ಲಕ್ಷಗಟ್ಟಲೆ ಗಿಫ್ಟ್ ಕೊಟ್ಟ ಮಾರನೇ ದಿನವೇ ಬ್ರೇಕಪ್: ಪ್ರಿಯತಮೆಯನ್ನು ಕೋರ್ಟ್‌ಗೆಳೆಯಲು ಯುವಕನ ಪ್ಲಾನ್!

Published : Jun 09, 2026, 06:42 PM IST
Breakup

ಸಾರಾಂಶ

ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಗೇಮಿಂಗ್ ಪಿಸಿ ಗಿಫ್ಟ್ ಆಗಿ ಸಿಕ್ಕ ಮಾರನೇ ದಿನವೇ ಯುವತಿ ಬ್ರೇಕಪ್ ಮಾಡಿಕೊಂಡಿದ್ದಾಳೆ. ಗಿಫ್ಟ್‌ಗಾಗಿಯೇ ಆಕೆ ತಿಂಗಳುಗಟ್ಟಲೆ ಪ್ರೀತಿಯ ನಾಟಕವಾಡಿದ್ದಳು ಎಂದು ಯುವಕ ಆರೋಪಿಸಿದ್ದಾನೆ.

ತನ್ನ ಗರ್ಲ್‌ಫ್ರೆಂಡ್‌ಗೆ ಲಕ್ಷಗಟ್ಟಲೆ ಬೆಲೆಬಾಳುವ ಗಿಫ್ಟ್ ಕೊಟ್ಟ ಮಾರನೇ ದಿನವೇ ಆಕೆ ಬ್ರೇಕಪ್ ಹೇಳಿ ಕೈಕೊಟ್ಟ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ವರ್ಷಗಳಿಂದ ಆಕೆ ಕೇಳುತ್ತಿದ್ದ ಸುಮಾರು 3.1 ಲಕ್ಷ ರೂಪಾಯಿ (£2500) ಮೌಲ್ಯದ ಹೈ-ಎಂಡ್ ಗೇಮಿಂಗ್ ಪಿಸಿಯನ್ನು ಯುವಕ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದ. ಆದರೆ ಗಿಫ್ಟ್ ಸಿಕ್ಕ ಮಾರನೇ ದಿನವೇ ಆಕೆ ಸಂಬಂಧ ಮುರಿದುಕೊಂಡಿದ್ದಾಳೆ. ಈ ಮೋಸದ ಹಿಂದೆ ಆಕೆಯ ದೊಡ್ಡ ಪ್ಲ್ಯಾನ್ ಇತ್ತು ಅನ್ನೋದು ಯುವಕನಿಗೆ ಆಮೇಲೆ ಗೊತ್ತಾಗಿದೆ.

ಈ ಅನಿರೀಕ್ಷಿತ ಬ್ರೇಕಪ್‌ನಿಂದ ಬೇಸರಗೊಂಡ ಯುವಕ, ಕಾನೂನು ಸಲಹೆ ಕೇಳಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'ರೆಡ್ಡಿಟ್'ನಲ್ಲಿ ಹಾಕಿದ ಪೋಸ್ಟ್ ಈಗ ವೈರಲ್ ಆಗಿದೆ. "ನಾವು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ನನ್ನ ಜೀವನದಲ್ಲಿ ಯಾರೂ ನನ್ನನ್ನು ಈ ರೀತಿ ಸ್ವಾರ್ಥಕ್ಕಾಗಿ ಬಳಸಿಕೊಂಡಿರಲಿಲ್ಲ" ಎಂದು ಆತ ನೋವಿನಿಂದ ಬರೆದುಕೊಂಡಿದ್ದಾನೆ.

"ಅವಳ ಹುಟ್ಟುಹಬ್ಬಕ್ಕೆ ನಾನು ದೊಡ್ಡ ಮೊತ್ತ ಖರ್ಚು ಮಾಡಿ ಗೇಮಿಂಗ್ ಪಿಸಿ ಕೊಡಿಸಿದೆ. ಆದರೆ, ಮಾರನೇ ದಿನವೇ ಅವಳು ಸಂಬಂಧಕ್ಕೆ ಅಂತ್ಯ ಹಾಡಿದಳು. ತಿಂಗಳುಗಳ ಹಿಂದೆಯೇ ನನ್ನನ್ನು ಬಿಟ್ಟುಹೋಗಲು ಅವಳು ಪ್ಲ್ಯಾನ್ ಮಾಡಿದ್ದಳು ಅಂತ ಅವಳ ಫ್ರೆಂಡ್ ಮೂಲಕ ನನಗೆ ತಿಳಿಯಿತು. ನಾನು ಈ ಗಿಫ್ಟ್ ಕೊಡುತ್ತೇನೆ ಎಂಬ ಖಾತ್ರಿ ಇದ್ದಿದ್ದರಿಂದಲೇ ಅವಳು ಇಷ್ಟು ದಿನ ನನ್ನ ಜೊತೆ ಪ್ರೀತಿಯ ನಾಟಕವಾಡಿದ್ದಾಳೆ. ಗಿಫ್ಟ್ ಸಿಗುವವರೆಗೂ ಈ ನಾಟಕ ಮುಂದುವರಿಸುವುದಾಗಿ ಅವಳು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿರುವ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಕೂಡ ನನಗೆ ಸಿಕ್ಕಿವೆ" ಎಂದು ಯುವಕ ತನ್ನ ಅಳಲು ತೋಡಿಕೊಂಡಿದ್ದಾನೆ.

ಯುಕೆ ಕಾನೂನಿನ ಪ್ರಕಾರ, ಒಬ್ಬರಿಗೆ ಮನಃಪೂರ್ವಕವಾಗಿ ಕೊಟ್ಟ ಉಡುಗೊರೆಯನ್ನು ವಾಪಸ್ ಕೇಳಲು ಸಾಧ್ಯವಿಲ್ಲ. ಅದು ಪಡೆದವರ ಸ್ವಂತ ಆಸ್ತಿಯಾಗುತ್ತದೆ. ಆದರೆ, ಕೇವಲ ಗಿಫ್ಟ್‌ಗಾಗಿ ಪ್ರೀತಿಯ ನಾಟಕವಾಡಿ ಮೋಸ ಮಾಡಿದ ಈ ಸನ್ನಿವೇಶದಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂದು ಯುವಕ ಪ್ರಶ್ನಿಸಿದ್ದಾನೆ. "ಕಾನೂನು ಪ್ರಕಾರ ಆ ಪಿಸಿ ಅವಳದ್ದೇ ಅಂತ ನನಗೆ ಗೊತ್ತು. ಆದರೆ, ಅವಳು ನನ್ನ ಗರ್ಲ್‌ಫ್ರೆಂಡ್ ಆಗಿರದಿದ್ದರೆ ನಾನು ಅಷ್ಟೊಂದು ದುಡ್ಡು ಖರ್ಚು ಮಾಡುತ್ತಿರಲಿಲ್ಲ. ನನ್ನನ್ನು ವಂಚಿಸಲು ಮೊದಲೇ ಪ್ಲ್ಯಾನ್ ಮಾಡಿ, ಗಿಫ್ಟ್‌ಗಾಗಿ ನಾಟಕವಾಡಿದಳು ಅನ್ನೋ ಸತ್ಯಕ್ಕೆ ಕಾನೂನಿನಲ್ಲಿ ಏನಾದರೂ ಬೆಲೆ ಇದೆಯಾ? ನನಗೆ ಆ ಪಿಸಿ ವಾಪಸ್ ಸಿಗಬಹುದೇ?" ಎಂದು ಆತ ಕೇಳಿದ್ದಾನೆ.

ಹಣ ಹೋಯಿತು ಅಂತ ಮರೆತುಬಿಡು

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಾಮೆಂಟ್ ಬಾಕ್ಸ್‌ನಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. "ಇದೊಂದು ದೊಡ್ಡ ಜೀವನ ಪಾಠ, ಹಣ ಹೋಯಿತು ಅಂತ ಮರೆತುಬಿಡು" ಎಂದು ಕೆಲವರು ಸಲಹೆ ನೀಡಿದರೆ, "ಕೇಸ್ ಗೆಲ್ಲದಿದ್ದರೂ, ಅವಳನ್ನು ಕೋರ್ಟ್ ಮೆಟ್ಟಿಲು ಹತ್ತಿಸುವುದೇ ಅವಳಿಗೆ ಕೊಡುವ ದೊಡ್ಡ ಶಿಕ್ಷೆ" ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. "ಕಾನೂನುಬದ್ಧವಾಗಿ ಪಿಸಿ ಅವಳದ್ದೇ ಇರಬಹುದು. ಆದರೆ ಅವಳು ಎಂಥವಳು ಅಂತ ಅವಳ ಸ್ನೇಹಿತರು ಮತ್ತು ಕುಟುಂಬಕ್ಕೆ ತಿಳಿಸುವ ಹಕ್ಕು ನಿನಗಿದೆ. ಬಹುಶಃ ಆ ಪಿಸಿಗಿಂತ ಕುಟುಂಬದ ಮುಂದಿನ ಮರ್ಯಾದೆಯೇ ಅವಳಿಗೆ ಮುಖ್ಯವಾಗಿರಬಹುದು" ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೂನ್ 9-11 ರ ನಡುವೆ ಅಪರೂಪದ ಯೋಗ, ಈ ರಾಶಿಚಕ್ರ ಚಿಹ್ನೆಗಳಿಗೆ ರಾಜಯೋಗ ಮತ್ತು ಧನಯೋಗ ಖಚಿತ!
ಹನಿಮೂನ್ ಟ್ರಿಪ್ ಬಳಿಕ ಪತ್ನಿಯಿಂದ ಡಿವೋರ್ಸ್‌ಗೆ ಅರ್ಜಿ, ತಪ್ಪು ಯಾರದ್ದು ಗೊಂದಲಕ್ಕೀಡಾದ ಕೌನ್ಸಿಲರ್