ಮದುವೆ ಮುಗಿಯುವವರೆಗೂ ಮದುಮಕ್ಕಳು ನಗುವಂತಿಲ್ಲ! ಅಪ್ಪಿ ತಪ್ಪಿ ನಕ್ಕರೆ ಸ್ಥಳದಲ್ಲೇ ಡಿವೋರ್ಸ್​

By Suchethana D  |  First Published Aug 17, 2024, 4:39 PM IST

ಮದುವೆ ಮುಗಿಯುವವರೆಗೂ ಮದುಮಕ್ಕಳು ಸ್ವಲ್ಪವೂ ನಗುವಂತಿಲ್ಲ. ಒಂದು ವೇಳೆ ನಕ್ಕರೆ ಅಲ್ಲಿಯೇ ಮದ್ವೆ ಕ್ಯಾನ್ಸಲ್​  ಆಗುತ್ತದೆ. ಇದೆಂಥ ಪದ್ಧತಿ ಅಂತೀರಾ? ಇಲ್ಲಿದೆ ಡಿಟೇಲ್ಸ್​
 


ಮದುವೆ ಎಂದರೆನೇ ಅದೊಂದು ರೀತಿಯ ಸಂಭ್ರಮ. ಮದುಮಕ್ಕಳಿಗಂತೂ ಅದು ಅವರ ಬದುಕಿನ ಅತಿ ದೊಡ್ಡ ಸುಂದರ ಕ್ಷಣ. ಮನಸ್ಸಿಲ್ಲದೇ ಮದುವೆಯಾಗುತ್ತಿರುವವರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಮದುವೆ ಎನ್ನುವುದು ಅಮೃತ ಘಳಿಗೆ.  ಮದುಮಕ್ಕಳಿಗೆ ಮಾತ್ರವಲ್ಲದೇ ಇಡೀ ಕುಟುಂಬಗಳು ಸಂತಸದಲ್ಲಿ ಇರುವ ಸಮಯವಿದು. ಇದೇ ಕಾರಣಕ್ಕೆ ಮದುವೆ ಮನೆಯಲ್ಲಿ ಎಲ್ಲರೂ ನಗುನಗುತ್ತಾ ಕಾಲ ಕಳೆಯುತ್ತಾರೆ. ಅದರಲ್ಲಿಯೂ ಮದುಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿರುತ್ತದೆ. ಅದೇ ಮದುವೆ ದಿನ ನಗಲೇಬೇಡ ಎಂದುಬಿಟ್ಟರೆ? ಅದರಲ್ಲಿಯೂ ತಮ್ಮ ಜೀವನದ ಅತ್ಯಂತ ಆನಂದ ಕ್ಷಣವನ್ನು ಅನುಭವಿಸುತ್ತಿರುವ ವರ ಮತ್ತು ವಧುವಿಗೆ ಮದುವೆಯ ದಿನವೇ ನಗುವುದಕ್ಕೆ ನಿಷೇಧ ಹೇರಿ ಬಿಟ್ಟರೆ?

ಇದೇನು ಹುಚ್ಚೇ ಎನ್ನುಬಹುದು. ಆದರೆ ಇಂಥದ್ದೊಂದು ಸಂಪ್ರದಾಯ ಇದೆ! ವಿಚಿತ್ರ ಎಂದರೂ ಇದನ್ನು ನಂಬಲೇಬೇಕು. ಕಾಂಗೋದಲ್ಲಿನ ಒಂದು ಜನಾಂಗ ಕಾಂಗೋಲೀಸ್​ನಲ್ಲಿ ಈ ಸಂಪ್ರದಾಯವಿದೆ. ಮದುವೆ ದಿನ ಮಾತ್ರವಲ್ಲದೇ ಮದುವೆಗೆ ಮುಂಚಿನ ಸಂಪ್ರದಾಯಗಳಿಂದ ಹಿಡಿದು ಮದುವೆ ಮುಗಿಯುವವರೆಗೂ ಮದುಮಕ್ಕಳು ನಗುವಂತಿಲ್ಲ. ಒಂದು ವೇಳೆ ಅಪ್ಪಿ-ತಪ್ಪಿ ನಕ್ಕಿಬಿಟ್ಟರೆ ಮದುವೆಯೇ ಕ್ಯಾನ್ಸಲ್​  ಮಾಡುತ್ತಾರಂತೆ! ಇದೇ ಕಾರಣಕ್ಕೆ ಕಾಂಗೋಲೀಸ್ ದಂಪತಿಗಳು ತಮ್ಮ ಸಂತೋಷವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅವರ ಇಡೀ ಮದುವೆಯ ದಿನದಂದು, ಸಮಾರಂಭದಿಂದ ಆರತಕ್ಷತೆಯವರೆಗೆ ಇಬ್ಬರಿಗೂ ನಗಲು ಅವಕಾಶವಿಲ್ಲ. 

Tap to resize

Latest Videos

undefined

ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್​? ಹೆಸರಿಗೆ ಪರ್ಮಿಷನ್​ ಪಡೆದಿದ್ದಾರೆ ರಣವೀರ್​ ಸಿಂಗ್!

ಅಷ್ಟಕ್ಕೂ ಇಂಥದ್ದೊಂದು ಸಂಪ್ರದಾಯವಿರಲು ಕಾರಣ ಏನೆಂದರೆ, ಮದುವೆಯ ದಿನ ನಗುವುದು ಎಂದರೆ ಮದುಮಕ್ಕಳು ತಮ್ಮ ಮದುವೆಯ ಬಗ್ಗೆ ಕಾಳಜಿ ತೋರುತ್ತಿಲ್ಲ, ಅವರಿಗೆ ಅದರ ಬಗ್ಗೆ ಗೌರವ ಇಲ್ಲ, ಜವಾಬ್ದಾರಿ ಇಲ್ಲ. ಅವರು ಮದುವೆಯ ವಿಷಯದಲ್ಲಿ ಸೀರಿಯಲ್​ ಆಗಿಲ್ಲ ಎಂದೇ ಅರ್ಥವಂತೆ! ಮದುವೆಯಾದ ಮೇಲೆ ಪತಿ-ಪತ್ನಿಗೆ ಹೆಚ್ಚುವರಿ ಜವಾಬ್ದಾರಿ ಬರುತ್ತದೆ. ಆದರೆ ನಗುತ್ತಾ ಇದ್ದರೆ ಅಂಥ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಶಕ್ಯರಾಗಿಲ್ಲ ಎಂಬುದು ಇಲ್ಲಿಯವರ ಅರ್ಥವಂತೆ. ಅದೇ ಕಾರಣಕ್ಕೆ ಮದುವೆಯ ದಿನ ವರ ನಕ್ಕರೆ ವಧುವಿನ ಕಡೆಯವರು ಅಥವಾ ವಧು ನಕ್ಕರೆ ವರನ ಕಡೆಯವರಿಗೆ ಮದುವೆ ಕ್ಯಾನ್ಸಲ್​ ಮಾಡುವ ಅವಕಾಶವಿದೆ. ಒಂದರ್ಥದಲ್ಲಿ ಡಿವೋರ್ಸ್​ ಕೊಟ್ಟಂತೆ! 

ಅಷ್ಟಕ್ಕೂ ಈ ಭೂಮಿಯ ಮೇಲೆ ಅದೆಷ್ಟೋ ವಿಚಿತ್ರ ಸಂಪ್ರದಾಯಗಳು ಇವೆ ಅನ್ನಿ. ಅದರಲ್ಲಿಯೂ ಮದುವೆ ಸಂಪ್ರದಾಯ ಎನ್ನುವುದು ಹೆಜ್ಜೆ ಹೆಜ್ಜೆಗೂ ಬದಲಾಗುತ್ತಿರುತ್ತದೆ. ಒಂದೇ ಊರಿನಲ್ಲಿ ಇರುವ ವಿವಿಧ ಜಾತಿ-ಜನಾಂಗದ ಜನರು ವಿಭಿನ್ನ ರೀತಿಯ ಮದುವೆ ಸಂಪ್ರದಾಯವನ್ನು ಆಚರಿಸುತ್ತಾರೆ. ಇನ್ನು ಪ್ರಪಂಚದ ವಿಷಯಕ್ಕೆ ಬರುವುದಾದರೆ ಅದೆಷ್ಟು ಬಗೆ ಇರಲೇಬೇಕು. ಆದರೆ ಕೆಲವು ಸಂಪ್ರದಾಯಗಳು ಮಾತ್ರ ವಿಚಿತ್ರ ಎನ್ನಿಸುವುದು ಉಂಟು. ಅದರಲ್ಲಿಯೂ ಬುಡಕಟ್ಟು ಜನಾಂಗಗಳ ಸಂಪ್ರದಾಯಗಳೇ ಕುತೂಹಲವಾಗಿವೆ. ಆದರೆ ಅವರು ಇಂಥ ಸಂಪ್ರದಾಯಗಳನ್ನು ಏಕೆ ಆಚರಿಸುತ್ತಾರೆ, ಇಂದಿನ ಯುವ ಪೀಳಿಗೆಯವರೂ ಅದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆಯೇ ಎನ್ನುವುದು ಮಾತ್ರ ತಿಳಿಯಬೇಕಷ್ಟೇ. 
 

ಪ್ರೀತಿಸುವಾಗ ರನ್ನಾ... ಚಿನ್ನಾ... ಮದ್ವೆಯಾದ್ಮೇಲೆ? ಅಮೃತಧಾರೆ ನಟಿಯರು ಏನಂದ್ರು ನೋಡಿ...
 

click me!