ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಎಂದಾದರೆ ಇಬ್ಬರೂ ಪರಸ್ಪರ ಇಬ್ಬರಿಗೂ ಇಷ್ಟವಾಗುವ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಪತಿ ಖುಷಿಯಾಗಿರಬೇಕು ಎಂದಾದರೆ ಪತ್ನಿ ಸ್ವಲ್ಪ ಹೊಂದಾಣಿಕೆ, ಶ್ರಮ ವಹಿಸಬೇಕು.
ಸಂಬಂಧದಲ್ಲಿ ಬೆಚ್ಚಗಿನ ಅನುಭವ ಆಗಬೇಕಾದರೆ ಪರಸ್ಪರ ಹಿತವಾದ ಬಾಂಧವ್ಯ ಇರಬೇಕು. ಅಲ್ಲಿ ಸರಸದೊಂದಿಗೆ ವಿರಸವೂ ಇರಬೇಕು, ರೋಮ್ಯಾಂಟಿಕ್ ಭಾವನೆಗಳು ಹೆಚ್ಚಾಗಿರಬೇಕು. ಪರಸ್ಪರ ಛೇಡಿಸುವುದು, ಕೀಟಲೆ ಎಲ್ಲವೂ ಸಮನಾಗಿ ಬೇಕು. ಸಂಗಾತಿಯೊಂದಿಗೆ ಸರಸವಾಡುತ್ತ ಖುಷಿಯಾಗಿರುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ, ಅದನ್ನು ಕಲಿತುಕೊಂಡರೆ ಸಂಗಾತಿಯೊಂದಿರುವಷ್ಟು ಸಮಯ ಆನಂದವಾಗಿ ಕಳೆಯಲು ಸಾಧ್ಯವಾಗುತ್ತದೆ. ಪರಸ್ಪರ ಖುಷಿಯಾಗಿರುವ ಸನ್ನಿವೇಶದಲ್ಲಿ ಮಾಡುವ ರೋಮ್ಯಾಂಟಿಕ್ ಕೀಟಲೆಗಳು ಸಂಬಂಧವನ್ನು ದೃಢವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆಪ್ತತೆ ಹೆಚ್ಚುವುದು ಅಂತಹ ಸನ್ನಿವೇಶಗಳಿಂದಲೇ. ಸಂಗಾತಿಯನ್ನು ಮುದ್ದಾದ ಹೆಸರಿನಿಂದ ಕೂಗುವುದು ಕೂಡ ಆಪ್ತ ಭಾವ ಮೂಡಿಸುವಂತಹ ಕ್ರಿಯೆ. ಸಂಬಂಧ ಹೆಚ್ಚು ಅರ್ಥವತ್ತಾಗಿದೆ ಎನ್ನಿಸಬೇಕಾದರೆ ಉತ್ತಮ ಸಲುಗೆಯೂ ಅಗತ್ಯ. ಸಾಮಾನ್ಯವಾಗಿ ಪುರುಷರು ರೋಮ್ಯಾಂಟಿಕ್ ಭಾವನೆಗಳಿಂದ ದೂರವಿರುತ್ತಾರೆ, ಅವರಿಗೆ ಕೆಲವು ಕ್ರಿಯೆಗಳು ಇಷ್ಟವಾಗುವುದಿಲ್ಲ ಎನ್ನುವ ಮಾತಿದೆ. ಹಾಗೇನೂ ಇಲ್ಲ, ಅವರೂ ಕೆಲವು ರೀತಿಯ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ಅವು ಕೇವಲ ರೋಮ್ಯಾಂಟಿಕ್ ಕ್ರಿಯೆಗಳೇ ಆಗಬೇಕೆಂದಿಲ್ಲ. ಪುರುಷರು ಇಷ್ಟಪಡುವ ಕೆಲವು ಸಾಮಾನ್ಯ ಚಟುವಟಿಕೆಗಳನ್ನು ಹೀಗೆ ಗುರುತಿಸಬಹುದು.
• ಯೋಜನೆ (Plan) ರೂಪಿಸುವುದು
ಪುರುಷರಿಗೆ (Male) ಹೆಚ್ಚು ಚರ್ಚೆ (Discussion) ಮಾಡುವುದು ಇಷ್ಟವಾಗುವುದಿಲ್ಲ. ಪತ್ನಿಯೊಂದಿಗೆ (Wife) ಚರ್ಚೆಗಿಳಿಯುವುದು ವೇಸ್ಟ್ ಎನ್ನುವುದು ಅವರ ಭಾವನೆ. ಅದರ ಬದಲು ಅವರು ತಮ್ಮೊಂದಿಗೆ ಪತ್ನಿಯೂ ಕೂಳಿತು ಯೋಜನೆ ರೂಪಿಸುವುದನ್ನು ಇಷ್ಟಪಡುತ್ತಾರೆ. ಯಾವುದಾದರೂ ಯೋಜನೆ ರೂಪಿಸುವಾಗ ಸಾಮಾನ್ಯವಾಗಿ ದಂಪತಿ (Couple) ವಾಗ್ವಾದಕ್ಕೆ ಇಳಿಯುತ್ತಾರೆ. ಹಾಗೆ ಮಾಡದೆ ಸೂಕ್ತವಾಗಿ ಮಾತನಾಡುವುದನ್ನು ಅವರು ಬಯಸುತ್ತಾರೆ. ಪತಿ (Husband) ಇಷ್ಟಪಡುವಂತೆ ಕೆಲವು ಚಟುವಟಿಕೆಗಳನ್ನಾದರೂ (Activities) ಪ್ಲಾನ್ ಮಾಡಿದರೆ ಅವರು ಭಾರೀ ಖುಷಿಯಾಗುತ್ತಾರೆ.
ದಾಂಪತ್ಯದಲ್ಲಿ ಏನೇನೋ ಅಡ್ಜಸ್ಟ್ ಮಾಡಿಕೊಳ್ಳಬಹುದು! ಗಂಡ ಗಂಡಲ್ಲದೇ ಹೋದರೆ?
• ಆಹಾರ ಹಂಚಿಕೊಳ್ಳುವುದು (Food Share) ಅಥವಾ ಅವರು ಇಷ್ಟಪಡುವ ಆಹಾರ ತರುವುದು
ಪುರುಷರು ಸಾಮಾನ್ಯವಾಗಿ ತಿಂಡಿಪೋತರು. ಅವರಿಗೆ ವಿಧವಿಧದ ತಿನಿಸುಗಳು ಇಷ್ಟ. ಆದರೆ, ಎಲ್ಲವನ್ನೂ ಮಾಡಿಹಾಕಲು ಮಹಿಳೆಯರಿಗೆ (Female) ಆಗಬೇಕಲ್ಲ? ಅಲ್ಲದೇ, ಅಷ್ಟೆಲ್ಲ ಪುರುಸೊತ್ತು, ಸಮಯ (Time) ಯಾರಿಗಿರುತ್ತದೆ? ಅದರ ಬದಲು ಅವರಿಗೆ ಇಷ್ಟವಾಗುವ ಆಹಾರವನ್ನು ತರಿಸಿದರೆ ಅವರು ಖುಷಿಯಾಗುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಇಷ್ಟವಾಗುವ ತಿನಿಸನ್ನು ಯಾವಾಗಲಾದರೂ ಮಾಡಿ ಒಂದೇ ಒಂದು ಬೈಟ್ (Bite) ತಿನ್ನಿಸಿದರೂ ಫುಲ್ ಖುಷಿಯಾಗುತ್ತಾರೆ. ಅವರಿಗೆ ತಿಳಿಯದಂತೆಯೇ ಸರ್ ಪ್ರೈಸ್ (surprise) ನೀಡಿದರೂ ಸಂತಸ ಪಡುತ್ತಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸಹ ಇಂತಹ ದಿನಗಳ ಸಮಯವಲ್ಲದೇ ಹೋದರೂ ಬೇರೆ ಯಾವುದಾದರೂ ಸಾಮಾನ್ಯ ದಿನಗಳಂದು ಅವರಿಗಾಗಿ ವಿಶೇಷ ಡಿನ್ನರ್ (Dinner) ಏರ್ಪಡಿಸಿದರೆ ಇಷ್ಟಪಡುತ್ತಾರೆ.
• ಮೂಡಿಲ್ಲದೆ ಇರುವಾಗ ಉತ್ತೇಜಿಸುವುದು (Pamper)
ಪುರುಷರು ಬಾಯಿಬಿಟ್ಟು ಏನನ್ನೂ ಹೇಳದಿದ್ದರೂ ಕೆಲವೊಮ್ಮೆ ಅವರ ಮೂಡ್ (Mood) ಪತ್ನಿಯರಿಗೆ ತಿಳಿಯುತ್ತದೆ. ಅಂತಹ ಸನ್ನಿವೇಶದಲ್ಲಿ ಏನಾಯಿತು ಎಂದು ಪದೇ ಪದೆ ಕೇಳಿ ಅವರ ತಲೆ ತಿನ್ನುವ ಬದಲು ಅವರಿಗೆ ಇಷ್ಟವಾಗುವ ಯಾವುದಾದರೂ ಕ್ರಿಯೆಯ ಮೂಲಕ ಅವರಿಗೆ ಸರ್ ಪ್ರೈಸ್ ನೀಡಿದರೆ ಖುಷಿಯಾಗುತ್ತಾರೆ. “ತನ್ನ ಪತ್ನಿ ತನಗಾಗಿ ಇಷ್ಟೆಲ್ಲ ಮಾಡುತ್ತಾಳೆʼ ಎಂದು ಭಾವುಕರಾಗುತ್ತಾರೆ. ಕೆಲವು ಪುರುಷರು ತೀರ ಸ್ವಾರ್ಥಿಗಳಾಗಿರುತ್ತಾರೆ. ಅವರು ತಮ್ಮ ಸುಖದ ಹೊರತಾಗಿ ಬೇರೆ ಏನೂ ಅರಿವಿಗೆ ಬರುವುದಿಲ್ಲ. ಆದರೆ, ಎಲ್ಲರೂ ಹಾಗಿರುವುದಿಲ್ಲ. ಅವರಿಗಾಗಿ ಚಿಕ್ಕದ್ದಾದರೂ ಏನಾದರೂ ಮಾಡಿದರೆ ಸಂತಸ (Happy) ಪಡುತ್ತಾರೆ.
ಮ್ಯಾರೀಡ್ ಲೈಫ್ ಚೆನ್ನಾಗಿರಬೇಕಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ
• ಅವರ ಕುಟುಂಬದೊಂದಿಗೆ ಬೆರೆಯುವುದು
ಇದು ಎಲ್ಲ ಪುರುಷರೂ ಇಷ್ಟಪಡುವ ಚಟುವಟಿಕೆ. ತಮ್ಮ ಕುಟುಂಬದೊಂದಿಗೆ ತಮ್ಮ ಪತ್ನಿ ಚೆನ್ನಾಗಿ ಬೆರೆತು (Involve) ಖುಷಿಯಾಗಿರುತ್ತಾಳೆ ಎಂದರೆ ಅವರು ನೆಮ್ಮದಿ ಹೊಂದುತ್ತಾರೆ. ಪತಿಯ ಕುಟುಂಬದೊಂದಿಗೆ ಬೆರೆಯುವ ಅವಕಾಶ ತಪ್ಪಿಸಿಕೊಳ್ಳದಿರುವುದು, ಜತೆಗೆ ಅವರೊಂದಿಗೆ ಬೆರೆಯುವ ಯೋಜನೆ ರೂಪಿಸಿದರೆ ನಿಮ್ಮ ಪತಿ ಫುಲ್ ಹ್ಯಾಪಿ ಆಗುತ್ತಾರೆ.