ದಾಂಪತ್ಯದಲ್ಲಿ ರೊಮ್ಯಾನ್ಸ್ ಬಹಳ ಮುಖ್ಯ. ಮುತ್ತು, ಅಪ್ಪುಗೆ, ಸುತ್ತಾಟ, ಮಾತು ಎಲ್ಲವೂ ಮುಖ್ಯವಾಗುತ್ತದೆ. ನಿಮ್ಮಿಬ್ಬರ ಮಧ್ಯೆ ಇದೆಲ್ಲವೂ ಮಾಯವಾಗಿದೆ ಎಂದ್ರೆ ಎಚ್ಚೆತ್ತುಕೊಳ್ಳಿ. ಈ ಸಿಂಡೋಮ್ ನಿಂದ ದೂರವಿರಲು ಪ್ರಯತ್ನಿಸಿ.
ಹೊಸ ಬಟ್ಟೆ ಧರಿಸೋವರೆಗೆ ಮಾತ್ರ ಹೊಸದಾಗಿರುತ್ತದೆ. ದಿನ ಕಳೆದಂತೆ ಅದು ಹಳೆಯದಾಗುವ ಜೊತೆ ಅದ್ರ ಮೇಲಿರುವ ನಮ್ಮ ಪ್ರೀತಿ ಕಡಿಮೆಯಾಗುತ್ತದೆ. ಮೊದಲು ಡ್ರೈ ಕ್ಲೀನಿಂಗ್ ಗೆ ಕೊಡ್ತಿದ್ದೋರು ಕೈನಲ್ಲಿ ವಾಶ್ ಮಾಡೋಕೆ ಶುರು ಮಾಡ್ತೇವೆ. ಪ್ರೀತಿ ಸಂಬಂಧ ಕೂಡ ಹಾಗೆ ಆಗೋಕೆ ಶುರುವಾದ್ರೆ ಕಷ್ಟ. ಆದ್ರೆ ಬಹುತೇಕ ಸಂಬಂಧಗಳು ಹೀಗೆ ಆಗೋದು. ಸಂಬಂಧದ ಆರಂಭದಲ್ಲಿ, ಹನಿಮೂನ್ ಸಂದರ್ಭದಲ್ಲಿ ಕಾಣಿಸುವ ಉತ್ಸಾಹ ನಂತ್ರದ ದಿನಗಳಲ್ಲಿ ಕಾಣಿಸೋದಿಲ್ಲ. ವಾರಕ್ಕೆ ಎಲ್ಲ ದಿನ ಇರ್ತಿದ್ದ ರೊಮ್ಯಾನ್ಸ್ ವಾರಕ್ಕೆ ನಾಲ್ಕು, ಮೂರು, ಎರಡು ಅಂತಾ ಇಳಿದು ಕೊನೆಯಲ್ಲಿ ವಾರಕ್ಕೊಮ್ಮೆಯೂ ಸೆಕ್ಸ್ ಇರೋದಿಲ್ಲ. ಪ್ರೀತಿ ಅಪ್ಪುಗೆ, ಮುತ್ತು ಸೇರಿದಂತೆ ಪ್ರೀತಿಯನ್ನು ವ್ಯಕ್ತಪಡಿಸುವ ಎಲ್ಲ ವಿಧಾನಗಳು ಕಣ್ಮರೆಯಾಗುತ್ತವೆ. ಆಗ ರೂಮ್ ಮೇಟ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ನಾವಿಂದು ಈ ರೂಮ್ ಮೇಟ್ ಸಿಂಡ್ರೋಮ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ರೂಮ್ ಮೇಟ್ (Roommate) ಸಿಂಡ್ರೋಮ್ ಎಂದರೇನು? : ರೂಮ್ ಮೇಟ್ ಸಿಂಡ್ರೋಮ್ (Syndrome) ಅಂದರೇನು ಎಂಬುದನ್ನು ತಿಳಿಯುವ ಮುನ್ನ ನೀವು ರೂಮ್ ಮೇಟ್ ಅಂದ್ರೇನು ಎಂಬುದನ್ನು ತಿಳಿದುಕೊಳ್ಳಿ. ಒಂದೇ ರೂಮಿನಲ್ಲಿರುವ ಸ್ನೇಹಿತರು ಅಥವಾ ಇಬ್ಬರು ವ್ಯಕ್ತಿಗಳನ್ನು ರೂಮ್ ಮೇಟ್ ಎಂದು ಕರೆಯಲಾಗುತ್ತದೆ. ಇವರಿಬ್ಬರ ಮಧ್ಯೆ ಯಾವುದೇ ಸಮಸ್ಯೆ ಇರೋದಿಲ್ಲ. ಆದ್ರೆ ಯಾವುದೇ ಪತಿ – ಪತ್ನಿ ಅಥವಾ ಪ್ರೀತಿಯ ಸಂಬಂಧ ಇರೋದಿಲ್ಲ.
undefined
ರೂಮ್ ಮೇಟ್ ಸಿಂಡ್ರೋಮ್ ದಂಪತಿ ಮಧ್ಯೆ ಸಂಭವಿಸುತ್ತದೆ. ಇಲ್ಲಿ ದಂಪತಿ ಸಾಮಾನ್ಯರಂತೆ ವಾಸಿಸುತ್ತಾರೆ. ಆರಂಭದಲ್ಲಿದ್ದ ರೊಮ್ಯಾನ್ಸ್ (Romance) ದಂಪತಿ ಮಧ್ಯೆ ಸತ್ತು ಹೋಗಿರುತ್ತದೆ. ಯಾವುದೇ ಪ್ರಣಯ ರೋಚಕತೆ ಇರೋದಿಲ್ಲ. ಅಲ್ಲಿ ಶಾರೀರಿಕ ಸಂಬಂಧ (Physical Relationship) ಬೆಳೆಯೋದಿಲ್ಲ. ಇಬ್ಬರು ರೂಮ್ ಮೇಟ್ ನಂತೆ ವಾಸಿಸಲು ಶುರು ಮಾಡ್ತಾರೆ. ಇದನ್ನೇ ರೂಮ್ ಮೇಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಹೆಂಡತಿಯನ್ನು ಖುಷಿಯಾಗಿಡಬೇಕು ಅಂದ್ರೆ ಮಲಗೋ ಮುಂಚೆ ಈ ಮೂರು ಕೆಲ್ಸ ಮಾಡಬೇಕು!
ರೂಮ್ ಮೇಟ್ ಸಿಂಡ್ರೋಮ್ ಬೇರೆ ಬೇರೆಯಾಗಿರುತ್ತದೆ. ಒಟ್ಟಿಗೆ ವಾಸಿಸುವ ನವೀನತೆ ಮಾಯವಾಗುತ್ತದೆ. ದಂಪತಿ ಪ್ರಾಯೋಗಿಕ ಜೀವನ ನಡೆಸಲು ಶುರು ಮಾಡ್ತಾರೆ. ಕೆಲಸ, ಒತ್ತಡದಲ್ಲಿ ದಿನ ಕಳೆಯುತ್ತಾರೆ. ಪರಸ್ಪರ ಪ್ರೀತಿಯನ್ನು ಕಳೆದುಕೊಳ್ತಾರೆ.
ರೂಮ್ ಮೇಟ್ ಸಿಂಡ್ರೋಮ್ ಗೆ ಕಾರಣ : ದಂಪತಿ ಉದ್ದೇಶಪೂರ್ವಕವಾಗಿ ಸಂಬಂಧದಲ್ಲಿ ರುಚಿ ಕಳೆದುಕೊಳ್ಳೋದಿಲ್ಲ. ರೂಮ್ ಮೇಟ್ ಸಿಂಡ್ರೋಮ್ ಅವರ ಜವಾಬ್ದಾರಿ ಹಾಗೂ ಕೆಲಸದ ಒತ್ತಡದಿಂದ ಶುರುವಾಗುತ್ತದೆ. ಮಕ್ಕಳು, ಮನೆ, ಜವಾಬ್ದಾರಿಯಲ್ಲಿ ಬ್ಯೂಸಿಯಾಗುವ ಜನರು ತಮ್ಮ ಪ್ರೀತಿ, ಡೇಟಿಂಗ್, ಸೆಕ್ಸ್ ಗೆ ಸಮಯ ನೀಡಲು ಸಾಧ್ಯವಾಗೋದಿಲ್ಲ.
ಮದ್ವೆ ಆಗ್ಲೋ, ಬೇಡ್ವೋ ಎಂಬ ಗೊಂದಲದಲ್ಲಿರೋರಿಗೆ ಸದ್ಗುರು ಕೊಡ್ತಾರೆ ಪರಿಹಾರ!
ಸೆಕ್ಸ್, ರೋಮ್ಯಾನ್ಸ್ ಇವರ ಆದ್ಯತೆ ಆಗಿರೋದಿಲ್ಲ. ಮಕ್ಕಳ ಆರೈಕೆ, ಆಹಾರ, ಶಿಕ್ಷಣ, ಹಿರಿಯರ ಆರೈಕೆ, ಅವರ ಆರೋಗ್ಯ, ಕೆಲಸ, ವೃತ್ತಿಯ ಸವಾಲು, ಸಮಾಜದ ಒತ್ತಡ ಇವರನ್ನು ಸಂಪೂರ್ಣ ಬದಲಿಸುತ್ತದೆ. ಸಮಯ ಮತ್ತು ಜವಾಬ್ದಾರಿಗಳೊಂದಿಗೆ ಪ್ರೀತಿಯು ಕ್ಷೀಣಿಸುವುದು ಸಹಜ, ಆದರೆ ಹೊರಗಿನ ಜವಾಬ್ದಾರಿಗಳು ವಿನೋದ ಮತ್ತು ಪ್ರಣಯಕ್ಕಾಗಿ ಸಮಯವನ್ನು ಕಳೆಯಲು ಮರೆತರೆ ಅದು ಸಮಸ್ಯೆಯಾಗಬಹುದು.
ರೂಮ್ ಮೇಟ್ ಸಿಂಡ್ರೋಮ್ ಎದುರಿಸೋದು ಹೇಗೆ? :
ಸಂಗಾತಿ ನಿಮ್ಮ ನೆನಪಿನಲ್ಲಿರಲಿ : ಮನೆ, ಕೆಲಸ ಜವಾಬ್ದಾರಿ ಜೊತೆ ನೀವು ಸಂಗಾತಿಯನ್ನು ಮರೆಯಬಾರದು. ನಿಮ್ಮ ದಿನಚರಿಯಲ್ಲಿ ಅವರಿಗೂ ಸಮಯ ಮೀಸಲಿಡಬೇಕು. ಸಮಯ ಸಿಕ್ಕಾಗ ಅವರ ಜೊತೆ ಮಾತನಾಡಿ, ಅವರ ಬಗ್ಗೆ ಆಲೋಚನೆ ಮಾಡಿ, ಅವರಿಗೆ ಯಾವುದು ಇಷ್ಟ ಅದನ್ನು ಮಾಡುವ ಪ್ರಯತ್ನ ಮಾಡಿ.
ಸಣ್ಣ ಸಣ್ಣ ವಿಷ್ಯಕ್ಕೆ ಆದ್ಯತೆ ನೀಡಿ : ಸಂಗಾತಿಗೆ ದಿನವಿಡಿ ಸಮಯ ನೀಡಬೇಕು, ಅವರ ಜೊತೆ ಪ್ರವಾಸಕ್ಕೆ ಹೋಗ್ಬೇಕು ಅಂದೇನಿಲ್ಲ. ಬೆಳಿಗ್ಗೆ ಅಥವಾ ರಾತ್ರಿ ಅವರ ಜೊತೆ ಆಹಾರ ಸೇವನೆ, ಇಲ್ಲವೆ ಟೀ ಸೇವನೆ ಮಾಡಿ. ಅದು ಸಾಧ್ಯವಿಲ್ಲ ಎಂದ್ರೆ ವಾರಕ್ಕೊಮ್ಮೆ ಅವರ ಜೊತೆ ಫಿಜ್ಜಾ, ಐಸ್ ಕ್ರೀಂ ಅಥವಾ ಅವರಿಷ್ಟದ ಯಾವುದೋ ಆಹಾರವನ್ನು ಆರ್ಡರ್ ಮಾಡಿ, ಇಬ್ಬರೂ ಒಟ್ಟಿಗೆ ಕುಳಿತು ಸಣ್ಣ ಪುಟ್ಟ ರೋಮ್ಯಾನ್ಸ್ ಮಾಡ್ತಾ ಸೇವನೆ ಮಾಡಿ.
ನಿಮ್ಮ ಬೋರಿಂಗ್ ದಿನಚರಿ ಅವರಿಗೆ ಬೇಸರತರಿಸಬಹುದು. ಹಾಗಾಗಿ ಹೊಸತನಕ್ಕೆ ಹೆಚ್ಚು ಮಹತ್ವ ನೀಡಿ.