಿಗೆ ಪ್ರೀತಿ ಯಲ್ಲಿ ಸಿಲುಕಿದ್ದಾನೆ. ನಂತರ ಇಬ್ಬರೂ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ. ಬಿಹಾರದ ಜಮುಯಿಯಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ. ಅಳಿಯ ಮತ್ತು ಅತ್ತೆ ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆಗಾಗ ರಹಸ್ಯವಾಗಿ ಭೇಟಿಯಾಗುತ್ತಿದ್ದರು.

Tap to resize

Latest Videos

ಹೆಂಡ್ತಿ, ಅತ್ತೆ ಕಾಟ: ಅಮ್ಮನ ದೂರ ಮಾಡಲಾಗದೇ ಸಾವಿಗೆ ಶರಣಾದ ಗಂಡ

ರಾತ್ರಿ ಭೇಟಿ ಮಾಡುವಾಗ ಸಿಕ್ಕಿಬಿದ್ದ ಅತ್ತೆ-ಅಳಿಯ, ಗ್ರಾಮಸ್ಥರಿಂದ ಥಳಿತ
ಆದರೆ ಇತ್ತೀಚಿಗೆ ಅಳಿಯ ರಾತ್ರಿಯಲ್ಲಿ  ತನ್ನ ಅತ್ತೆಯನ್ನು ಭೇಟಿಯಾಗಲು ಹೋಗಿದ್ದು, ಇಬ್ಬರೂ ಮೈ ಮರೆತು ಚಕ್ಕಂದವಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಅಳಿಯನನ್ನು ತೀವ್ರವಾಗಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣವು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನ್ಸ್ದಿಹ್ ಗ್ರಾಮಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.

ಬಂಕಾ ಜಿಲ್ಲೆಯ ಧೋರೈಯಾ ಗ್ರಾಮದ ನಿವಾಸಿ ಚಂದನ್ ಗೋಸ್ವಾಮಿ ಅವರ ಅತ್ತಿಗೆ ಹನ್ಸ್ದಿಹ್ ಗ್ರಾಮದಲ್ಲಿದ್ದಾರೆ. ಅವರ ಸೋದರ ಸಂಬಂಧಿ ವಿಧವೆ ಅತ್ತೆ ಕೂಡ ಅಲ್ಲಿ ವಾಸಿಸುತ್ತಿದ್ದಾರೆ. ಅತ್ತೆಯ ಮನೆಗೆ ಹೋಗುವಾಗ ಚಂದನ್‌ಗೆ ಆಕೆಯ ಮೇಲೆ ಪ್ರೀತಿಯಾಗಿದೆ. ಇಲ್ಲಿಂದ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದೆ. ಇದಾದ ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಅತ್ತೆಯನ್ನು ಭೇಟಿಯಾಗಲು ಚಂದನ್‌, ಆಗಾಗ ಹನ್ಸ್ದಿಹ್ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ (Enquiry) ನಡೆಸುತ್ತಿದ್ದಾರೆ.

ಸಿಗರೇಟ್ ಸೇದುತ್ತಾ, ಡಿಜೆ ಸಾಂಗ್‌ಗೆ ಡ್ಯಾನ್ಸ್ ಮಾಡ್ತಿದ್ದ ಭಾವೀ ಅತ್ತೆಯ ನೋಡಿ ಮದ್ವೆ ಕ್ಯಾನ್ಸಲ್ ಮಾಡಿದ ವರ!

click me!