ಮಿಸ್ ಜಪಾನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾಡೆಲ್ ಸುಂದರಿ ಕರೋಲಿನಾ ಶಿನೋ ಅವರು ಇತ್ತೀಚೆಗಷ್ಟೆ ತಮಗೊಲಿದ್ದು ಬಂದ ಮಿಸ್ ಜಪಾನ್ ಕಿರೀಟವನ್ನು ಹಿಂದಿರುಗಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ವಿವಾಹಿತ ವ್ಯಕ್ತಿಯೊಂದಿಗಿನ ತಮ್ಮ ನಂಟು
ಮಿಸ್ ಜಪಾನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾಡೆಲ್ ಸುಂದರಿ ಕರೋಲಿನಾ ಶಿನೋ ಅವರು ಇತ್ತೀಚೆಗಷ್ಟೆ ತಮಗೊಲಿದ್ದು ಬಂದ ಮಿಸ್ ಜಪಾನ್ ಕಿರೀಟವನ್ನು ಹಿಂದಿರುಗಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ವಿವಾಹಿತ ವ್ಯಕ್ತಿಯೊಂದಿಗಿನ ತಮ್ಮ ನಂಟು, ಉಕ್ರೇನ್‌ನಲ್ಲಿ ಹುಟ್ಟಿ ಜಪಾನ್‌ನಲ್ಲಿ ಬೆಳೆದಿದ್ದ ಈ ಚೆಲುವೆಗೆ ಮಿಸ್ ಜಪಾನ್ ಕಿರೀಟ ನೀಡಿದ್ದಕ್ಕೆ ಈಗಾಗಲೇ ಜಪಾನ್ ಮೂಲ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಆಕೆಗೆ ವಿವಾಹಿತ ಪುರುಷನೊಂದಿಗೆ ಸಂಬಂಧವಿದೆ ಎಂದು ಜಪಾನ್‌ನ ವಾರ ಪತ್ರಿಕೆ ಸುದ್ದಿ ಪ್ರಸಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಈಗ ಅವರು ತಮ್ಮ ಮಿಸ್ ಜಪಾನ್ ಕಿರೀಟವನ್ನು ಆಯೋಜಕರಿಗೆ ಹಿಂದಿರುಗಿಸಿದ್ದಾರೆ.
ಕರೋಲಿನಾ ಶಿನೋ ಅವರಿಗೆ ವಿವಾಹಿತ ಟಕುಮಾ ಮೇಡಾ ಎಂಬಾತನೊಂದಿಗೆ ಸಂಬಂಧವಿದೆ ಎಂದು ವಾರಪತ್ರಿಕೆಯೊಂದು ಸುದ್ದಿ ಪ್ರಸಾರ ಮಾಡಿತ್ತು. ಕಳೆದ ತಿಂಗಳಷ್ಟೇ ಕರೋಲಿನಾ ಶಿನೋ ಅವರಿಗೆ ಮಿಸ್ ಜಪಾನ್ ಪ್ರಶಸ್ತಿ ಲಭಿಸಿತ್ತು. ಆದರೆ ಜಪಾನ್ ಮೂಲದವರಲ್ಲದವರಿಗೆ ಮಿಸ್ ಜಪಾನ್ ಪ್ರಶಸ್ತಿ ನೀಡುವುದು ಎಷ್ಟು ಸರಿ ಎಂದು ಜನ ಇದನ್ನು ಪ್ರಶ್ನೆ ಮಾಡಿದ್ದರು.
ಈ ಚರ್ಚೆ ಪ್ರಚಲಿತದಲ್ಲಿರುವಾಗಲೇ ಶುಕನ್ ಬುನ್‌ಶುನ್ ಎಂಬ ಜಪಾನ್ ವಾರಪತ್ರಿಕೆ ವಿವಾಹಿತ ಪ್ರಭಾವಿ ವ್ಯಕ್ತಿ ಹಾಗೂ ವೈದ್ಯನೂ ಆಗಿರುವ ಟಕುಮಾ ಮೇಡಾ ಎಂಬುವವರೊಂದಿಗೆ ಆಕೆ ಸಂಬಂಧ ಹೊಂದಿದ್ದಾಳೆ ಎಂದು ಸುದ್ದಿ ಪ್ರಕಟಿಸಿತ್ತು. ಆದರೆ ಸೌಂದರ್ಯ ಸ್ಪರ್ಧೆಯ ಆಯೋಜಕರು ಕರೋಲಿನಾ ಶಿನೋ ಅವರನ್ನು ಮೊದಲಿಗೆ ಸಮರ್ಥಿಸಿಕೊಂಡಿದ್ದರು. ಆತ ವಿವಾಹಿತ ಎಂಬುದು ಕರೋಲಿನಾ ಶಿನೋಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ನಂತರದಲ್ಲಿ ಆಕೆ ಆತ ವಿವಾಹಿತ ಎಂಬುದು ತಿಳಿದಿದ್ದೇ ಆಕೆ ಆತನೊಂದಿಗೆ ಡೇಟಿಂಗ್ ಮಾಡಿದ್ದಳು ಎಂಬುದು ಗೊತ್ತಾಗಿತ್ತು. ಇದಾದ ನಂತರ ಕರೋಲಿನಾ ಶಿನೋ ತನ್ನನ್ನು ನಂಬಿದ ಸೌಂದರ್ಯ ಸ್ಪರ್ಧೆಯ ಆಯೋಜಕರ ಬಳಿ ಆಕೆ ಕ್ಷಮೆಯಾಚಿಸಿದ್ದಾಳೆ.
ಜಪಾನ್ ಟೈಮ್ಸ್ ಪ್ರಕಾರ, ಆಕೆಯ ಮಾಡೆಲ್ ಏಜೆನ್ಸಿ ಫ್ರೀ ವೇವ್ ಸೋಮವಾರ ಹೇಳಿಕೆ ನೀಡಿದ್ದು, ಟಕುಮಾ ಮೇಡಾ ಮೊದಲಿಗೆ ತಾನು ಅವಿವಾಹಿತ ಎಂದು ಹೇಳಿಕೊಂಡಿದ್ದರು ಆದರೆ ನಂತರ ಆತನಿಗೆ ವಿವಾಹವಾಗಿರುವುದು ತಿಳಿದು ಬಂತು ಆದರೂ ಕರೋಲಿನಾ ಶಿನೋ ಅವರೊಂದಿಗಿನ ಸಂಬಂಧವನ್ನು ಮುಂದುವರೆಸಿದರು ಎಂದು ವರದಿ ಮಾಡಿದೆ. ನಾನು ಮಾಡಿದ ದೊಡ್ಡ ತೊಂದರೆಗಾಗಿ ಮತ್ತು ನನ್ನನ್ನು ಬೆಂಬಲಿಸಿದವರಿಗೆ ದ್ರೋಹ ಮಾಡಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಗೊಂದಲ ಹಾಗೂ ಭಯದಿಂದಾಗಿ ನನಗೆ ಸತ್ಯ ಹೇಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಈ ಮಿಸ್ ಜಪಾನ್ ಸೌಂದರ್ಯ ಸ್ಪರ್ಧೆ ಆಯೋಜಿಸಿರುವ ಮಿಸ್ ಜಪಾನ್ ಅಸೋಸಿಯೇಷನ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದು, ಈ ಸರಣಿ ಗೊಂದಲಗಳನ್ನು ಗಮನಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಡ್ಜ್‌ಗಳು ಹಾಗೂ ಪ್ರಾಯೋಜಕರ ಬಳಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ಕರೋಲಿನಾ ಶಿನೋ ಅವರು ತಮ್ಮ ಮಿಸ್ ಜಪಾನ್ ಕಿರೀಟವನ್ನು ಹಿಂದಿರುಗಿಸಿರುವುದರಿಂದ ಆ ಹುದ್ದೆಯೂ ಪ್ರಸ್ತುತ ಇಡೀ ವರ್ಷ ಖಾಲಿಯಾಗಿಯೇ ಉಳಿಯಲಿದ್ದು, ಮಿಸ್ ಜಪಾನ್ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲು ನಡೆದಿದ್ದಾಗಿದೆ.