ನಿಮ್ಮ ಮೊಬೈಲ್ ಫೋನೇ ನಿಮ್ಮ ಮಗುವಿನ ನೆನಪಿಗೆ ಶತ್ರು!

By Suvarna News  |  First Published Jul 23, 2021, 12:32 PM IST

ನಿಮ್ಮ ಮಗು ಸ್ಮರಣಶಕ್ತಿಯ ಕೊರತೆ, ಪಾಠಗಳನ್ನು ನೆನಪಿಡಲಾಗದ ಸಮಸ್ಯೆಗಳಿಂದ ನರಳುತ್ತಿದ್ದಾನೆ/ಳೆಯೇ? ಹಾಗಿದ್ದರೆ ನಿಮ್ಮ ಮೊಬೈಲ್ ಫೋನೇ ಅವರ ಸ್ಮರಣಶಕ್ತಿಯ ಶತ್ರು ಆಗಿರಬಹುದು. ಒಂದ್ಸಲ ಚೆಕ್ ಮಾಡ್ಕೊಳಿ.


ಇತ್ತೀಚೆಗೆ ಎಂಟು ವರ್ಷದ ಮಗುವೊಂದು ಕ್ಲಾಸ್‌ನಲ್ಲಿ ಕಲಿತದ್ದೆಲ್ಲಾ ಮರೆತುಹೋಗುತ್ತಿದೆ ಎಂದು ಆಕೆಯ ಹೆತ್ತವರು ಮನೋವೈದ್ಯರಲ್ಲಿಗೆ ಕರೆದುಕೊಂಡು ಬಂದಿದ್ದರು. ಆದರೆ ಆ ಮಗುವಿಗೆ ಯೂಟ್ಯೂಬ್‌ನಲ್ಲಿ ಬರುವ ಎಲ್ಲ ಕಾಮಿಕ್ಸ್‌ಗಳ ಕ್ಯಾರೆಕ್ಟರ್ಗಳ ಹೆಸರು ಸಹ ನೆನಪಿದ್ದವು. ತಪಾಸಿಸಿದಾಗ ತಿಳಿದುಬಂದದ್ದೆಂದರೆ, ಮಗುವಿನ ತಲೆಯಲ್ಲಿ ಕಾಮಿಕ್ಸ್ ಅಚ್ಚೊತ್ತಿತ್ತು; ಪಾಠ ಉಳಿದಿರಲಿಲ್ಲ. ಇದು ಬಹಳ ಮಂದಿ ಮಕ್ಕಳ ಕಂಪ್ಲೇಂಟ್ ಸಹ.

ನಿಮ್ಮ ಮಗುವಿನ ಸ್ಮರಣಶಕ್ತಿ ಫೋನ್‌ನಿಂದ ಹಾನಿಗೊಳಗಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮಕ್ಕಳು ಮತ್ತು ಹದಿಹರೆಯದವರು ಫೋನ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಅವರ ಸ್ಮರಣೆ ಮತ್ತು ಇತರ ಕೌಶಲ್ಯಗಳಿಗೆ ಅಡ್ಡಿಯಾಗಬಹುದು. ಚಿಕ್ಕಂದಿನಿಂದಲೇ ತಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸಕ್ರಿಯಗೊಳಿಸುವ ಎಲ್ಲ ಪೋಷಕರಿಗೂ ಇದು ಎಚ್ಚರಿಕೆಯ ಗಂಟೆ.

Latest Videos

undefined

ನಿಮ್ಮ ಮಕ್ಕಳ ಸ್ಕ್ರೀನ್ ಟೈಮ್ ಮಿತಿಗೊಳಿಸಲು ನೀವು ಪ್ರಯತ್ನಿಸಿದರೆ ನೀವು ಮಕ್ಕಳ ವಿರೋಧ ಅಥವಾ ಕೋಪವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಪೋಷಕರು ತಮ್ಮ ಸ್ಕ್ರೀನ್ ಟೈಮನ್ನೇ ಮಿತಿಗೊಳಿಸುವುದು ಮತ್ತು ನಂತರ ತಮ್ಮ ಮಕ್ಕಳಲ್ಲಿ ಅದೇ ಅಭ್ಯಾಸವನ್ನು ರೂಢಿಸುವುದು ಇನ್ನೂ ಹೆಚ್ಚು ಮುಖ್ಯವಾಗಿದೆ. ನಿಮ್ಮ ಮಗುವಿನ ಪರದೆಯ ಸಮಯವನ್ನು ನೀವು ಮಿತಿಗೊಳಿಸಬೇಕಾದ ಕಾರಣಗಳು ಇಲ್ಲಿವೆ.

ಡಿಸ್ಟ್ರಾಕ್ಷನ್
ಸ್ಮಾರ್ಟ್‌ಫೋನ್‌ ಉಂಟುಮಾಡುವ ಪ್ರಮುಖ ನ್ಯೂನತೆಯೆಂದರೆ ಡಿಸ್ಟ್ರಾಕ್ಷನ್ ಅಥವಾ ವ್ಯಾಕುಲತೆ. ಬಾಲ್ಯವು ಮೆಮೊರಿ ಮತ್ತು ಮೆದುಳಿನ ಕೋಶಗಳನ್ನು ಬಲಪಡಿಸುವ, ಅಭಿವೃದ್ಧಿ ಪ್ರಕ್ರಿಯೆಯ ಪ್ರಮುಖ ಘಟ್ಟವಾಗಿದೆ. ಸರಳವಾಗಿ ಹೇಳುವುದಾದರೆ, ಹಲವಾರು ಗೊಂದಲಗಳು ಇದ್ದಾಗ ನೆನಪುಗಳನ್ನು ಸ್ಥಾಪಿಸಿಕೊಳ್ಳುವುದು ಮನಸ್ಸಿಗೆ ಕಠಿಣವಾಗುತ್ತದೆ. ಮಕ್ಕಳು ಫೋನ್‌ಗಳಲ್ಲಿ ಹೆಚ್ಚಾಗಿ ಮಗ್ನರಾದಾಗ ಅವರ ಪೋಷಕರ ಅಥವಾ ಶಿಕ್ಷಕರ ಸೂಚನೆಗಳನ್ನು ಖಂಡಿತವಾಗಿಯೂ ತಪ್ಪಿಸುತ್ತಾರೆ. ಇದು ಮಕ್ಕಳು ಯಾವುದೇ ಕೌಶಲ್ಯವನ್ನು ಕಲಿಯಲು ಅಥವಾ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡದಂತೆ ತಡೆಯುತ್ತದೆ. ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ನಾನು ಒಳ್ಳೇ ಅಪ್ಪ ಅಲ್ಲ! ನನ್ನ ಥರಾ ನೀವೂ ಆಗಬೇಡಿ: ಅರ್ಜುನ ಹೇಗ್ಯಾಕ್ಹೇಳಿದ್ದು?
 

ನೀಲಿ ಕಿರಣಗಳು
ಸ್ಮಾರ್ಟ್‌ಫೋನ್‌ನ ನೀಲಿ ಬಣ್ಣದ ಕಿರಣಗಳು ಕಣ್ಣುಗಳಿಗೆ ಮಾತ್ರವಲ್ಲ ಮೆದುಳಿನ ಕೋಶಗಳಿಗೂ ಹಾನಿಕಾರಕ. ನೀಲಿ ಬೆಳಕು ವಿಷಯಗಳನ್ನು ನೆನಪಿಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಪಾವಧಿಯ ಸ್ಮರಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ಮತ್ತು ಒಂದೇ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಏಕಾಗ್ರತೆಯನ್ನು ನಾಶ ಮಾಡುತ್ತದೆ. ತಡರಾತ್ರಿ ಫೋನ್ ಬಳಸಿದಾಗ, ಅದು ಹಗಲಿನ ಸಮಯ ಎಂದು ನಂಬುವಂತೆ ನಿಮ್ಮ ಮೆದುಳನ್ನು ಅದು ಮೋಸಗೊಳಿಸುತ್ತದೆ. ಇದು ಸಂಭವಿಸಿದಾಗ, ದೇಹವು ನಿದ್ರೆಯ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಮೆಲಟೋನಿನ್ ದೇಹದ ನೈಸರ್ಗಿಕ ಸ್ರಾವವಾಗಿದ್ದು, ಚಟುವಟಿಕೆ- ನಿದ್ರೆ ಇತ್ಯಾದಿಗಳಿಗೆ ದೇಹ ಸಿದ್ಧವಾಗಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮಗು ನಿದ್ರಾಹೀನನಾಗಿರುತ್ತದೆ ಮತ್ತು ಮರುದಿನ ಆಯಾಸಗೊಳ್ಳುತ್ತದೆ. ಯಾವುದೇ ಕಾರ್ಯವನ್ನು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಸಾಧಿಸಲು ಸಾಧ್ಯವಾಗುವುದಿಲ್ಲ.

ಡಿಜಿಟಲ್ ಮರೆವು
ಡಿಜಿಟಲ್ ಮರೆವು ಒಬ್ಬ ವ್ಯಕ್ತಿಯು ಡಿಜಿಟಲ್ ಸಾಧನವನ್ನು ನಂಬಿ ಮಾಹಿತಿಯನ್ನು ಮರೆತುಬಿಡುವ ಸ್ಥಿತಿ. ಅಂದರೆ ಎಲ್ಲದಕ್ಕೂ ಗೂಗಲ್ ಅನ್ನೇ ಅವಲಂಬಿಸುವಂತಿರುವುದು. ಇದು ಸ್ಮರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಆಕಾರಗಳು ಮತ್ತು ಅಂಕಿಗಳನ್ನು ಗುರುತಿಸುವ ಮೆದುಳಿನ ಪ್ರದೇಶ ಕಡಿಮೆ ಕೆಲಸ ಮಾಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಂದು ಚಟುವಟಿಕೆಯ ಚಿತ್ರಗಳನ್ನು ಅಪ್‌ಲೋಡ್ ಮಾಡುವಲ್ಲಿ ಹೆಚ್ಚು ಗಮನಹರಿಸುವುದರಿಂದ ಡಿಜಿಟಲ್ ಸಾಧನಗಳಲ್ಲೇ ಪ್ರತಿಯೊಂದು ವಿವರವನ್ನು ರೆಕಾರ್ಡ್ ಮಾಡುವಂತೆ ಆಗಿ, ಆ ಮಾಹಿತಿಯನ್ನು ದೀರ್ಘಕಾಲೀನ ಸ್ಮರಣೆಯಲ್ಲಿ ಸಂಗ್ರಹಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದಾಗಿ ಒಂದು ಘಟನೆ ನಡೆದಾಗ ಅದನ್ನು ಸರಿಯಾಗಿ ಬಿಡಿಸಿ ಅರ್ಥ ಮಾಡಿಕೊಳ್ಳಲು ಸಾದ್ಯವಾಗುವುದಿಲ್ಲ.

ಅಪ್ಪ ಅಗ್ತಾ ಇದ್ದೀರಾ? ಹಾಗಿದ್ದರೆ ತಂದೆತನ ಅನುಭವಿಸಲು ಕೆಲವು ಟ್ರಿಕ್ಸ್!
 

ಹೆತ್ತವರು ಏನು ಮಾಡಬೇಕು?
- ಪೋಷಕರು ತಮ್ಮ ಮಕ್ಕಳಿಗೆ ಫೋನ್‌ ಅಥವಾ ಯಾವುದೇ ಡಿಜಿಟಲ್ ಸಾಧನಗಳಿಗೆ ಸೀಮಿತ ಕಾಲಾವಕಾಶ ಮಾತ್ರ ಬಳಕೆಗೆ ನೀಡಬೇಕು.

- ಮಗು ಫೋನ್‌ನಲ್ಲಿ ಎಷ್ಟು ಹೊತ್ತು ಮಾತನಾಡುತ್ತದೆ, ಅದನ್ನು ಕಿವಿಗೆ ಎಷ್ಟು ಹತ್ತಿರ ಇಟ್ಟುಕೊಳ್ಳುತ್ತದೆ, ಮಾಮೂಲಿಗಿಂತ ಹೆಚ್ಚು ಗಲಾಟೆ ಮಾಡುತ್ತಿದೆಯೇ ಎಂಬಂತಹ ಕೆಲವು ವಿಷಯಗಳನ್ನು ಪೋಷಕರು ಅಗತ್ಯವಾಗಿ ಪರೀಕ್ಷಿಸಬೇಕು.

- ಫೋನ್‌ಗಳು ಅಥವಾ ಯಾವುದೇ ಡಿಜಿಟಲ್ ಸಾಧನಗಳ ಎಲ್ಲಾ ನ್ಯೂನತೆಗಳ ಬಗ್ಗೆ ನಿಮ್ಮ ಮಕ್ಕಳಿಗೆ ಸ್ನೇಹಪರವಾಗಿ ತಿಳಿಸಲು ಮರೆಯಬೇಡಿ.

- ಆನ್‌ಲೈನ್ ತರಗತಿಗಳ ಹೊರತಾಗಿ, ಅವರು ಇತರ ದೈಹಿಕ ಚಟುವಟಿಕೆಗಳಲ್ಲಿ ಅಥವಾ ಮನೆಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ.

- ಫೋನ್ ಬಳಸುವಾಗ, ಮಕ್ಕಳು ತಮ್ಮ ಕಣ್ಣುಗಳನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಕನ್ನಡಕವನ್ನು ಧರಿಸಬೇಕು.

- ಫೋನ್‌ನ ಸ್ಪೀಕರ್ ಆನ್ ಇಡುವುದು ಒಳ್ಳೆಯದು. ಕಿವಿಗಳಿಗೆ ಹತ್ತಿರ ಹಿಡಿಯುವುದು, ಇಯರ್‌ಫೋನ್ ಬಳಕೆಯನ್ನು ತಪ್ಪಿಸಿ.

- ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳು ಮಲಗುವ ಸಮಯದಲ್ಲಿ ಬಳಸಲೇಬಾರದು.

click me!