ಪತಿ ಇನ್ನೊಬ್ಬರನ್ನು ಕದ್ದು ನೋಡಿದ್ರೂ ಗುದ್ದು ಹಾಕುವ ಪತ್ನಿಯರ ಮಧ್ಯೆ ಈಗ ಹೊಸ ಟ್ರೆಂಡ್ ಶುರುವಾಗಿದೆ. ಪತಿ – ಪತ್ನಿ ಸೇರಿಯೇ ಇನ್ನೊಬ್ಬ ಪಾರ್ಟನರ್ ಹುಡುಕಾಟ ನಡೆಸ್ತಾರೆ. ಕೊನೆಯಲ್ಲಿ ಏನು ಮಾಡ್ತಾರೆ ಗೊತ್ತಾ?
ಹಿಂದೆ, ಪತಿ – ಪತ್ನಿ ಅಥವಾ ಪ್ರೇಮಿಗಳ ಮಧ್ಯೆ ಇನ್ನೊಬ್ಬ ವ್ಯಕ್ತಿಯ ಪ್ರವೇಶವಾದ್ರೆ ಆ ಸಂಬಂಧ ಮುರಿದು ಬೀಳ್ತಿತ್ತು. ಇನ್ನೊಬ್ಬರ ಕಾರಣಕ್ಕೆ, ದೀರ್ಘಕಾಲದಿಂದ ಜೊತೆಗಿದ್ದವರು ಕೂಡ ಬೇರೆಯಾಗ್ತಿದ್ದರು. ಆದ್ರೆ ಕಾಲ ಬದಲಾಗಿದೆ. ಹೊಸ ಹೊಸ ರಿಲೇಶನ್ಶಿಪ್ ಗಳು ಸೇರಿಕೊಂಡಿವೆ. ಕೆಲವೊಂದು ಸಂಬಂಧದ ಹೆಸರು ನೆನಪಿಟ್ಟುಕೊಳ್ಳೋದೇ ಕಷ್ಟವಾಗಿದೆ. ಇಬ್ಬರ ಮಧ್ಯೆ ಇನ್ನೊಬ್ಬರು ಬಂದ್ರೆ ದೂರವಾಗ್ತಿದ್ದ ಜನ, ಈಗ ಸಂತೋಷಕ್ಕಾಗಿ ಇನ್ನೊಬ್ಬರನ್ನು ಅರಸಿ ಹೋಗ್ತಿದ್ದಾರೆ. ಮೂವರು ಒಟ್ಟಿಗೆ ಜೀವನ ನಡೆಸುವ ಟ್ರೆಂಡ್ ಈಗ ಹೆಚ್ಚು ಸುದ್ದಿ ಮಾಡ್ತಿದೆ. ಅದಕ್ಕೆ ಟ್ರಿಪಲ್ ರಿಲೇಶನ್ಶಿಪ್ ಎಂದು ಕರೆಯಲಾಗುತ್ತದೆ. ಟ್ರಿಪಲ್ ರಿಲೇಶನ್ಶಿಪ್ ನಲ್ಲಿ ಪತಿ, ಪತ್ನಿ ಮತ್ತು ಇನ್ನೊಬ್ಬರು ಒಟ್ಟಿಗೆ ಜೀವನ ನಡೆಸುವ ಜೊತೆಗೆ ಸಂತೋಷದ ಜೀವನ ಕಳೆಯುತ್ತಾರೆ.
ಒಬ್ಬ ಸಂಗಾತಿ (Partner) ಜೊತೆ ಜೀವನ ನಡೆಸಲು ಹೆಣಗಾಡ್ತಿರುವ ಜನರಿಗೆ ಇದು ಅಚ್ಚರಿ ಹುಟ್ಟಿಸಬಹುದು. ಆದ್ರೆ ಈ ಟ್ರಿಪಲ್ (Triple) ರಿಲೇಶನ್ಶಿಪ್ ಹೊಸದೇನಲ್ಲ. ಅನೇಕ ವರ್ಷಗಳಿಂದ ಇದು ಅಲ್ಲೊಂದು ಇಲ್ಲೊಂದು ಕಾಣಸಿಗುತ್ತಿದೆ. ಆದ್ರೆ ಹೆಚ್ಚು ಪ್ರಸಿದ್ಧಿಗೆ ಬಂದಿರಲಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಹೆಚ್ಚು ಚರ್ಚೆಯಾಗ್ತಿದ್ದು, ಟ್ರಿಪಲ್ ರಿಲೇಶನ್ಶಿಪ್ (Relationship) ನಲ್ಲಿರುವವರು ಇದೊಂದು ಅತ್ಯುತ್ತಮ ಅನುಭವ ಅಂತಾ ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ. ನಾವಿಂದು ಟ್ರಿಪಲ್ ರಿಲೇಶನ್ಶಿಪ್ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
'ಆತ್ಮ ಸಂಗಾತಿ'ಗಾಗಿ ಹಂಬಲ ಏಕೆ?: ಸದ್ಗುರು ಏನು ಹೇಳುತ್ತಾರೆ?
ಟ್ರಿಪಲ್ ರಿಲೇಶನ್ಶಿಪ್ ಅಂದ್ರೇನು? : ಮೊದಲೇ ಹೇಳಿದಂತೆ ಪತಿ –ಪತ್ನಿ ಜೊತೆಗೆ ಇನ್ನೊಬ್ಬರಿರೋದನ್ನು ಟ್ರಿಪಲ್ ರಿಲೇಶನ್ಶಿಪ್ ಎನ್ನಲಾಗುತ್ತದೆ. ಇಲ್ಲಿ ಮೂವರೂ ಮದುವೆಯಾಗೋದಿಲ್ಲ. ಮೂವರೂ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರೀತಿಯಿಂದ ಬದುಕುತ್ತಾರಷ್ಟೆ. ಕೇವಲ ದೈಹಿಕ ಸುಖಕ್ಕೆ ಜನರು ಈ ಸಂಬಂಧವನ್ನು ಬೆಳೆಸೋದಿಲ್ಲ. ಯಾವುದೇ ಲಿಂಗದ ಅಥವಾ ಸೆಕ್ಸ್ ನಲ್ಲಿ ಆಸಕ್ತಿಯಿಲ್ಲದ ಜನರು ಕೂಡ ಇದ್ರಲ್ಲಿ ಭಾಗಿಯಾಗ್ಬಹುದು. ಅನೇಕ ಕಡೆ ಒಂದು ಹುಡುಗಿ ಹಾಗೂ ಇಬ್ಬರು ಪುರುಷರು ವಾಸಿಸಲು ಅನುಮತಿ ಇಲ್ಲದ ಕಾರಣ ಬಹುತೇಕ ಟ್ರಿಪಲ್ ರಿಲೇಶನ್ಶಿಪ್ ನಲ್ಲಿ ಇಬ್ಬರು ಹುಡುಗಿಯರ ಜೊತೆ ಒಬ್ಬ ಹುಡುಗ ಜೀವನ ನಡೆಸ್ತಾನೆ.
ಭಾರತಕ್ಕೆ ಟ್ರಿಪಲ್ ರಿಲೇಶನ್ಶಿಪ್ ಹೊಸದಾ? : ಟ್ರಿಪಲ್ ರಿಲೇಶನ್ಶಿಪ್ ಎನ್ನುವ ಹೆಸರು ಭಾರತೀಯರಿಗೆ ಹೊಸದಾಗಿರಬಹುದು ಆದ್ರೆ ಪರಿಕಲ್ಪನೆ ಹೊಸದಲ್ಲ. ಭಾರತದಲ್ಲೇ ಅನೇಕರು ಈ ಸಂಬಂಧದಲ್ಲಿದ್ದಾರೆ. ಇತ್ತೀಚಿಗೆ ಯುಟ್ಯೂಬರ್ ಅರ್ಮಾನ್ ಮಲಿಕ್ ಈ ವಿಷ್ಯದಲ್ಲಿ ಚರ್ಚೆಗೆ ಬಂದಿದ್ದರು. ಇಬ್ಬರು ಪತ್ನಿಯರ ಜೊತೆ ವಾಸಮಾಡ್ತಿರುವ ಮಲ್ಲಿಕ್, ಪಾಯಲ್ ಹಾಗೂ ಕೃತಿಕಾರಿಂದ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. ಅರ್ಮಾನ್ ಮಲಿಕ್ ಮಾತ್ರವಲ್ಲ ಭಾರತದಲ್ಲಿ ಹಿಂದಿನ ಕಾಲದಲ್ಲಿಯೇ ಇಬ್ಬರು ಮಹಿಳೆಯರನ್ನು ಮದುವೆಯಾದ ಅನೇಕ ಪುರುಷರನ್ನು ನಾವು ಕಾಣ್ಬಹುದು.
Extra Marital Affairs: ಪ್ರೀತಿಸಿ ಮದುವೆಯಾದ ಹುಡುಗ್ರು ಅಕ್ರಮ ಸಂಬಂಧ ಬೆಳೆಸೋದ್ಯಾಕೆ?
ಟ್ರಿಪಲ್ ರಿಲೇಶನ್ಶಿಪ್ ಲಾಭ : ಟ್ರಿಪಲ್ ರಿಲೇಶನ್ಶಿಪ್ ನಲ್ಲಿದ್ದಾಗ ಎಲ್ಲರೂ ಒಟ್ಟಿಗೆ ವಾಸ ಮಾಡೋದ್ರಿಂದ ಒಂಟಿತನಕ್ಕೆ ಅವಕಾಶವಿಲ್ಲ. ಏಕೆಂದರೆ ಯಾವುದೇ ಇಬ್ಬರ ನಡುವೆ ಜಗಳ ಅಥವಾ ವೈಮನಸ್ಸು ಉಂಟಾದಾಗ, ಮೂರನೆಯವರು ಪರಿಸ್ಥಿತಿ ಸರಿಪಡಿಸ್ತಾರೆ. ಇದ್ರಿಂದ ಜಗಳ ಬೇಗ ಕೊನೆಗೊಳ್ಳುತ್ತದೆ. ಟ್ರಿಪಲ್ ರಿಲೇಶನ್ಶಿಪ್ ನಲ್ಲಿ ಮೂವರು ಪರಸ್ಪರ ಬೆಂಬಲಕ್ಕೆ ನಿಲ್ತಾರೆ.
ಟ್ರಿಪಲ್ ರಿಲೇಶನ್ಶಿಪ್ ನ ನಷ್ಟ : ಟ್ರಿಪಲ್ ಸಂಬಂಧದಲ್ಲಿ ಪಾಲುದಾರರ ನಡುವೆ ಅಸೂಯೆಯ ಭಾವನೆ ಹೆಚ್ಚಾಗುವ ಸಾಧ್ಯತೆಯಿದೆ. ಇಬ್ಬರು ಪಾಲುದಾರರ ನಡುವಿನ ನಿಕಟತೆಯ ಇದಕ್ಕೆ ಕಾರಣವಾಗಬಹುದು. ಅವರಿಂದ ಬೇರ್ಪಟ್ಟಂತೆ ಇನ್ನೊಬ್ಬ ಭಾವಿಸಬಹುದು. ಮೂವರ ಸ್ವಭಾವಕ್ಕೆ ಹೊಂದಿ ನಡೆಯುವುದು ಕಷ್ಟವಾಗುತ್ತದೆ.
ಪತಿ – ಪತ್ನಿ ಇಬ್ಬರ ಸಂಬಂಧಕ್ಕೆ ಹೋಲಿಕೆ ಮಾಡಿದ್ರೆ ತ್ರಿಪಲ್ ರಿಲೇಶನ್ಶಿಪ್ ಸವಾಲಿನದು. ಇಬ್ಬರ ಒಪ್ಪಿಗೆ ಮೇರೆಗೆ ಇನ್ನೊಬ್ಬರ ಪ್ರವೇಶವಾಗಿದ್ದರೂ ಅನೇಕ ಸಮಸ್ಯೆಗಳು ಮುಂದೆ ಎದುರಾಗಬಹುದು. ಈ ಸಂಬಂಧಕ್ಕೆ ಒಪ್ಪುವ ಮುನ್ನ ಅನೇಕ ಬಾರಿ ವಿಚಾರ, ಚರ್ಚೆ ಮಾಡಿ, ನಿಮ್ಮಿಷ್ಟ ಕಷ್ಟಗಳನ್ನು ಹೇಳಿ ನಿರ್ಧಾರಕ್ಕೆ ಬರುವುದು ಒಳ್ಳೆಯದು.