ಪತ್ನಿಯ ದುಡಿಮೆ ಅರ್ಹತೆ ಪರಿಗಣನೆ ಬೇಡ, ಮಕ್ಕಳನ್ನು ಪೋಷಿಸುವ ಆಕೆಗೆ ಮಾಸಿಕ 36,000 ಜೀವನಾಂಶ ಕೊಡಿ: ಹೈಕೋರ್ಟ್‌ ಆದೇಶ

By Sathish Kumar KH  |  First Published Mar 3, 2024, 4:43 PM IST

ಹೆಂಡತಿಗೆ ದುಡಿಯುವ ಅರ್ಹತೆಯಿದೆ ಎಂಬ ಕಾರಣಕ್ಕೆ ಜೀವನಾಂಶ ನಿರಾಕರಣೆ ಸಲ್ಲದು. ಇಬ್ಬರು ಮಕ್ಕಳನ್ನು ಪೋಷಣೆ ಮಾಡುವ ನಿಮ್ಮ ಪತ್ನಿಗೆ ಮಾಸಿಕ 36,000 ರೂ. ಜೀವನಾಂಶವನ್ನು ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.


ಬೆಂಗಳೂರು (ಮಾ.03): ದಿನದ 24 ಗಂಟೆಯೂ ಕೂಡ ಮನೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಹೆಂಡತಿಗೆ ದಿನದ ಅಷ್ಟೂ ಸಮಯವೂ ಜವಾಬ್ದಾರಿ ಇರುತ್ತದೆ. ಆಕೆಗೆ, ದುಡಿಯುವ ಅರ್ಹತೆಯಿದೆ ಎಂಬ ಒಂದೇ ಕಾರಣಕ್ಕೆ ಜೀವನಾಂಶ ನಿರಾಕರಣೆ ಮಾಡುವುದು ಸರಿಯಲ್ಲ. ಕರ್ತವ್ಯನಿಷ್ಠ ತಾಯಿಯು, ಕರ್ತವ್ಯನಿಷ್ಠ ಹೆಂಡತಿಗಿಂತ ಉನ್ನತ ಸ್ಥಾನದಲ್ಲಿದ್ದಾಳೆ. ಹೀಗಾಗಿ, ನಿಮ್ಮ ಪತ್ನಿಗೆ ಮಾಸಿಕ 36,000 ರೂ. ಜೀವನಾಂಶವನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

2023ರ ಜೂನ್‌ನಲ್ಲಿ ಆನೇಕಲ್‌ನ ಸೆಷನ್ಸ್ ನ್ಯಾಯಾಲಯವು ಪತ್ನಿಗೆ 18,000 ರೂ. ಪಾತವಿಸುವಂತೆ ಹೇಳಿತ್ತು. ಇದಾದ ಬಳಿಕ ಮಹಿಳೆ ತನಗೆ 41 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದರಿಂದ ಜೀವನ ನಿರ್ವಹಣೆಗೆ ತಿಂಗಳಿಗೆ 36,000 ರೂ. ಹಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಆದರೆ, ಪತಿ ಕೆನರಾ ಬ್ಯಾಂಕ್ ಮ್ಯಾನೇಜರ್ ತತ್ಸಮಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೀವನಾಂಶ ಕೊಡಲು ಹಿಂದೇಟು ಹಾಕಿದ್ದರು. ಜೊತೆಗೆ, ನ್ಯಾಯಾಲಯದ ಮುಂದೆ ತನ್ನ ಹೆಂಡತಿ ಕೆಲಸ ಮಾಡಲು ಮತ್ತು ಸಂಪಾದಿಸಲು ಅರ್ಹಳಾಗಿದ್ದಾಳೆ. ಆದ್ದರಿಂದ ಹೆಚ್ಚಿನ ಆರ್ಥಿಕ ಬೆಂಬಲದ ಅಗತ್ಯವಿಲ್ಲ. ತನ್ನ ಪತ್ನಿಯು ಸೋಮಾರಿಯಾಗಿದ್ದಾಳೆ. ಹೀಗಾಗಿ, ಆಕೆ ಸಂಪಾದನೆ ಮಾಡುತ್ತಿಲ್ಲ ಎಂದು ಕೋರ್ಟ್‌ ಮುಂದೆ ಹೇಳಿದ್ದರು.

Latest Videos

undefined

ಬೆಂಗಳೂರಲ್ಲಿ ಕ್ರೂರಿ ತಾಯಿ; ತೊದಲು ನುಡಿಯೋ ಮಗುವಿನ ಮೈತುಂಬಾ ಗಾಯಗಳು, ಜನನಾಂಗವನ್ನೂ ಬಿಟ್ಟಿಲ್ಲ!

ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇದು 'ಅಸಂಬದ್ಧ ಹೇಳಿಕೆಯಾಗಿದೆ. ಮಹಿಳೆ ಸಂಪಾದನೆಗೆ ಅರ್ಹತೆ ಹೊಂದಿದ ಕಾರಣಕ್ಕೆ ಜೀವನಾಂಶ ಪಡೆಯಲು ಅನರ್ಹಳೆಂದು ಹೇಳಲಾಗುವುದಿಲ್ಲ. ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಆಕೆ ಬಿಡುವಿಲ್ಲದಂತೆ ಕೆಲಸ ಮಾಡುತ್ತಾಳೆ. ವಿಶೇಷವಾಗಿ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಆಕೆಯ ಜವಾಬ್ದಾರಿಗಳು ದಿನದ 24 ಗಂಟೆಯೂ ಇರುತ್ತವೆ. ಆದ್ದರಿಂದ ಜೀವನ ವೆಚ್ಚಕ್ಕೆ ಅನುಗುಣವಾಗಿ ಅಥವಾ ಅವರು ಪತಿಯೊಂದಿಗೆ ಉಳಿದುಕೊಂಡರೂ ಜೀವನಾಂಶವನ್ನು ಒದಗಿಸಬೇಕು. ಪತ್ನಿ ಕೆಲಸ ಮಾಡಲು ಅರ್ಹಳಾಗಿದ್ದಾಳೆ ಎಂಬ ವಾದದ ಆಧಾರದ ಮಾಸಿಕ ಕೇವಲ 18,000 ರೂ.ಗಳನ್ನು ಜೀವನಾಂಶ ಕೊಡುವಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ದೋಷವಿದೆ. ಹೀಗಾಗಿ, ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪತಿಯು ತನ್ನ ಪತ್ನಿಗೆ ಮಾಸಿಕ 36,000 ರೂ. ಹಣವನ್ನು ಜೀವನಾಂಶವಾಗಿ ಪಾವತಿಸುವಂತೆ ಸೂಚಿಸಿದ್ದಾರೆ. 

ಮುಂದುವರೆದು ಪತ್ನಿಯು ದಿನನಿತ್ಯ ತನ್ನ ಕರ್ತವ್ಯಗಳನ್ನು ಪೂರೈಸುತ್ತಿಲ್ಲ. ಆಕೆ ಜಗಳವಾಡುತ್ತಾಳೆ ಮತ್ತು ನನ್ನ ಉದ್ಯೋಗ ಭದ್ರತೆಯು ಅಸ್ಥಿರವಾಗಿದೆ ಎಂದು ಪತಿ ವಾದಿಸಿದರು. ಆದರೆ, ಪತಿ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಮ್ಯಾನೇಜರ್ ಕೇಡರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಖಾಸಗಿ ಉದ್ಯೋಗಗಳಂತೆ ಕಸಿದುಕೊಳ್ಳುವ ಕೆಲಸವಲ್ಲ. ನೀವು ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವುದು ಕಿಡಿಗೇಡಿತನವಾಗಿದೆ. ಕರ್ತವ್ಯನಿಷ್ಠ ತಾಯಿಯು, ಕರ್ತವ್ಯನಿಷ್ಠ ಹೆಂಡತಿಗಿಂತ ಉನ್ನತ ಸ್ಥಾನದಲ್ಲಿದ್ದಾಳೆ ಎಂದು ನ್ಯಾಯಾಲಯ ತಿಳಿಸಿದೆ.

ಮಾ.8ರಂದು ರಾಮೇಶ್ವರಂ ಕೆಫೆ ಮರು ಆರಂಭ; ಬಾಂಬ್ ಸಿಡಿಸಿದರೆ ನಾವು ಬೆದರೊಲ್ಲ ಎಂದ ಸ್ಥಳೀಯರು!

ಇನ್ನು ಹೆಂಡತಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರೂ ಮೊದಲ ಮಗುವಿನ ಜನನದ ನಂತರ, ತನ್ನ ಕೆಲಸವನ್ನು ಬಿಡಲು ಕೇಳಲಾಯಿತು. ಎರಡನೇ ಮಗು ಜನಿಸಿದಾಗ, ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿ ಸಂಪೂರ್ಣವಾಗಿ ಉದ್ಯೋಗವನ್ನು ತೊರೆದಿದ್ದರು. ನಿಮ್ಮ ಸಂಬಂಧ ಹಳಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಪತ್ನಿಯು ಜೀವನಾಂಶವನ್ನು ಕೇಳಿದಾಗ, ಹೆಂಡತಿಯು ಅರ್ಹತೆ ಹೊಂದಿದ್ದಾಳೆ ಎಂದು ಸಬೂಬು ಹೇಳುವುದು ಸರಿಯಲ್ಲ ಎಂದು ಪತಿಗೆ ಚಾಟಿ ಬೀಸಿದೆ.

click me!