
ದೈಹಿಕ ಸಂಬಂಧದ ವಿಷ್ಯ ಬಂದಾಗ ಬಹುತೇಕರು ಮೌನ ತಳೆಯುತ್ತಾರೆ. ಸೆಕ್ಸ್ ಬಗ್ಗೆ ಮಾತನಾಡಲು ಜನರಿಗೆ ಮುಜುಗರ. ಆದ್ರೆ ಶಾರೀರಿಕ ಸಂಬಂದದ ಬಗ್ಗೆ ಸರಿಯಾಗಿ ತಿಳಿಯದೆ ಹೋದ್ರೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ದೈಹಿಕ ಸಂಬಂಧಗಳ ಅಗತ್ಯ ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಆದ್ರೆ ದೈಹಿಕ ಸಂಬಂದ ಬೆಳೆಸುವುದು ಪ್ರತಿಯೊಬ್ಬರಿಗೂ ಮುಖ್ಯ. ಯಾಕೆಂದ್ರೆ ದೀರ್ಘಕಾಲದವರೆಗೆ ಸಂಭೋಗ ಬೆಳೆಸದೆ ಹೋದ್ರೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಅನೇಕ ಸಂಶೋಧನೆ ನಡೆದಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ಕೂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಈ ಅಧ್ಯಯನದ ವರದಿಯಲ್ಲಿ, ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಬೆಳೆಸದೆ ಹೋದ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ಹೇಳಲಾಗಿದೆ.
ಅಧ್ಯಯನ (Study)ದ ವರದಿ ಹೇಳೋದೇನು? : ಸುಮಾರು 17,744 ಜನರನ್ನು ಸಂಶೋಧಕರು ಈ ಅಧ್ಯಯನಕ್ಕೆ ಬಳಸಿಕೊಂಡಿದ್ದರು. ಅದರಲ್ಲಿ ಶೇಕಡಾ 15.2 ರಷ್ಟು ಪುರುಷರು ಮತ್ತು ಶೇಕಡಾ 26.7 ಮಹಿಳೆಯರು ಒಂದು ವರ್ಷದಿಂದ ದೈಹಿಕ ಸಂಬಂಧ (physical relationship) ವನ್ನು ಬೆಳೆಸಿರಲಿಲ್ಲ. ಶೇಕಡಾ 8.7ರಷ್ಟು ಪುರುಷರು ಮತ್ತು ಶೇಕಡಾ 17.5ರಷ್ಟು ಮಹಿಳೆಯರು 5 ವರ್ಷಗಳಿಂದ ಯಾವುದೇ ರೀತಿಯ ದೈಹಿಕ ಸಂಬಂಧವನ್ನು ಬೆಳೆಸಿರಲಿಲ್ಲ. ದೀರ್ಘಕಾಲದಿಂದ ಲೈಂಗಿಕ ಸಂಬಂಧ ಬೆಳೆಸದೆ ಇರುವವರ ಆರೋಗ್ಯ (health) ಸ್ಥಿತಿ ಬಗ್ಗೆ ಅಧ್ಯಯನದಲ್ಲಿ ಕೆಲ ಕುತೂಹಲಕಾರಿ ವಿಷ್ಯ ಹೊರ ಬಿದ್ದಿದೆ.
ದೀರ್ಘಕಾಲ ದೈಹಿಕ ಸಂಬಂಧ ಬೆಳೆಸದೆ ಹೋದ್ರೆ ಅದರ ಪರಿಣಾಮ ಸಂತೋಷ (Happiness) ದ ಮಟ್ಟದಿಂದ ದೈಹಿಕ ಚಟುವಟಿಕೆಯವರೆಗೆ ಅನೇಕ ವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
Relationship Tips: ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಲಿ ಅನ್ನೋ ಗೊಂದಲಕ್ಕೆ ಮುಕ್ತಿ ಹಾಡಿ
ಸಂಭೋಗ (Intercourse) ಬೆಳೆಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಈಗಾಗಲೇ ಅನೇಕ ವರದಿಯಲ್ಲಿ ಹೇಳಲಾಗಿದೆ. ಸಂಭೋಗದಿಂದ ರಕ್ತದೊತ್ತಡ (Blood Pressure) ವನ್ನು ನಿಯಂತ್ರಿಸಬಹುದು. ಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು. ಆದ್ರೆ ದೀರ್ಘಕಾಲ ಲೈಂಗಿಕ ಸಂಬಂಧ ಬೆಳೆಸದೆ ಹೋದ್ರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸುವವರು ದೀರ್ಘಕಾಲದವರೆಗೆ ಸಂಭೋಗದಿಂದ ದೂರವಿದ್ರೆ ಅವರಿಗೆ ಸ್ಪರ್ಶದ ಹಸಿವು ಹೆಚ್ಚಾಗುತ್ತದೆ. ಇದ್ರಿಂದ ಮಾನಸಿಕ ಸಮಸ್ಯೆ ಎದುರಾಗುತ್ತದೆ. ಏಕಾಂಗಿಯಾಗಿ ವಾಸಿಸುವವರು ಖಿನ್ನತೆಗೆ ಒಳಗಾಗುತ್ತಾರೆ.
ಸೆಕ್ಸ್ ನೇರವಾಗಿ ರಕ್ತದೊತ್ತಡಕ್ಕೆ ಪರಿಣಾಮ ಬೀರುವುದಿಲ್ಲವಾದ್ರೂ ಒತ್ತಡದ ಸಮಸ್ಯೆಯೂ ಬಹಳಷ್ಟು ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಂತೆ ರಕ್ತದೊತ್ತಡದ ಸಮಸ್ಯೆಯೂ ಹೆಚ್ಚಾಗಬಹುದು.
2015 ರಲ್ಲಿ ನಡೆಸಿದ ಮತ್ತೊಂದು ಅಧ್ಯಯನದ ಪ್ರಕಾರ, ಸೆಕ್ಸ್, ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ. ಜೀವನದಲ್ಲಿ ಸೆಕ್ಸ್ ಇಲ್ಲವೆಂದ್ರೆ ಅನೇಕ ಮದುವೆ ಮುರಿದು ಬೀಳುತ್ತವೆ. ಸೆಕ್ಸ್ ಬರೀ ದೈಹಿಕ ಸುಖ ಮಾತ್ರವಲ್ಲ ಸಂತೋಷ ಮತ್ತು ಮಾಧುರ್ಯದ ಭಾವನೆಯನ್ನುಂಟು ಮಾಡುತ್ತದೆ. ಪರಸ್ಪರ ಸಂಗಾತಿಯನ್ನು ಒಂದು ಮಾಡುತ್ತದೆ.
ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ. ನಿಯಮಿತವಾಗಿ ದೈಹಿಕ ಸಂಬಂಧ ಬೆಳೆಸದೆ ಹೋದ್ರೆ ಆತಂಕ ಕಾಡುವ ಸಾಧ್ಯತೆಯಿದೆ. ಇದು ನೇರವಾಗಿ ಸಂಪರ್ಕ ಹೊಂದಿಲ್ಲದಿದ್ದರೂ ನಿಯಮಿತ ಲೈಂಗಿಕ ಸಂಬಂಧ ಹಾರ್ಮೋನುಗಳ ಆತಂಕದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ದಾಂಪತ್ಯದಲ್ಲಿ ಏನೇನೋ ಅಡ್ಜಸ್ಟ್ ಮಾಡಿಕೊಳ್ಳಬಹುದು! ಗಂಡ ಗಂಡಲ್ಲದೇ ಹೋದರೆ?
ಲೈಂಗಿಕ ಸಂಬಂಧ ಬೆಳೆಸದೆ ಹೋದ್ರೆ ದೈಹಿಕವಾಗಿ ಯಾವುದೇ ಪ್ರಮುಖ ಬದಲಾವಣೆ ಆಗದೆ ಇರಬಹುದು. ಆದ್ರೆ ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಸಮಸ್ಯೆ ಇದ್ರಿಂದ ಉಂಟಾಗುವ ಸಾಧ್ಯತೆಯಿದೆ. ಮನಸ್ಸು ಸಂತೋಷದಿಂದ ಇರಬೇಕು, ಒತ್ತಡ ಕಡಿಮೆಯಾಗ್ಬೇಕು, ಸದಾ ಲವಲವಿಕೆಯಿಂದ ಇರಬೇಕು ಎಂದಾದ್ರೆ ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸಬೇಕು ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.