ಪರ ಪುರುಷನೊಂದಿಗೆ ಮಲಗಲ್ಲ ಎಂದ ಹೆಂಡ್ತಿ, ಆಕೆಯ ಅಶ್ಲೀಲ ಫೋಟೋ ಊರೆಲ್ಲಾ ಅಂಟಿಸಿದ ಗಂಡ!

Published : Jun 10, 2023, 12:19 PM ISTUpdated : Jun 10, 2023, 12:24 PM IST
ಪರ ಪುರುಷನೊಂದಿಗೆ ಮಲಗಲ್ಲ ಎಂದ ಹೆಂಡ್ತಿ, ಆಕೆಯ ಅಶ್ಲೀಲ ಫೋಟೋ ಊರೆಲ್ಲಾ ಅಂಟಿಸಿದ ಗಂಡ!

ಸಾರಾಂಶ

ಗಂಡ-ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಈ ಮನೆಯಲ್ಲಿ ಇಬ್ಬರ ನಡುವಿನ ಜಗಳ ಹಾದಿ-ಬೀದಿ ರಂಪವಾಗಿದೆ. ಹೆಂಡ್ತಿ ಪರ ಪುರುಷನೊಂದಿಗೆ ಮಲಗಲು ನಿರಾಕರಿಸಿದ್ದಕ್ಕೆ ಸಿಟ್ಟಾದ ಗಂಡ ಆಕೆಯ ಅಶ್ಲೀಲ ಫೋಟೋವನ್ನು ಊರೆಲ್ಲಾ ಅಂಟಿಸಿದ್ದಾನೆ. ಉತ್ತರಪ್ರದೇಶದಲ್ಲಿ ಇಂಥಾ ವಿಚಿತ್ರ ಘಟನೆ ನಡೆದಿದೆ.

ಮದುವೆಯಾದ ನಂತರ ಪತಿ-ಪತ್ನಿಯರ ನಡುವೆ ಜಗಳ ನಡೆಯೋದು ಸಾಮಾನ್ಯ. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗುವುದೂ ಇದೆ. ಸಂಬಂಧ ಹದಗೆಟ್ಟಾಗ ಗಂಭೀರ ಆರೋಪ ಮಾಡುವುದು, ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಸಹ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇದೆಲ್ಲವನ್ನೂ ಮೀರಿ ವಿಚಿತ್ರವಾಗಿ ವರ್ತಿಸಿದ್ದಾನೆ. ಹೆಂಡ್ತಿ ಪರ ಪುರುಷನೊಂದಿಗೆ ಮಲಗಲು ನಿರಾಕರಿಸಿದ್ದಕ್ಕೆ ಸಿಟ್ಟಾದ ಗಂಡ ಆಕೆಯ ಅಶ್ಲೀಲ ಫೋಟೋವನ್ನು ಊರೆಲ್ಲಾ ಅಂಟಿಸಿದ್ದಾನೆ. ಉತ್ತರಪ್ರದೇಶದಲ್ಲಿ ಇಂಥಾ ವಿಚಿತ್ರ ಘಟನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಕುಡುಕ ಪತಿಯೊಬ್ಬ ತನ್ನ ಪತ್ನಿಯ (Wife) ಮೇಲೆ ಸೇಡು ತೀರಿಸಿಕೊಳ್ಳಲು ಯಾರೂ ಯೋಚಿಸದ ಕೆಲಸ ಮಾಡಿದ್ದಾನೆ. ಮಧ್ಯರಾತ್ರಿ ಎದ್ದು ಮನೆಯಿಂದ ಹೊರಗೆ ಹೋಗಿ ಊರಿನ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದಾನೆ. ಪೋಸ್ಟರ್ ಯಾವುದೇ ಜಾಹೀರಾತಿನದ್ದಲ್ಲ. ಬದಲಿಗೆ ಆತನ ಹೆಂಡತಿಯದ್ದು. ಹೌದು, ನಂಬಲು ಕಷ್ಟವಾದರೂ ಇದು ನಿಜ. ಪೋಸ್ಟರ್‌ನಲ್ಲಿ ವ್ಯಕ್ತಿಯ ಹೆಂಡತಿಯ ಅಶ್ಲೀಲ ಚಿತ್ರವಿತ್ತು, ಅದನ್ನು ಗಂಡನೇ ತಯಾರಿಸಿ ಗೋಡೆಗೆ ಅಂಟಿಸಿದ್ದಾನೆ.

ಬೇಕಾ ಇನ್ನೊಬ್ಳು..ಗಂಡನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ ಹೆಂಡ್ತಿ!

 ಪತ್ನಿಗೆ ಪರ ಪುರುಷನೊಂದಿಗೆ ಮಲಗಲು ಒತ್ತಾಯಿಸುತ್ತಿದ್ದ ಗಂಡ
ಸಂತ್ರಸ್ತೆ, ಪೊಲೀಸರ ಮುಂದೆ ಪತಿ (Husband) ಮೇಲೆ ಮಾಡಿರುವ ಆರೋಪ ಬೆಚ್ಚಿ ಬೀಳಿಸುವಂತಿದೆ. ಆಕೆಯ ಪತಿ ಎಷ್ಟು ದೊಡ್ಡ ಕುಡುಕ ಮತ್ತು ಜೂಜುಕೋರನಾಗಿದ್ದನೆಂದರೆ ಅವನು ತನ್ನ ಕಾಮವನ್ನು ಪೂರೈಸಲು ಹೆಂಡತಿಯನ್ನು ಪಣಕ್ಕಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಆಗಾಗ ಅಪರಿಚಿತರನ್ನು ಕರೆದುಕೊಂಡು ಬಂದು ಅವರ ಜೊತೆ ಮಲಗುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಹಾಗೆ ಮಾಡದಿದ್ದಕ್ಕೆ ಆಗಾಗ ಆಕೆಯನ್ನು ಥಳಿಸುತ್ತಿದ್ದ. ಗಂಡನ ದಬ್ಬಾಳಿಕೆಯಿಂದ ಬೇಸತ್ತು ತನ್ನ ಆಕೆ ತಾಯಿಯ ಮನೆಗೆ ಹೋದಳು., ಆದರೆ ಪತಿ ಅವಳನ್ನು ಹಿಂಬಾಲಿಸುವುದನ್ನು ನಿಲ್ಲಿಸಲಿಲ್ಲ.

16 ವರ್ಷದ ಮಗಳೊಂದಿಗೆ ಆತ್ಮಹತ್ಯೆ ಬೆದರಿಕೆ
ಸಂತ್ರಸ್ತ, ಆಗ್ರಾದ ಡಿಸಿಪಿ ಸಿಟಿ ವಿಕಾಸ್ ಕುಮಾರ್ ಅವರ ಮುಂದೆ ಹಾಜರಾಗಿ ಪತಿಯ ಪಾಪವನ್ನು ಬಯಲಿಗೆಳೆದಿದ್ದಾರೆ. ಗಂಡನಿಂದ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದು, ತನಗೆ ನ್ಯಾಯ ಸಿಗದಿದ್ದರೆ 16 ವರ್ಷದ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಡಿಸಿಪಿ ಆದೇಶದ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ (Enquiry) ಆರಂಭಿಸಲಾಗಿದೆ. ತನಿಖೆ ಮುಗಿದ ನಂತರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Relationship Tips: ಸುಖಿ ದಂಪತಿಗಳು ಹೀಗೆಲ್ಲ ವರ್ತಿಸೋದಿಲ್ಲ, ದಾಂಪತ್ಯ ಚೆನ್ನಾಗಿರ್ಬೇಕು ಅಂದ್ರೆ ನೀವೂ ಹೀಗೆಯೇ ಇರಿ

ಗಂಡನ ಪಾಪಕೃತ್ಯ ಸಿಸಿಟಿವಿಯಲ್ಲಿ ಸೆರೆ
ಸಾಕ್ಷ್ಯಾಧಾರಗಳು ಬಲವಾಗಿರುವ ಕಾರಣ ಸಂತ್ರಸ್ತ ಮಹಿಳೆಯ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ವಾಸ್ತವವಾಗಿ, ಸಿಸಿಟಿವಿ ದೃಶ್ಯಾವಳಿಗಳು ಆರೋಪಿ ಪತಿಯ ದುಷ್ಕೃತ್ಯವನ್ನು ಬಹಿರಂಗಪಡಿಸಿವೆ. ಆರೋಪಿ ಪತಿ, ಪತ್ನಿಯೊಂದಿಗೆ ಜಗಳವಾಡಿರುವುದು, ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದು ಬಯಲಾಗಿದೆ. ಜೊತೆಯಲ್ಲೇ ವ್ಯಕ್ತಿ, ತನ್ನ ಹೆಂಡತಿಯ ಅಶ್ಲೀಲ ಚಿತ್ರದ ಪೋಸ್ಟರ್‌ನ್ನು ಗೋಡೆಯ ಮೇಲೆ ಅಂಟಿಸುವುದು ಸಿಸಿಟಿವಿಯಲ್ಲಿ ಕಂಡುಬರುತ್ತದೆ.

ಈ ವಿಷಯ ಬಯಲಿಗೆ ಬಂದ ನಂತರ ಆರೋಪಿ ಪತಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇಂತಹ ಪಾಪಿ ಗಂಡನ ವಿರುದ್ಧ ನೊಂದ ಪತ್ನಿ ಮೊದಲು ಏಕೆ ಧ್ವನಿ ಎತ್ತಲಿಲ್ಲ ಎಂಬುದು ಪ್ರಶ್ನೆ. ಅಷ್ಟಕ್ಕೂ ಗಂಡನ ತಪ್ಪು ಬೇಡಿಕೆಯನ್ನು ಮೊದಲೇ ಏಕೆ ತಿರಸ್ಕರಿಸಲಿಲ್ಲ. ಅವಳು ಯಾಕೆ ತುಂಬಾ ಬಳಲುತ್ತಿದ್ದಳು? ಮೆಟ್ರೋಪಾಲಿಟನ್ ನಗರಗಳಲ್ಲಿ ಗಂಡ ಮತ್ತು ಹೆಂಡತಿಯ ಒಪ್ಪಿಗೆಯೊಂದಿಗೆ ಪಾಲುದಾರರನ್ನು ಬದಲಾಯಿಸುವ ಕೊಳಕು ಆಟದ ಬಗ್ಗೆ ಪ್ರತಿಯೊಬ್ಬರೂ ಕೇಳಿರಬೇಕು, ಆದರೆ ಈ ಕೃತ್ಯವು ಇನ್ನಷ್ಟು ನಾಚಿಕೆಗೇಡಿನ ಸಂಗತಿಯಾಗಿದೆ. ಸಂಬಂಧದಲ್ಲಿ ಪ್ರೀತಿ, ವಿಶ್ವಾಸವಿಲ್ಲದಿದ್ದರೆ ಗಂಡ ಹೆಂಡತಿಯ ಸಂಬಂಧ (Relationship) ಪಾಪದ ಹೊರೆಯಾಗಿ ಉಳಿಯುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!