ಮದುವೆ ಮಕ್ಕಳಾಟವಲ್ಲ, ಜೊತೆಯಾಗಿ ಆಡಿದರೆ ಜಯ ನಿಮ್ಮದೇ !

By Suvarna News  |  First Published Mar 25, 2022, 5:37 PM IST

ಮದುವೆ (Marriage) ಎಂದರೆ ಸುಮ್ಮನೆಯಲ್ಲ. ಎರಡು ಸಮಾಜ (Society), ಕುಟುಂಬ ಹಾಗೂ ಜೀವಗಳನ್ನು ಒಂದು ಮಾಡುವ ಪ್ರಕ್ರಿಯೆ. ಹಾಗಂಥ ಈ ವಿಚಾರದಲ್ಲಿ ಎಲ್ಲವೂ ಅಂದು ಕೊಂಡಂತೆ ನಡೆಯುವುದು ಕಷ್ಟ. ಆದರೆ, ಏಳೇಳು ಜನ್ಮಕ್ಕೂ ಜೊತೆಯಾಗಿರುತ್ತೇವೆ ಎಂದು ಸಪ್ತಪದಿ ತುಳಿಯುವ ಜೋಡಿ (Couple), ಸ್ವಲ್ಪ ಪ್ರಬುದ್ಧರಾಗಿದ್ದರೂ ಸಾಕು, ಸಂಸಾರ ಎಂಬ ತೇರೆಳೆಯುವುದು ಸುಲಭ. 


ಮದುವೆ ಎನ್ನುವುದು ಮಕ್ಕಳಾಟಿಕೆ ಅಲ್ಲ! ಹೀಗಂಥ ದೊಡ್ಡವರು ಹೇಳುತ್ತಲೇ ಇರುತ್ತಾರೆ. ದಾಂಪತ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗೋಲ್ಲ. ಇಲ್ಲಿ ದಂಪತಿ ತಮ್ಮ ಅನಿಸಿಕೆ, ಆಲೋಚನೆ ಮತ್ತು ಭಾವನೆಗಳನ್ನು ಶೇರ್ ಮಾಡಿಕೊಳ್ಳುವುದು ಮುಖ್ಯ. ಎರಡು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಜೊತೆಯಾಗಿಯೇ ಇರಬೇಕಾದ ವಿಶಿಷ್ಟ ಬಾಂಧವ್ಯ. ಜೀವಮಾನ ಪೂರ್ತಿಯಾಗಿ ಜೋಡಿಯೊಂದು ಜೊತೆಯಾಗಿ, ಸಾಮರಸ್ಯದಿಂದ ಈ ಆಟವಾಡಿದರೆ ಮಾತ್ರ, ಸ್ವಾರಸ್ಯ ಹೆಚ್ಚಾಗುತ್ತದೆ. ಆದರೆ, ಕಾಲ ಬದಲಾಗಿದೆ. ತಮ್ಮ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುವ ಇಂದಿನ ಯುವಕ, ಯುವತಿಯರು (Youths) ಸಾಕಷ್ಟು ವಿಚಾರಗಳಲ್ಲಿ ಎಡವುತ್ತಿದ್ದಾರೆ. ತಮಗೆ ಎಲ್ಲವೂ ಗೊತ್ತು ಎಂದೂ ಬೀಗುವ ಯುವ ಸಮೂಹ, ಮದುವೆಯಾಗಿ (Wedding), ಸರಿಯಾಗಿ ಬಾಳಿ ಬದುಕುವಲ್ಲಿ ಮಾತ್ರ ವಿಫಲವಾಗುತ್ತಿರುವುದು ದುರಂತ.

ಸಾವಿರ ಸಾವಿರ ಕನಸು (Dream) ಕಾಣೋ ಈಗಿನ ಜನಾಂಗ ಮದುವೆ ಬಗ್ಗೆಯೂ ಹಲುವ ಬಣ್ಣ ಬಣ್ಣದ ಕನಸುಗಳನ್ನು ಕಂಡಿರುತ್ತಾರೆ. ಫಾರಿನ್ ಟೂರ್ (Foreign Tour), ಶಾಪಿಂಗ್ (Shopping), ಮಾಲ್.. ಅಂತ ಓಡಾಡಿ ಕೊಂಡಿರುವುದೇ ಲೈಫ್ (Life) ಅಂದು ಕೊಳ್ಳುವುದೇ ಹೆಚ್ಚು. ಆದರೆ, ಮದುವೆ ಎಂದರೆ ಅಷ್ಟು ಮಾತ್ರವಲ್ಲವೆಂಬುವುದು ಕತ್ತಿಗೆ ಮೂರು ಗಂಟು ಹಾಕದ ಹುಡುಗನಿಗೂ, ಮೂರು ಗಂಟು ಕಟ್ಟಿಸಿಕೊಂಡು ಹುಡುಗಿಯರಿಗೂ ಅರ್ಥ ಮಾಡಿಕೊಳ್ಳಲು ಹೆಚ್ಚು ಕಾಲ ಬೇಕಾಗೋಲ್ಲ. ಹೊಸ ಹೊಸ ಹೊಣೆ ಹೊರಬೇಕಾದ ಅನಿವಾರ್ಯತೆ ಎದುರಾದಗಾ, ಜವಾಬ್ದಾರಿಯಿಂದ (Responsibility) ನುಣುಚಿಕೊಳ್ಳುವುದು ಅನಿವಾರ್ಯವಾಗುತ್ತೆ. ಆಗೆ ಸಂಬಂಧವನ್ನು ಮುರಿದುಕೊಳ್ಳಬೇಕಾದ ಸ್ಥಿತಿಯನ್ನು ತಂದು ಕೊಳ್ಳುತ್ತಾರೆ.

Tap to resize

Latest Videos

Relationship Tips : ಈ ವಯಸ್ಸಿನಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ ಹುಡುಗಿಯರು

ಒಂದಂತೂ ಸತ್ಯ, ಮದುವೆಯಾಗಲಿ, ಬಿಡಲಿ. ಜೀವನವೆಂದರೆ ಏರು-ಪೇರುಗಳು ಸಹಜ. ಎಲ್ಲವನ್ನೂ ಎದುರಿಸಿ ಮುನ್ನುಗ್ಗುವುದೇ ಬದುಕು. ಆಯಾ ಸಂದರ್ಭವನ್ನು ಅಗತ್ಯಕ್ಕೆ ತಕ್ಕಂತೆ ಎದುರಿಸುವುದೇ ಹೋರಾಟ. ಅದಕ್ಕೆ ಪತಿ-ಪತ್ನಿಯರಿಬ್ಬರೂ ಸನ್ನದ್ಧರಾಗೋದು ಅನಿವಾರ್ಯ. ಎಂಥದ್ದೇ ಪರಿಸ್ಥಿತಿ ಬಂದರೂ ಜೊತೆಯಾಗಿ, ಜಂಟಿಯಾಗಿ ಎದುರಿಸಿದರೆ ಮಾತ್ರ ದಾಂಪತ್ಯ ಸುಖ ಅನಿಸೋದು. ಇಲ್ಲದಿದ್ದರೆ ಕುತ್ತಿಗೆಗೆ ಕುಣಿಕೆ ಬಿಗಿದಂತೆ ಭಾಸವಾಗುತ್ತದೆ.

ಭಾವನೆಗಳನ್ನು ಶೇರ್ ಮಾಡಿಕೊಳ್ಳಿ:
ಮದುವೆಗೆ ಮುಂಚೆ ಪೋಷಕರು, ಸ್ನೇಹಿತರು, ಒಡ ಹುಟ್ಟಿದವರು ಜೊತೆಯಾಗಿರುತ್ತಾರೆ. ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಬಹುದು. ಜೊತೆಯಲ್ಲಿ ಒಬ್ಬರಲ್ಲ ಒಬ್ಬರು ಇರುತ್ತಾರೆ. ಮದುವೆಯಾದ ಮೇಲೆ ಪರಿಸ್ಥಿತಿ ಬದಲಾಗುತ್ತೆ. ಗಂಡ, ಅವನ ಪೋಷಕರು, ಒಡ ಹುಟ್ಟಿದವರು ಜೊತೆಯಾಗುತ್ತಾರೆ. ಫ್ರೆಂಡ್ಸ್ (Friends) ಅನ್ನು ಮೀಟ್ ಆಗೋದು ವಿರಳವಾಗುತ್ತೆ. ಇದೇ ಕಾರಣಕ್ಕೆ ಗಂಡ ಅಥವಾ ಮಡದಿಯೇ ಸ್ನೇಹಿತ, ಬಂಧು (Relative), ಸಕಲವೂ ಆಗುವಂತೆ ನೋಡಿಕೊಳ್ಳಬೇಕು. ಹೇಳಿದಷ್ಟು ಸುಲಭದ ವಿಷಯವಲ್ಲವಿದು. ಆದರೆ, ಜೀವನ ಸುಗಮವಾಗಬೇಕೆಂದರೆ ಇಬ್ಬರೂ ಕೆಲವು ಕಾಂಪ್ರೋಮೈಸ್ ಆಗಿ, ಹೊಂದಿಕೊಳ್ಳುವುದು ದಾಂಪತ್ಯದಲ್ಲಿ ಅತಿ ಮುಖ್ಯ. ಮನ ಬಿಚ್ಚಿ ಮಾತನಾಡುವುದ ರೂಢಿಸಿಕೊಳ್ಳಿ. ಮೊದ ಮೊದಲು ಅಂದು ಕೊಂಡಂತೆ ರೆಸ್ಪಾನ್ಸ್ ಸಿಗದೇ ಹೋಗಬಹುದು. ಆದರೆ, ಬರು ಬರುತ್ತಾ ಎಲ್ಲವೂ ಸರಿ ಹೋಗುತ್ತೆ. 

ಅವನಿಗೆ 63, ಅವಳಿಗೆ 22. ಇಬ್ಬರದ್ದೂ ಸುಖೀ ದಾಂಪತ್ಯ, ಆದ್ರೆ ಎಲ್ರೂ ಅದೇ ಪ್ರಶ್ನೆ ಕೇಳ್ತಿದ್ದಾರಂತೆ !

ಸಮಸ್ಯೆಯನ್ನು ಮುಚ್ಚಿಡಬೇಡಿ:
ದಾಂಪತ್ಯದಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಕೆಲವೊಂದು ವಿಷಯಗಳನ್ನು ಮೊದ ಮೊದಲು taken for granted ಮಾಡಿ ಕೊಂಡರೆ, ಅದೇ ಮುಂದೆ ಬೆಟ್ಟದಂತೆ ಬೆಳೆದು, ಕಗ್ಗಂಟಾಗುತ್ತದೆ. ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ. ಅವನ್ನು ಧೈರ್ಯವಾಗಿ ಎದುರಿಸುವ ಜೊತೆಗೆ, ಸಂಗಾತಿಯೊಂದಿಗೆ ನೋವು ಹಂಚಿಕೊಳ್ಳಿ. ಹಂಚಿ ಕೊಂಡಾಗ ಅವರ ನೋವಿನಲ್ಲಿ ಭಾಗಿಯಾಗಿ. ಆಗ ದಾಂಪತ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ ಅನುಮಾನವೇ ಇಲ್ಲ. 

ಆರ್ಥಿಕ ಸಮಸ್ಯೆ (Financial Crisis): 
ಸಾಮಾನ್ಯವಾಗಿ ದಾಂಪತ್ಯದಲ್ಲಿ ಕಾಡೋ ಸಮಸ್ಯೆ ಎಂದರೆ ದುಡ್ಡಿನದು. ಗಂಡ ಎಷ್ಟು ದುಡಿದರೂ ಸಾಕಾಗುವುದಿಲ್ಲ. ಹೆಂಡತಿಯೂ ಕೆಲಸಕ್ಕೆ ಹೊರ ಹೋಗುತ್ತಾಳೆ. ಅಲ್ಲಿಯೂ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತನೆ. ಮನೆಯಲ್ಲಿಯೇ ಇದ್ದರೂ ಕಾಟ ತಪ್ಪೋಲ್ಲ. ಮನೆಗೆಲಸ ಹಾಗೂ ಬೇರೆ ಬೇರೆ ಕೆಲಸಗಳ್ಲಿ ಕೈ ಜೋಡಿಸಿ, ಜೊತೆಯಾಗಬೇಕು. ಗಂಡ ಅಡುಗೆಯಲ್ಲಿ ಹೆಂಡತಿಗೆ ಸಹಕರಿಸಿದರೆ ಎಲ್ಲವೂ ಸುಲಭವಾಗುತ್ತದೆ. ಹೆಂಡತಿಯ ಒತ್ತಡ ಕಡಿಮೆಯಾದರೆ ಸಂಸಾರದಲ್ಲಿ ಸುಖ ಹೆಚ್ಚುತ್ತದೆ. ಈ ಕಡೆ ಹೆಚ್ಚಿನ ಗಮನ ಹರಿಸಿ, ಮುಂದೆ ಸಾಗಿ. ಬದುಕು ಬಂಗಾರವಾಗದಿದ್ದರೆ ಮತ್ತೆ ಕೇಳಿ. 

ಆರೋಗ್ಯ (Health):
ಜೀವನದಲ್ಲಿ ಹಲವು ಏರಿಳಿತಗಳು ಸೃಷ್ಟಿಯಾಗುವುದು ಆರೋಗ್ಯ ಸಮಸ್ಯೆಯಿಂದ. ಆರೋಗ್ಯ ವಿಚಾರವಾಗಿ ಮುಕ್ತರಾಗಿರಬೇಕು. ಆರೋಗ್ಯಯುತ ಜೀವನಶೈಲಿ ನಿಮ್ಮದಾಗಿದ್ದರೆ ಹಲವು ಸಮಸ್ಯೆಗಳಿಗೆ ತಾನಾಗಿಯೇ ಪರಿಹಾರ ಸಿಗುತ್ತದೆ. ಆರೋಗ್ಯ ವಿಮೆ (Health Insurance) ಇರಲಿ. ಕಷ್ಟ ಕಾಲದಲ್ಲಿ ಕೈ ಹಿಡಿಯುತ್ತೆ. ಒಟ್ಟಿನಲ್ಲಿ ಒಬ್ಬರಿಗೊಬ್ಬರು ಅರಿತುಕೊಂಡು, ಮುಂದೆ ಸಾಗಿದರೆ ಬದುಕು ಬಂಗಾರವಾಗುವುದರಲ್ಲಿ ಅನುಮಾನವೇ ಇಲ್ಲ.

click me!