
ನವದೆಹಲಿ (ಅ.03) ಭಾರತದಲ್ಲಿ ವಿಚ್ಚೇದನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿದೆ, ಕುಟುಂಬ ವ್ಯವಸ್ಥೆ ಅಲುಗಾಡುತ್ತಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತ ಅಂಕಿ ಅಂಶಗಳೇ ಬೆಳಕಿಗೆ ಬರುತ್ತಿದೆ. ಮದುವೆ ಇದೀಗ ಹಲವರಿಗೆ ತಲೆನೋವಾಗುತ್ತಿದೆ. ಮದುವೆಯಾಗಿ ಸಂಸಾರ ನಡೆಸುವುದು ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೌಟುಂಬಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗಿ ನೆಲೆನಿಂತ ಭಾರತೀಯ ಪದ್ಧತಿಯಲ್ಲಿ ಇದೀಗ ಡಿವೋರ್ಸ್ ಪ್ರಕರಣಗಳೇ ತುಂಬುತ್ತಿದೆ. ಈ ವಿಚ್ಚೇದನ ಬಳಿಕ ಪುರುಷ ಹಾಗೂ ಮಹಿಳೆಯ ಜೀವನ ಕುರಿತು ಅಧ್ಯಯನ ಸಮೀಕ್ಷೆಯೊಂದು ಪ್ರಕಟಗೊಂಡಿದೆ. ಈ ಅಧ್ಯಯನ ವರದಿ ವಿಚ್ಚೇದಿತರ ಕರಾಳ ಘಟನೆಯನ್ನು ತೆರೆದಿಡುತ್ತಿದೆ.
ಭಾರತದಲ್ಲಿ ಡಿವೋರ್ಸ್ ಪಡೆದ ಬಳಿಕ ಪುರುಷ ಹಾಗೂ ಮಹಿಳೆಯರ ಪರಿಸ್ಥಿತಿ ಕುರಿತು ಅಧ್ಯಯನ ವರದಿ ಸ್ಫೋಟಕ ಮಾಹಿತಿ ತೆರೆದಿಡುತ್ತಿದೆ. ಈ ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಶೇಕಡಾ 43ರಷ್ಟು ಪುರುಷರು ವಿಚ್ಚೇದನ ಬಳಿಕ ಮಾಜಿ ಪತ್ನಿಗೆ ಜೀವನಾಂಶ ನೀಡಲು ಸಾಲ ಮಾಡುತ್ತಾರೆ. ಸೆಟ್ಲೆಮೆಂಟ್‌ಗೆ , ಪ್ರತಿ ತಿಂಗಳ ಜೀವನಾಂಶಕ್ಕೆ ಸಾಲ ಮಾಡುತ್ತಾರೆ. ಬಳಿಕ ತೀರಿಸಲು ಮತ್ತಷ್ಟು ಸಾಲದಲ್ಲಿ ಮುಳುಗುತ್ತಾರೆ ಎಂದು ವರದಿ ಹೇಳಿದೆ.
ವಿಚ್ಚೇದನ ಬಳಿಕ ಪುರುಷ ಆರ್ಥಿಕವಾಗಿ ಜರ್ಝರಿತನಾಗುತ್ತಾನೆ ಎಂದು ಈ ಅಧ್ಯಯನ ವರದಿ ಹೇಳಿದರೆ, ಮಹಿಳೆ ಅಸ್ಥಿರತೆ, ಬದುಕು ದುಸ್ತರವಾಗುತ್ತದೆ ಎಂದಿದೆ. ಈ ಸಮೀಕ್ಷೆಗೆ 1,258 ಮಂದಿಯನ್ನು ಮಾದರಿಯಾಗಿ ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ. ಬರೋಬ್ಬರಿ 6 ತಿಂಗಳ ಕಾಲ ಪ್ರತಿ ವಿಚಾರಲದಲ್ಲೂ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಈ ಸಮೀಕ್ಷೆಯ ಪ್ರಮುಖ ಅಂಶಗಳು ಇಲ್ಲಿವೆ.
ವಿಚ್ಚೇದನ ಬಳಿಕ ಮಹಿಳೆ ಕೂಡ ಸಾಕಷ್ಟ ಸಮಸ್ಯೆ ಎದುರಿಸುತ್ತಾಳೆ ಎಂದು ವರದಿ ಹೇಳುತ್ತಿದೆ. ಶೇಕಡಾ 23ರಷ್ಟು ಮಹಿಳೆಯರು ಡಿವೋರ್ಸ್ ಬಳಿಕ ಬೇರೆ ನಗರ ಅಥವಾ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ. ಇನ್ನು ಕೆಲಸ ಮಾಡುತ್ತಿರುವ ಮಹಿಳೆಯರು ಡಿವೋರ್ಸ್ ಬಳಿಕ ಶೇಕಡಾ 16ರಷ್ಟು ಮಂದಿ ತಮ್ಮ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ, ಶೇಕಡಾ 30 ರಷ್ಟು ಕೆಲಸ ಬಿಡುತ್ತಾರೆ ಎಂದು ವರದಿ ಹೇಳುತ್ತಿದೆ. ಶೇಕಡಾ 43ರಷ್ಟು ಸಂಸಾರದಲ್ಲಿ ಆರ್ಥಿಕ ಎಲ್ಲಾ ಜವಾಬ್ದಾರಿಯನ್ನು ಪುರುಷರು ನಿರ್ವಹಿಸುತ್ತಾರೆ. ಇದರಿಂದ ಡಿವೋರ್ಸ್ ಬಳಿಕ ಮಹಿಳೆಯರು ಅತಂತ್ರರಾಗುತ್ತಾರೆ ಎಂದು ವರದಿ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.