ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರೂ, ಕೊನೆಗೆ ರಾತ್ರಿ ಮಲಗೋ ಹೊತ್ತಿಗೂ ಅವಳ ಚಿತ್ರವೇ ಬರುತ್ತಿರುತ್ತೆ. ಎಷ್ಟೋ ಸಲ ಕನಸಲ್ಲೂ ಆ ಹುಡುಗಿ ಬರ್ತಾಳೆ. ಅವಳ ಸೋಷಿಯಲ್ ಮೀಡಿಯಾ ಪೇಜ್ ಫಾಲೋ ಮಾಡೋದು, ಕ್ಷಣಕೊಮ್ಮೆ ಅದರಲ್ಲಿ ಏನಾದ್ರೂ ಅಪ್‌ಡೇಟ್ಸ್ ಇದೆಯಾ ಅಂತ ಚೆಕ್ ಮಾಡೋದು ದಿನಚರಿಯ ಭಾಗವೇ ಆಗಿದೆ.
ಕಿರಣ್ ಮತ್ತು ಸುಸ್ಮಿತಾ ನಾಲ್ಕೈದು ವರ್ಷ ಲವ್ ಮಾಡಿ ಮನಸಾರೆ ಇಷ್ಟಪಟ್ಟು ಮದ್ವೆ ಆದವ್ರು. ಆದರೆ ಇತ್ತೀಚೆಗೆ ಕಿರಣ್‌ಗೆ ಪಕ್ಕದ ಫ್ಲಾಟ್‌ಗೆ ಹೊಸದಾಗಿ ಬಂದಿರುವ ಹುಡುಗಿ ಬಗ್ಗೆ ವಿಪರೀತ ಅನಿಸೋವಷ್ಟು ಆಕರ್ಷಣೆ. ಶುರು ಶುರುವಿಗೆ ಇದ್ರಲ್ಲೇನೋ ಕಿಕ್ ಇದೆ ಅನಿಸಿದ್ದು, ಆಮೇಲಾಮೇಲೆ ಕೂತ್ರೂ ನಿಂತ್ರೂ ಅವಳದೇ ಧ್ಯಾನ ಅನ್ನೋ ಹಾಗಾಗಿದೆ. ಮನೇಲಿ ಹೆಂಡ್ತಿ ಮುಂದೆ ಇದ್ದರೂ, ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರೂ, ಕೊನೆಗೆ ರಾತ್ರಿ ಮಲಗೋ ಹೊತ್ತಿಗೂ ಅವಳ ಚಿತ್ರವೇ ಬರುತ್ತಿರುತ್ತೆ. ಎಷ್ಟೋ ಸಲ ಕನಸಲ್ಲೂ ಆ ಹುಡುಗಿ ಬರ್ತಾಳೆ. ಅವಳ ಸೋಷಿಯಲ್ ಮೀಡಿಯಾ ಪೇಜ್ ಫಾಲೋ ಮಾಡೋದು, ಕ್ಷಣಕೊಮ್ಮೆ ಅದರಲ್ಲಿ ಏನಾದ್ರೂ ಅಪ್‌ಡೇಟ್ಸ್ ಇದೆಯಾ ಅಂತ ಚೆಕ್ ಮಾಡೋದು ದಿನಚರಿಯ ಭಾಗವೇ ಆಗಿದೆ. ಇದೆಲ್ಲಾದರೂ ಹೆಂಡ್ತಿಗೆ ಗೊತ್ತಾದರೆ ಅನ್ನೋ ಭಯವೂ ಆಗಾಗ ಕಾಡುತ್ತಿರುತ್ತದೆ. ಹೆಂಡ್ತಿ ಭಯ ಮಾತ್ರ ಅಲ್ಲ, ಸಮಾಜದ ಭಯವೂ ಇದೆ. ವಿವಾಹಿತ ವ್ಯಕ್ತಿಯೊಬ್ಬ ಬೇರೆ ಹುಡುಗೀರಿಗೆ ಕಣ್ಣು ಹಾಕಿದ್ರೆ ಅಂಥವ್ರನ್ನು ಸೊಸೈಟಿ ಯಾವೆಲ್ಲ ಹೆಸರಿಂದ ಕರಿಯುತ್ತೆ ಅಂತಲೂ ಗೊತ್ತು. ಹೀಗಿರುವಾಗ ತಾನಿಂಥಾ ಸ್ಥಿತಿಗೆ ಬಿದ್ದಿರೋದು ಉಗುಳೋಕೂ ಆಗದ ನುಂಗೋಕೂ ಆಗದಂತಿದೆ.
ಪುರುಷ ಆಗಿರಲಿ, ಮಹಿಳೆ ಆಗಿರಲಿ. ಎಷ್ಟೇ ಲವ್(Love) ಮಾಡಿ ಮದುವೆ ಆಗಿದ್ರೂ ಇಂಥಾ ಅಟ್ರಾಕ್ಷನ್‌ನಲ್ಲಿ ಬೀಳೋದು ಅಪರೂಪ ಏನಲ್ಲ. ಎಲ್ಲರ ಲೈಫಲ್ಲೂ ಕೆಲವೊಮ್ಮೆ ಲೈಟಾಗಿ, ಇನ್ನೂ ಕೆಲವೊಮ್ಮೆ ಕಿರಣ್ ಥರ ಗಾಢವಾಗಿ ಈ ಅನುಭವ ಆಗಿರುತ್ತದೆ. ಇದಕ್ಕೆ ಕಾರಣ ಏನಿರಬಹುದು ಅಂತ ಹುಡುಕಿದ್ರೆ ಹತ್ತಾರು ಕಾರಣಗಳನ್ನು ಲಿಸ್ಟ್ ಮಾಡಬಹುದು. ಸಂಗಾತಿ ನಡುವಿನ ಕಮ್ಯೂನಿಕೇಶನ್ ಗ್ಯಾಪ್ (Communication gap), ಜಗಳ, ಇಗೋ ಹೀಗೆ ಸಂಬಂಧದಲ್ಲಿ ಅಂತರ ಮೂಡಲು ಸಾಕಷ್ಟು ಕಾರಣ ಸಿಗಬಹುದು. ಕೆಲವೊಮ್ಮೆ ಕಿರಣ್ ಕೇಸ್‌ನಲ್ಲಿ ಆದ ಥರ ಯಾವುದೇ ಕಾರಣ ಇಲ್ಲದೆಯೂ ಮೂರನೇ ವ್ಯಕ್ತಿಯ ಮೇಲೆ ಆಕರ್ಷಣೆ(Attraction) ಹುಟ್ಟಬಹುದು. ಕೆಲವೊಮ್ಮೆ ಇಂಥಾ ಆಕರ್ಷಣೆಗಳು ನೀರಸ ಬದುಕಿಗೆ ಕಿಕ್ ಕೊಡುತ್ತವೆ. ಸಪ್ಪೆ ಅನಿಸೋ ಲೈಫೂ ಇಂಟರೆಸ್ಟಿಂಗ್ ಅನಿಸೋಕೆ ಶುರುವಾಗುತ್ತೆ. ಆದರೆ ಹೆಚ್ಚಿನ ಸಲ ಇದರಿಂದ ಎಡವಟ್ಟಾಗೋದೇ ಹೆಚ್ಚು. ಪತಿ ಪತ್ನಿ ನಡುವಿನ ಗ್ಯಾಪ್(Gap) ಹೆಚ್ಚಾಗಬಹುದು. ದೈಹಿಕ ಸಾಮೀಪ್ಯ ಬೇಡ ಅನಿಸಬಹುದು. ಜಗಳ, ಮನಸ್ತಾಪ ಹೆಚ್ಚಾಗಬಹುದು.
ಕಪ್ಪಗಿರುವ ಹುಡುಗ ಬೇಡ, ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿದ ವಧು!
ಆದರೆ ಇಂಥ ಸಂಗತಿಗಳನ್ನು ಒಂದು ಲಿಮಿಟ್‌ನಲ್ಲಿಡೋದನ್ನು (Limit) ಕಲಿಯೋದು ಬಹಳ ಮುಖ್ಯ. ಆ ಲಿಮಿಟ್ ಮೀರಿ ಅಂಥಾ ಆಕರ್ಷಣೆಗಳು ಹತ್ತಿರ ಬರಬಾರದು. ಇವೆಲ್ಲ ಒಂಥರ ಜಂಕ್ ಫುಡ್‌ನ ಹಾಗೆ. ಆರೋಗ್ಯಕ್ಕೆ ಒಳ್ಳೇದಲ್ಲ. ಬಾಯಿ ಚಪಲಕ್ಕೆ ರುಚಿ ನೋಡಿದ್ರೂ ದಿನಾ ಅದನ್ನೇ ತಿಂದ್ರೆ ಲೈಫ್‌ಲಾಂಗ್ ರೋಗಿಗಳಾಗೋದು ಗ್ಯಾರಂಟಿ. ಹೀಗಾಗಿ ಇಂಥಾ ಆಕರ್ಷಣೆಗಳನ್ನು ಒಂದು ಗ್ಯಾಪ್ ಇಟ್ಕೊಂಡೇ ಡೀಲ್ ಮಾಡಿ. ಅದನ್ನು ದಾಟಿ ಬರಲು ಬಿಡಬೇಡಿ. ಪರ್ಸನಲ್ ಸಂಬಂಧಗಳಿಗೂ (Personal Relationship) ಇವಕ್ಕೂ ಹೋಲಿಕೆ ಮಾಡಬೇಡಿ. ಸಂಗಾತಿ ಜೊತೆ ಪ್ರಜ್ಞಾಪೂರ್ವಕವಾಗಿ ಹತ್ತಿರವಾಗಿರಿ. ಅವರಲ್ಲಿ ಅನ್ ಕಂಫರ್ಟ್ ಫೀಲ್ ಸೃಷ್ಟಿಸಬೇಡಿ.
ಈ ಆಕರ್ಷಣೆಯ ಅವಧಿ ಕೆಲವೇ ಸಮಯದ್ದು. ಆಮೇಲೆ ನೀರಿನ ಮೇಲಿನ ಗುಳ್ಳೆಯ ಹಾಗೆ ಇದು ಕರಗಿ ಹೋಗುತ್ತದೆ. ಆದರೆ ಲೈಫ್ ಪಾರ್ಟನರ್ (Life partner) ಜೊತೆಗಿನ ಸಂಬಂಧ ಹಾಗಲ್ಲ. ಅಲ್ಲಿ ಜಗಳ, ಮನಸ್ತಾಪ (Misunderstanding) ನೀರಿನ ಮೇಲಿನ ಗುಳ್ಳೆಯ ಹಾಗೆ ಕರಗಿ ಹೋಗಿ, ಒಳ್ಳೆತನ, ಪ್ರೀತಿ (Love), ಕಾಳಜಿ (Caring) ಕೊನೇವರೆಗೂ ಇರಬೇಕು. ಅದನ್ನು ಸಾಧ್ಯವಾಗಿಸಬೇಕು.
Throuple Relationship: ಇಲ್ಲಿ ಇಬ್ಬರಲ್ಲ, ಪತಿ–ಪತ್ನಿ ಜೊತೆಗಿರ್ತಾರೆ ಮೂರನೇಯವರು…!