ಪ್ರೀತಿಯ ದಿನಗಳು ಸ್ವರ್ಗವಾದ್ರೆ, ಬ್ರೇಕ್ ಅಪ್ ನರಕ. ಸಂಗಾತಿ ಕೈಬಿಟ್ಟು ಹೋದ್ಮೇಲೆ ಅಳಲೂ ಆಗದ, ನಗಲೂ ಆಗದ ಸ್ಥಿತಿಯಲ್ಲಿ ಹುಡುಗರಿರ್ತಾರೆ. ಮುಂದೆ ಏನು ಮಾಡ್ಬೇಕು ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳಬೇಕೇ ವಿನಃ ಹಳೆ ದಿನ ನೆನೆದು ಹಾಳಾಗಬಾರದು.
ಪ್ರೀತಿ ಅರೆ ಕ್ಷಣದಲ್ಲಿ ಹುಟ್ಟಿದ್ರೂ ಅದನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳೋದು ಕಷ್ಟ. ಪ್ರೀತಿ ಚಿಗುರಿದ ಆರಂಭದಲ್ಲಿ ಎಲ್ಲವೂ ಸುಂದರವಾಗಿಯೇ ಕಾಣುತ್ತೆ. ವ್ಯಕ್ತಿಗಳು ಪರಸ್ಪರ ಹತ್ತಿರವಾದಂತೆ, ಒಬ್ಬರನ್ನೊಬ್ಬರು ಅರಿತಂತೆ ಸಮಸ್ಯೆಗಳು ಶುರುವಾಗುತ್ತವೆ. ಇಬ್ಬರ ಮಧ್ಯೆ ಆಗಾಗ ಆಗ್ತಿದ್ದ ಗಲಾಟೆ, ದಿನಕಳೆದಂತೆ ದಿನಕ್ಕೊಂದರೆಡು ಗಲಾಟೆ ನಡೆಯುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಾಗದೆ ಬ್ರೇಕ್ ಅಪ್ ಗೆ ಜನರು ಶರಣಾಗ್ತಾರೆ. ಬ್ರೇಕ್ ಅಪ್ ಎಂಬ ಪದ ಹೇಳೋದು ಸುಲಭ. ಇಷ್ಟು ದಿನ ಜೊತೆಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ನಂತ್ರ ಜೀವನ ಸ್ವಲ್ಪ ಕಠಿಣವೆನ್ನಿಸುತ್ತದೆ. ಅವರನ್ನು ಮರೆತು ಮುಂದೆ ಹೋಗಲು ಸಮಯಬೇಕು. ಹುಡುಗಿಯರು ಅತ್ತು ಅಥವಾ ಇನ್ನೊಬ್ಬರ ಜೊತೆ ತಮ್ಮ ಭಾವನೆ ಹಂಚಿಕೊಂಡು ಹಗುರಾಗುತ್ತಾರೆ. ಹುಡುಗರು ಹಾಗಲ್ಲ. ಅವರು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅಳುವುದು, ಇನ್ನೊಬ್ಬರ ಜೊತೆ ತಮ್ಮ ನೋವು ಹಂಚಿಕೊಳ್ಳುವುದು ಅವರಿಗೆ ಇಷ್ಟವಾಗೋದಿಲ್ಲ. ಬ್ರೇಕ್ ಅಪ್ ನಂತ್ರ ಹುಡುಗರ ಮುಂದೆ ಇರೋದು ಎರಡೇ ದಾರಿ. ಆ ದಾರಿ ಯಾವುದು, ನಿಮ್ಮ ಆಯ್ಕೆ ಯಾವುದು ಎಂಬುದನ್ನು ನೀವೇ ನಿರ್ಧರಿಸಿ.
ಮೊದಲ ದಾರಿ : ಬ್ರೇಕ್ ಅಪ್ (Break Up) ನಂತ್ರ ಬೇಸರವಾಗೋದು ಸಾಮಾನ್ಯ. ಇದ್ರಿಂದ ಮನಸ್ಸು ಘಾಸಿಗೊಂಡಿರುತ್ತದೆ. ನಕಾರಾತ್ಮಕ (Negative) ಭಾವನೆ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಮಾಜಿ ಮೇಲೆ ದ್ವೇಷ (Hate) ಶುರುವಾಗುತ್ತದೆ. ಸೇಡು ತೀರಿಸಿಕೊಳ್ಳಲು ಶುರು ಮಾಡ್ತಾರೆ. ಇಡೀ ದಿನ ಮಾಜಿ ಬಗ್ಗೆ ಆಲೋಚನೆ ಮಾಡಿ ಸಮಯ ಹಾಳು ಮಾಡ್ತಾರೆ. ಹೇಗೆ ದ್ವೇಷ ತೀರಿಸಿಕೊಳ್ಳಬೇಕು ಎನ್ನುವ ಚಿಂತನೆ ಮಾಡ್ತಾ ಕಾಲಹರಣ ಮಾಡ್ತಾರೆ. ಮಾಜಿಯ ಹಳೆ ಪೋಸ್ಟ್, ಫೋಟೋ ನೋಡ್ತಾ, ಅವಳು ಖುಷಿಯಾಗಿರದಂತೆ ತಡೆಯಲು ಏನೆಲ್ಲ ಪ್ರಯತ್ನ ಮಾಡ್ಬೇಕೋ ಅದನ್ನೆಲ್ಲ ಮಾಡ್ತಾ, ಅವಳ ಬಗ್ಗೆ ಮನಸ್ಸಿನಲ್ಲೇ ಆಲೋಚನೆ ಮಾಡಿ ಮಾಡಿ ದ್ವೇಷ, ನಕಾರಾತ್ಮಕ ಭಾವನೆಯಲ್ಲಿ ಬೆಂದು ಹೋಗ್ತಾರೆ. ಇದ್ರಿಂದ ಅವರ ಸಮಯ, ವಯಸ್ಸು, ಮನಸ್ಸು ಎಲ್ಲವೂ ಹಾಳಾಗುತ್ತೆ. ವ್ಯಕ್ತಿ ಕತ್ತಲ ಕೋಣೆಯಲ್ಲಿ ಜೀವನ ಮಾಡುವಂತಾಗುತ್ತದೆ. ಅದ್ರಿಂದ ಹೊರಬರಲು ವರ್ಷಗಳೇ ಹಿಡಿಯಬಹುದು.
undefined
ಬಾಯ್ ಫ್ರೆಂಡ್ ಫೋನ್ ಪಾಸ್ವರ್ಡ್ ಗೊತ್ತಿಲ್ವಾ? ಚಿಂತೆ ಬೇಡ, ಈಕೆ ಹೇಳೋ ಟೆಕ್ನಿಕ್ ಫಾಲೋ ಮಾಡಿ
ಎರಡನೇ ದಾರಿ : ಸಂಗಾತಿಯನ್ನು ಎಷ್ಟೇ ಪ್ರೀತಿ ಮಾಡಿರಲಿ, ಬ್ರೇಕ್ ಅಪ್ ನಂತ್ರ ಅದನ್ನು ಸಹಜ ಎನ್ನುವಂತೆ ಸ್ವೀಕರಿಸುವವರು ಎರಡನೇ ಮಂದಿ. ನಕಾರಾತ್ಮಕ ಭಾವನೆ ಮನಸ್ಸಿನಲ್ಲಿ ಬರಲು ಅವಕಾಶ ನೀಡದೆ, ಬಂದ ಆಲೋಚನೆಯನ್ನು ಸಕಾರಾತ್ಮಕವಾಗಿ ತಿರುಗಿಸುವುದು ಎರಡನೇ ದಾರಿ. ಇಲ್ಲಿ ವ್ಯಕ್ತಿ, ತನ್ನ ಹುಡುಗಿ ಬಗ್ಗೆ ಹೆಚ್ಚು ಆಲೋಚನೆ ಮಾಡಲು ಹೋಗುವುದಿಲ್ಲ. ಆಗಿದ್ದು ಆಗಿ ಹೋಗಿದೆ, ಮುಂದಿನ ದಾರಿ, ಗುರಿ ಬಗ್ಗೆ ಗಮನ ಹರಿಸಬೇಕು. ನನ್ನ ಯಶಸ್ಸಿನ ಮೂಲಕ ಎಲ್ಲರಿಗೂ ಪಾಠವಾಗಬೇಕು ಎಂಬ ಆಲೋಚನೆ ಮಾಡ್ತಾರೆ. ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಂಡು, ಮೈಗೊಡವಿ ಎದ್ದು ನಿಂತು ಮತ್ತೆ ಜೀವನ ನಡೆಸಲು ಮುಂದಾಗ್ತಾರೆ. ಜೀವನದಲ್ಲಿ ಮತ್ತೆ ನಗು, ಸಂತೋಷವನ್ನು ಕಾಣುತ್ತಾರೆ.
'ಮದುವೆ ಆಗ್ಲಾ?' ಹೀಗೆ ನಟಿ ಶ್ರದ್ಧಾ ಕಪೂರ್ ಕೇಳಿದ್ದು ಯಾರನ್ನು?
ಇದ್ರಲ್ಲಿ ಯಾವುದು ಉತ್ತಮ : ಎಲ್ಲರಿಗೂ ತಿಳಿದಿರುವಂತೆ ಎರಡನೇ ದಾರಿ ಉತ್ತಮ. ಈ ಮಾರ್ಗದಲ್ಲಿ ನಡೆಯುವುದು ಸ್ವಲ್ಪ ಕಠಿಣ ಎನ್ನಿಸಬಹುದು. ಯಾವುದೇ ವ್ಯಕ್ತಿ ಒಂದು ವಿಷ್ಯದ ಬಗ್ಗೆ ನಕಾರಾತ್ಮಕವಾಗಿ ಆಲೋಚನೆ ಮಾಡ್ತಿದ್ದರೆ ಅದು ಅವನಿಗೆ ಅರಿವಿಲ್ಲದೆ ಖುಷಿ ನೀಡಲು ಶುರು ಮಾಡಿರುತ್ತದೆ. ಆ ಖುಷಿಯಲ್ಲಿ ಮುಳುಗುವ ವ್ಯಕ್ತಿ ಮತ್ತಷ್ಟು ನಕಾರಾತ್ಮಕ ಚಿಂತೆಯಲ್ಲೇ ಕಾಲ ಕಳೆಯುತ್ತಾನೆ. ಆದ್ರೆ ಇದು ಆತನ ಜೀವನವನ್ನೇ ಹಾಳು ಮಾಡುತ್ತದೆ. ಒಂದು ಹುಡುಗಿಗೆ, ಒಂದು ಪ್ರೀತಿಗೆ ಇಡೀ ಜೀವನ ಸರ್ವನಾಶ ಮಾಡಿಕೊಳ್ಳೋದು ಯೋಗ್ಯವಲ್ಲ ಎಂದು ಅರಿತು, ಕಷ್ಟವೆನ್ನಿಸಿದ್ರೂ ಸಕಾರಾತ್ಮಕ ಆಲೋಚನೆ ಮಾಡ್ತಾ ಹೆಜ್ಜೆ ಇಡೋದು ಉತ್ತಮ. ನಿಮ್ಮ ದಾರಿ ನಿಮ್ಮ ಮುಂದಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ನಿಮಗೆ ಬಿಟ್ಟಿದ್ದು.