ಏನೇ ಆದ್ರೂ ಗಂಡ ಹೆಂಡ್ತಿಗೆ ಅನ್ನಬಾರದು 'ಆ ಒಂದು ಮಾತು'.. ಇಲ್ಲದಿದ್ರೆ ಡಿವೋರ್ಸ್ ಪಕ್ಕಾ ಅಂತಾರೆ ಸೈಕಾಲಜಿಸ್ಟ್!

Published : Jun 10, 2026, 11:50 AM IST
Marriage advice for husbands

ಸಾರಾಂಶ

Marriage advice for husbands: ದಾಂಪತ್ಯದಲ್ಲಿ ಜಗಳಗಳು ಸಹಜ, ಆದರೆ ಕೋಪದ ಭರದಲ್ಲಿ ಆಡುವ ಕೆಲವು ಮಾತುಗಳು ಇಡೀ ಸಂಬಂಧವನ್ನೇ ಮುರಿದು ಹಾಕಬಲ್ಲವು. ಜಗಳ ಎಷ್ಟೇ ದೊಡ್ಡದಾಗಿದ್ದರೂ ಗಂಡ ತನ್ನ ಹೆಂಡತಿಗೆ ಯಾವುದೇ ಕಾರಣಕ್ಕೂ ಅನ್ನಬಾರದ ಒಂದು ಮಾತಿದೆ. ಅದು ಯಾವುದು? ಅದು ಹೇಗೆ ವಿಚ್ಛೇದನದವರೆಗೆ ದಾರಿ ಮಾಡಿಕೊಡುತ್ತದೆ ಎಂಬ ಬಗ್ಗೆ ಮನೋವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಹೀಗಿದೆ.

ಗಳವಿಲ್ಲದ ದಾಂಪತ್ಯ ಜೀವನ ಇರಲು ಸಾಧ್ಯವೇ ಇಲ್ಲ. ಆದರೆ ಆ ಜಗಳಗಳನ್ನು ದಂಪತಿ ಹೇಗೆ ಬಗೆಹರಿಸಿಕೊಳ್ಳುತ್ತಾರೆ ಮತ್ತು ಒಬ್ಬರನ್ನೊಬ್ಬರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ. ಕೆಲವರು ಸಣ್ಣಪುಟ್ಟ ವಿಷಯಗಳಿಗೂ ವಿಚ್ಛೇದನದ (ಡಿವೋರ್ಸ್) ವರೆಗೆ ಹೋದರೆ, ಇನ್ನು ಕೆಲವರು ನಾಲ್ಕು ಗೋಡೆಗಳ ಮಧ್ಯೆಯೇ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ಜಗಳ ಎಷ್ಟೇ ದೊಡ್ಡದಾಗಿದ್ದರೂ ಗಂಡ ತನ್ನ ಹೆಂಡತಿಗೆ ಒಂದು ನಿರ್ದಿಷ್ಟ ಮಾತನ್ನು ಯಾವುದೇ ಪರಿಸ್ಥಿತಿಯಲ್ಲೂ ಅನ್ನಬಾರದು ಎಂದು ಸೈಕಾಲಜಿಸ್ಟ್ (ಮನೋವಿಜ್ಞಾನಿಗಳು) ಹೇಳುತ್ತಾರೆ.

ಜೀವನ ಸಂಗಾತಿ ಆಯ್ಕೆ ನಮ್ಮ ಕೈಯ್ಯಲ್ಲೇ ಇದೆ

ತಂದೆ-ತಾಯಿ, ಒಡಹುಟ್ಟಿದವರ ಬಾಂಧವ್ಯವನ್ನು ದೇವರು ಕೊಡುತ್ತಾನೆ. ಆದರೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಮ್ಮ ಕೈಯ್ಯಲ್ಲಿರುತ್ತದೆ. ಅಲ್ಲಿಯವರೆಗೆ ಒಂದು ಪ್ರತ್ಯೇಕ ವಾತಾವರಣದಲ್ಲಿ ಬೆಳೆದ ವ್ಯಕ್ತಿಯ ಜೀವನದಲ್ಲಿ ಹೊಸಬರು ಬಂದಾಗ ಹಲವು ವಿಷಯಗಳು ಬದಲಾಗುತ್ತವೆ. ಸುತ್ತಮುತ್ತಲಿನ ಪರಿಸ್ಥಿತಿಗಳು, ಕೌಟುಂಬಿಕ ವ್ಯವಹಾರಗಳು, ಆರ್ಥಿಕ ಪರಿಸ್ಥಿತಿಗಳು ಹೀಗೆ ಹಲವು ವಿಷಯಗಳಲ್ಲಿ ಪತಿ-ಪತ್ನಿಯರು ಚಾಣಾಕ್ಷತನದಿಂದ ವ್ಯವಹರಿಸುತ್ತಾ ಅನ್ಯೋನ್ಯ ದಾಂಪತ್ಯವನ್ನು ಅನುಭವಿಸಬೇಕು.

ಈ ಒಂದು ಮಾತು ಬೇಡವೇ ಬೇಡ!

ಎಷ್ಟೇ ಅನ್ಯೋನ್ಯವಾದ ಬಾಂಧವ್ಯವಿದ್ದರೂ ಯಾವುದೋ ಒಂದು ಸಂದರ್ಭದಲ್ಲಿ ಮನಸ್ತಾಪಗಳು ಉಂಟಾಗುವುದು ಸಹಜ. ಅದು ಕೆಲವೊಮ್ಮೆ ವಾಗ್ವಾದಕ್ಕೆ ಕಾರಣವಾಗಿ, ಜಗಳಕ್ಕೆ ತುಪ್ಪ ಸುರಿದಂತಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಒಬ್ಬರ ಮೇಲೊಬ್ಬರು ಮಾತಿನ ಚಾಟಿ ಬೀಸುತ್ತಾರೆ. ಇಂತಹ ಸಂದರ್ಭದಲ್ಲಿ ಕೋಪದ ಕೈಗೊಂಬೆಯಾಗುವ ಗಂಡಂದಿರು ಒಂದು ಮಾತನ್ನು ಆಡದೇ ಇರಲಾರರು. ಅದೇ ಮಾತು ಮುಂದೆ ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಅದೇನಪ್ಪಾ ಅಂದರೆ... 'ಮನೆಯಿಂದ ಹೊರಟು ಹೋಗು.. ನಿನಗೆ ಇಷ್ಟವಿಲ್ಲದಿದ್ದರೆ ಮನೆಯಿಂದ ತೊಲಗಬಹುದು' ಎಂದು ಪದೇ ಪದೇ ಅನ್ನುವುದು.

ಅಭದ್ರತೆಯ ಭಾವನೆ

ಗಂಡ ಇಂತಹ ಮಾತುಗಳನ್ನು ಆಡುವುದು ಆ ಬಾಂಧವ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ಸೈಕಾಲಜಿಸ್ಟ್‌ಗಳು ಎಚ್ಚರಿಸುತ್ತಾರೆ. "ಹೆಣ್ಣುಮಗಳಿಗೆ ಮದುವೆಯಾದ ಮೇಲೆ ತವರು ಮನೆ ಪರರ ಮನೆ ಅನಿಸುತ್ತದೆ. ಗಂಡನ ಮನೆಯೇ ಸರ್ವಸ್ವ ಎಂದುಕೊಳ್ಳುವಂತೆ ಸಮಾಜ ಹೇಳುತ್ತದೆ. ಆದರೆ ಗಂಡನ ಮನೆಯಲ್ಲೂ 'ಇದು ನಿನ್ನ ಮನೆಯಲ್ಲ.. ನಿನ್ನ ಇಷ್ಟ ಬಂದಂತೆ ಇರಲು' ಎಂಬ ಚುಚ್ಚು ಮಾತುಗಳು ಪದೇ ಪದೇ ಕೇಳಿಬರುತ್ತವೆ" ಎನ್ನುತ್ತಾರೆ ತಜ್ಞರು. ಇಂತಹ ಮಾತುಗಳು ಹೆಂಡತಿಯಲ್ಲಿ ತೀವ್ರ ಅಭದ್ರತೆಯ ಭಾವನೆಯನ್ನು (Insecurity) ಉಂಟುಮಾಡುತ್ತವೆ ಎಂದು ಹೇಳುತ್ತಾರೆ.

ರೀಪ್ಲೇಸಬಲ್ (ನನ್ನ ಜಾಗಕ್ಕೆ ಮತ್ತೊಬ್ಬರು ಬರಬಹುದು ಎಂಬ ಭಯ)

ಜಗಳದ ಸಮಯದಲ್ಲಿ ಗಂಡ ಆಡುವ ಮಾತುಗಳು ಹೆಂಡತಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅವರ ನರಮಂಡಲದ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರಿ ತೀವ್ರ ಮನಸ್ತಾಪಕ್ಕೆ ಒಳಗಾಗುವಂತೆ ಮಾಡುತ್ತದೆ. 'ಇದು ನನ್ನ ಜಾಗ ಅಲ್ವಾ? ನನ್ನ ಗಂಡನ ಮನಸ್ಸಿನಲ್ಲಿ ನನಗಿರುವ ಸ್ಥಾನ ಇಷ್ಟೇನಾ? ನಾನು ಹೋಗಿಬಿಟ್ಟರೆ ನನ್ನ ಜಾಗಕ್ಕೆ ಬೇರೆ ಮಹಿಳೆಯನ್ನು ಕರೆತರುವ ಧೈರ್ಯ ಇವರಿಗೆ ಇದೆಯಾ?' ಎಂಬ ಆಲೋಚನೆಗಳು ಹೆಂಡತಿಯ ಮನಸ್ಸಿನಲ್ಲಿ ಮೂಡುತ್ತವೆ ಎಂದು ತಜ್ಞರು ವಿವರಿಸುತ್ತಾರೆ. ಆ ಕ್ಷಣದಲ್ಲಿ ಗಂಡನ ಕೋಪವನ್ನು ಅರ್ಥಮಾಡಿಕೊಳ್ಳಲು ಅವಳಿಗೆ ಸಾಧ್ಯವಾಗುವುದಿಲ್ಲ.

ಮಕ್ಕಳ ಮೇಲಾಗುವ ಪರಿಣಾಮ

ಅದಕ್ಕಾಗಿಯೇ ದಂಪತಿ ನಡುವೆ ಎಂತಹದ್ದೇ ಭಿನ್ನಾಭಿಪ್ರಾಯಗಳು ಎದುರಾದರೂ ಆ ಸಮಸ್ಯೆಯನ್ನು ಸೂಕ್ಷ್ಮವಾಗಿ ಮತ್ತು ಶಾಂತವಾಗಿ ಬಗೆಹರಿಸಿಕೊಳ್ಳಬೇಕು. ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಆಡಿ ಜಗಳವನ್ನು ಮತ್ತಷ್ಟು ದೊಡ್ಡದು ಮಾಡಿಕೊಳ್ಳಬೇಡಿ ಎಂಬುದು ಸೈಕಾಲಜಿಸ್ಟ್‌ಗಳ ಸಲಹೆಯಾಗಿದೆ. ಪತಿ-ಪತ್ನಿಯರ ನಡುವಿನ ಜಗಳ ಸಾಧ್ಯವಾದಷ್ಟು ನಾಲ್ಕು ಗೋಡೆಗಳ ಮಧ್ಯೆಯೇ ಮುಗಿಯಬೇಕು. ಈ ವಿಷಯಗಳು ಮನೆಯಲ್ಲಿರುವ ಮಕ್ಕಳವರೆಗೆ ತಲುಪಿದರೆ, ಅವರ ಸೂಕ್ಷ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ, ಅವರು ಓದು ಮತ್ತು ವೃತ್ತಿಜೀವನದ (Career) ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿರಿಯಾನಿ ಡೇಟ್‌ ಬಗ್ಗೆ ಮಾತಾಡಿ ಕೆಲಸ ಕಳೆದುಕೊಂಡ ಯುವಕ; ವೈರಲ್ ವಿಡಿಯೋ ತಂದ ಸಂಕಷ್ಟ!
ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!