ಐದು ಸಾವಿರ ಹುಡುಗೀರ ಮಧ್ಯೆ ಪರ್ಫೆಕ್ಟ್ ಸಂಗಾತಿ ಹುಡುಕಿಕೊಟ್ಟ ಚಾಟ್ ಜಿಪಿಟಿ !

By Suvarna News  |  First Published Feb 6, 2024, 12:44 PM IST

ಸಂಗಾತಿ ಹುಡುಕೊ ಚಿಂತೆ ಬಿಟ್ಬಿಡಿ. ಈ ಕೆಲಸವನ್ನೂ ಎಐ, ಚಾಟ್ ಜಿಪಿಟಿ ಮಾಡುತ್ತೆ. ನಿಮ್ಮ ಭಾವನೆಗಳ ಬಗ್ಗೆ ಅದಕ್ಕೆ ತರಬೇತಿ ನೀಡಿದ್ರೆ ಸಾಕು. ರಷ್ಯಾದ ವ್ಯಕ್ತಿಯೊಬ್ಬ ಇದೇ ಕೆಲಸ ಮಾಡಿ ಸಕ್ಸಸ್ ಆಗಿದ್ದಾನೆ. 
 


ಈಗಿನ ದಿನಗಳಲ್ಲಿ ಚಾಟ್ ಜಿಪಿಟಿ ಬಳಕೆದಾರರ ಸಂಖ್ಯೆ ಹೆಚ್ಚಾಗ್ತಿದೆ.  ಓಪನ್ ಎಐ ಕಂಪನಿ ಈ ಚಾಟ್ ಜಿಪಿಟಿಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮಷಿನ್ ಲರ್ನಿಂಗ್ ಮಾಡೆಲ್ ಆಗಿದೆ. ಸರಳವಾಗಿ ಹೇಳಬೇಕೆಂದ್ರೆ ನೀವು ಕೇಳುವ ಪ್ರಶ್ನೆಗಳಿಗೆ ಇದು ಸರಳ ರೂಪದಲ್ಲಿ ತಕ್ಷಣ ಉತ್ತರವನ್ನು ನೀಡುತ್ತದೆ. ಚಾಟ್ ಜಿಪಿಟಿ ನಿಮ್ಮ ಬಳಿ ಇದ್ರೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಒಂದು ಕಥೆ, ಕವನ ಇಲ್ಲವೆ ಗಣೀತ ಸೇರಿದಂತೆ ಯಾವುದೇ ವಿಷ್ಯವನ್ನು ಬರೆಯಲು, ಬಿಡಿಸಲು ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಅದಕ್ಕೆ ವಿಷ್ಯ ನೀಡಿದ್ರೆ ಅದೇ ಎಲ್ಲವನ್ನು ನಿಮ್ಮ ಮುಂದೆ ಇಡುತ್ತದೆ. ಅನೇಕ ಕಾರಣಕ್ಕೆ ಚಾಟ್ ಜಿಪಿಟಿ ಚರ್ಚೆಯಲ್ಲಿದೆ. ಈಗ ರಷ್ಯಾ ವ್ಯಕ್ತಿಯೊಬ್ಬ ಚಾಟ್ ಜಿಪಿಟಿ ಬಳಸಿಕೊಂಡು ತನ್ನ ಸಂಗಾತಿಯ ಆಯ್ಕೆ ಮಾಡಿಕೊಂಡಿದ್ದಾನೆ.  ಈ ವಿಷ್ಯವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.

ಜನರು ತಮ್ಮ ಸಂಗಾತಿ (Partner) ಯನ್ನು ಹುಡುಕಲು ಡೇಟಿಂಗ್ (Dating) ಅಪ್ಲಿಕೇಷನ್ ಬಳಸುತ್ತಾರೆ. ಅದ್ರಲ್ಲಿ ಟಿಂಡರ್ (Tinder) ಕೂಡ ಸೇರಿದೆ. ನಿಮ್ಮ ಪ್ರೊಫೈಲ್ ಸಿದ್ಧಪಡಿಸಿ ಅದಕ್ಕೆ ಅಪ್ಲೋಡ್ ಮಾಡಬೇಕು. ನಿಮ್ಮ ಪ್ರೊಫೈಲ್ ಗೆ ಮ್ಯಾಚ್ ಆಗುವ ವ್ಯಕ್ತಿಗಳು ಅಲ್ಲಿ ಕಾಣಸಿಗ್ತಾರೆ. ಅವರ ಜೊತೆ ಚಾಟ್ ಮಾಡುವ ಮೂಲಕ ನೀವು ಸಂಬಂಧವನ್ನು ಮುಂದುವರಿಸಬೇಕೆ, ಬೇಡವೇ ಎಂಬ ನಿರ್ಧಾರಕ್ಕೆ ಬರಬಹುದು. ಆದ್ರೆ ಈ ಅಪ್ಲಿಕೇಷನ್ ಮೂಲಕ ಸಂಗಾತಿ ಹುಡುಕೋದು ಸುಲಭವಲ್ಲ. ಅನೇಕ ಬಾರಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾರು ನನಗೆ ಹೊಂದಿಕೆ ಆಗಬಲ್ಲರು ಎಂಬ ಗೊಂದಲ ಕಾಡೋದಿದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಇದೇ ಟಿಂಡರ್ ಅಪ್ಲಿಕೇಷನ್ ನಲ್ಲಿ ಚಾಟ್ ಜಿಪಿಟಿ ಬಳಸಿಕೊಂಡು ವ್ಯಕ್ತಿಯೊಬ್ಬ  ತನ್ನ ಸಂಗಾತಿಯನ್ನು ಹುಡುಕಿದ್ದಾನೆ. ಮಾಧ್ಯಮಗಳ ವರದಿ ಪ್ರಕಾರ, 23 ವರ್ಷದ ಸಾಫ್ಟ್‌ವೇರ್ ಡೆವಲಪರ್ ಅಲೆಕ್ಸಾಂಡರ್ ಝ್ಡಾನ್, ಚಾಟ್‌ಜಿಪಿಟಿ ಮತ್ತು ಇತರ ಎಐ ಬಾಟ್‌ಗಳನ್ನು ಬಳಸಿಕೊಂಡು ಟಿಂಡರ್‌ನಲ್ಲಿ ಮ್ಯಾಚ್ ಆಗುವ ಹುಡುಗಿಯರ ಫಿಲ್ಟರ್ ಮಾಡಿದ್ದಾನೆ.

Latest Videos

undefined

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

5,000 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸಂಭಾಷಣೆ ನಡೆಸಿದ ಚಾಟ್ ಜಿಪಿಟಿ ಕೊನೆಯಲ್ಲಿ ಒಬ್ಬ ಹುಡುಗಿಯನ್ನು ಆಯ್ಕೆ ಮಾಡಿದೆ. ಆಕೆ ಹೆಸರು ಕರೀನಾ ಇಮ್ರಾನೋವ್ನಾ. ಈಕೆ ಆದರ್ಶ ಸಂಗಾತಿ ಎಂದು ಚಾಟ್ ಜಿಪಿಟಿ ಹಾಗೂ ಎಐ ನಿರ್ಧರಿಸಿದೆ ಎಂದು ಅಲೆಕ್ಸಾಂಡರ್ ಹೇಳಿದ್ದಾನೆ. ಒಂದೆರಡು ತಿಂಗಳಲ್ಲಿ ಚಾಟ್ ಜಿಪಿಟಿ ಸಂಗಾತಿ ಆಯ್ಕೆ ಮಾಡಿಲ್ಲ. ಪರ್ಫೆಕ್ಟ್ ಮ್ಯಾಚಿಂಗ್ ಹುಡುಕಲು ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದೆ. 

ಆರಂಭದಲ್ಲಿ ಅಲೆಕ್ಸಾಂಡರ್ ಗೆ ಚಾಟ್ ಜಿಪಿಟಿ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ಅವನ ಅಭಿಪ್ರಾಯವನ್ನು ಅದಕ್ಕೆ ತಿಳಿಸಿರಲಿಲ್ಲ. ಹಾಗಾಗಿ ಚಾಟ್ ಜಿಪಿಟಿ , ಸರಿಯಾಗಿ ಪ್ರತಿಕ್ರಿಯೆ ನೀಡ್ತಿರಲಿಲ್ಲ. ಕೊನೆಯಲ್ಲಿ ಅಲೆಕ್ಸಾಂಡರ್ ಚಾಟ್ ಜಿಪಿಟಿಯನ್ನು ಅರಿಯಲು ಯಶಸ್ವಿಯಾಗಿದ್ದಾನೆ. ತನ್ನ ಮಾತು, ಭಾವನೆಗಳಿಗೆ ತಕ್ಕಂತೆ ಅದನ್ನು ತರಬೇತಿಗೊಳಿಸಿದ್ದಾನೆ. ಆಗ ಎಐ, ಅಲೆಕ್ಸಾಂಡರ್ ಗೆ ಹೊಂದಿಕೆಯಾಗದ ಹುಡುಗಿಯರನ್ನು ಪಟ್ಟಿಯಿಂದ ಹೊರ ಹಾಕಿದೆ. 2023 ರ ಕೊನೆಯಲ್ಲಿ ಕರೀನಾಗೆ ಪ್ರಪೋಸ್ ಮಾಡಲು ಚಾಟ್ ಜಿಪಿಟಿ ನನ್ನನ್ನು ಕೇಳಿತ್ತು ಎಂದು ಅಲೆಕ್ಸಾಂಡರ್ ಹೇಳಿದ್ದಾನೆ. ನಮ್ಮ ಸಂಬಂಧ ಸಮತೋಲಿತ ಮತ್ತು ದೃಢವಾಗಿದೆ ಎಂದು ಆತ ಹೇಳಿದ್ದಾನೆ. 

ವ್ಯಾಲಂಟೈನ್ಸ್ ಡೇ ದಿನ ಮ್ಯಾಜಿಕ್ ಮಾಡಲಿದೆ ಕ್ಯಾಡ್ಬರಿ 5 ಸ್ಟಾರ್ ಫೆ. 14ರ ಸ್ಪೆಷಲ್ ಇದು!

ಅಲೆಕ್ಸಾಂಡರ್ ತನ್ನ ಜೊತೆ ಸಂವಹನ ನಡೆಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತಿದ್ದಾನೆ ಎಂದು ತಿಳಿದಾಗ ಕರೀನಾಗೆ ಗೊಂದಲ ಆಗಲಿಲ್ಲವಂತೆ. ಆಕೆ ಇದನ್ನು ಸಹಜವಾಗಿ ಸ್ವೀಕರಿಸಿದ್ದಾಳೆ. ಈಗ ಕರೀನಾ ಹಾಗೂ ಅಲೆಕ್ಸಾಂಡರ್ ಮದುವೆಯಾಗಿದ್ದು, ಒಟ್ಟಿಗೆ ಇರುವ ನಿರ್ಧಾರಕ್ಕೆ ಬಂದಿದ್ದಾರೆ. 

click me!